ಸಾಧಾರಣ ರೀತಿಯಲ್ಲಿ ಮುದ್ರಣಗೊಂಡ ಒಳ್ಳೆಯ ಪುಸ್ತಕ

ಸ್ವಾತಂತ್ರ್ಯೋತ್ತರ ಭಾರತೀಯ ಸಮಾಜವನ್ನು ಸೃಜನಶೀಲ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಹಿಂದಿಯ ಪ್ರಮುಖ ಬರಹಗಾರರಲ್ಲಿ ಹರಿಶಂಕರ ಪರಸಾಈ ಪ್ರಮುಖರು. ವಿಡಂಬನೆ ಅವರ ಬರಹದ ಧನಾತ್ಮಕ ಅಂಶಗಳಲ್ಲೊಂದು. ನಂಜಿಲ್ಲದ ವ್ಯಂಗ್ಯದ ಮೂಲಕ ಸಮಾಜವನ್ನು ವಿಡಂಬಿಸುವಲ್ಲಿ ಹರಿಶಂಕರರು ಸಿದ್ಧಹಸ್ತರು. ಅಂಥ ವಿಡಂಬನೆಯ ಮಾದರಿಗಳಂತೆ ಇಲ್ಲಿನ ಕಥೆಗಳು ಕಾಣಿಸುತ್ತವೆ.

ಒಂದು ಪುಟದ ಪುಟ್ಟ ಚೌಕಟ್ಟಿನ ಕಥೆಯಿಂದ ಅರವತ್ತಕ್ಕೂ ಹೆಚ್ಚು ಪುಟಗಳ ನೀಳ್ಗತೆ ಸಂಕಲನದಲ್ಲಿದೆ. ಪರಿಣಾಮದ ದೃಷ್ಟಿಯಿಂದ ಎಲ್ಲ ಕಥೆಗಳು ಖುಷಿ ಕೊಡುತ್ತವೆ. ಹಾಸ್ಯೋತ್ಸವಗಳಲ್ಲಿ ಹೇಳೂವ ಜೋಕ್ ಮಾದರಿಯಂಥ ಕೆಲವು ಕಥೆಗಳೂ ಪುಸ್ತಕದಲ್ಲಿವೆ. ಆದರೆ, ಪುಟ್ಟ ಕಥೆಗಳಿಗಿಂತ ತೀರಾ ಭಿನ್ನವಾದ `ನೆಲೆಎನ್ನುವ ಕಾದಂಬರಿ ಸಾಧ್ಯತೆಯ ನೀಳ್ಗತ ಓದುಗನನ್ನು ಯೋಚನೆಗೆ ಹಚ್ಚುತ್ತದೆ.

ವಿವಿಧ ಕ್ಷೇತ್ರಗಳ ಸ್ವಾರಸ್ಯಗಳನ್ನು ವಿಡಂಬನೆಗೆ ಬಳಸಿಕೊಳ್ಳುವ ಕಥೆಗಾರರು, ಸಾಹಿತ್ಯವನ್ನೂ ಬಿಟ್ಟಿಲ್ಲ. ಹಲವು ವೇಳೆ ಇಲ್ಲಿನ ವಿಡಂಬನೆ ಲೇಖಕನೊಬ್ಬನ ಸ್ವವಿಮರ್ಶ ಎನ್ನಿಸುವಂತೆಯೂ ಇದೆ.

ತಿಪ್ಪೇಸ್ವಾಮಿ ಅವರ ಅನುವಾದ ಸಲೀಸಾಗಿ ಓದಿಸಿಕೊಳ್ಳುವಂತಿದೆ. ಆದರೆ, ಮುದ್ರಣ ಗುಣಮಟ್ಟದಲ್ಲಿ ಪುಸ್ತಕಗಳ ನಡುವೆ ಪೈಪೋಟಿ ನಡೆಯುತ್ತಿರುವ ದಿನಗಳಲ್ಲಿ ಒಳ್ಳೆಯ ಪುಸ್ತಕವೊಂದು ಸಾಧಾರಣ ರೀತಿಯಲ್ಲಿ ಮುದ್ರಣಗೊಂಡಿದೆ.

ಶೀರ್ಷಿಕೆ :ಹರಿಶಂಕರ ಪರಸಾ ಅವರ ವ್ಯಂಗ್ಯ ಕಥೆಗಳು ಅನು: ಡಾ. ತಿಪ್ಪೇಸ್ವಾಮಿ ಪ್ರಕಾಶಕರು : ಮಂಜುಶ್ರೀ ಪ್ರಕಾಶನ ಪುಟಗಳು : 186 ಬೆಲೆ: ರೂ.100/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: