ತುರ್ತು ಪರಿಸ್ಥಿತಿಯ ಕರಾಳ ಮುಖ

ಸ್ವತಂತ್ರ ಭಾರತದ ಚರಿತ್ರೆಯ ಕಪ್ಪು ಚುಕ್ಕೆಯಂತಿರುವ ತುರ್ತು ಪರಿಸ್ಥಿತಿ ಕೊನೆಗೊಂಡು ಇಪ್ಪತೈದು ವರ್ಷಗಳಾದರೂ ಅದರ ಕಹಿನೆನಪುಗಳು ಇನ್ನೂ ಮಾಸಿಲ್ಲ. ಅನೇಕ ಅಮಾಯಕರ ಸಾವುನೋವಿಗೆ ಕಾರಣವಾದ ತುರ್ತ ಪರಿಸ್ಥಿತಿ, ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಅಲ್ಲಾಡಿಸಿದ ಕರಾಳ ಸಂದರ್ಭ. ಆ ಕರಾಳ ದಿನಗಳಲ್ಲಿ ಕೇರಳದ ಅಮಾಯಕ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಬಲಿಯಾದದ್ದು, ಮಗ ನಾಪತ್ತೆಯಾಗಿರುವನೆಂದು ತಿಳಿದು ಅವನನ್ನು ಹುಡುಕಲು ವೃದ್ಧ ತಂದೆಯೊಬ್ಬ ಪಟ್ಟ ಪಡಿಪಾಟಲುಗಳ ಕಥನ `ತುರ್ತ ಪರಿಸ್ಥಿತಿಯ ಕರಾಳ ಮುಖಕೃತಿ. ಮಗನನ್ನು ಕಳಕೊಂಡ ತಂದೆ (ಈಚರ್ ವಾರಿಯರ್) ಸ್ವತಃ ಈ ಕಥನ ಬರೆದಿರುವುದು ವಿಶೇಷ. ಈ ಅಪರೂಪದ ಕೃತಿಯನ್ನು ಲೇಖಕಿ ಸಾರಾ ಅಬೂಬಕರ್ ಕನ್ನಡಕ್ಕೆ ತಂದಿದ್ದಾರೆ.

ತಂದೆಯ ಅಸಹಾಯಕ ಸ್ಥಿತಿ, ರಾಜಕಾರಣಿಗಳ ಕಣ್ಣಾಮುಚ್ಚಾಲೆ, ಪೋಲೀಸರ ದರ್ಪ, ಪತ್ರಿಕೆಗಳ ಇಬ್ಬಗೆಯ ನೀತಿ, ಜನತೆಯಲ್ಲಿನ ಗುಪ್ತಗಾಮಿನಿಯಂಥ ಮಾನವೀಯತೆ ಕೃತಿಯುದ್ದಕ್ಕೂ ಕಾಣಬಹುದು. ವಾರಿಯರ್ ಅವರ ಸಂಕಟ ಓದುಗರದೂ ಆಗುವುದು ಕೃತಿ ವೈಶಿಷ್ಟ್ಯ. ತಂದೆಯೊಬ್ಬನ ಈ ದಾರುಣ ಕಥನ ಕೇರಳ ರಾಜಕೀಯದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ ಹಾಗೂ ತುರ್ತ ಪರಿಸ್ಥಿತಿಗೆ ಕಾರಣವಾದವರ ಕುರಿತು ಬೇಸರ ಮೂಡಿಸುತ್ತದೆ.

ಕನ್ನಡದ ನೆಲದಲ್ಲಿಯೇ ನಡೆದ ಘಟನೆ ಎನ್ನುವಷ್ಟು ಸಹಜವಾಗಿ ಸಾರಾ ಅನುವಾದವಿದೆ.

ಶೀರ್ಷಿಕೆ : ತುರ್ತು ಪರಿಸ್ಥಿತಿಯ ಕರಾಳ ಮುಖ ಲೇಖಕರು : ಪ್ರೊ. ಈಚರ್ ವಾರಿಯರ್ ಅನುವಾದ : ಸಾರಾ ಅಬೂಬಕರ್ ಪ್ರಕಾಶಕರು : ಚಂದ್ರಗಿರಿ ಪ್ರಕಾಶನ ಪುಟಗಳು : 73 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: