ರಸೆಲ್ ಹಾಗೂ ಪಿ.ವಿ.ಎನ್. ಸಾರಸ್ವತ ನಂಟು ಇಂದಿನದಲ್ಲ

ಗಣಿತಶಾಸ್ತ್ರ, ತತ್ವಜ್ಞಾನ, ವಿಜ್ಞಾನ, ಸಾಹಿತ್ಯ ಸೇರಿದಂತೆ ಹಲವು ಜ್ಞಾನಶಾಖೆಗಳನ್ನು ತನ್ನ ಚಿಂತನೆ ಹಾಗೂ ಬರಹದ ದ್ರವ್ಯವನ್ನಾಗಿಸಿಕೊಂಡಿದ್ದ ಬಟ್ರಂಡ್ ರಸೆಲ್ ಜಗತ್ತಿನ ಶ್ರೇಷ್ಠ ಚಿಂತಕರಲ್ಲೊಬ್ಬರು. ಬರವಣಿಗೆ ಮಾತ್ರವಲ್ಲದೆ, ಬದುಕಿನ ಎಲ್ಲ ಆಯಮಗಳತ್ತ ಅವರ ಆಸಕ್ತಿ. `ಪವರ್: ಎ ನ್ಯೂ ಸೋಷಿಯಲ್ ಅನಾಲಿಸಿಸ್ರಸೆಲ್ಲರ ಪ್ರಸಿದ್ಧ ಕೃತಿಗಳಲ್ಲೊಂದು. ಈ ಪುಸ್ತಕವನ್ನು ವಿಮರ್ಶಕ ಪಿ.ವಿ. ನಾರಾಯಣ `ಅಧಿಕಾರ ಮೀಮಾಂಸೆಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ರಸೆಲ್ ಹಾಗೂ ಪಿ.ವಿ.ಎನ್. ಸಾರಸ್ವತ ನಂಟು ಇಂದಿನದಲ್ಲ. 1973 ರಲ್ಲಿ `ಸಮಾಜದ ಮೇಲೆ ವಿಜ್ಞಾನದ ಪ್ರಭಾವಹಾಗೂ 1975 ರಲ್ಲಿ `ಮದುವೆ ಮತ್ತು ನೀತಿಪುಸ್ತಕಗಳ ಮೂಲಕ ಕನ್ನಡಕ್ಕೆ ರಸೆಲ್ ಚಿಂತನೆಗಳನ್ನು ಪರಿಚಯಿಸಿದ್ದ ಅವರು, `ಅಧಿಕಾರ ಮೀಮಾಂಸೆಯ ಮೂಲಕ ಆ ನಂಟನ್ನು ಮುಂದುವರಿಸಿದ್ದಾರೆ. ರಸೆಲ್ಲರ ವೈಚಾರಿಕೆತೆ ಹಾಗೂ ಸಾಮಾಜಿಕ ಕಾಳಜಿಗಳ ಬಗೆಗಿನ ಲೇಖಕರ ಕುತೂಹಲವೇ ಈ ನಂಟಿನ ಮೂಲಸೆಲೆ.

ಅಧಿಕಾರ ಹಾಗೂ ಅಧಿಕಾರಕ್ಕೆ ಸಂಬಂಧಿಸಿದ ಸ್ಪರ್ಧೆ, ರಾಜಕಾರಣ, ಸರ್ಕಾರ, ಹಣಕಾಸು ವಿಚಾರಗಳು, ನೈತಿಕತೆ ಸೇರಿದಂತೆ ಹಲವು ಸಂಗತಿಗಳನ್ನು ರಸೆಲ್ ತಮ್ಮ ಕೃತಿಯಲ್ಲಿ ಚಿಂತಿಸಿದ್ದಾರೆ. ಈ ಕೃತಿ ಅಧಿಕಾರದ ಬಗೆಗಿನ ಓದುಗರ ಪೂರ್ವನಿರ್ಧಾರಿತ ಪರಿಕಲ್ಪನೆಗಳನ್ನು ಬುಡಮೇಲು ಮಾಡುತ್ತದಲ್ಲದೆ, ಅನೇಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡ ಅಧಿಕಾರದ ವಿರಾಟ್ ಸ್ವರೂಪ ಸಹೃದಯರನ್ನು ಬೆಚ್ಚಿಬೀಳಿಸುತ್ತದೆ. ಕಾಲದೇಶಗಳ ಚೌಕಟ್ಟನ್ನು ಮೀರಿ ಸಾರ್ವತ್ರಿಕ ಗುಣ ಹೊಂದಿರುವುದು ರಸೆಲ್ ಚಿಂತನೆಗಳ ಬಹುಮುಖ್ಯ ಗುಣ.

ರಸೆಲ್ಲರ ಚಿಂತನಾಕ್ರಮವನ್ನು ಅರಿಯುವ ಹಾಗೂ ಆತನ ವ್ಯಾಪಕ ಅಧ್ಯಯನದ ಆಳ ಅಗಲಗಳನ್ನು ಸೂಚಿಸುವ ಕೃತಿಯಂತೆಯೂ ಮುಖ್ಯವೆನ್ನಿಸುವ `ಅಧಿಕಾರ ಮೀಮಾಂಸೆಕನ್ನಡದ ಮೂಲಕವೇ ಜಗತ್ತನ್ನು ಒಳಗೊಳ್ಳುವ ಓದುಗರಿಗೆ ಅತಿ ಉಪಯುಕ್ತ ಎನ್ನಿಸುವ ಪುಸ್ತಕ.

ರಸೆಲ್ ಚಿಂತನೆಗಳು ಪ್ರತಿ ಓದಿಗೂ ಬೇರೆಬೇರೆ ಅರ್ಥಗಳನ್ನು ಬಿಟ್ಟುಕೊಡುವ ಶಕ್ತಿ ಹೊಂದಿವೆ. ಇಂಥ ಸಂಕೀರ್ಣ ಸಂಗತಿಗಳನ್ನು ಪಿ.ವಿ.ಎನ್. ಸರಳವಾಗಿ ಹಾಗೂ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಹಲವು ವೇಳೆ ಬ್ರಿಟಿಷ್ ತತ್ವಜ್ಞಾನಿ ರಸೆಲ್ ಕನ್ನಡದವನೋ ಅಥವಾ ಭಾರತೀಯನೋ ಅನ್ನಿಸಲಿಕ್ಕೆ ಅನುವಾದದಲ್ಲಿನ ಕಸುವೇ ಕಾರಣ.

ಶೀರ್ಷಿಕೆ: ಅಧಿಕಾರ ಮೀಮಾಂಸೆ ಲೇಖಕರು: ಪಿ. ವಿ. ನಾರಾಯಣ ಪ್ರಕಾಶಕರು : ವಸಂತ ಪ್ರಕಾಶನ, ಪುಟಗಳು :267 ಬೆಲೆ:ರೂ.125/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: