ಸಾಂಪ್ರದಾಯಿಕ ಮನಸ್ಸಿನವರಿಗೆ ಪೆರಿಯಾರರ ಮಾತುಗಳನ್ನು ಅರಗಿಸಿಕೊಳ್ಳುವುದು ಕಷ್ಟ

ತಮಿಳುನಾಡಿನಲ್ಲಿ ವೈಚಾರಿಕ ಕ್ರಾಂತಿ ಮಾಡಿದವರಲ್ಲಿ ಪೆರಿಯಾರ್ ಬಹುಮುಖ್ಯರಾದವರು. ಪುರೋಹಿತಶಾಹಿ, ದೇವರು ಇತ್ಯಾದಿಗಳ ಬಗ್ಗೆ ಜನರ ಯೋಚನೆಯ ಕ್ರಮವನ್ನೆ ಬದಲಿಸಿದ ಶ್ರೇಯಸ್ಸು ಪೆರಿಯಾರರಿಗೆ ಸಲ್ಲುತ್ತದೆ. ಇಂಥ ಪೆರಿಯಾರ್ ಚಿಂತನೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕೆ.ಮಾಯಿಗೌಡ. ಇವು ಈ ವಿ ರಾಮಸ್ವಾಮಿಯವರು ಇಂಗ್ಲೀಷ್ ನಲ್ಲಿ ಬರೆದ ಆರು ಪ್ರಬಂಧಗಳ ಅನುವಾದವಾಗಿದೆ.

ಪೆರಿಯಾರರ ಜೀವನ ಧ್ಯೇಯ, ಧೋರಣೆ, ತತ್ವ, ಸಿದ್ಧಾಂತಗಳು ಕನ್ನಡಿಗರಿಗೂ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಅನುವಾದವನ್ನು ಮಾಯಿಗೌಡ ಅವರು ಮಾಡಿಕೊಟ್ಟಿದ್ದಾರೆ. ಅಸ್ಪೃಶ್ಯತೆ, ಬ್ರಾಹ್ಮಣಿಕೆ ನಿರ್ನಾಮ, ದೇವರು ಮತ್ತು ಮನುಷ್ಯ, ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಕ್ರಾಂತಿ, ಯುವಕರ ಕುರಿತಾಗಿ ಪೆರಿಯಾರ್ ಚಿಂತನೆಗಳು ಇಲ್ಲಿವೆ.

ಸಾಂಪ್ರದಾಯಿಕ ಮನಸ್ಸಿನವರಿಗೆ ಪೆರಿಯಾರರ ಮಾತುಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಅವು ಅಷ್ಟು ನೇರ ಹಾಗೂ ಸತ್ಯವನ್ನು ಹೇಳುವಂಥವು. ಅದಕ್ಕೆ ಉದಾಹರಣೆ ಇಲ್ಲಿನ ಅವರ ಪ್ರಬಂಧ, ಭಾಷಣಗಳು. ಅದನ್ನು ಮನಮುಟ್ಟುವಂತೆ ಅನುವಾದ ಮಾಡಲಾಗಿದೆ.

ಈಗಾಗಲೇ ಕುವೆಂಪು ಕುರಿತಾಗಿ ಪುಸ್ತಕ ಬರೆದಿರುವ ಕೆ. ಮಾಯಿಗೌಡರು ಪರಿಯಾರರ ಚಿಂತನೆಗಳನ್ನು ಸಂಗ್ರಹವಾಗಿ, ಸರಳವಾಗಿ ಇಲ್ಲಿ ಅನುವಾದಿಸಿದ್ದಾರೆ. ಇದಕ್ಕೆ ಪೆರಿಯಾರ್ ಕುರಿತ ಅವರ ಪ್ರೀತಿ ಕೂಡಾ ಕಾರಣ ಎಂದು ಹೇಳಬಹುದು.

ಶೀರ್ಷಿಕೆ: ಪೆರಿಯಾರ ಕ್ರಾಂತಿ ಕಿಡಿ  ಲೇಖಕರು: ಈ ವಿ ರಾಮಸ್ವಾಮಿ  ಅ: ಕೆ.ಮಾಯಿಗೌಡ ಪ್ರಕಾಶಕರು : ನೇಗಿಲ ಯೋಗಿ ಪ್ರಕಾಶನ,  ಪುಟಗಳು :120  ಬೆಲೆ:ರೂ.100/- 

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: