ಹೆಂತಾ ಚೆಂದಿತ್ತಾ

ಪುಸ್ತಕದ ಶೀರ್ಷಿಕೆ ನೋಡಿದರೆ ಜಾನಪದ ಲಾವಣಿಗಳ ಸಂಪಾದಿತ ಗ್ರಂಥ ಇದಾಗಿರಬಹುದು ಎನಿಸುತ್ತದೆ. ಲಾವಣಿ ಶೈಲಿಯಲ್ಲಿ ಬರೆದಿರುವ ಗೀತೆಗಳು ಇವು. `ಇವನ್ನು ಬೇಕಾದರೆ ಭಾವಗೀತಾತ್ಮಕ ಲಾವಣಿಗಳು ಎಂದು ಕರೆಯಿರಿಎಂದು ಕವಿ ಪೋಲೀಸ್ ಪಾಟೀಲ ಅವರೇ ಹೇಳಿದ್ದಾರೆ. ಪಾಟೀಲರು ಕವಿ ಅಷ್ಟೇ ಅಲ್ಲ. ಉತ್ತಮ ಹಾಡುಗಾರರೂ ಸಹ. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣದ ಶಿಬಿರಗಳಲ್ಲಿ ಭಾಗವಹಿಸಿದಾಗ ತಾವೇ ರಚಿಸಿ ಹಾಡಿದ ಲಾವಣಿಗಳು ಇವು. ಒಟ್ಟು 55 ಲಾವಣಿಗಳು ಈ ಸಂಕಲನದಲ್ಲಿವೆ.

ನಿಶ್ವಿತ ಉದ್ದೇಶಕ್ಕೆ ರಚಿಸಿದ ಗೀತೆಗಳಲ್ಲಿ ಸಾರ್ವತ್ರಿಕ ಮೌಲ್ಯ ಇರುವುದೆ ಎಂಬ ಚರ್ಚೆಯ ಹಂಗು ಕವಿಗೆ ಇಲ್ಲ. ಜನಪದ ಶೈಲಿಯಲ್ಲಿ ಹಾಡುತ್ತಾ ಹಾಡುತ್ತಾ ಕವಿತೆ ಕಟ್ಟುವ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ದೇಸಿ ಸಿದ್ದ ಅಡುಗೆಯಲ್ಲಿ ಆಧುನಿಕ ಸಂವೇದನೆ ಕಸಿಗೊಂಡ ಪಾಕ ಇದು. ಇದೊಂದೇ ಅಲ್ಲ, ಅವರ ಎಲ್ಲ ಕವಿತಾ ಸಂಕಲನಗಳೂ, ನಾಟಕಗಳೂ ಜಾನಪದ ಸಂಕಲನಗಳಂತೆ ಭಾಸವಾಗುತ್ತವೆ. ಹಾಗಾಗಿ ಕನ್ನಡ ಕಾವ್ಯಲೋಕದಲ್ಲಿ ಅವರ ಸ್ಥಾನ ವಿಶಿಷ್ಟವಾಗಿದೆ.

ಶೀರ್ಷಿಕೆ: ಹೆಂತಾ ಚೆಂದಿತ್ತಾ ಹಿಂದುಸ್ತಾನ (ಆಯ್ದ ಲಾವಣಿಗಳು) ಲೇಖಕರು: ಬಿ.ಆರ್.ಪೋಲೀಸ್ ಪಾಟೀಲ್ ಪ್ರಕಾಶಕರು: ವಾತಲ್ಯ ಪ್ರಕಾಶನ ಪುಟಗಳು : 94 ಬೆಲೆ:ರೂ. 60/-

ಕೃಪೆ : ಸುಧಾ

Advertisements