ಎಲೆಗಳು ನೂರಾರು ಭಾವದ ಎಳೆಗಳು ನೂರಾರು

ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಪ್ರಕಟವಾದ ಈ ಗಾನಗುಚ್ಛ ಹಾಡುಗಳ ಒಂದು ಸಂಗ್ರಹ.

ಸಾಕ್ಷರತೆ, ಸಮಾನತೆ, ವೈಜ್ಞಾನಿಕ ಮನೋಭಾವ, ಪರಿಸರ ಪ್ರಜ್ಞೆ, ಪ್ರಾಥಮಿಕ ವಿದ್ಯಾಭ್ಯಾಸ, ಮಹಿಳಾ ಸಮಾನತೆ ಹಾಗೂ ಕ್ರಾಂತಿಕಾರಕ ಹಾಡುಗಳ ಸಂಕಲನವೇ ಈ ಪುಸ್ತಕ. ಈ ಹಾಡುಗಳು ಸಮಾಜವನ್ನು ಪ್ರಜ್ಞಾವಂತ ಸಮಾಜ ಮಾಡಲು ಹೊರಟಿರುವ ಸಮಾಜ ಸೇವಕರಿಗೆ ತಮ್ಮ ಕೆಲಸದಲ್ಲಿ ಬಳಸಿಕೊಳ್ಳಲು ರಚನೆಯಾದ ಹಾಡುಗಳು.

ಒಂದು ಹಾಡಿನಲ್ಲಿ ಹೇಳಿರುವಂತೆ

ಎಲ್ಲಿಂದ ಬಂದಿರಂದು ಹೇಳಬಹುದು ನೀವು

ಜನರ ನಡುವಿನಿಂದ ಎಂದು ಹೇಳುತ್ತೇವೆ ನಾವು

ಈಗ ಪಯಣ ಎಲ್ಲಿಗೆಂದು ಕೇಳಬಹುದು ನೀವು

ತಿರುಗಿ ಮತ್ತೆ ಜನರ ನಡುವೆ ಹೋಗುತ್ತೇವೆ ನಾವು.

ಅಜ್ಞಾನ ಆವರಿಸಿ ಒಳಗಣ್ಣಿಗೆ ಕತ್ತಲ ಕನ್ನಡಕ ತೊಡಿಸಿರುವ ನಮ್ಮ ಸಂದರ್ಭಕ್ಕೆ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಗಳ ಆಪರೇಷನ್ ಅಗತ್ಯ. ಮುಗ್ದತೆಯನ್ನು ಮೌಡ್ಯಕ್ಕೆ ತಳ್ಳುವ, ಮನುಷ್ಯ ವಿರೋಧಿ ಶಕ್ತಿಗಳು ನಮ್ಮ ನಡುವೆಯೇ ಇರುವುದನ್ನು ನಾವು ಮೊದಲು ತಿಳಿಯಬೇಕು. ಮೌಢ್ಯದ ಕಪ್ಪು ಮೋಡ ಕರಗಿ ಬೆಳಕಿನ ಕಿರಣಗಳು ಕಾಣಿಸಬೇಕು. ಕಡಿವಾಣಗಳು ಕತ್ತರಿಸಿ ಬೀಳಬೇಕು ಎಂಬ ಆಶಯವನ್ನು ಬರಗೂರು ರಾಮಚಂದ್ರಪ್ಪ ಅವರು ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.

ಈ ಹಾಡುಗಳು ಕರ್ನಾಟಕದ ಜನಪದದ ನಡುವೆ ಹೆಚ್ಚು ಪ್ರಸಾರವಾಗಲಿ ಆ ಮೂಲಕ ಮೌಢ್ಯದಲ್ಲಿರುವ ಜನರು ಹೆಚ್ಚು ಪ್ರಜ್ಞಾವಂತರಾಗಲಿ ಎಂದು ಆಶಿಸೋಣ.

ವಿಶಾಲಮತಿ

ಶೀರ್ಷಿಕೆ: ಗಾನ ಗುಚ್ಛ ಸಂಪಾದನೆ : ಈ ಬಸವರಾಜು ಪ್ರಕಾಶಕರು: ಭಾರತ ಜ್ಞಾನ ವಿಜ್ಞಾನ ಸಮಿತಿ ಪುಟಗಳು : 96+4 ಬೆಲೆ:ರೂ. 30/-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: