ಅವನು ಸೋತಿಲ್ಲ, ನಾನು ಗೆದ್ದಿಲ್ಲ. ಅವನು ಗೆದ್ದಿಲ್ಲ, ನಾನು ಸೋತಿಲ್ಲ

hudukuva-aata-1

ಇದು ಕವಿಯ ಮೊದಲ ಕವನ ಸಂಕಲನ.

ಕಣ್ಣೀರನ್ನೇ ಕುಡಿದು / ಎಷ್ಟು ದಿನ ಬದುಕಲಿ? / ಈ ಅಧ್ಯಾಯ / ಇಲ್ಲಿಗೇ ಮುಗಿದು ಬಿಡಲಿ.

(ಪಿರಾಮಿಡ್)

ಎಂದು ಮನಮುಟ್ಟುವಂತೆ ಬರೆಯುವ ಹೇಮಾ ವೆಂಕಟ್ ರ ಕವಿತೆಗಳಲ್ಲಿ ಒಂದು ನೋವಿನ ಎಳೆ ಉದ್ದಕ್ಕೂ ಇರುವಂತೆ ಕಾಣುತ್ತದೆ. ಅದು ಅನೇಕ ಕವಿತೆಗಳಲ್ಲಿ ಸ್ಥಾಯಿಯಾಗಿದೆ. ಅವರ ಕವಿತೆಗಳ ಬಗ್ಗೆ ಬರೆದಿರುವ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ `ಹೇಮಾ ಅವರ ಕವಿತೆಗಳು ಸಂಚಾರಿ ಭಾವಗಳನ್ನು ನೆಚ್ಚಿಕೊಂಡ ಕವಿತೆಗಳು. ಯಾವುದೋ ಸಂಗತಿ, ನೋಟ, ಸಂಬಂಧದ ಒಂದು ಗಳಿಗೆ ಮನಸ್ಸಿನಲ್ಲಿ ಹುಟ್ಟಿಸುವ ಭಾವ ವಿಚಾರ ಅಥವಾ ಕವಿತೆಯಾಗಿಸುವತ್ತ ಹೇಮಾ ಅವರ ಒಲವಿದೆಎಂದಿದ್ದಾರೆ.

ಈ ಸಂಕಲನದ ಮುಖ್ಯ ಕವಿತೆಯಾದ `ಹುಡುಕುವ ಆಟವನ್ನೇ ನೋಡಬಹುದು.

ಮೂವತ್ತು ಬೇಸಿಗೆ ಬಿಸಿಲು / ಮಳೆಗಾಲದ ಜಡಿಮಳೆ / ಚಳಿಗಾಲದ ಥಂಡಿ / ಅವನಲ್ಲಿ ನಾನಿಲ್ಲಿ / ಸದಾ ಹುಡುಕಾಟದಲ್ಲಿ

ಎನ್ನುವ ಕವಿ ಇನ್ನೂ ಆಟ ಮುಗಿಸಿಲ್ಲ. ಕೊನೆಯಲ್ಲಿ ಹೇಳುತ್ತಾರೆ: ಅವನು ಸೋತಿಲ್ಲ / ನಾನು ಗೆದ್ದಿಲ್ಲ / ಅವನು ಗೆದ್ದಿಲ್ಲ / ನಾನು ಸೋತಿಲ್ಲ . ಅಂದರೆ ಹುಡುಕಾಟ ಮತ್ತು ಬದುಕಿನ ಆಟ ಎರಡು ಮುಂದುವರೆದಿರುವುದನ್ನು, ಬದುಕಿನ ನಿರಂತರ ಚಲನಶೀಲತೆಯನ್ನು ಈ ಕವಿತೆ ಧ್ವನಿಸುತ್ತದೆ.

ಬದುಕಿನ ಹುಡುಕಾಟವೇ ಮುಖ್ಯವಾಗಿರುವ ಅವರ ಕವಿತೆಗಳಲ್ಲಿ ಬದುಕಿನ ಕುರಿತ ಸಂಭ್ರಮ ಕಡಿಮೆ. ಅಂತರಂಗದ ವಿಷಾದದ ಕಡೆಗೆ ಚಲಿಸುವ ಪಯಣವಾಗಿದೆ ಇಲ್ಲಿನ ಕವಿತೆಗಳು.

ಶೀರ್ಷಿಕೆ: ಹುಡುಕುವ ಆಟ ಲೇಖಕರು: ಹೇಮಾ ವೆಂಕಟ್ ಪ್ರಕಾಶಕರು: ಗೋಧೂಳಿ ಪ್ರಕಾಶನ ಪುಟಗಳು:80ಬೆಲೆ: ರೂ.60/-

ಕೃಪೆ : ಪ್ರಜಾವಾಣಿ

Advertisements

2 Responses

  1. ಹುಡುಕುವ ಆಟ ಪುಸ್ತಕ ಸಿಗುವ ವಿಳಾಸ ತಿಳಿಸಿ. ಹೇಮಾ ವೆಂಕಟ್ ಈ ಸಾಲಿನ ಕಡೆಂಗೋಡ್ಲು ಪ್ರಶಸ್ತಿ ಪಡೆದ ಬಗ್ಗೆ ಓದಿದ ನೆನಪು. ಅವರ ಕವಿತೆಗಳು ನೋವನ್ನೇ ಸ್ಥಾಯಿಯಾಗುಳ್ಳ ಮತ್ತು ಬದುಕಿನ ವಿವಿಧ ಸಂಗತಿಗಳನ್ನೇ ಆವಿರಿಸಿರುತ್ತವೆ. ಕವಿಗೆ ಮೊದಲ ಪುಸ್ತಕದ ಅಭಿನಂದನೆ

    • ಮಾನ್ಯರೇ,
      ತಮ್ಮ ಮಾತುಗಳಿಗೆ ಧನ್ಯವಾದಗಳು. ತಾವು ಕೇಳಿದ ವಿಳಾಸ ಹೀಗಿವೆ: ಗೋಧೂಳಿ ಪ್ರಕಾಶನ, ನಂ.35, 5ನೇ `ಬಿ’ ಕ್ರಾಸ್, ಸಿಂಡಿಕೇಟ್ ಬ್ಯಾಂಕ್ ಬಡಾವಣೆ, ತುಂಗಾನಗರ, ಬೆಂಗಳೂರು – 560 091. ಹೀಗೆ ಪುಸ್ತಕಪ್ರೀತೆ ಬ್ಲೋಗ್ ನೋಡುತ್ತಿರಿ
      ವಿಶಾಲಮತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: