ಝಕ್ಕುಂ ಜಂಗುಂ ಜೋಹೋಚೋ

ಮುಂಬಯಿಯಲ್ಲಿ ನೆಲೆಸಿರುವ ಅಂಕೋಲೆಯ ಕತೆಗಾರ ರಾಜೀವ ನಾಯಕ ವೃತ್ತಿಯಿಂದ ರಸಾಯನ ಶಾಸ್ತ್ರಜ್ಞ. ಇವರ ಕತೆಗಳು ಕೂಡಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ರಂಗ ಕಲಾವಿದರು, ಮಿತಭಾಷಿ, ಯಾವುದೇ `ಇಸಂಅಡಿ ನೋಂದಣಿ ಮಾಡಿಕೊಳ್ಳದೆ, ಸ್ವತಂತ್ರ ನೆಲೆಯಲ್ಲಿ ಸಮಾಜಮುಖಿ ದೃಷ್ಟಿಕೋನ ಹೊಂದಿರುವ ಕತೆಗಾರ ಎಂದು ಕರೆಸಿಕೊಂಡಿದ್ದಾರೆ. ಇದೊಂದು ಕರ್ನಾಟಕ

ಸಂಘ, ಮುಂಬಯಿ ಅವರ ಪ್ರಕಟಣೆ ಎಂದು ನೋಡಿದರೆ ಗೊತ್ತಾಗುವಷ್ಟು ಸಾಧಾರಣವಾಗಿ, ರುಚಿ ಹೀನವಾಗಿದೆ. (ಹೊರನಾಡ `ಸಂಘಗಳು ಸುತ್ತ ಮುತ್ತ ಏನಾಗುತ್ತಿವೆ ಎಂದು ಕಣ್ಣರಳಿಸಿ ನೋಡುವ, ಪುಸ್ತಕಗಳನ್ನು ಅಂದವಾಗಿ ಮುದ್ರಿಸುವತ್ತ ಗಮನ ಹರಿಸುವ ಕಾಲ ಅದೆಂದೋ ಬಂದಾಗಿದೆ!).

ರಾಜೀವರ ಕತೆಗಳಲ್ಲಿ ನಗರದಲ್ಲಿದ್ದೂ ಹಳ್ಳಿಯ ಬಾಲ್ಯ, ಯೌವನಗಳ ಸೆಳೆತದಿಂದ ಪಾರಾಗದ ಮುಗ್ಧ ಹುಡುಗನೊಬ್ಬ ಸ್ಥಾಯಿಯಾಗಿದ್ದಾನೆ ಎಂದು ಮುನ್ನುಡಿಕಾರ ಎಸ. ದಿವಾಕರ್ ಗುರುತಿಸಿದ್ದಾರೆ. `ಈ ಪಾತ್ರ ಅಪ್ರಜ್ಞಾಪೂರ್ವಕವಾಗಿ ಹಳ್ಳಿ-ನಗರಗಳ ಅನುಭವವನ್ನು ತಾಳೆ ಹಾಕಿ ನೋಡಬಲ್ಲುದು ಅಥವಾ ಸಂದರ್ಭವೊಂದು ಚಿಮ್ಮಿಸುವ ಭೂತಕಾಲದೊಳಗಿಂದಲೇ ಓದುಗನಿಗೆ ವಿವರಗಳನ್ನು ಒದಗಿಸಬಲ್ಲುದುಎಂದೂ ಅವರು ಹೇಳುತ್ತಾರೆ. ಝಕ್ಕುಂ ಜಂಗುಂ ಜೋಹೋಚೋ ಎಂಬ ಮಜಾ ಶೀರ್ಷಿಕೆಯುಳ್ಳ ಕತೆಯ ಈ ಕಮನೀಯ ಪ್ಯಾಸೇಜ್ ಓದಿ:`ಹೊತ್ತು ಮಾತ್ರ ಅಡ್ಡಾದದ್ದೇ ಜಡಿ ಮಳೆ ಹುಯ್ದು ಹೋದೊಡನೆ ಉಕ್ಕುವ ಒರತೆಯಂತೆ ಎಲ್ಲ ದಿಕ್ಕುಗಳಿಂದಲೂ ಜನ ಸಣಸ್ಥ ದ್ಯಾವರ ಬಯಲಿಗೆ ಇಳಿಯತೊಡಗಿದರು. ಊರು ಕೇರಿಗಳಿಂದ, ಕೊಪ್ಪ ಕಾಡುಗಳಿಂದ ಗುಡ್ಡದ ಮರುಕಲಿಳಿದು ವರ್ಣಮೇಳಕ್ಕೆ ಬಂದವರಂತೆ ರಂಗುರಂಗಿನ ಬಟ್ಟೆ ಧರಿಸಿ, ಕಾಲುದಾರಿ ಹಿಡಿದು, ಮಕ್ಕಿ ಗದ್ದೆ ಹಾಳೆ ದಾಟಿ ಗುಡಿಯ ಸುತ್ತ ಕೂಡಿಕೊಂಡರು. ಅತ್ತ ಕರಿಬೀರ ಸಾಮಿಯ ಪೂಜೆ ಮುಗಿಸಿ ಹೊರಟ ಸುಗ್ಗಿ ಮಕ್ಕಳು ಗುಡ್ಡದ ದಾರಿಯುದ್ದ ಸಾಲಾಗಿ ಇಳಿದು ಬರುವಾಗ ಬಿಸಿಲಿಗೆ ತೂಗುವ ಗೊಂಡೆಗಳ ಚಿನ್ನದ ಮಿಂಚು ಝಗ್ಗನೆ ಎಲ್ಲರ ಕಣ್ತುಂಬಿ, ಜನಸ್ತೋಮ `ಹೋಯ್ಎಂದು ಉದ್ಗರಿಸಿತು…

ಶೀರ್ಷಿಕೆ:ಗುರ್ಬಾಣಕ್ಕಿ ಲೇಖಕರು: ರಾಜೀವ ನಾರಾಯಣ ನಾಯಕ ಪ್ರಕಾಶಕರು : ಕರ್ನಾಟಕ ಸಂಘ, ಮುಂಬಯಿ ಪುಟಗಳು : 90 ಬೆಲೆ:ರೂ. 80/-

ಕೃಪೆ : ವಿಜಯ ಕರ್ನಾಟಕ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: