ಬಚ್ಚಳ್ಳಿಯ ಬೆಳಕು

scan0007

ದೊಡ್ಡಬಳ್ಳಾಪುರದಿಂದ ನಂದಿಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ನಂದಿಮೋರಿ ದಾಟಿದರೆ, ಅಲ್ಲೆ ಎಡಕ್ಕೆ ರಸ್ತೆಯೊಂದು ತೆರೆದುಕೊಳ್ಳುತ್ತದೆ. ಆ ಚಿಕ್ಕ ರಸ್ತೆಯಲ್ಲಿ ವಡ್ಡರ ಪಾಳ್ಯ ದಾಟಿ ಹಾಗೆ ಮುಂದೆ ಸಾಗಿದರೆ, ಇದ್ದಕಿದ್ದಂತೆ ದಟ್ಟವಾದ ಮರಗಳ ನೆರಳು ಕವಿದ ಜಾಗವೊಂದು ಎದುರಾಗುತ್ತದೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಒಂದರೆಗಳಿಗೆ ಅಲ್ಲೆ ವಿಶ್ರಮಿಸಿಕೊಳ್ಳುವ ಬಯಕೆ ಅನಪೇಕ್ಷಿತವಾಗಿ ಬಂದೂ ಬಿಡುತ್ತದೆ. ಹಾಗೆ ಎದುರಿಗೆ ಕಣ್ಣಾಡಿಸಿದರೆ ಆ ಮರದ ಪಕ್ಕದಲ್ಲೇ ಮೂಡಣ ದಿಕ್ಕಿಗೆ ಹಾದು ಹೋಗುವ ಸಾಧಾರಣ ಕಚ್ಚಾರಸ್ತೆಯೊಂದು ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಹೊಂಗೆ ಮರಗಳ ನೆರಳಲ್ಲಿ ನಿರುಮ್ಮಳ ಮಲಗಿರುವುದು ಕಾಣುತ್ತದೆ.

ದೇವನೂರು ಮಹಾದೇವರ ಕತೆಯ ಆರಂಭದಂತೆ ಕಾಣುವ ಇದು ಜಿ.ರಾಮೇಗೌಡರ `ಬಚ್ಚಳ್ಳಿಯ ಬೆಳಕು ಜೀವನಚರಿತ್ರೆಯ ಒಂದು ಪುಟ. ಎಂ.ಜಿ.ಚಂದ್ರಶೇಖರಯ್ಯ ಇದನ್ನು ಪ್ರೀತಿಯಿಂದ ಬರೆದಿದ್ದಾರೆ. ಮಾಸ್ತಿಯವರು ಕಾರ್ಯಕ್ರಮವೊಂದರಲ್ಲಿ ರಾಮೇಗೌಡರ ವಿನಯ ಸಂಪನ್ನತೆ, ಪ್ರಮಾಣಿಕತೆಯ ಕುರಿತು ಹೇಳುತ್ತಾ ಅವರೊಬ್ಬ ದೇವರಂತ ಮನುಷ್ಯ ಎಂದಿದ್ದರಂತೆ. ಅದರಿದ ಪ್ರಭಾವಿತರಾದ ಚಂದ್ರಶೇಖರಯ್ಯ, ಸಾಕಷ್ಟು ಅಧ್ಯಯನ ನಡೆಸಿ ಬರೆದಿರುವ ಕೃತಿ ಇದು.

ಒಂದು ಜೀವನ ಚರಿತ್ರೆಯನ್ನು ಹೇಳುತ್ತಲೇ, ಸಾಮಾಜಿಕ ಚಿತ್ರವನ್ನು ಕಟ್ಟಿಕೊಡುತ್ತಾರೆ. ಇತ್ತೀಚೆಗೆ ಬಂದಿರುವ ಜೀವನ ಚರಿತ್ರೆಗಳ ಪೈಕಿ ಗಮನಾರ್ಹ ಕೃತಿ ಇದು.

ಶೀರ್ಷಿಕೆ: ಬಚ್ಚಳ್ಳಿಯ ಬೆಳಕು ಲೇಖಕರು: ಎಂ.ಜಿ.ಚಂದ್ರಶೇಖರಯ್ಯ ಪ್ರಕಾಶಕರು: ಗೋಧೂಳಿ ಪ್ರಕಾಶನ, ಬೆಂಗಳೂರು ಪುಟಗಳು : 264 ಬೆಲೆ:ರೂ. 150/-

ಕೃಪೆ : ಕನ್ನಡ ಪ್ರಭ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: