ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ …

ಕನ್ನಡದ ಪ್ರಮುಖ ವೈದ್ಯ ಸಾಹಿತಿಗಳಲ್ಲೊಬ್ಬರಾದ ಡಾ.ಹೆಚ್.ಗಿರಿಜಮ್ಮನವರ `ಗರ್ಭಧಾರಣೆ:ಸಂದೇಹ ನಿವಾರಣೆಪುಸ್ತಕ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿ.

ಒಂದೆಡೆ ಜನಸಂಖ್ಯೆ ನಾಗಾಲೋಟದಲ್ಲಿ ಏರುತ್ತಲೇ ಇದ್ದರೆ, ಮತ್ತೊಂದೆಡೆ ಲೈಂಗಿಕ ವಿಷಯಗಳ ಕುರಿತ ಅಜ್ಞಾನವೂ ಹೆಚ್ಚುತ್ತಿದೆ. ಇಂಥ ಸಂಕೀರ್ಣ ಸಂದರ್ಭದಲ್ಲಿ ಜನಸಾಮಾನ್ಯರಿಗೆ ದಾಂಪತ್ಯ-ಸಾಂಗತ್ಯದ ಕುರಿತು ಸುಲಭ ಭಾಷೆಯಲ್ಲಿ ಅರಿವು ನೀಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ಗಿರಿಜಮ್ಮನವರ ಈ ಪುಸ್ತಕ ಗರ್ಭಧಾರಣೆ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಿಷಯಗಳನ್ನು ಚರ್ಚಿಸುತ್ತದೆ.

ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋಧಕಗಳ ಬಳಕೆ, ಗರ್ಭಧಾರಣೆ, ಗರ್ಭಿಣಿ ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಗಳು, ಮೂಢನಂಬಿಕೆಗಳು, ಆಹಾರಕ್ರಮ, ಸ್ತನ್ಯಪಾನದ ಮಹತ್ವ, ಹೆರಿಗೆ, ಇತ್ಯಾದಿ ವಿಷಯಗಳ ಕುರಿತ ವಿವರಗಳಿವೆ. ಪ್ರಶ್ನೋತ್ತರಗಳ ಮಾದರಿಯ ನಿರೂಪಣೆ ವಿಷಯವನ್ನು ಓದುಗರಿಗೆ ಸುಲಭವಾಗಿ ಮುಟ್ಟಿಸುವಂತಿದೆ. ರೇಖಾಚಿತ್ರಗಳ ಬಳಕೆ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ.

ಶೀರ್ಷಿಕೆ : ಗರ್ಭಧಾರಣೆ : ಸಂದೇಹ ನಿವಾರಣೆ ಲೇಖಕರು : ಡಾ. ಹೆಚ್. ಗಿರಿಜಮ್ಮ ಪ್ರಕಾಶಕರು : ವಸಂತ ಪ್ರಕಾಶನ ಪುಟಗಳು :115 ಬೆಲೆ:ರೂ.50/-

ಕೃಪೆ : ಪ್ರಜಾವಾಣಿ

ವ್ಯೂಹ – ಕತೆ ಹೇಳಲೆಂದೇ ಬದುಕಿದ ಲೇಖಕನ ಕಾದಂಬರಿ

ನೊಬೆಲ್ ವಿಜೇತ ಲ್ಯಾಟಿನ್ ಅಮೇರಿಕನ್ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡ ಸಾಹಿತ್ಯ ವಾತಾವರಣಕ್ಕೆ ಅಪರಿಚಿತರೇನಲ್ಲ. ಅವರ ಕಾದಂಬರಿಗಳ ಉಲ್ಲೇಖ, ಮಾಯಾ ವಾಸ್ತವ ಶೈಲಿ ಎಲ್ಲ ಅಷ್ಟಿಷ್ಟು ಇಲ್ಲಿಯೂ ಚರ್ಚೆಗೊಳಗಾಗಿವೆ. ಕನ್ನಡಿಗರ ಸಾಹಿತ್ಯಕ ಸಂವೇದನೆಯನ್ನೂ ಅವರು ಮೀಟಿದ್ದಾರೆ, he strikes a chord. ಆದರೆ ಮಾರ್ಕ್ವೆಜ್ ಕಾದಂಬರಿಗಳ ಕನ್ನಡ ಅನುವಾದ ಓದುವುದು ಮಾತ್ರ ದುಸ್ತರ. ಪ್ರಸ್ತುತ ಅನುವಾದ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಇರುವ (ಪುಟ ತಿರುವಿದಾಗ) ಭರವಸೆ ಹುಟ್ಟಿಸುವುದರಿಂದ ಪರವಾಗಿಲ್ಲ.

ಲ್ಯಾಟಿನ್ ಅಮೆರಿಕಾದ ಆರು ದೇಶಗಳಲ್ಲಿ ವಿಮೋಚಕನೆಂದು ಪ್ರಖ್ಯಾತನಾದ ಜನರಲ್ ಸಿಮೋನ್ ಬೊಲಿವಾರ್ ವ್ಯಕ್ತಿತ್ವವನ್ನು ಮರು ಕಲ್ಪಿಸಿಕೊಂಡು ಬರೆಯಲಾಗಿರುವ ಈ ಕಥಾನಕದಲ್ಲಿ ಎಲ್ಲ ವೀರರ ಕತೆಗಳಲ್ಲಿರುವಂತೆ ಉಪ್ಪು, ಹುಳಿ, ಖಾರ, ಕ್ಷೀರ ಇವೆ. ಇದ್ದು ಅವನನ್ನು ಮನುಷ್ಯನನ್ನಾಗಿಸಿದೆ. ಲ್ಯಾಟಿನ್ ಅಮೇರಿಕನ್ ದೇಶಗಳನ್ನು ಒಗ್ಗೂಡಿಸುವ ಆತನ ಕನಸು, ಅದು ಒಡೆಯುವುದು, ಅವನು ಅಧಿಕಾರಚ್ಯುತನಾಗುವುದು, ಕೊಲೆಯ ಸಂಚುಗಳಲ್ಲಿ ಸಿಲುಕಿಕೊಳ್ಳುವುದು, ಮಾರಣಾಂತಿಕ ಕಾಯಿಲೆಗೆ ತುತ್ತಾಗುವುದು, ಆದಾಗ್ಯೂ ಯುದ್ದಗಳಲ್ಲಿ ತೊಡಗಿಕೊಳ್ಳುವಷ್ಟೇ ಸಾಹಸದಿಂದ ಪ್ರಣಯ ಪ್ರಸಂಗಗಳಲ್ಲಿಯೂ ಭಾಗವಹಿಸುವುದು – ಈ ಎಲ್ಲ ರೆಸಿಪಿ ಇದೆ.

ಅದೂ ಮಾರ್ಕ್ವೆಜ್ ಬರವಣಿಗೆಯಲ್ಲಿ ಅಂದರೆ be prepared for a Blast!

ಶೀರ್ಷಿಕೆ : ವ್ಯೂಹ ಲೇಖಕರು : ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅ: ಪಿ. ವಿ. ನಾರಾಯಣ ಪ್ರಕಾಶಕರು : ಸೌಮ್ಯ ಎಂ. ಪುಟಗಳು :231 ಬೆಲೆ:ರೂ.120/-

ಕೃಪೆ : ವಿಜಯ ಕರ್ನಾಟಕ

24 ಆಗಸ್ಟ್ 2008 – ಟಾಪ್ 10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)

1. ಉತ್ತರಾಯಣ ಮತ್ತು … (ಎಚ್ಚೆಸ್ವಿ ಅವರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರ:ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಬೆ:ರೂ.100/-

2. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-

3. ಬೆಳ್ಳಕ್ಕಿ ಹಿಂಡು (ಸು.ರಂ.ಎಕ್ಕುಂಡಿ ಸಮಗ್ರ ಕಾವ್ಯ) ಸಂ:ಡಿ.ವಿ.ಪ್ರಹ್ಲಾದ್ ಪ್ರ:ಸಂಚಯ ಪ್ರಕಾಶನ, ಬೆಂಗಳೂರು ಬೆ:ರೂ.350/-

4. ಹಳ್ಳ ಬಂತು ಹಳ್ಳ (ಕಾದಂಬರಿ) ಲೇ:ಶ್ರೀನಿವಾಸ ವೈದ್ಯ ಪ್ರ:ಮನೋಹರ ಗ್ರಂಥಮಾಲಾ,ಧಾರವಾಡ ಬೆ:ರೂ.200/-

5. ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ (ವ್ಯಕ್ತಿತ್ವ ವಿಕಸನ ಕುರಿತು) ಲೇ:ನೆಲ್ಲಿಕೆರೆ ವಿಜಯಕುಮಾರ್ ಪ್ರ:ಸುಮ್ ಸುಮ್ನೆ ಪ್ರಕಾಶನ, ಬೆಂಗಳೂರು ಬೆ:ರೂ.100/-

6. ಒಂದು ಬದಿ ಕಡಲು (ಕಾದಂಬರಿ) ಲೇ:ವಿವೇಕ ಶಾನಭಾಗ ಪ್ರ:ಅಕ್ಷರ ಪ್ರಕಾಶನ, ಹೆಗ್ಗೋಡು ಬೆ:ರೂ.135/-

7. ಕುಶಲೋಪರಿ (ಅಂಕಣ ಬರಹಗಳು) ಲೇ:ಸತ್ಯನಾರಾಯಣ, ಕ್ರೈಸ್ಟ್ ಕಾಲೇಜು, ಬೆಂಗಳೂರು ಬೆ:ರೂ.90/-

8. ಆತ್ಮಕಥೆ (ಟಾಲ್ ಸ್ಟಾಯ್ ಆತ್ಮಕಥನ) ಲೇ:ಲಿಯೋ ಟಾಲ್ ಸ್ಟಾಯ್ ಅ:ಆನಂದ ಪ್ರ: ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ, ಬೆಂಗಳೂರು ಬೆ:ರೂ.95/-

9. ಸಾಹಿತಿಗಳು…. ರಸನಿಮಿಷಗಳು (ಸಾಹಿತಿಗಳ ಬದುಕಿನ ರಸನಿಮಿಷಗಳು) ವೈ. ಎನ್. ಗುಂಡೂರಾವ್, ಅಳಿಲು ಸೇವಾ ಸಂಸ್ಥೆ, ಬೆಂಗಳೂರು ಬೆ:ರೂ.95/-

10. ಅವನೀತ (ಕಾದಂಬರಿ) ಲೇ:ಸಾಯಿಸುತೆ ಪ್ರ: ಕರ್ನಾಟಕ ಸಾಹಿತ್ಯ ಪ್ರಕಾಶನ, ತುಮಕೂರು ಬೆ:ರೂ.140/-

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ಬೆತ್ತಲೆ ಜಗತ್ತು-7 ಲೇ:ಪ್ರತಾಪ್ ಸಿಂಹ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.120/-

2. ಅಗ್ನಿಯ ರೆಕ್ಕೆಗಳು ಲೇ:ಜಯಪ್ರಕಾಶ್ ಪುತ್ತೂರು ಪ್ರ:ವಾಸನ್ ಪಬ್ಲಿಕೇಷನ್, ಬೆಂಗಳೂರು ಬೆ.ರೂ.125/-

3. ಆಸನ ಕಲಿಯಿರಿ ಆರೋಗ್ಯ ಭಾಗ್ಯ ಪಡೆಯಿರಿ ಲೇ:ಡಾ.ನಾಗೇಂದ್ರ ಕುಮಾರ್ ಪ್ರ:ಡಾ.ನಾಗೇಂದ್ರ ಕುಮಾರ್, ಬೆಂಗಳೂರು ಬೆ:ರೂ.250/-

4. ಫೆರಾರಿ ಮಾರಿದ ಫಕೀರ ಲೇ:ರಾಬಿನ್ ಶರ್ಮ ಪ್ರ:ಜೈಕೋ ಪಬ್ಲಿಷಿಂಗ್ ಹೌಸ್, ಮುಂಬಯಿ ಬೆ:ರೂ.125/-

5. ತೂಕ ಇಳಿಸಲು 201 ಸಲಹೆಗಳು ಲೇ:ಡಾ.ಬಿಮಲ್ ಛಾಜರ್ ಪ್ರ:ನವಕರ್ನಾಟಕ ಪ್ರಕಾಶನ, ಬೆಂಗಳೂರು ಬೆ:ರೂ.95/-

6. ಬದುಕು ಬದಲಿಸಬಹುದು ಲೇ:ನೇಮಿಚಂದ್ರ ಪ್ರ:ನವಕರ್ನಾಟಕ ಪಬ್ಲಿಕೇಷನ್ ಬೆ:ರೂ.95/-

7. ಧರ್ಮಶ್ರೀ ಲೇ:ಎಸ್.ಎಲ್.ಭೈರಪ್ಪ ಪ್ರ:ಸಾಹಿತ್ಯ ಭಂಡಾರ, ಬೆಂಗಳೂರು ಬೆ:ರೂ.150/-

8. ಅಜೇಯ ಲೇ:ಬಾಬು ಕೃಷ್ಣಮೂರ್ತಿ ಪ್ರ:ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು ಬೆ:ರೂ.200/-

9. ಪಾಕಕ್ರಾಂತಿ ಮತ್ತು ಇತರ ಕತೆಗಳು ಲೆ:ಪೂರ್ಣಚಂದ್ರ ತೇಜಸ್ವಿ ಪ್ರ:ಪುಸ್ತಕ ಪ್ರಕಾಶನ, ಮೈಸೂರು ಬೆ:ರೂ.60/-

10. ತಾಯಿ-ಮಗು ಲೇ:ಡಾ.ಅನುಪಮಾ ನಿರಂಜನ ಪ್ರ:ಡಿ.ವಿ.ಕೆ. ಮೂತರ್ಿ, ಮೈಸೂರು ಬೆ:ರೂ.60/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ

ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

ನವೋದಯ ಸಾಹಿತ್ಯ ವಸಾಹತುಶಾಹಿಯ ಒತ್ತಡ ಅಥವಾ ಪ್ರಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಜಾನಪದದ ಪ್ರಭಾವ ಅದರ ಮೇಲೆ ಅತ್ಯಧಿಕವಾಗಿದೆ ಎಂಬುದನ್ನು ಖಾಡೆ ಅವರು ಇಲ್ಲಿ ಸಂಶೋಧಿಸಿ ಸಿದ್ಧಪಡಿಸಿದ್ದಾರೆ.

ಧಾರವಾಡದ ಗೆಳೆಯರ ಗುಂಪು, ಹಲಸಂಗಿ ಗೆಳೆಯರು, ಮಂಗಳೂರಿನ ಮಿತ್ರ ಮಂಡಳಿಯ ಸಾಧನೆಗಳನ್ನು ಪರಿಚಯಿಸುವ ಮೂಲಕ ಮೈಸೂರು ಕರ್ನಾಟಕ ಸಾಹಿತ್ಯ ಪರಂಪರೆಯ ಸುತ್ತ ನಡೆದ ಚರ್ಚೆಗಳಷ್ಟೇ ಸತ್ಯ ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಜನಪದ ಸಾಹಿತ್ಯದ ಪ್ರೇರಣೆ, ಪ್ರಭಾವಗಳೇ ಹೆಚ್ಚಾಗಿವೆ ಎಂಬ ಅಂಶ ನವೋದಯ ಸಾಹಿತ್ಯದ ಮೇಲೆ ನಮ್ಮ ಪ್ರೀತಿ ಹೆಚ್ಚುವುದಕ್ಕೆ ಪುಸ್ತಕ ಕಾರಣವಾಗುತ್ತದೆ. ಪಿ.ಎಚ್.ಡಿ. ಕೃತಿಗಳಿಗಿರುವ ಮಿತಿಗಳನ್ನು ಮೀರಿಸಿಕೊಂಡು ಪುಸ್ತಕ ಓದಿಸಿಕೊಳ್ಳುತ್ತದೆ.

ಶೀರ್ಷಿಕೆ : ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಲೇಖಕರು : ಪ್ರಕಾಶ ಗ. ಖಾಡೆ ಪ್ರಕಾಶಕರು : ಅನಿಕೇತ ಪ್ರಕಾಶನ ಪುಟಗಳು :295 ಬೆಲೆ:ರೂ.250/-

ಕೃಪೆ : ಸುಧಾ

ಹಸಿವು, ಬಡತನ …. ಗಳಿಗೆ ಪರಿಹಾರ ಗಾಂಧಿ? ನೆಹರೂ? ಲೋಹಿಯಾ?…… ಯಾವ ವಾದ?

ನಮ್ಮ ದೇಶದ ಜನತೆಯನ್ನು ನೂರಾರು ಸಮಸ್ಯೆಗಳು ಸುಡುತ್ತಿವೆ – ಹಸಿವು, ಬಡತನ, ನಿರುದ್ಯೋಗ, ನಿರಕ್ಷರತೆ, ಅಸಮಾನತೆ, ಕೋಮುಗಲಭೆಗಳು, ಜಾತೀಯತೆ, ಅಸ್ಪೃಶ್ಯತೆ, ಪ್ರತ್ಯೇಕತೆ.

ಈ ಸಮಸ್ಯೆಗಳು ಸ್ವಾತಂತ್ರ್ಯ ಬಂದು 55 ವರ್ಷಗಳು ಕಳೆದರಇನ್ನೂ ಏಕೆ ಇವೆ?

ನಮ್ಮನ್ನು ಸುಡುತ್ತಿರುವ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಸೂಚಿಸಲಾಗಿದೆ. ಹಲವು `ವಾದಗಳು ಸಮಸ್ಯೆಗಳಿಗೆ ಮೂಲ ಕಾರಣ ಮತ್ತು ಪರಿಹಾರಗಳನ್ನು ಮುಂದಿಟ್ಟಿವೆ – ನೆಹರೂವಾದ, ಗಾಂಧೀವಾದ, ಲೋಹಿಯಾವಾದ, ಅಂಬೇಡ್ಕರ್ ವಾದ, ಉದಾರೀಕರಣ-ಜಾಗತೀಕರಣ, ಸಮಾಜವಾದ, ನಕ್ಸಲ ವಾದ, ಜನತಾ ಪ್ರಜಾಪ್ರಭುತ್ವ, ಹಿಂದೂತ್ವ, ಕಮ್ಯುನಿಸಂ, ಮಿಲಿಟರಿ ಸರ್ವಾಧಿಕಾರ ಇವು ಚಲಾವಣೆಯಲ್ಲಿರುವ ಹಲವು ವಾದಗಳು.

ಇವುಗಳಲ್ಲಿ ಯಾವುವು ಪರಿಹಾರಗಳು? ಯಾವುವು ಭ್ರಮೆಗಳು?

ಈ ಚರ್ಚಗಳು ಕಂಪೆನಿ ಬೋರ್ಡ ರೂಂಗಳಲ್ಲಿ, ತಜ್ಞರ ಸೆಮಿನಾರುಗಳ್ಲಲ್ಲಿ, ಸರ್ಕಾರಿ ಸಭೆ-ಸಮಿತಿಗಳಲ್ಲಿ, ಹೊಲ-ಕಾರ್ಖಾನಗಳಲ್ಲಿ, ಪಕ್ಷಗಳ ಕಚೇರಿ-ಸಭೆಗಳಲ್ಲಿ, ಪಾರ್ಲಿಮೆಂಟಿನಲ್ಲಿ, ಚುನಾವಣೆ ಪ್ರಚಾರಗಳಲ್ಲಿ, ಬೀದಿ-ಬೀದಿಗಳಲ್ಲಿ ಕೇಳಿ ಬರುತ್ತಿವೆ.

ಇದನ್ನು ಬೆಳವಣಿಗೆಯ ಹಾದಿಯ ಚರ್ಚ ಎನ್ನಬಹುದು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ನಡೆಯುತ್ತಿದೆ. ಇಂತಹ ಚರ್ಚಗಳಲ್ಲಿ ಹಲವನ್ನು ನಾವೆಲ್ಲಾ ಕೇಳಿದ್ದೇವೆ.

ಇಂತಹ ಚರ್ಚಗಳಲ್ಲಿ ಆಗಾಗ ಕೇಳಿ ಬರುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವೇ ಈ ಪುಸ್ತಕ. ಪ್ರಶ್ನೆ ಮತ್ತು ಉತ್ತರ ಎರಡೂ ಭಾರತದ ಬಹುಸಂಖ್ಯಾತ ಜನರನ್ನು ಗಮನದಲ್ಲಿಟ್ಟು ಕೊಡಲಾಗಿದೆ. ಓದಿನ ಅನುಕೂಲಕ್ಕಾಗಿ ಪ್ರಶ್ನೆ ಮತ್ತು ಉತ್ತರಗಳನ್ನು ಆರು ಅಧ್ಯಾಯಗಳಾಗಿ ಕೊಡಲಾಗಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದವುಗಳನ್ನು ಒಂದು ಅಧ್ಯಾಯದೊಳಗೆ ಸಂಗ್ರಹಿಸಲಾಗಿದೆ.

ಲೇಖಕ ಶರತ್ಚಂದ್ರ ಅವರು ಪುಸ್ತಕದ ಪ್ರಸ್ತಾವನೆಯಲ್ಲಿ ಈ ಪುಸ್ತಕದ ಬಗ್ಗೆ ವಿವರಿಸುತ್ತಾ “ಈ ಪುಸ್ತಕ ಭಾರತದ ಬೆಳವಣಿಗೆಯ ಹಾದಿಯ ಚರ್ಚಗೆ ಒಂದು ಕಿರುಕಾಣಿಕೆ. ಈ ಪುಸ್ತಕವನ್ನು ಬೆಳವಣಿಗೆಯ ಹಾದಿಯ ಚರ್ಚಯಲ್ಲಿ ಆಸಕ್ತಿ ಇರುವ ಎಲ್ಲರೂ ಸ್ವಾಗತಿಸುತ್ತಾರೆ ಎಂದು ಆಶಿಸಲಾಗಿದೆ. ಆಸಕ್ತರ ಮೂಲಕ ಈ ಚರ್ಚ ಭಾರತದ ಬಹುಸಂಖ್ಯಾತ ಜನರನ್ನೂ ತಲುಪಲಿ ಎಂಬುದು ಲೇಖಕನ ಹಾರೈಕೆ.” ಎಂದಿದ್ದಾರೆ.

ಪುಸ್ತಕದ ಅಂತ್ಯಪುಟದಲ್ಲಿ ತಮ್ಮ ಹರೆಯದಲ್ಲಿ ಜನಪ್ರಿಯವಾಗಿದ್ದ ಗೋಪಾಲಕೃಷ್ಣ ಅಡಿಗರ “ಕಟ್ಟುವೆವು ನಾವು” ಕವನವನ್ನು ಕೊಟ್ಟು ಓದುಗರಿಗೆ ಹೊಸ ನಾಡನ್ನು ಕಟ್ಟುವುದಕ್ಕೆ ಆಹ್ವಾನವನ್ನೂ ಕೊಟ್ಟಿದ್ದಾರೆ.

ಲೇಖಕರೇ ಹೇಳಿದಂತೆ ಇದರ ಉಪಯೋಗವನ್ನು ಎಲ್ಲಾ ಪ್ರಗತಿಪರರು ಪಡೆಯಲಿ. ( ಪುಸ್ತಕ ಇಂಗ್ಲೀಷ್ ನಲ್ಲೂ ಲಭ್ಯವಿದೆ)

ವಿಶಾಲಮತಿ

ಶೀರ್ಷಿಕೆ : ಭಾರತದ ಬೆಳವಣಿಗೆಯ ಹಾದಿ – ನೂರೆಂಟು ಪ್ರಶ್ನೆಗಳು ಲೇಖಕರು : ಶರತ್ ಚಂದ್ರ ಪ್ರಕಾಶಕರು : ಕ್ರಿಯಾ ಪ್ರಕಾಶನ ಪುಟಗಳು :96 ಬೆಲೆ:ರೂ.55/-

ಸಮಗ್ರ ನಾಟಕ

ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ನಾಟಕ ರಚಿಸುವ ಕನ್ನಡದ ಹೆಸರಾಂತ ನಟ-ನಾಟಕಕಾರ ಗಿರೀಶ ಕಾರ್ನಾಡರ ಸಮಗ್ರ ನಾಟಕಗಳು ಇಂಗ್ಲೀಷ್ನಲ್ಲಿ ಆಕ್ಸ್ ಫರ್ಡ್ ಪ್ರೆಸ್ ನವರು ಪ್ರಕಟಿಸಿದ ನಂತರ ಇದೀಗ ಕನ್ನಡದಲ್ಲೂ ಪ್ರಕಟವಾಗಿದೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಾರ್ನಾಡರು ಇದುವರೆಗೆ ಬರೆದಿರುವ ನಾಟಕಗಳ ಸಂಖ್ಯೆ ಕೇವಲ 11 ಎಂಬುದು ಕೆಲವರಿಗೆ ಅಚ್ಚರಿ ಸಂಗತಿಯಾಗಬಹುದು. ಅವರು ರಚಿಸಿದ 3-4 ನಾಟಕಗಳನ್ನು ಹೊರತುಪಡಿಸಿ ಇತರ ಎಲ್ಲಾ ನಾಟಕಗಳು ಕನ್ನಡ, ಇಂಗ್ಲೀಷ್ ಹಾಗೂ ನಾಲ್ಕಾರು ಭಾರತೀಯ ಭಾಷೆಗಳಲ್ಲಿ ಹಲವು ಪ್ರಯೋಗ ಕಂಡವಷ್ಟೇ ಅಲ್ಲ. ಸಾಕಷ್ಟು ಚರ್ಚೆಗೂ ಒಳಗಾಗಿದ್ದು ಕಾರ್ನಾಡರೂ ನೂರಾರು ನಾಟಕಗಳನ್ನು ರಚಿಸಿರಬಹುದೇನೋ ಎಂಬ ಭಾವನೆ ಮೂಡಿಸಿದ್ದವು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿ ಪ್ರಕಟಣೆಗೆ ಮುಂಚಿತವಾಗಿಯೇ 2,500 ಪುಸ್ತಕಗಳನ್ನು ಖರೀದಿಸಿದೆ. ಪ್ರಯೋಗ ಹಾಗೂ ಪ್ರಕಟಣೆಯ ವಿಷಯದಲ್ಲಿ ಕಾರ್ನಾಡ, ಕಂಬಾರರಂತಹ ಅದೃಷ್ಟವಂತರು ಕನ್ನಡದಲ್ಲಿ ಕಡಿಮೆ.

ಶೀರ್ಷಿಕೆ : ಸಮಗ್ರ ನಾಟಕ ಲೇಖಕರು : ಗಿರೀಶ ಕಾರ್ನಾಡ ಪ್ರಕಾಶಕರು : ಮನೋಹರ ಗ್ರಂಥಮಾಲೆ ಪುಟಗಳು :868 ಬೆಲೆ:ರೂ.500/-

ಕೃಪೆ : ಸುಧಾ

ಸಂಗೀತ ನಾಟಕ ಅದಡಾಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ತಮ್ಮ ಸಾಹಿತ್ಯ ಸಾಧನೆಗಾಗಿ ಪಡೆದಿರುವ ಗಿರೀಶ ಕಾರ್ನಾಡರು ತಮ್ಮ ಸಿನೆಮಾಗಳಿಗಾಗಿ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ತುಘಲಕ್, ನಾಗಮಂಡಲ, ಒಡಕಲು ಬಿಂಬ, ಯಯಾತಿ, ಅಂಜು ಮಲ್ಲಿಗೆ, ಮಾ ನಿಷಾದ, ಟಿಪ್ಪುವಿನ ಕನಸುಗಳು, ತಲೆ ದಂಡ ಮುಂತಾದವು ಅವರ ನಾಟಕಗಳು.

ಕೃಪೆ : http://en.wikipedia.org/wiki/Girish_Karnad

ಸಿಡಿ ಕಿಡಿ ನಾಡ ತೋಪುಗಳು ಸಿಗಲಿಲ್ಲವೇ

ಸಿನಿಮಾ ನಿರ್ದೇಶಕ ಟಿ. ಎಸ್. ನಾಗಾಭರಣ ಪ್ರೇಮಗೀತೆಗಳಿಂದಲೇ ಒಂದು ಕಥಾ ಹಂದರ ಸೃಷ್ಟಿಸಿ `ಮೈಸೂರು ಮಲ್ಲಿಗೆನಿರ್ಮಿಸಿದ ಹಾಗೆ `ರಂಗಾಯಣದ ಮೂವರು ವೃತ್ತಿ ನಟರು ಬೀಚಿಯವರ ಸಾಹಿತ್ಯವನ್ನು `ಕಟ್ಟುವ ಕ್ರಿಯೆಯಾಗಿಸಿದ ಫಲವೇ ಈ ಪುಸ್ತಕ. ಹೊಸ ನಾಟಕವೊಂದರ ಹುಡುಕಾಟವಾಗಿ ಆರಂಭವಾದ ಈ ಕ್ರಿಯೆ ರಂಗಭೂಮಿಯಲ್ಲಿ ಈ ವರೆಗೆ ಪ್ರಯೋಗಗೊಳ್ಳದಿರುವ ಬೀಚಿ ಸಾಹಿತ್ಯವನ್ನು ಅನಾವರಣಗೊಳಿಸುವ ಮಹತ್ವದ ಕೆಲಸ ಮಾಡಿದೆ.

ಬಹುಶ್ರುತ ಪ್ರತಿಭಾವಂತರೂ `ಹಾಸ್ಯ ಸಾಹಿತಿಎಂದಷ್ಟೇ ಚಿತ್ರಿತರಾಗಿರುವ, ಜನರ ನೆನಪಿನಿಂದ ಬಹುತೇಕ ಮರೆಯಾಗಿರುವ ಭೀಮಸೇನರಾಯರನ್ನು ಆನ್ ಅರ್ತ ಮಾಡುವ ಇಂಥದ್ದೊಂದು ಸಾಹಸ ಖಂಡಿತಕ್ಕೂ ಅಗತ್ಯವಿತ್ತು. ಅವರ ವೈಚಾರಿಕತೆ, ಮಾನವೀಯ ಅಂತಃಕರಣ, ಸಮಾಜದ ಬಗೆಗಿನ ಚಿಕಿತ್ಸಕ ನೋಟ, ವ್ಯಂಗ್ಯ ಲಾಯಕ್ಕಾದ `ನಾಟಕ ಸಾಮಾಗ್ರಿಎನ್ನುವುದರಲ್ಲಿ ಅನುಮಾನ ಇಲ್ಲ. ತನ್ನ ಅನ್ವೇಷಣೆಯ ನೆಲೆಯಿಂದಾಗಿ ಈ ಪುಸ್ತಕ ಒಂದು ಅಸಂಪ್ರದಾಯಿಕ ರೂಪವನ್ನೂ ಪಡೆದುಕೊಂಡಿದೆ.

ಹಿರಿಯ ರಂಗಕರ್ಮಿ, ನಿರ್ದೇಶಕ ಸಿ ಬಸವಲಿಂಗಯ್ಯ ವಿವರಿಸುವ ಹಾಗೆ, `ಮೂವರು ನಟರು ನಾಟಕಕಾರರ ಸ್ಥಾನದಲ್ಲಿ ನಿಂತು ಬೀಚಿಯವರ ಸಾಹಿತ್ಯ ಆಕರಗಳನ್ನು ಆಧರಿಸಿಯೇ, ಅಭಿನಯದ ಮೂಲಕ ಅದಕ್ಕೊಂದು ಕಲಾತ್ಮಕ ಆವರಣ ಸೃಷ್ಟಿಸಲು ಖೋ ಖೋ ಆಡಿದಂತೆ ನಾಟಕದ ಉದ್ದಕ್ಕೂ ಆವರಿಸಿಕೊಳ್ಳುವುದು ರಂಗದಲ್ಲಿ ಒಂದು ಹೊಸ ಅನುಭೂತಿಗೆ ಕಾರಣವಾಗುತ್ತದೆ.

ತುಂಬಾ ಜೀವಂತವಾಗಿರುವ, ತಕ್ಷಣದ ಪರಿಣಾಮ ಬೀರುವ ರಂಗಭೂಮಿ ಇಂತಹ ಅನೇಕ ಪ್ರಯೋಗಗಳಿಗೆ ತೆರೆದುಕೊಂಡಿದೆ, ತೆರೆದುಕೊಳ್ಳುತ್ತಲೇ ಇದೆ.

ಎಲ್ಲಾ ಓಕೆ. ಆದರೆ ಈಗಾಗಲೇ ಬೀಚಿ ಬುಲೆಟ್ಸ್ ಅಂತ ಪ್ರಯೋಗ ಆಗಿರುವಾಗ ಅದರ ಕಾಪಿ ಯಾಕೆ? ಬೀಚಿಯವರ ಭಂಡಾರದಲ್ಲಿಯೇ ಅರಸಿದ್ದರೆ ಯಾವುದಾದರೂ ಸಿಡಿಕಿಡಿ ನಾಡತೋಪುಗಳು ಸಿಕ್ಕುತ್ತಿದ್ದಾವು!

ಶೀರ್ಷಿಕೆ : ಬೀchi ಬುಲೆಟ್ಸ್ ಲೇಖಕರು : ಬೀchi ಪ್ರಕಾಶಕರು : ರಚನಾ ಪ್ರಕಾಶನ ಪುಟಗಳು :126 ಬೆಲೆ:ರೂ.60/-

ಕೃಪೆ : ವಿಜಯ ಕರ್ನಾಟಕ

ಬೀchi ಯವರ ಹಾಸ್ಯ ನಾಟಕಗಳು

ದಾಸ ಕೂಟ, ಬೆಳ್ಳಿ ತಿಮ್ಮ ನೂರೆಂಟು ಹೇಳಿದ, ತಿಮ್ಮನ ತಲೆ, ತಿಮ್ಮಾಯಣ, ನನ್ನ ಭಯಗ್ರಾಫಿ (ಆತ್ಮಕಥೆ), ಉತ್ತರಭೂಪ, ಅಂದನಾ ತಿಮ್ಮ, ತಿಮ್ಮ ರಸಾಯನ, ಸತೀಸೂಳೆ, ಹೆಣ್ಣು ಕಾಣದ ಗಂಡು, ಸರಸ್ವತಿ ಸಂಹಾರ, ಮಾತ್ರೆಗಳು, ಮಾತನಾಡುವ ದೇವರುಗಳು, ದೇವರಿಲ್ಲದ ಗುಡಿ, ಖಾದಿ ಸೀರೆ, ಸತ್ತವನು ಎದ್ದು ಬಂದಾಗ, ಟೆಂಟ್ ಸಿನಿಮಾ, ಬಿಟ್ಟಿದ್ದೆ ಬೇವು, ಬೆಂಗಳೂರು ಬಸ್ಸು, ಆರಿದ ಚಹಾ, ನರಪ್ರಾಣಿ, ಬ್ರಹ್ಮಚಾರಿ, ಎಲ್ಲಿರುವೆ ತಂದೆ ಬಾರೊ

ಬೀchi ಯವರ ನಾಟಕಗಳು

ರೇಡಿಯೋ ನಾಟಕಗಳು, ಹನ್ನೊಂದನೆಯ ಅವತಾರ, ಮನುಸ್ಮೃತಿ, ಏಕೀಕರಣ, ವಶೀಕರಣ, ಏಕೋದರರು, ಸೈಕಾಲಜಿಸ್ಟ್ ಸಾರಂಗ ಪಾಣಿ, ದೇವರ ಆತ್ಮಹತ್ಯೆ

ಬೀchi ಯವರ ಅಂಕಣಗಳು ಕೆನೆ ಮೊಸರು (ವಿಶಾಲ ಕರ್ನಾಟಕ), ಬೇವಿನಕಟ್ಟೆ (ರೈತ), ನೀವು ಕೇಳಿದಿರಿ (ಸುಧಾ)

Top Ten (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ:26617100, 26617755)

1.     ಬೆಳ್ಳಕ್ಕಿ ಹಿಂಡು (ಸು. ರಂ. ಎಕ್ಕುಂಡಿ ಸಮಗ್ರ ಕಾವ್ಯ
ಸಂ:ಡಿ. ವಿ. ಪ್ರಹ್ಲಾದ್
ಪ್ರ:ಸಂಚಯ ಪ್ರಕಾಶನ
ಬೆಲೆ:ರೂ.350/-

2.     ಕಲಾಮ್ ಕಮಾಲ್
ಲೇ:ವಿಶ್ವೇಶ್ವರ ಭಟ್
ಪ್ರ:ಅಂಕಿತ ಪುಸ್ತಕ
ಬೆಲೆ:ರೂ.130/-

3.     ಚಲಂ – ಖ್ಯಾತ ತೆಲುಗು ಲೇಖಕರೊಬ್ಬರ ಆತ್ಮಕಥೆ
ಲೇ:ರವಿ ಬೆಳಗೆರೆ
ಪ್ರ:ಭಾವನಾ ಪ್ರಕಾಶನ
ಬೆಲೆ:ರೂ.100

4.     ಎರಡು ದ್ರುವ – ಪ್ರಸಿದ್ದ ಮರಾಠಿ ಕಾದಂಬರಿ
ಲೇ:ವಿ. ಎಸ್. ಖಾಂಡೆಕರ್ ಅಣು:ವಿ. ಎಂ. ಇನಾಂದಾರ್
ಪ್ರ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಬೆಲೆ:ರೂ.80/-

5.     ಕಶ್ಯಪ ಸೂತ್ರಗಳು (ಕಶ್ಯಪ ಸೂತ್ರಗಳ ಸುಲಭ ವ್ಯಾಖ್ಯಾನ)
ಲೇ:ಶ್ರೀ.ಶ್ರೀ. ನಿಮಿಷಾ ನಂದ
ಪ್ರ:ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾ ಲಯ
ಬೆಲೆ:ರೂ.140/-

6.     ಹೊಕ್ಕುಳ ಬಳ್ಳಿಯ ಸಂಬಂಧ (ಸಂಸ್ಕೃತಿ, ದರ್ಶನ, ವಿವೇಚನೆಗಳು)
ಲೇ:ಶತಾವಧಾನಿ ಡಾ. ಆರ್. ಗಣೇಶ್
ಪ್ರ:ವಸಂತ ಪ್ರಕಾಶನ
ಬೆಲೆ:ರೂ.95/-

7.     ಮಹಾಪಲಾಯನ (ದಿ ಲಾಂಗ್ ವಾಕ್ ಕೃತಿಯ ಕನ್ನಡಾನುವಾದ)
ಲೇ:ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪ್ರ:ಪುಸ್ತಕ ಪ್ರಕಾಶನ
ಬೆಲೆ:ರೂ.57/-

8.     ಫೆರಾರಿ ಮಾರಿದ ಫಕೀರ (ಬದುಕಿಗೆ ಸ್ಫೂರ್ತಿ ನೀಡುವ ಪ್ರಸಿದ್ದ ಇಂಗ್ಲೀಷ್ ಪುಸ್ತಕದ ಕನ್ನಡಾನುವಾದ)
ಲೇ:ರಾಬಿನ್ ಶರ್ಮಾ
ಪ್ರ:ಜೈಕೋ ಬುಕ್ಸ್
ಬೆಲೆ:ರೂ.115/-

9.     ಮೂಕಜ್ಜಿಯ ಕನಸುಗಳು (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ)
ಲೇ:ಶಿವರಾಮ ಕಾರಂತ
ಪ್ರ:ಸಪ್ನ ಬುಕ್ ಹೌಸ್
ಬೆಲೆ:ರೂ.100/-

10.  ವಿಚಾರವಾದ ವಿಜ್ಞಾನ ಆಧ್ಯಾತ್ಮ ಮತ್ತು ದೇವರು (ಒಂದು ಚಿಂತನೆ)
ಲೇ:ತೀರ್ತಾರಾಂ ವಳ ಲಾಂಬೆ
ಪ್ರ:ಯಾಣ ಪ್ರಕಾಶನ
ಬೆಲೆ:ರೂ.75/-

ಸಪ್ನ ಬುಕ್ ಹೌಸ್ (ದೂ:40114455, ಫ್ಯಾಕ್ಸ್:22269648)

1.     ಕಲಾಮ್ ಕಮಾಲ್
ಲೇ:ವಿಶ್ವೇಶ್ವರ ಭಟ್
ಪ್ರ:ಅಂಕಿತ ಪುಸ್ತಕ
ಬೆಲೆ:ರೂ.130/-

2.     ರವಿ ಬೆಳಗೆರೆ ಫಸ್ಟ್ ಹಾಫ್
ಲೇ:ಸಂ:ಶರತ್ ಕಲ್ಕೊಡ್
ಪ್ರ:ಭಾವನಾ ಪ್ರಕಾಶನ
ಬೆಲೆ:ರೂ.500/-

3.     ವ್ಯಕ್ತಿತ್ವ ವಿಕಸನಕ್ಕೆ 100 ಆದರ್ಶಗಳು
ಲೇ:ಎಮ್.ವಿ. ನಾಗರಾಜರಾವ್
ಪ್ರ:ವಸಂತ ಪ್ರಕಾಶನ
ಬೆಲೆ:ರೂ.95/-

4.     ತಿಂಮನ ತಲೆ
ಲೇ:ಬೀಚಿ
ಪ್ರ:ವಸಂತ ಪ್ರಕಾಶನ
ಬೆಲೆ:ರೂ.50/-

5.     ದುರ್ಗಾಸ್ತಮಾನ
ಲೇ:ತ.ರಾ.ಸು.
ಪ್ರ:ಹೇಮಂತ ಸಾಹಿತ್ಯ
ಬೆಲೆ:ರೂ.350/-

6.     ಚಂದ್ರಕಾಂತಾ ಮತ್ತು ಚಂದ್ರಕಾಂತಾ ಸಂತತಿ ಭಾಗ-4 ಚಕ್ರವ್ಯೂಹ
ಲೇ:ಆರ್.ಪಿ. ಹೆಗಡೆ
ಪ್ರ:ರವೀಂದ್ರ ಪುಸ್ತಾಕಾಲಯ
ಬೆಲೆ:ರೂ.180/-

7.     ಭಾರತದ ಪ್ರೇಕ್ಷಣೀಯ ಸ್ಥಳಗಳು
ಲೇ:ಕವೀಶ್ವರ
ಪ್ರ:ಚಂದನ ಪ್ರಕಾಶನ
ಬೆಲೆ:ರೂ.100/-

8.     ಪತಂಜಲಿ ಯೋಗ ಸೂತ್ರ ಸಂಪುಟ-2
ಲೇ:ಓಶೋ
ಪ್ರ:ಅನುಭವ ಪ್ರಕಾಶನ
ಬೆಲೆ:ರೂ.140/-

9.     ಲಿಯೋ ಟಾಲ್‍ಸ್ಟಾಯ್ ಮೂರು ಕಥೆಗಳು
ಲೇ:ಓ. ಎಲ್. ನಾಗ ಭೂಷಣ ಸ್ವಾಮಿ
ಪ್ರ:ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ
ಬೆಲೆ:ರೂ.80/-

10.  ಮಂಕುತಿಮ್ಮನ ಕಗ್ಗ – ತಾತ್ಪರ್ಯ
ಲೇ:ಶ್ರೀಕಾಂತ
ಪ್ರ:ಶ್ರೀಕಾಂತ
ಬೆಲೆ:ರೂ.80/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ

ವಿಜ್ಞಾನ ಮತ್ತು ವಿಜ್ಞಾನಿಗಳು – ದಂತಕತೆಗಳ ಸಂಕಲನ

ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು.

ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ.

ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು.

ಪುಸ್ತಕದ ಮೊದಲ ಮಾತಿನಲ್ಲಿ ಸಿ. ಸುಬ್ರಹ್ಮಣ್ಯಂ ಹೇಳಿದಂತೆ, ವಯಸ್ಸಾದಂತೆ ನಾವು ನಮ್ಮ ಜೀವನದ ಘಟನೆಗಳನ್ನು ನೆನಪಿಗೆ ತಂದುಕೊಳ್ಳುವುದರ ಜತೆಯಲ್ಲೇ ಇತರರ ಜೀವನದ ಸುಖಮಯ ಘಟನೆಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ. ಈ ಪುಸ್ತಕದಲ್ಲಿನ ಪ್ರೋ. ಕೊಠಾರಿಯವ ರ `ದಂತಕಥೆಗಳುಶಿಕ್ಷಣ ಹಾಗೂ ನೀತಿಭೋದನೆಯ ಉದ್ದೇಶವನ್ನು ಹೊಂದಿದೆ. ಶಿಕ್ಷಣದಲ್ಲಿನ ನಿರೂಪಣೆ, ಪ್ರಯೋಗ ಮತ್ತು ಸಮಸ್ಯೆಗಳ ಬೇಸರವನ್ನು ಹೋಗಲಾಡಿಸಲು ವಿಜ್ಞಾನಿಗಳ ದಂತಕಥೆಗಳು ಬಹಳ ಉಪಯುಕ್ತವಾಗಿದೆ.

ವೈಜ್ಞಾನಿಕ ಶಿಕ್ಷಣ ಸಾಮಾನ್ಯ ಪ್ರಗತಿಗೆ ಅತ್ಯವಶ್ಯಕ ಮತ್ತು ಪ್ರಗತಿಯನ್ನು ಉಳಿಸಿಕೊಂಡು ಬರಲು ವೈಜ್ಞಾನಿಕ ಮನೋಧರ್ಮವೂ ಅತ್ಯಗತ್ಯ. ಆದರೆ ಅದೇ ವೇಳೆಯಲ್ಲಿ ಮನುಷ್ಯ ಸಂಘಜೀವಿಯಾಗಿ ವ್ಯಕ್ತಿಯಾಗಿ ಬೆಳೆಯಲು ಆಂತರಿಕ ಪ್ರಗತಿಯೂ ಅಷ್ಟೇ ಮುಖ್ಯ.

ಸ್ವಾಮಿ ವಿವೇಕಾನಂದರು ಬಾಹ್ಯ ಪ್ರಕೃತಿಯಲ್ಲಿ ಸತ್ಯವನ್ನು ಶೋಧಿಸುವವರನ್ನು ತಪ್ಪು ದಾರಿ ಹಿಡಿದಿದ್ದಾರೆಂದೂ ಅಥವಾ ಪ್ರಕೃತಿಯ ಆಂತರ್ಯವನ್ನು ಶೋಧಿಸಲು ಹೊರಟವರು ದೊಡ್ಡವರೆಂದೂ ನಾನು ಹೇಳುವುದಿಲ್ಲ. ಇವೆರಡೂ ಎರಡು ವಿಧದ ಕಾರ್ಯಕ್ರಮಗಳಷ್ಟೇ. ಎರಡೂ ಊಜರ್ಿತವಾಗಬೇಕು; ಎರಡು ಕ್ರಮಗಳಲ್ಲೂ ಅಧ್ಯಯನ ಮಾಡಬೇಕು. ಕೊನೆಯಲ್ಲಿ ಅವೆರಡೂ ಸಂಧಿಸುವುದನ್ನು ನಾವು ಕಾಣುತ್ತೇವೆ.ಎಂದಿದ್ದಾರೆ.

ನಾವು ವಿಜ್ಞಾನಿಗಳನ್ನು ವಿಜ್ಞಾನವನ್ನೇ ಲಗ್ನವಾದ ಏಕಪತ್ನೀ ವ್ರತಸ್ಥರೆಂದು ಭಾವಿಸುವುದು ಸಾಮಾನ್ಯವಾಗಿದೆ. ಆದರೆ, ಅವರೂ ನಮ್ಮಂತೆ ಮಾನವರು. ನಮಗೆಲ್ಲಾ ಸಾಮಾನ್ಯವಾಗಿರುವ ಶಕ್ತಿ, ದೌರ್ಬಲ್ಯ, ನ್ಯೂನ್ಯತೆ ಮತ್ತು ಕೊರತೆಗಳನ್ನು ಅವರಲ್ಲೂ ಕಾಣಬಹುದು. ವಿಚಿತ್ರ ಗುಣಗಳನ್ನೂ, ಉದಾತ್ತ ಗುಣಗಳಾದ ನಮ್ರತೆ ಕರುಣೆಗಳನ್ನೂ ನಾವು ಅವರಲ್ಲಿ ಕಾಣಬಹುದು.

ದಂತಕಥೆಗಳಲ್ಲದೆ, ಪ್ರೊ. ಕೊಠಾರಿಯವರು `ವಿಜ್ಞಾನ, ವಿಜ್ಞಾನಿ ಮತ್ತು ಸತ್ಯಮತ್ತು `ವಿನೋದ, ನಮ್ರತೆ ಮತ್ತು ಮಾನವೀಯತೆಎಂಬ ಪ್ರಬಂಧಗಳನ್ನೂ ಇತರ ವಿಷಯಗಳನ್ನೂ ಸೇರಿಸಿ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಪ್ರಬಂಧಗಳು ವಿಜ್ಞಾನದ ವಿವಿಧ ಮುಖಗಳನ್ನೂ ತೋರಿಸಿದರೆ ದಂತಕಥೆಗಳು ವಿಜ್ಞಾನಿಗಳ ವ್ಯಕ್ತಿ ಚಿತ್ರವನ್ನು ಬಿಡಿಸುತ್ತದೆ.

ಈ ಪುಸ್ತಕ ವಿದ್ಯಾರ್ಥಿ, ಅದ್ಯಾಪಕರಿಗೆ ಮಾತ್ರವಲ್ಲ ವಿಜ್ಞಾನ, ವಿಜ್ಞಾನಿಗಳು ಮತ್ತು ವಿಜ್ಞಾನದ ಪ್ರಗತಿಯ ಬಗ್ಗೆ ಆಸಕ್ತರಾಗಿರುವವರೆಲ್ಲಾ ಪ್ರತಿಯನ್ನು ಕಾದಿರಿಸಿಕೊಳ್ಳಬೇಕಾದ ಪುಸ್ತಕ.

237 ಪುಟಗಳ ಭಾರದೊಂದಿಗೆ ವಿಷಯದ ಭಾರವನ್ನೂ ಹೊತ್ತಿರುವ ಈ ಪುಸ್ತಕಕ್ಕೆ ಕೇವಲ ರೂ.70/- ಎಂಬುದೇ ನಾನು ಈ ಪುಸ್ತಕವನ್ನು ಆಯ್ದುಕೊಳ್ಳಲು ಕಾರಣ.

ವಿಶಾಲಮತಿ

ಶೀರ್ಷಿಕೆ : ವಿಜ್ಞಾನ ಮತ್ತು ವಿಜ್ಞಾನಿಗಳುದಂತಕತೆಗಳ ಸಂಕಲನ ಲೇಖಕರು : ಏ. ಎನ್. ಕೊಠಾರಿ, ಸುದಾಂಶು ಎಸ್. ಪಾಲ್ ಸುಲೆ, ಎಸ್. ಎಂ. ಪರೇಖ್, ಎಂ. ಪಿ. ನವಲ್ಕರ್ ಅನುವಾದ:ಎಂ. ಏ. ಸೇತುರಾವ್ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :237 ಬೆಲೆ:ರೂ.70/-

ರಾಮ ರಹೀಮರ ಚರಿತ್ರೆಯ ಹಿನ್ನೋಟ

1931 ಮಾರ್ಚನಲ್ಲಿ ಕಾನ್ಪುರದಲ್ಲಿ ನಡೆದ ಗಲಭೆಯನ್ನು ಕುರಿತು ವಿಚಾರಣೆ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕರಾಚಿ ಅಧಿವೇಶನ 1931) ನೇಮಿತವಾದ ಸಮಿತಿಯ ವರದಿಯ ಪುಸ್ತಕ ರೂಪದ ಕನ್ನಡ ಆವೃತ್ತಿ ಇದು. ಕಾನ್ಪುರ ಗಲಭೆ ವಿಚಾರಣಾ ಸಮಿತಿಯ ಕಾರ್ಯದರ್ಶಿ ಸುಂದರಲಾಲ ಅವರು 1933 ರಲ್ಲಿ ಇದನ್ನು ಇಂಗ್ಲೀಷ ನಲ್ಲಿ ಮೊದಲು ಪ್ರಕಟಿಸಿದ್ದರು. ಅವರ ಅಭಿಪ್ರಾಯದಂತೆ : ವರದಿಯನ್ನು ಸಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಅಕ್ಟೋಬರ್ 1931 ರಲ್ಲಿ ಸಲ್ಲಿಸಲಾಯಿತು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯು ಅದನ್ನು ಪರಿಶೀಲಿಸಿದ ಮೇಲೆ ತನ್ನ 31ನೇ ಡಿಸೆಂಬರ್ 1931 ಸಭೆಯಲ್ಲಿ ವರದಿಯನ್ನು ಪ್ರಕಟಿಸಲು ನಿರ್ಧಾರ ಮಾಡಿತು. ಕೆಲವೇ ದಿನಗಳಲ್ಲಿ ಕಾರ್ಯಕಾರಿ ಸಮಿತಿಯ ಬಹುತೇಕ ಸದಸ್ಯರು ಮತ್ತು ವಿಚಾರಣಾ ಸಮಿತಿಯ ಆರುಜನ ಸದಸ್ಯರಲ್ಲಿ ನಾಲ್ವರು ಸೆರೆಮನೆ ಸೇರಿದರು. ಸಂಗತಿಗಳು ಮತ್ತು ಅನಂತರದ ಘಟನೆಗಳ ಕಾರಣದಿಂದಾಗಿ ವರದಿಯ ಪ್ರಕಟಣೆಯಲ್ಲಿ ಅಸಾಧಾರಣ ವಿಳಂಬವಾಗಿದೆ. ಆದರೆ, ಅಖಿಲ ಭಾರತ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲು ಮತ್ತು ಸಾರ್ವಕಾಲಿಕವಾದ ಆಸಕ್ತಿ ಮತ್ತು ಮೌಲ್ಯಗಳಾದ ಐತಿಹಾಸಿಕಕಾರಣಗಳು ಮತ್ತು ಕಾರ್ಯಸಾದುವಾದ ಪರಿಹಾರೋಪಾಯಗಳನ್ನು ಕುರಿತು ವರದಿಯು ಚರ್ಚಿಸುವುದರಿಂದ, ಇದರ ಪ್ರಕಟಣೆಯು ಇಷ್ಟು ವಿಳಂಬವದರೂ ಅತ್ಯಗತ್ಯವಾಗಿದೆ.

1931 ನೆಯ ಇಸವಿ ಮಾರ್ಚ 24 ರಂದು ಕಾನ್ಪುರ ನಗರದಲ್ಲಿ ಅತ್ಯಂತ ಉಗ್ರವಾದ ಹಿಂದೂಮುಸ್ಲಿಂ ಗಲಭೆ ತಲೆದೋರಿ ಅನೇಕ ದಿನಗಳ ಕಾಲ ಮುಂದುವರಿಯಿತು. ಕೋಮು ದಳ್ಳುರಿಯನ್ನು ನಂದಿಸಿ ಅಪಾಯದಲ್ಲಿರುವವರನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಖ್ಯಾತ ಪತ್ರಿಕೋದ್ಯೋಗಿ ಹಾಗೂ ಉತ್ತರ ಪ್ರದೇಶದ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಗಣೇಶ ಶಂಕರ ವಿದ್ಯಾರ್ಥಿ ಅವರ ಕಗ್ಗೊಲೆಯಾಯಿತು.

ಕಾನ್ ಪುರ ಗಲಭೆ ವಿಚಾರಣಾ ಸಮಿತಿಯ ವರದಿಯು 1933ರಲ್ಲಿ ಪ್ರಕಟವಾದಾಗ ವಸಾಹತು ಸರ್ಕಾರ ತನ್ನ ಬಹಿಷ್ಕಾರದೊಡನೆ ಅದನ್ನು ಬರಮಾಡಿಕೊಂಡಿತು. 1931 ರಲ್ಲಿ ಕಾನ್ಪುರದಲ್ಲಿ ಉಗ್ರ ಕೋಮು ಗಲಭೆಗಳು ನಡೆದಾಗ ಅದನ್ನು ಕುರಿತು ವಿಚಾರಣೆ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆರು ಜನ ಸದಸ್ಯರ ಒಂದು ಸಮಿತಿಯನ್ನು ನೇಮಿಸಿತು. ಆಧುನಿಕ ರತದಲ್ಲಿ ಕೋಮುವಾರು ಭಾವನೆಯ ಉಗಮ ಮತ್ತು ವಿಕಾಸವನ್ನು ಕುರಿತಂತೆ ಅತ್ಯುತ್ತಮ ಒಳನೋಟಗಳಿಂದ ಕೂಡಿದ ವಿಶ್ಲೇಷಣೆಯನ್ನೂ, ಅದನ್ನು ಎದುರಿಸಲು ಅನುಸರಿಸಬೇಕಾದ ಪರಿಹಾರೋಪಾಯಗಳನ್ನೂ ಸಮಿತಿಯು ಮಂಡಿಸಿತು. ಹಿಂದೂಮುಸ್ಲಿಂ ಸಂಬಂಧಗಳು ಅಂತರ್ಗತವಾಗಿ ಮತ್ತು ಐತಿಹಾಸಿಕವಾಗಿ ವೈಷಮ್ಯದಿಂದ ಕೂಡಿವೆ ಎಂಬ ವ್ಯಾಪಕವಾದ ಮತ್ತು ಆಳವಾಗಿ ಬೇರು ಬಿಟ್ಟ ಭಾವನೆಯನ್ನು ತಗ್ಗಿಸುವ ಪಂಥಾಹ್ವಾನ, ಸಮಿತಿಯ ಮುಂದಿತ್ತು. ವಿಶಾಲವಾದ ಐತಿಹಾಸಿಕ ದೃಷ್ಟಿಯಿಂದ ವಿಶ್ಲೇಷಿಸಿದ ವರದಿಯು, ಎರಡೂ ಕೋಮುಗಳ ಶತಮಾನಗಳಷ್ಟು ದೀರ್ಘವಾದ ಸಾಹಚರ್ಯವನ್ನು ಪರಿಣಾಮಕಾರಿಯಾದ ಸಾಕ್ಷ್ಯಗಳೊಂದಿಗೆ ಮಂಡಿಸುತ್ತದೆ. ಅಪೂರವವಾದ ಸಾಂಸ್ಕೃತಿಕ ಸಮ್ಮಿಲನವು ಎಲ್ಲ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ತಡಗೋಡೆಗಳನ್ನು ಮೀರಿತ್ತು. ವಸಾಹತು ಲೇಖಕರು ಮತ್ತು ಆಡಳಿತಗಾರರು ಚಿತ್ರಿಸಿದ ಭಾರತೀಯ ಇತಿಹಾಸದ `ವಿಕೃತ ದೃಷ್ಟಿಕೋನ ವಿರುದ್ಧ ಲೇಖಕರು ಭಾವಪೂರ್ಣವಾದ ಕೋರಿಕೆಯನ್ನೂ ಸಲ್ಲಿಸಿದ್ದಾರೆ. ಏಳು ದಶಕಗಳ ಅನಂತರ ಮೊದಲ ಬಾರಿಗೆ ಈಗ ವ್ಯಾಪಕ ಓದುಗರಿಗಾಗಿ ಪುನರ್ಮುದ್ರಣಗೊಂಡಿರುವ ಸಂಗ್ರಹ ಆವೃತ್ತಿಯು, ಅಂದಿನಂತೆ ಇಂದಿಗೂ ತೀವ್ರ ಆಸಕ್ತಿಯನ್ನು ಕೆರಳಿಸುವಷ್ಟು ಪ್ರಸ್ತುತವಾಗಿದೆ.

ಪ್ರಸಿದ್ದ ಲೇಖಕ ಶ್ರೀ ಈಶ್ವರಚಂದ್ರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುಸ್ತಕದ ಪ್ರಸ್ತಾವನೆ, ಬೆನ್ನುಡಿಗಳಿಂದ

ಶೀರ್ಷಿಕೆ : ಕೋಮುವಾರು ಸಮಸ್ಯೆ ಲೇಖಕರು : ಕಾನ್ ಪುರ ಗಲಭೆ ವಿಚಾರಣಾ ಸಮಿತಿ ಅನುವಾದ: ಈಶ್ವರ ಚಂದ್ರ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :213 ಬೆಲೆ:ರೂ.65/-