ವಿಜ್ಞಾನ ಮತ್ತು ವಿಜ್ಞಾನಿಗಳು – ದಂತಕತೆಗಳ ಸಂಕಲನ

ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು.

ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ.

ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು.

ಪುಸ್ತಕದ ಮೊದಲ ಮಾತಿನಲ್ಲಿ ಸಿ. ಸುಬ್ರಹ್ಮಣ್ಯಂ ಹೇಳಿದಂತೆ, ವಯಸ್ಸಾದಂತೆ ನಾವು ನಮ್ಮ ಜೀವನದ ಘಟನೆಗಳನ್ನು ನೆನಪಿಗೆ ತಂದುಕೊಳ್ಳುವುದರ ಜತೆಯಲ್ಲೇ ಇತರರ ಜೀವನದ ಸುಖಮಯ ಘಟನೆಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ. ಈ ಪುಸ್ತಕದಲ್ಲಿನ ಪ್ರೋ. ಕೊಠಾರಿಯವ ರ `ದಂತಕಥೆಗಳುಶಿಕ್ಷಣ ಹಾಗೂ ನೀತಿಭೋದನೆಯ ಉದ್ದೇಶವನ್ನು ಹೊಂದಿದೆ. ಶಿಕ್ಷಣದಲ್ಲಿನ ನಿರೂಪಣೆ, ಪ್ರಯೋಗ ಮತ್ತು ಸಮಸ್ಯೆಗಳ ಬೇಸರವನ್ನು ಹೋಗಲಾಡಿಸಲು ವಿಜ್ಞಾನಿಗಳ ದಂತಕಥೆಗಳು ಬಹಳ ಉಪಯುಕ್ತವಾಗಿದೆ.

ವೈಜ್ಞಾನಿಕ ಶಿಕ್ಷಣ ಸಾಮಾನ್ಯ ಪ್ರಗತಿಗೆ ಅತ್ಯವಶ್ಯಕ ಮತ್ತು ಪ್ರಗತಿಯನ್ನು ಉಳಿಸಿಕೊಂಡು ಬರಲು ವೈಜ್ಞಾನಿಕ ಮನೋಧರ್ಮವೂ ಅತ್ಯಗತ್ಯ. ಆದರೆ ಅದೇ ವೇಳೆಯಲ್ಲಿ ಮನುಷ್ಯ ಸಂಘಜೀವಿಯಾಗಿ ವ್ಯಕ್ತಿಯಾಗಿ ಬೆಳೆಯಲು ಆಂತರಿಕ ಪ್ರಗತಿಯೂ ಅಷ್ಟೇ ಮುಖ್ಯ.

ಸ್ವಾಮಿ ವಿವೇಕಾನಂದರು ಬಾಹ್ಯ ಪ್ರಕೃತಿಯಲ್ಲಿ ಸತ್ಯವನ್ನು ಶೋಧಿಸುವವರನ್ನು ತಪ್ಪು ದಾರಿ ಹಿಡಿದಿದ್ದಾರೆಂದೂ ಅಥವಾ ಪ್ರಕೃತಿಯ ಆಂತರ್ಯವನ್ನು ಶೋಧಿಸಲು ಹೊರಟವರು ದೊಡ್ಡವರೆಂದೂ ನಾನು ಹೇಳುವುದಿಲ್ಲ. ಇವೆರಡೂ ಎರಡು ವಿಧದ ಕಾರ್ಯಕ್ರಮಗಳಷ್ಟೇ. ಎರಡೂ ಊಜರ್ಿತವಾಗಬೇಕು; ಎರಡು ಕ್ರಮಗಳಲ್ಲೂ ಅಧ್ಯಯನ ಮಾಡಬೇಕು. ಕೊನೆಯಲ್ಲಿ ಅವೆರಡೂ ಸಂಧಿಸುವುದನ್ನು ನಾವು ಕಾಣುತ್ತೇವೆ.ಎಂದಿದ್ದಾರೆ.

ನಾವು ವಿಜ್ಞಾನಿಗಳನ್ನು ವಿಜ್ಞಾನವನ್ನೇ ಲಗ್ನವಾದ ಏಕಪತ್ನೀ ವ್ರತಸ್ಥರೆಂದು ಭಾವಿಸುವುದು ಸಾಮಾನ್ಯವಾಗಿದೆ. ಆದರೆ, ಅವರೂ ನಮ್ಮಂತೆ ಮಾನವರು. ನಮಗೆಲ್ಲಾ ಸಾಮಾನ್ಯವಾಗಿರುವ ಶಕ್ತಿ, ದೌರ್ಬಲ್ಯ, ನ್ಯೂನ್ಯತೆ ಮತ್ತು ಕೊರತೆಗಳನ್ನು ಅವರಲ್ಲೂ ಕಾಣಬಹುದು. ವಿಚಿತ್ರ ಗುಣಗಳನ್ನೂ, ಉದಾತ್ತ ಗುಣಗಳಾದ ನಮ್ರತೆ ಕರುಣೆಗಳನ್ನೂ ನಾವು ಅವರಲ್ಲಿ ಕಾಣಬಹುದು.

ದಂತಕಥೆಗಳಲ್ಲದೆ, ಪ್ರೊ. ಕೊಠಾರಿಯವರು `ವಿಜ್ಞಾನ, ವಿಜ್ಞಾನಿ ಮತ್ತು ಸತ್ಯಮತ್ತು `ವಿನೋದ, ನಮ್ರತೆ ಮತ್ತು ಮಾನವೀಯತೆಎಂಬ ಪ್ರಬಂಧಗಳನ್ನೂ ಇತರ ವಿಷಯಗಳನ್ನೂ ಸೇರಿಸಿ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಪ್ರಬಂಧಗಳು ವಿಜ್ಞಾನದ ವಿವಿಧ ಮುಖಗಳನ್ನೂ ತೋರಿಸಿದರೆ ದಂತಕಥೆಗಳು ವಿಜ್ಞಾನಿಗಳ ವ್ಯಕ್ತಿ ಚಿತ್ರವನ್ನು ಬಿಡಿಸುತ್ತದೆ.

ಈ ಪುಸ್ತಕ ವಿದ್ಯಾರ್ಥಿ, ಅದ್ಯಾಪಕರಿಗೆ ಮಾತ್ರವಲ್ಲ ವಿಜ್ಞಾನ, ವಿಜ್ಞಾನಿಗಳು ಮತ್ತು ವಿಜ್ಞಾನದ ಪ್ರಗತಿಯ ಬಗ್ಗೆ ಆಸಕ್ತರಾಗಿರುವವರೆಲ್ಲಾ ಪ್ರತಿಯನ್ನು ಕಾದಿರಿಸಿಕೊಳ್ಳಬೇಕಾದ ಪುಸ್ತಕ.

237 ಪುಟಗಳ ಭಾರದೊಂದಿಗೆ ವಿಷಯದ ಭಾರವನ್ನೂ ಹೊತ್ತಿರುವ ಈ ಪುಸ್ತಕಕ್ಕೆ ಕೇವಲ ರೂ.70/- ಎಂಬುದೇ ನಾನು ಈ ಪುಸ್ತಕವನ್ನು ಆಯ್ದುಕೊಳ್ಳಲು ಕಾರಣ.

ವಿಶಾಲಮತಿ

ಶೀರ್ಷಿಕೆ : ವಿಜ್ಞಾನ ಮತ್ತು ವಿಜ್ಞಾನಿಗಳುದಂತಕತೆಗಳ ಸಂಕಲನ ಲೇಖಕರು : ಏ. ಎನ್. ಕೊಠಾರಿ, ಸುದಾಂಶು ಎಸ್. ಪಾಲ್ ಸುಲೆ, ಎಸ್. ಎಂ. ಪರೇಖ್, ಎಂ. ಪಿ. ನವಲ್ಕರ್ ಅನುವಾದ:ಎಂ. ಏ. ಸೇತುರಾವ್ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :237 ಬೆಲೆ:ರೂ.70/-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: