134 ಕತೆಗಳ ಸಂಕಲನ

scan0008

ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬದುಕು-ಸಾಧನೆಯ ಮೊಹರು ಮೂಡಿಸಿದ ಮಹಾನುಭಾವರ ಬದುಕಿನ ಸ್ವಾರಸ್ಯದ ಸಂಗತಿಗಳ ಸಂಕಲನ `ಹಿರಿಯರ ಕಿರುಗತೆಗಳು‘. ಗಾದೆ ಹಾಗೂ ಪಡೆನುಡಿಗಳ ಕೋಶಗಳನ್ನು ಸಂಪಾದಿಸುವ ಮೂಲಕ ಕನ್ನಡ ಪುಸ್ತಕಲೋಕಕ್ಕೆ ಪರಿಚಿತರಾದ ಟಿ.ವಿ.ವೆಂಕಟರಮಣಯ್ಯ, ಕಥೆಗಳಂಥ ಘಟನೆಗಳ ಮೂಲಕ ಹಿರಿಯ ಚೇತನಗಳ ಬದುಕಿನತ್ತ ಓದುಗರನ್ನು ಸೆಳೆಯುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ನಡೆಸಿದ್ದಾರೆ. ಲೇಖಕರು ತಮ್ಮ ಈ ಪುಸ್ತಕವನ್ನು `ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಅದ್ಭುತ-ರಂಜಕ ಘಟನಾವಳಿಗಳುಎಂದು ಕರೆದಿದ್ದಾರೆ.

ಕಥೆಗಳಂತೆ ಓದಿಸಿಕೊಳ್ಳುವ ಇಲ್ಲಿನ ಬರಹಗಳ ಮುಖ್ಯ ಉದ್ದೇಶ, ಆ ಬರಹಗಳ ಮುಖ್ಯ ಉದ್ದೇಶ, ಆ ಬರಹಗಳ ಹಿಂದಿನ ಜೇತನಗಳನ್ನು ಪರಿಚಯಿಸುವುದು. ಈ ನಿಟ್ಟಿನಲ್ಲಿ ಕನ್ನಡಿಗರು, ಭಾರತೀಯರು ಸೇರಿದಂತೆ ವಿವಿಧ ಕಾಲದೇಶಗಳ ವ್ಯಕ್ತಿಗಳನ್ನು ಲೇಖಕರು ಕಥಾಪ್ರಸಂಗಗಳ ಮೂಲಕ ಪರಿಚಯಿಸಿದ್ದಾರೆ. ಹೆಮ್ಮೆಯ ಕನ್ನಡಿಗರಾದ ಜನರಲ್ ಕಾರಿಯಪ್ಪ, ಕೈಲಾಸಂ, ಡಿವಿಜಿ, ದೇವುಡು, ಕುವೆಂಪು, ಪಂಜೆ, ಮಿರ್ಜಾ ಇಸ್ಮಾಯಿಲ್, ತೀನಂಶ್ರೀ, ವಿಶ್ವೇಶ್ವರಯ್ಯನವ ಬದುಕಿನ ಕೆಲ ಪ್ರಸಂಗಗಳು ಸಂಕಲನದಲ್ಲಿ ಸೇರಿವೆ.

ಒಂದು ನೂರಾ ಮೂವತ್ತನಾಲ್ಕು ಕಥೆಗಳ ಸಂಕಲನದ ಬಹುತೇಕ ಬರಹಗಳು ಗಾತ್ರದಲ್ಲಿ ಪುಟ್ಟವು. ಒಬ್ಬರೇ ವ್ಯಕ್ತಿಯ ಕುರಿತಂತೆ ಒಂದಕ್ಕೂ ಹೆಚ್ಚು ಪ್ರಸಂಗಗಳಿರುವುದೂ ಇದೆ. ಪ್ರಸಂಗಗಳನ್ನು ಆಯುವಲ್ಲಿ ಲೇಖಕರ ಶ್ರಮ ಹಾಗೂ ಅಭಿರುಚಿ ಎದ್ದುಕಾಣುತ್ತದೆ. ಭಾಷೆ ಸರಳ ಹಾಗೂ ನೇರವಾಗಿದ್ದರೂ, ಪ್ರಸಂಗಗಳಿಗೆ ಕಥನದ ರೂಪ ಕೊಡುವಲ್ಲಿ ಮಾತ್ರ ಲೇಖಕರ ಪ್ರಯತ್ನ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ.

ಶೀರ್ಷಿಕೆ: ಹಿರಿಯರ ಕಿರುಗತೆಗಳು ಲೇಖಕರು: ಟಿ. ವಿ. ವೆಂಕಟರಮಣಯ್ಯ ಪ್ರಕಾಶಕರು: ಸಮಾಜ ಪುಸ್ತಕಾಲಯ,ಧಾರವಾಡ ಪುಟಗಳು :158 ಬೆಲೆ:ರೂ. 60/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: