ದುರ್ಬಲ ಕ್ಷಣವೊಂದರ ಹಠಮಾರಿತನ ಬಾಳಿಗೆ ಮುಳುವಾಗುವ ದುರಂತ

honnelli-mattu-itara-kategalu-1

ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳ ಮೂಲಕ ಜನಪ್ರಿಯತೆ ಪಡೆಯುವ ಕಥೆಗಾರರ ಒಂದು ವರ್ಗವಿದೆ. ಇಂಥ ಕಥೆಗಾರರಲ್ಲಿ ಎಚ್.ಎನ್.ಸತ್ಯನಾರಾಯಣ ರಾವ್ ಒಬ್ಬರು. `ಕರೀವಜ್ರಕಥಾ ಸಂಕಲನ ನಂತರ ಇದೀಗ `ಹೊನ್ನೆಲ್ಲಿ ಮತ್ತು ಇತರ ಕಥೆಗಳು ಎನ್ನುವ ಎರಡನೇ ಸಂಕಲನವನ್ನು ಅವರು ಪ್ರಕಟಿಸಿದ್ದಾರೆ. ಹದಿನೈದು ಕಥೆಗಳ ಸಂಕಲನದಲ್ಲಿ ಕಥೆಗಾರರ ಜೀವನ ಪ್ರೇಮ ಹಾಗೂ ಅನುಭವ ಎದ್ದುಕಾಣುತ್ತದೆ. ತಂತ್ರ ಹಾಗೂ ಭಾಷೆಯ ಸೂಕ್ಷ್ಮಗಳನ್ನು ಒಳಗೊಳ್ಳುವ ದೃಷ್ಟಿಯಿಂದ ಸತ್ಯನಾರಾಯಣ ಅವರ ಕಥೆಗಳು ಗಮನ ಸೆಳೆಯುವುದಿಲ್ಲ. ಇಲ್ಲಿನ ಕಥೆಗಳನ್ನು ಅವುಗಳೊಳಗಿನ ಜೀವನ ಸೌಂದರ್ಯದ ಮೂಲಕ ಗ್ರಹಿಸುವುದು ಹೆಚ್ಚು ಸೂಕ್ತ.

`ಚನ್ನಪಟ್ಟಣದ ಹಾಳುಬಾವಿಸಂಕಲನದ ಒಳ್ಳೆಯ ಕಥೆ. ಪ್ರವಾಸದ ಸಮಯದಲ್ಲಿ ಪರಿಚಯವಾದ ಕುಟುಂಬವೊಂದನ್ನು ಭೇಟಿ ಮಾಡಲು ಹೋದ ನಿರೂಪಕ ಅಲ್ಲಿ ಕಾಣುವುದು ಸಮಾಜದಲ್ಲಿನ ವಿರೂಪಗಳನ್ನು. ಕಥೆಯಲ್ಲಿನ ಕೊಳೆತ ಬಾವಿ ಮನುಷ್ಯರ ಅಂತರಂಗದ ಕೊಳಕನ್ನೂ ಪ್ರತಿಫಲಿಸುತ್ತದೆ. ಇದೇ ಬಾವಿ ನಿರ್ಮಲಗೊಳ್ಳುವುದು ಮಾನವತೆಯ ಪ್ರತಿನಿಧಿಯಾಗುತ್ತದೆ. ಕಥೆಯೊಳಗೆ ಉಪ ಕಥನಗಳು ಹೆಣಿಗೆಗೊಂಡ `ಚನ್ನಪಟ್ಟಣದ ಹಾಳು ಬಾವಿಕಥೆ ಸತ್ಯನಾರಾಯಣರ ಒಟ್ಟಾರೆ ಕಥೆಗಾರಿಕೆಯ ಆಶಯದಂತೆ ಕಾಣುತ್ತದೆ.

`ಅಮ್ಮ ಅಲ್ಲ-ಅಪ್ಪನ ಹೆಂಡತಿಎನ್ನುವ ಕಥೆ ಗಮನ ಸೆಳೆಯುವುದು ಕೂಡಾ ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಮನದಟ್ಟು ಮಾಡಿಸುವ ಮೂಲಕವೇ. ದುರ್ಬಲ ಕ್ಷಣವೊಂದರ ಹಠಮಾರಿತನ ಬಾಳಿಗೆ ಮುಳುವಾಗುವ ಹೆಣ್ಣಿನ ದುರಂತ ಕಥನ ಇಲ್ಲಿದೆ. ಕೊಂಚ ಪತ್ತೆದಾರಿಕೆ ಕುತೂಹಲವೂ ಇರುವ ಕಥೆಯಿದು. ಸಂಕಲನದ ಶೀರ್ಷಿಕೆ ಕಥೆಯಾದ `ಹೊನ್ನೆಲ್ಲಿಪ್ರಕೃತಿಯ ಅಗಾಧತೆ ಹಾಗೂ ಮನುಷ್ಯನ ಕುಬ್ಜತೆಗಳನ್ನು ಮನದಟ್ಟು ಮಾಡುವಂತಹದ್ದು.

ವೇಗವೇ ಮುಖ್ಯವಾದ ಸಂದರ್ಭದಲ್ಲಿ ಸತ್ಯನಾರಾಯಣ ಅವರ ಕಥೆಗಳು ಸಾವಧಾನದ ಓದನ್ನು ಬೇಡುತ್ತದೆ. ಇನ್ನಷ್ಟು ಅಡಕವಾಗಿ ಹಾಗೂ ಧ್ವನಿಪೂರ್ಣವಾಗಿ ಹೇಳುವುದು ಸಾಧ್ಯವಾಗಿದ್ದಲ್ಲಿ ಇಲ್ಲಿನ ಕಥೆಗಳ ಪರಿಣಾಮ ಮತ್ತಷ್ಟು ಹೆಚ್ಚುತ್ತಿತ್ತು.

ಶೀರ್ಷಿಕೆ:ಹೊನ್ನೆಲ್ಲಿ ಮತ್ತು ಇತರ ಕಥೆಗಳು ಲೇಖಕರು:ಎಚ್.ಎನ್.ಸತ್ಯನಾರಾಯಣ ರಾವ್ ಪ್ರಕಾಶಕರು:ಅನಂತ ಪ್ರಕಾಶನ ಪುಟಗಳು:230 ಬೆಲೆ: ರೂ.150/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: