ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರ

ಡಾ. ನಾ. ಸೋಮೇಶ್ವರ ವೃತ್ತಿಯಿಂದ ವೈದ್ಯರು; ಪ್ರವೃತ್ತಿಯಿಂದ ವೈದ್ಯಕೀಯ ಲೇಖಕರು. ಅವರು ಕನ್ನಡದ ಗಮನಾರ್ಹ ವೈದ್ಯ-ಲೇಖಕರಲ್ಲೊಬ್ಬರು. ಕನ್ನಡವನ್ನು ಸುಲಲಿತವಾಗಿ, ಕನ್ನಡದ ಮೂಲಕ ವೈದ್ಯ ಪರಿಕಲ್ಪನೆಗಳನ್ನು ಸಲೀಸಾಗಿ ಎದುರಿನ ವ್ಯಕ್ತಿ ಅಥವಾ ಓದುಗನಿಗೆ ತಲುಪಿಸುವಲ್ಲಿ ಅವರು ನಿಸ್ಸೀಮರು.

ಸೋಮೇಶ್ವರ ಅವರ `ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರಕೃತಿ ಅನೇಕ ವೈದ್ಯಕೀಯ ಪದಗಳ ಬಳಕೆಯ ಕುರಿತು ಬೆಳಕನ್ನು ಚೆಲ್ಲುತ್ತದೆ. `ಅರಿವು ಎಲ್ಲರ ಹಕ್ಕು‘, `ಇಂಗ್ಲೀಷರು ಎಡವಿದ ಕಥೆ‘, `ಪಾರಿಭಾಷಿಕ ಪದಗಳ ಗುಣ ಲಕ್ಷಣಗಳು‘, `ಠಂಕ ಸೂತ್ರಗಳು‘, `ಕನ್ನಡ ವೈದ್ಯಕೀಯ ಪಾರಿಭಾಷಿಕ ಪದಗಳುಎನ್ನುವ ಈ ಅಧ್ಯಾಯಗಳಲ್ಲಿ ಲೇಖಕರು ತಮ್ಮ ಕೃತಿಯ ವಸ್ತುವನ್ನು ವಿವರಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಜನಸಾಮಾನ್ಯರಿಗೆ ಉಪಯುಕ್ತವಾದ ಪುಸ್ತಕವಿದು.

ಮುನ್ನುಡಿ ಬರೆದಿರುವ ಮತ್ತೊಬ್ಬ ವೈದ್ಯ-ಸಾಹಿತಿ ಡಾ. ಸಿ. ಆರ್. ಚಂದ್ರಶೇಖರ್ ಅವರು, ವೈದ್ಯ ಸಾಹಿತ್ಯ ರಚನೆಯಲ್ಲಿ ಉಂಟಾಗುವ ಗೊಂದಲಗಳ ಕುರಿತು ಚರ್ಚಿಸಿದ್ದಾರೆ. `ಸೋಮೇಶ್ವರ ಅವರು ವೈದ್ಯ ಸಾಹಿತಿಗಳನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ. ನಮ್ಮ ವೈದ್ಯ-ವೈದ್ಯೇತರ ಸಾಹಿತಿಗಳು ಮತ್ತು ವೈದ್ಯ ಸಾಹಿತ್ಯಾಸಕ್ತರು ಈ ಪುಸ್ತಕವನ್ನು ಓದಿ, ಒಂದು ಸರ್ವಸಮ್ಮತ ವಿಧಿ ವಿಧಾನಗಳನ್ನು ಪಾಲಿಸುವರೆಂದು ಆಶಿಸುತ್ತೇನೆ.ಎಂದು ಮುನ್ನುಡಿಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಶೀರ್ಷಿಕೆ : ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರ ಲೇಖಕರು : ಡಾ. ನಾ. ಸೋಮೇಶ್ವರ ಪ್ರಕಾಶಕರು : ಪ್ರತಿಭಾ ಪ್ರಕಾಶನ, ಮೈಸೂರು ಪುಟಗಳು : 129 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: