ಹಿಂದು ಮುಸ್ಲಿಮರಿಬ್ಬರನ್ನೂ ಪ್ರೀತಿಯಿಂದ ಕಂಡ ತಪ್ಪಿಗೆ ಇಬ್ಬರಿಂದಲೂ ಮೋಸಕ್ಕೆ ಒಳಗಾದ ಅಮಾಯಕ ಟಿಪ್ಪು

tippu-1

ಟಿಪ್ಪು ಸುಲ್ತಾನ, ಗಿರೀಶ್ ಕಾರ್ನಾಡರ ಪ್ರಕಾರ ಟಿಪೂ, ಕನ್ನಡದ ಬುದ್ಧಿಜೀವಿಗಳನ್ನೂ ಕಾದಂಬರಿಕಾರರನ್ನೂ ಕಾಡುತ್ತಲೇ ಇರುವ ದೊರೆ. ಅವನನ್ನು ದ್ವೇಷಿಸುವವರೂ, ಟೀಕಿಸುವವರೂ ಕಾಲದ ಹಾದಿಯಲ್ಲಿ ಅಲ್ಲಲ್ಲಿ ಎದುರಾಗುತ್ತಾರೆ. ಟಿಪ್ಪು ಕನ್ನಡತನ, ಕನ್ನಡ ವಿರೋಧಿ ನಿಲುವು, ಸಾಧನೆ, ಬಾಧೆ, ಜನಹಿತ ಎಲ್ಲವೂ ಸಾಹಿತ್ಯದಲ್ಲಿ ವಿವಿಧ ರೂಪಗಳಲ್ಲಿ ಬಂದು ಹೋಗಿವೆ. ಶಿವಪ್ರಕಾಶ್ ಬರೆದ ನಾಟಕ, ಸೀತಾರಾಮಶಾಸ್ತ್ರಿಗಳ ಕಾದಂಬರಿ, ಕನ್ನಡದ ಅನೇಕ ಸಿನಿಮಾಗಳಲ್ಲಿ ಟಿಪ್ಪು ಕಾಣಿಸಿಕೊಳ್ಳುತ್ತಾನೆ.

ಟಿ. ಗುರುರಾಜ್ ಇದೀಗ `ಟಿಪ್ಪುವನ್ನಿಟ್ಟುಕೊಂಡು ಚಾರಿತ್ರಿಕ ಕಾದಂಬರಿ ಬರೆದಿದ್ದಾರೆ. ಅವರ ಪ್ರಕಾರ ಹಿಂದು ಮುಸ್ಲಿಮರಿಬ್ಬರನ್ನೂ ಪ್ರೀತಿಯಿಂದ ಕಂಡ ತಪ್ಪಿಗೆ ಇಬ್ಬರಿಂದಲೂ ಮೋಸಕ್ಕೆ ಒಳಗಾದ ಅಮಾಯಕ ಟಿಪ್ಪು. ಆತನ ಕುರಿತು ಇರುವ ಕತೆ, ದಂತಕತೆ, ವದಂತಿ ಮತ್ತು ಚಾರಿತ್ರಿಕ ವಿವರಗಳನ್ನೆಲ್ಲ ಇಟ್ಟುಕೊಂಡು ರಚಿಸಿರುವ ಕಾದಂಬರಿ ಇದು.

ಕನ್ನಡದಲ್ಲಿ ಅಧ್ಯಯನ ಶೀಲ ಕಾದಂಬರಿಗಳ ಕೊರತೆಯಿದೆ. ಪತ್ರಕರ್ತನೊಬ್ಬ ತನ್ನ ದೈನಿಕದ ನಡುವೆ ಅಧ್ಯಯನಕ್ಕೆ ವೇಳೆ ಮೀಸಲಿಡುವುದು ಕಷ್ಟ. ಪತಿಕೋದ್ಯಮದ ಅವಸರ ಮತ್ತು ಒತ್ತಡದ ನಡುವೆಯೇ ಹೊರಬಂದ ಕೃತಿಯಾದರೂ ಇದು ಯಾವುದೇ ರಿಯಾಯಿತಿ ಬೇಡುವುದಿಲ್ಲ.

`ಕಥೆಯನ್ನು ಜನಪ್ರಿಯ ಮಾದರಿಯಲ್ಲಿ ಬೇಸರ ತರಿಸದಂತೆ ಸ್ವಾರಸ್ಯವಾಗಿ ಹೇಳಿದ್ದಾರೆ. ಪಾತ್ರ ಚಿತ್ರಣದಲ್ಲಿ ಸ್ವಲ್ಪ ರೋಮ್ಯಾಂಟಿಸೈಸ್ ಮಾಡಿದ್ದರೂ ಟಿಪ್ಪೂ ಅನ್ನು ಒಳಿತು ಕೆಡುಕುಗಳನ್ನೊಳಗೊಂಡ ಮಾನವೀಯ ಪಾತ್ರವನ್ನಾಗಿಸಿದ್ದಾರೆಎಂದು ಎಚ್.ಎಸ್.ಶಿವಪ್ರಕಾಶ್ ಮೆಚ್ಚಿಕೊಂಡಿದ್ದಾರೆ.

ಶೀರ್ಷಿಕೆ: ಟಿಪ್ಪು ಲೇಖಕರು: ಟಿ. ಗುರುರಾಜ್ ಪ್ರಕಾಶಕರು: ಸಪ್ನ ಬುಕ್ ಹೌಸ್ ಪುಟಗಳು:340 ಬೆಲೆ: ರೂ.160/-

ಕೃಪೆ : ಕನ್ನಡ ಪ್ರಭ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: