ಡಾ. ಆರ್. ವಿ. ಭಂಡಾರಿ ಅವರಿಗೆ ಶೃದ್ಧಾಂಜಲಿ

ಬೆಳಕು ಹಂಚಿದ ಬಾಲಕನನ್ನು ಕೆತ್ತಿದ ಡಾ. ಆರ್.ವಿ. ಭಂದಾರಿ ಡಾ ಇನ್ನಿಲ್ಲ. ಅವರ ಕೆಲವು ಕೃತಿಗಳು ಇವು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ)

ಕೊಲೆಗಾರ ಪತ್ತೆಯಾಗಲಿಲ್ಲ (ಕವನ ಸಂಕಲನ)

ಬೆಂಕಿಯ ಮಧ್ಯೆ (ಕಾದಂಬರಿ)

ಬಿರುಗಾಳಿ (ಕಾದಂಬರಿ)

ಗೋಡೆಗಳು ಮತ್ತು ನೆರೆ ಹಾವಳಿ (ಕಾದಂಬರಿ)

ತಲೆಮಾರು (ಕಾದಂಬರಿ)

ಯಾನ ಮತ್ತು ಇತರ ನಾಟಕಗಳು (ಮಕ್ಕಳ ನಾಟಕಗಳು)

ಕೇವಲ ಸಹಿ (ನವ ಸಾಕ್ಷರ ಸಾಹಿತ್ಯ)

ಇಟ್ಟ ಹೆಜ್ಜೆ ಮುಂದಕೆ (ನವ ಸಾಕ್ಷರ ಸಾಹಿತ್ಯ)

ಐದು ಯಕ್ಷಗಾನ ಏಕಾಂಕ ಪ್ರಸಂಗಗಳು (ನವ ಸಾಕ್ಷರ ಸಾಹಿತ್ಯ)

ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ (ಮಕ್ಕಳ ನಾಟಕಗಳು)

ಬೆಳಕಿನೆಡೆಗೆ (13 ಮಕ್ಕಳ ನಾಟಕಗಳು)

ಸುಭಾಶ್ಚಂದ್ರ ಬೋಸ್ (ಜೀವನ ಚರಿತ್ರೆ)

ಆಡು ಬಾ – ಹಾಡು ಬಾ (ಮಕ್ಕಳ ಪದ್ಯ)

ಯಶವಂತನ ಯಶೋಗೀತೆ (ಕಾದಂಬರಿ)

ಸಮಾಜವಾದಿ ವಾಸ್ತವ (ವಿಮರ್ಶೆ)

ವರ್ಣದಿಂದ ವರ್ಗದೆಡೆಗೆ (ವಿಮರ್ಶೆ)

ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವಿಮರ್ಶೆ)

ಒಳಧ್ವನಿ (ವಿಮರ್ಶೆ)

ಸೆಳಕು (ವಿಮರ್ಶೆ)

ಸಾಹಿತ್ಯ ಮತ್ತು ಪ್ರಭುತ್ವ (ವಿಮರ್ಶೆ)

ಕನ್ನಡದಲ್ಲಿ ಇಂಗ್ಲೀಷ್ ವ್ಯಾಕರಣ

Advertisements

ಹಿರಿಯ ಬಂಡಾಯ ಸಾಹಿತಿ ಆರ್.ವಿ.ಭಂಡಾರಿ ಇನ್ನಿಲ್ಲ.

ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ.ಭಂಡಾರಿ (72) ದೀರ್ಘಕಾಲದ ಅಸ್ವಸ್ಥತೆಯ ನಂತರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳುವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲೊಬ್ಬರಾಗಿದ್ದರು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೋಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಅವರಿಗೆ ಉಪನ್ಯಾಸಕ ವಿಠ್ಠಲ ಭಂಡಾರಿ, ಕವಯತ್ರಿ ಮಾಧವಿ ಭಂಡಾರಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ನಡೆಯಲಿದೆ.

ಆರ್.ವಿ.ಭಂಡಾರಿ ಅವರ ನಿಧನಕ್ಕೆ ನಾಟಕ ನಿರ್ದೇಶಕ ಕಿರಣ ಭಟ್ಟ, ಜಿಲ್ಲಾ ಸಾಹಿತ್ಯ ಪರಿಷದ್ ಅಧ್ಯಕ್ಷ ರೋಹಿದಾಸ್ ನಾಯಕ್, ಕಾರ್ಯದರ್ಶಿ ಅರವಿಂದ ಕರ್ಕಿಕೋಡಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಹಾಗೇ ಡಾ.ಭಂಡಾರಿ ಅವರ ನಿಧನಕ್ಕೆ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ವಾರ್ತೆ