ಮಲೆಯಾಳಂ ಕಾದಂಬರಿ – ಚೌಕಟ್ಟಿನ ಮನೆ

ಮಲಯಾಳ ಸಾಹಿತ್ಯದಲ್ಲಿ ಒಂದು ದೊಡ್ಡ ಹೆಸರೆಂದರೆ ಶ್ರೀ ಎಂ. ಟಿ. ವಾಸುದೇವನ್ ನಾಯರ್ ಅವರದ್ದು. ನಾಲುಕೆಟ್ಟು ಎಂಬ ಅವರ ಕಾದಂಬರಿ ಬಹಳ ಹೆಸರುವಾಸಿಯಾದದ್ದು. ಕೇರಳ ಸಾಹಿತ್ಯ ಅಕಾಡೆಮಿ ಈ ಕಾದಂಬರಿಗೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ. ಈ ಕಾದಂಬರಿಯ ಕನ್ನಡ ಅನುವಾದವೇ ಚೌಕಟ್ಟಿನ ಮನೆ. ಚೌಕಟ್ಟಿನ ಮನೆ ಎಂಬುದು ಅವಿಭಕ್ತ ಕುಟುಂಬ ಜೀವನದಲ್ಲಿ ವಿಶ್ವಾಸವಿರಿಸಿಕೊಂಡಿರುವ ಸಾಮಾಜಿಕ ಪದ್ಧತಿಯನ್ನು ಪ್ರತಿನಿಧಿಸುತ್ತದೆ. ಒಬ್ಬ ಬಾಲಕ ತನಗರಿವಿಲ್ಲದೆ ಪರಿಸ್ಥಿತಿಯ ಒತ್ತಡಗಳಿಗೆ ಸಿಕ್ಕಿ ಬಾಲ್ಯದ ಕಷ್ಟಮಯ ಜೀವನದ ನೆನಪುಗಳಿಂದ ವಿವೇಕ ಮತ್ತು ಸಹಾನುಭೂತಿಯನ್ನು ಹೊಂದಿ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡದ್ದು ಈ ಕಾದಂಬರಿಯಲ್ಲಿ ಪ್ರಕಟಗೊಳ್ಳುತ್ತದೆ.

ಶ್ರೀ ಬಿ.ಕೆ. ತಿಮ್ಮಪ್ಪನವರು ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪುಸ್ತಕದ ಬೆನ್ನುಡಿಯಿಂದ.

ಶೀರ್ಷಿಕೆ : ಚೌಕಟ್ಟಿನ ಮನೆ ಲೇಖಕರು : ಎಂ. ಟಿ. ವಾಸುದೇವನ್ ನಾಯರ್ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :197 ಬೆಲೆ:ರೂ.75/-