ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ

scan0027ಎಲ್ಲ ಭಾರತೀಯ ಭಾಷೆಗಳು ಜೀವಂತವಾಗಿ ತಮ್ಮ ಶಕ್ತಿ-ಸಾಮಥ್ರ್ಯವನ್ನು ಪ್ರಕಟಿಸಲು ಸಜ್ಜಾಗುವುದೆಂದರೆ ಸೃಜನಶೀಲತೆಯನ್ನು ಸಾಮಾಜಿಕ ಸನ್ನಿವೇಶದಲ್ಲಿ, ಜಾಗತಿಕ ಇಕ್ಕಟ್ಟಿನಲ್ಲಿ ಎಚ್ಚರಾಗಿಸಿಕೊಳ್ಳುವುದೆಂದೇ ಅರ್ಥ. ಇಂದಿನ ಅತ್ಯಂತ ಆಳವಾದ ಬಿಕ್ಕಟ್ಟಿನ `ಕನ್ನಡ ಕಾವ್ಯತನ್ನ ಸೃಜನಮುಖವನ್ನು ಪ್ರಖರವಾಗಿಸಿಕೊಳ್ಳಲು ಮೈಯೆಲ್ಲಾ ಕಾಲು, ನಾಲಿಗೆಯಾಗಿಸಿಕೊಳ್ಳಬೇಕಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ಕವಿಗಳು ತಮ್ಮ ಸೃಷ್ಟಿಕ್ರಿಯೆಗಳನ್ನು ಪ್ರಶ್ನಿಸಿಕೊಳ್ಳುತ್ತಾ ಸಾಗಿದಾಗ ಮಾತ್ರ ಬಾಳಿನ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.

`ಜಾಗತೀಕರಣದ ಎದುರಲ್ಲಿ: ಕವಿತೆಲೇಖನದಲ್ಲಿರುವ ಮೇಲಿನ ಸಾಲುಗಳು ಡಾ.ಗುಂಡಣ್ಣ ಕಲಬುರ್ಗಿಯವರ `ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆಕೃತಿಯ ಒಟ್ಟಾರೆ ಉದ್ದೇಶದಂತೆಯೂ ತಾನೇ ಸೃಷ್ಟಿಸಿಕೊಂಡ ಚೌಕಟ್ಟಿನಂತೆಯೂ ಕಾಣುತ್ತದೆ.

ವೃತ್ತಿಯಿಂದ ಮೇಷ್ಟ್ರಾದ ಗುಂಡಣ್ಣನವರು ಕಥೆ, ಕವಿತೆ ಬರೆದವರು. ಇಲ್ಲಿನ ಲೇಖನಗಳಲ್ಲೂ ಕಥೆಗಾರನ/ಕವಿಯ ಭಾಷಾಶೈಲಿಯಿದೆ. ಬಹುತೇಕ ಲೇಖನಗಳು ವಿಮರ್ಶೆಯ ನೆಲೆಗಟ್ಟಿನಲ್ಲಿ ಚಿಂತಿಸಿದರೂ ವಿಮರ್ಶೆಯ ಖಾಚಿತ್ಯ ಹಾಗೂ ಒಳನೋಟಗಳು ಇಲ್ಲಿ ಸಾಧ್ಯವಾಗಿಲ್ಲ.

ಸಂಕಲನದ ಸಫಲತೆಯಿರುವುದು ಲೇಖಕನ ಸಹೃದಯಿ ಮನಸ್ಸು ಓದುಗರನ್ನು ಕನ್ನಡ ಸಾಂಸ್ಕೃತಿಕ ಲೋಕದತ್ತ ಸೆಳೆಯುವ ಪ್ರಯತ್ನದಲ್ಲಿ. ಕಣವಿ, ಕಂಬಾರ, ಲಂಕೇಶರನ್ನು ಅವರ ಕೃತಿಗಳ ಮೂಲಕವೇ ಶೋಧಿಸುವ ಲೇಖಕರು ವಚನ ಸಾಹಿತ್ಯ ಸಂಗ್ರಹಗಳನ್ನೂ ಚರ್ಚಿಸುತ್ತಾರೆ. ಅವರ ಈ ಪ್ರಯತ್ನ ಮೈಯೆಲ್ಲಾ ಕಾಲು ಕೈಯಾಗಿಸುವ ಪ್ರಯತ್ನದಂತಿದೆ. ಈ ಪ್ರಕ್ರಿಯೆಯಲ್ಲಿ ಕಣ್ಣೂ ಮೂಡಿದ್ದರೆ ಚೆನ್ನಾಗಿತ್ತು.

ಪುಸ್ತಕ ಅಚ್ಚುಕಟ್ಟಾಗಿದೆ, ಸುಂದರವಾಗಿದೆ. ಆದರೆ 190 ಪುಟಗಳ ಪುಸ್ತಕಕ್ಕೆ 220 ರೂಪಾಯಿಯ ಬೆಲೆ ಅತಾರ್ಕಿಕ. ಈ ಅಸಂಗತ, ಜಾಗತೀಕರಣದ ಎದುರಲ್ಲಿ ಕವಿತೆ ಎದುರಿಸುತ್ತಿರುವ ರೀತಿಯದು.

ಲೇಖಕರ ಅಧ್ಯಯನಶೀಲತೆ ಹಾಗೂ ಸಂಘಟನಾ ಚಾತುರ್ಯವನ್ನು ಬೆನ್ನುಡಿಯಲ್ಲಿ ಚೆನ್ನವೀರ ಕಣವಿ ಮೆಚ್ಚಿಕೊಂಡಿದ್ದಾರೆ. ಪುಸ್ತಕದಲ್ಲಿ ಕಣವಿ ಕೃತಿಗಳಿಗೆ ಸಂಬಂಧಿಸಿದಂತೆಯೇ ಮೂರು ಲೇಖನಗಳಿವೆ.

ಶೀರ್ಷಿಕೆ:ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ ಲೇಖಕರು: ಡಾ. ಗುಂಡಣ್ಣ ಕಲಬುರ್ಗಿ ಪ್ರಕಾಶಕರು: ಸೌಜನ್ಯ ಪ್ರಕಾಶನ ಪುಟಗಳು :190 ಬೆಲೆ:ರೂ.220/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: