ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ

scan0035

ಒಣಗಿದ ಎರಡು ಕಟ್ಟಿಗೆ ತುಂಡುಗಳು ಘರ್ಷಣೆಯಾದರೆ ಬೆಂಕಿ ಹುಟ್ಟಿಕೊಳ್ಳುತ್ತದೆ ಎಂಬ ಸತ್ಯ ನಮಗೆ ಗೋಚರವಾದದ್ದು ಶಿಲಾಯುಗದಲ್ಲೇ. ಯಾರೋ ಒಬ್ಬ ನಮ್ಮ ಪೂರ್ವಿಕ ಇದನ್ನು ಪತ್ತೆ ಹಚ್ಚಿದ. ವಿಜ್ಞಾನದ ಬೇರುಗಳು ಅಲ್ಲಿಂದಲೇ ಟಿಸಿಲೊಡೆದಿವೆ. ವಿಜ್ಞಾನದ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಶರವೇಗದಲ್ಲಿ ಮುನ್ನಡೆದಿರಬಹುದು. ಆದರೆ ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ. ಅಂತೆಯೇ ಭಾರತೀಯ ಪ್ರಾಚೀನ ವಿಜ್ಞಾನಿಗಳು ಎಂಬ ಗ್ರಂಥದ ಶೀರ್ಷಿಕೆಯೇ ಕುತೂಹಲ ಹುಟ್ಟಿಸುತ್ತದೆ. ವೈದ್ಯಕೀಯ ಶಾಸ್ತ್ರದ ಅಚ್ಚರಿ ಧನ್ವಂತರಿ ಕ್ರಿ.ಪೂ.2000-1000ಕ್ಕೆ ಸೇರಿದವನು. ವೇದಗಳ ಕಾಲದ ವಿಮಾನ ಶಾಸ್ತ್ರಜ್ಞರು, ಬ್ರಹ್ಮಪುತ್ರ, ಜೈನ ಗಣಕರು, ಕಣಾದ, ಪಾಣಿನಿ, ಪರಾಶರ, ಪತಂಜಲಿ, ಗಾರ್ಗೇಯ ಎಲ್ಲರೂ ಕ್ರಿಸ್ತಪೂರ್ವಕ್ಕೆ ಸೇರಿದವರು. ಜತೆಗೆ ಕ್ರಿ.ಶ. ಒಂದನೇ ಶತಮಾನದ ಚರಕನಿಂದ ಹಿಡಿದು ಆರ್ಯಭಟ, ಭಾಸ್ಕರಾಚಾರ್ಯ, ವಿದ್ಯಾರಣ್ಯ ಹಾಗೂ ಕ್ರಿ.ಶ.1760 ರ ಗುಲಾಮ್ ಹುಸೇನ್ ವರೆಗೆ 34 ವಿಜ್ಞಾನಿಗಳ ಕುರಿತು 8-10 ವಾಕ್ಯದಿಂದ ಒಂದೆರಡು ಪುಟಗಳವರೆಗೆ ಲಭ್ಯವಿರುವ ಮಹತ್ವದ ಮಾಹಿತಿಯನ್ನು ಧೂಲೇಕರ್ ಈ ಗ್ರಂಥದಲ್ಲಿ ಕಟ್ಟಿಕೊಡುತ್ತಾರೆ. ಕಾಲ್ಪನಿಕ ರೇಖಾ ಚಿತ್ರಗಳಿವೆ. ಆದರೆ ಇನ್ನಷ್ಟು ಅಂದವಾಗಿ ಮುದ್ರಣವಾಗಿದ್ದರೆ ಮತ್ತಷ್ಟು ಆಕರ್ಷಣೆ ಹುಟ್ಟಿಸುತ್ತಿತ್ತು.

ಶೀರ್ಷಿಕೆ: ಭಾರತೀಯ ಪ್ರಾಚೀನ ವಿಜ್ಞಾನಿಗಳು ಲೇಖಕರು: ಚಂದ್ರಶೇಖರ ಧೂಲೇಕರ್ ಪ್ರಕಾಶಕರು: ರತ್ನಾ ಚಂದ್ರಶೇಖರ್ ಪುಟಗಳು : 80 ಬೆಲೆ: ರೂ.50/-

ಕೃಪೆ : ಸುಧಾ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: