ಟಾಪ್ 10 – ಸಪ್ನ ಬುಕ್ ಹೌಸ್

  1. ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಆತ್ಮಕಥೆ,ಲೇಖಕರು:ಅನುವಾದ:ಆನಂದ,ಬೆಲೆ:ರೂ.110/-, ಪ್ರಕಾಶಕರು: ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ, ಬೆಂಗಳೂರು
  2. ಸ್ಟಾಕ್ ಮಾರ್ಕೆಟ್ಸಂಪತ್ತನ್ನು ಬೆಳೆಸಿಕೊಳ್ಳುವುದು ಹೇಗೆ, ಲೇಖಕರು: ಡಾ. ಕಿರಣ್ ಕುಮಾರ್; ಬೆಲೆ:ರೂ.75/-, ಪ್ರಕಾಶಕರು: ವಾಸನ್ ಪಬ್ಲಿಕೇಶನ್ಸ್, ಬೆಂಗಳೂರು-53
  3. ಶಂಗಮ್ ತಮಿಳಗಂ ಮತ್ತು ಕನ್ನಡ ನಾಡುನುಡಿ, ಲೇಖಕರು: . ಶೇಟರ್; ಬೆಲೆ:ರೂ.150/-, ಪ್ರಕಾಶಕರು: ಅಭಿನವ, ವಿಜಯನಗರ, ಬೆಂಗಳೂರು-53
  4. ಪಾಕ ಕ್ರಾಂತಿ ಮತ್ತು ಇತರ ಕತೆಗಳು, ಲೇಖಕರು:ಪೂರ್ಣ ಚಂದ್ರ ತೇಜಸ್ವಿ; ಬೆಲೆ:ರೂ.60/-, ಪ್ರಕಾಶಕರು: ಪುಸ್ತಕ ಪ್ರಕಾಶನ, ಮೈಸೂರು – 09
  5. ಅಕ್ಕನ ಚನಗಳು, ಲೇಖಕರು:ಎಲ್. ಬಸರಾಜು; ಬೆಲೆ:ರೂ.75/-, ಪ್ರಕಾಶಕರು: ಗೀತ ಬುಕ್ ಹೌಸ್, ಮೈಸೂರು
  6. ಅಮಿತಾಬ್ ಒಂದು ಕಾಲಾಗಾಥೆ, ಲೇಖಕರು:ಎನ್. ಸಿ. ಮಹೇಶ್; ಬೆಲೆ:ರೂ.60/-, ಪ್ರಕಾಶಕರು: ರೂಪ ಪ್ರಕಾಶನ, ಮೈಸೂರು – 23
  7. ಇಂಗ್ಲೀಷ್ ಕಲಿ, ಕನ್ನಡದಲ್ಲಿ ಕಲಿ, ಲೇಖಕರು:ಪ್ರೊ. ಜಿ. ಬಿ. ಸಜ್ಜನ; ಬೆಲೆ:ರೂ.140/-, ಪ್ರಕಾಶಕರು: ನೀಲ ಪರ್ವತ ಪ್ರಕಾಶನ, ಧಾರವಾಡ.
  8. ಸಾಹಿತಿ ಸಾಹಿತ್ಯ ವಿಮರ್ಶೆ, ಲೇಖಕರು:ಪಿ. ಲಂಕೇಶ್; ಬೆಲೆ:ರೂ.309/-, ಪ್ರಕಾಶಕರು: ಲಂಕೇಶ್ ಪ್ರಕಾಶನ, ಬೆಂಗಳೂರು – 04
  9. ತೇಜಸ್ವಿ ಲೋಕ, ಲೇಖಕರು:ಡಿ. ವಿ. ಪ್ರಹ್ಲಾದ್; ಬೆಲೆ:ರೂ.85/-, ಪ್ರಕಾಶಕರು:ಸಂಚಯ, ಬೆಂಗಳೂರು-560 085
  10. ನಿನ್ನೆ ಇಂದು ನಾಳೆ, ಲೇಖಕರು:ಕೆ. ಟಿ. ಗಟ್ಟಿ; ಬೆಲೆ:ರೂ.275/-, ಪ್ರಕಾಶಕರು: ಸುಮುಖ ಪ್ರಕಾಶನ, ಬೆಂಗಳೂರು-01


ಶಿಕ್ಷಕನೊಬ್ಬನ ಪ್ರಥಮ ಎನ್ನಬಹುದಾದ ಆತ್ಮಕಥೆ

ಇದು ಶಿಕ್ಷಕನೊಬ್ಬನ ಪ್ರಥಮ ಎನ್ನಬಹುದಾದ ಆತ್ಮಕಥೆ. ಜನಪ್ರಿಯ ಶಿಕ್ಷಕರು, ಹೋರಾಟಗಾರರೂ ಆದ ಕೊಣಂದೂರು ವೆಂಕಪ್ಪಗೌಡರು ಲೋಹಿಯಾ ಸಮಾಜವಾದಿ ಚಿಂತನೆಯಲ್ಲಿ ಗೋಪಾಲಗೌಡರ ಒಡನಾಟದಲ್ಲಿ ಬೆಳೆದು ಬಂದವರು. ಕುವೆಂಪು ಅವರಿಂದ ಪ್ರಭಾವಿತರಾದವರು.

ವೆಂಕಪ್ಪಗೌಡರು ಬೆಳೆದು ಬಂದ ಪರಿಸರವನ್ನು ಮೊದಲ ಭಾಗ ಹೃದಯಸ್ಪರ್ಶಿಯಾಗಿ ಪರಿಚಯಿಸಿದರೆ, ಎರಡನೇ ಭಾಗ ಅವರಿಗಾದ ಅನ್ಯಾಯದ ವಿರುದ್ಧದ ಹೋರಾಟ ರೋಚಕವಾದ ನಿರೂಪಣೆಯಲ್ಲಿ ಸುಧೀರ್ಘವಾಗಿ ಸಾಗುತ್ತದೆ. ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯೊಂದು ನಡೆಸುವ ಅನ್ಯಾಯ-ಅಕ್ರಮವನ್ನು ಬಯಲಿಗೆಳೆದು ಈ ಕಾರಣಕ್ಕೆ ತಮ್ಮ ಉದ್ಯೋಗ ಕಳೆದುಕೊಂಡು ಸುಪ್ರೀಂ ಕೋರ್ಟ್ ವರೆಗೂ ಹೋರಾಟ ಮಾಡಿ ವಿಫಲರಾದ ವಿವರ ಇಲ್ಲಿದೆ. ತಮಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಈ ಕೃತಿ ರಚಿಸಿದರೇನೋ ಎಂದು ಕೃತಿಯ ಶೀರ್ಷಿಕೆ, ಇದಕ್ಕೆ ಸಿಕ್ಕ ಪ್ರಚಾರ ನೋಡಿದರೆ ತಕ್ಷಣ ಅನಿಸುತ್ತದೆ. ಅಷ್ಟೇ ಆಗಿದ್ದರೆ ಇದೊಂದು ಕರಪತ್ರ ಆಗಿಬಿಡಬಹುದಿತ್ತು. ಆದರೆ ವೆಂಕಪ್ಪಗೌಡರು ಲೇಖಕರೂ ಹೌದು. ಹಲವಾರು ಜೀವನ ಚರಿತ್ರೆಗಳನ್ನೂ ರಚಿಸಿದವರು. ಬರವಣಿಗೆ ಮೇಲಿನ ಪರಿಣಿತಿ, ಕತೆಗಾರನ ಸೂಕ್ಷ್ಮತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ

ಶೀರ್ಷಿಕೆ : ಶಿಕ್ಷಕನ ಹೋರಾಟ ಲೇಖಕರು : ಕೋಣಂದೂರು ವೆಂಕಪ್ಪ ಗೌಡ ಪ್ರಕಾಶಕರು : ಯಶಸ್ವಿನಿ ಪ್ರಕಾಶನ ಪುಟಗಳು : 302 ಬೆಲೆ: ರೂ.150/-

ಕೃಪೆ : ಸುಧಾ