ಇಲ್ಲ … ಇನ್ನೂ ಎಲ್ಲವೂ ಮುಗಿದು ಹೋಗಿಲ್ಲ

ಕನ್ನಡದ ಮಹಿಳಾ ಬರವಣಿಗೆಯಲ್ಲಿ ಪತ್ರಕರ್ತ ವೈದೇಹಿ ಶಾಲಿನಲ್ಲಿ ಸುತ್ತಿ ಒದ್ದಂತೆ ಬರೆದ ಗಂಡು-ಹೆಣ್ಣಿನ ನಡುವಿನ ಅಸಮಾನತೆ, ನಿಗಿ ನಿಗಿ ಕೆಂಡಸಂಪಿಗೆಯಂತೆ ಗಂಧ ಬೀರಿದ ಪ್ರತಿಭಾ ನಂದಕುಮಾರ್ ಕವಿತೆಗಳು, ಸುತ್ತಲಿನ ವಿದ್ಯಮಾನಗಳಲ್ಲೇ ತಮ್ಮ ಪ್ರತಿಭಟನಾತ್ಮಕ ಬರವಣಿಗೆ ಹುರಿಗೊಳಿಸುವ ನಾಗವೇಣಿ ಅಂಕಣ ಬರಹಗಳು ಸಾಕಷ್ಟು ಬೋಲ್ಡ್ (ಅಂಡ್ ಬ್ಯುಟಿಫುಲ್) ಆಗಿವೆ ಎನ್ನುವುದು ಒಂದು ಗ್ರಹಿಕೆ. ಇದನ್ನು ಸಾಧ್ಯಮಾಡಲು ಅವರೆಲ್ಲ ಸಾಕಷ್ಟು ಕಾದರು. ಮಾಯುವಿಕೆಗೂ ತುತ್ತಾದರು ಎನ್ನುವುದೂ ಸೂಕ್ಷ್ಮ ನಿರೀಕ್ಷಣೆಗೆ ಸಿಗುವಂಥದು. ಆದರೆ ಚೇತನಾ ವಿಷಯ ಹಾಗಲ್ಲ. ಇವರೆಲ್ಲರ ಪ್ರತಿಭಟನೆಯ ಅಬ್ರಿಜ್ಡ್ ವರ್ಷನ್ ನಂತೆ ಅವರು ತಮ್ಮ ಬರವಣಿಗೆಯ ಆರಂಭದಲ್ಲೇ ಪರಂಪರೆಯ ಎಲ್ಲ ಪ್ರಿವಿಲೇಜ್ ಗಳನ್ನು ಪಡೆದುಕೊಂಡಿದ್ದಾರೆ.

ಹೆಣ್ಣಿನ ಪಾರಂಪರಿಕ ರೋಲ್ ಗಳಲ್ಲೇ ತೃಪ್ತಿಗೊಳ್ಳಲು ಯತ್ನಿಸಿದ ಹುಡುಗಿಯೊಬ್ಬಳು ಸನ್ನಿವೇಶದ, ವಿಧಿಯ tryst ಗೆ ಒಳಗಾಗಿ ಸಿಡಿದೆದ್ದ ಒಂದು ವಿನ್ಯಾಸವೂ ಅವರ ಇಲ್ಲಿನ ಅನೇಕ ಲಹರಿಗಳಲ್ಲಿದೆ. ಅನಾದಿ ಕಾಲದಿಂದಲೂ ದಮನಕ್ಕೆ ಒಳಗಾಗಿರುವ ಮಹಿಳೆಗೆ ತನ್ನ sexuality ಯ ಅರಿವು, ಆ ಕುರಿತ ಜಾಗೃತಿ ಸುತ್ತಲಿನ ಲೋಕದ ಕುರಿತು ಆಕೆ ಗಳಿಸಿಕೊಳ್ಳವ ಜ್ಞಾನಕ್ಕೆ ಒಂದು ವಿಶಿಷ್ಟ ಆಯಾಮ ಒದಗಿಸುತ್ತದೆ ಎನ್ನುವ ನಂಬಿಕೆಗೆ ಅನುಗುಣವಾಗಿ ಇಲ್ಲಿನ ಬೆಚ್ಚಿಬೀಳಿಸುವ, racy ಭಾಷೆಯಿದೆ. ಹಸಿ ಬಿಸಿ ಅಭಿವ್ಯಕ್ತಿಯಿದೆ. (ಅದರ ದುರುಪಯೋಗವೂ ಹಲವು ಓದುಗರಿಂದ ಆಗಬಹುದೇ ಎನ್ನುವ ಆತಂಕಕ್ಕೂ ಇದು ಎಡೆಮಾಡಿಕೊಡುತ್ತದೆ.)

ಚೇತನಾ literarily gifted ಎನ್ನುವುದರಲ್ಲಿ ಎರಡು ಮಾತಿಲ್ಲ. ಗೊಂದಲವೇನಿದ್ದರೂ ಅವರ ಸೈದ್ಧಾಂತಿಕ ನಿಲುವುಗಳಲ್ಲಿ. ಈ ಅಂಕಣ ಬರಹಗಳು ಗಂಡು ಹೆಣ್ಣುಗಳಿಬ್ಬರ ಕಣ್ಣುಗಳನ್ನೂ ತೆರೆಸುವಂತಿವ ಎಂಬ ಬೆನ್ನುಡಿಕಾರರ ಮಾತಿನ ಹೊರತಾಗಿಯೂ ಬಹುತೇಕ ಒಂದು ಸಮರ್ಥನೆಯಂತಿವೆ. ಹೆಣ್ತನ, ಮಾತೃತ್ವ, ಪರಂಪರೆ ಹೆಣ್ಣಿಗೆ ನೀಡಿರುವ ಮಾದರಿ ಕುರಿತು ಅವರಿಗೆ ತಕರಾರುಗಳಿರುವಂತೆ ಗಂಡಸ್ತನ, ಗಂಡಿನ ಕುರಿತು ಹೆಣ್ಣು ಇಟ್ಟುಕೊಳ್ಳುವ ಅತಿಯಾದ ನಿರೀಕ್ಷೆಗಳ ಕುರಿತು ಸಂದಿಗ್ಧ ಅವರಿಗೆ ಇದ್ದಂತಿಲ್ಲ. ಇದರ ನಡುವ ಪುರಾಣ, ಪುಣ್ಯಕಥೆಗಳ ಪುನರ್ವ್ಯಾಖ್ಯಾನ ಮಾಡುವಾಗ ಅವರು ಎತ್ತಿ ಹಿಡಿಯುವ ಲೌಕಿಕತೆ, ದೇಹದ ಹಸಿವು ಹಿಂಗಿಸಿಕೊಳ್ಳಬೇಕಾದ ಅನಿವಾರ್ಯ (ಉದಾಹರಣೆಗೆ ಭೀಷ್ಮನ ಪ್ರಕರಣ) ಒಂದು ಧ್ರುವವಾದರೆ ಆಗೀಗ ಒಮ್ಮೆಲೆ ನುಸುಳುವ ಆಧ್ಯಾತ್ಮಿಕತೆ ಇನ್ನೊಂದು ಧ್ರುವವಾಗುತ್ತದೆ. ಇವೆರಡನ್ನೂ ಒಂದುಗೂಡಿಸುವುದೇ ಬದುಕಾದರೂ ಆಧುನಿಕ ಮನೋಭಾವ, ಜೀವನ ಕ್ರಮ, ಚಿಂತನೆಯಲ್ಲಿ ಸ್ಪಿರಿಚುವಾಲಿಟಿ ಎಲ್ಲಿ ಮತ್ತು ಹೇಗೆ ತನ್ನ ಜಾಗ ಕಂಡುಕೊಳ್ಳುತ್ತದೆ ಎನ್ನುವುದನ್ನು ಅವರಿನ್ನೂ ಓದುಗರಿಗೆ ತೋರಿಸಿಕೊಡಬೇಕಾಗಿದೆ.

ಶೀರ್ಷಿಕೆ : ಭಾಮಿನೀ ಷಟ್ಪದಿ ಲೇಖಕರು : ಚೇತನಾ ತೀರ್ಥಹಳ್ಳಿ ಪ್ರಕಾಶಕರು : ಪ್ಯಾಪಿರಸ್ ಮೇಫ್ಲಾವರ್ ಮೀಡಿಯಾ ಹೌಸ್ ಪುಟಗಳು :82 ಬೆಲೆ:ರೂ.50/-

ಕೃಪೆ : ವಿಜಯ ಕರ್ನಾಟಕ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: