ವೈಯಕ್ತಿಕ ನೆಲೆಯಿಂದ ಅರ್ಥೈಬಹುದಾದ ಮಾತು ಸಮೂಹ ಪ್ರಶ್ನೆಯಾಗಿ ನಿಲ್ಲುತ್ತದೆ

mouna-kaala

ಕನಸು ಕಂಗಳಲ್ಲಿ / ತೀರ ಕಾಣುವವರೆಗೆ / ನೋಡುತ್ತಲೇ ಇದ್ದ / ಬದುಕಿಗೊಂದು / ಬಣ್ಣದ ಮಿಂಚು / ಗೋಚರಿಸಬೇಡವೇ?

(ಹುಡುಗಿಗಾಗಿ)

ಎಂದು ತಣ್ಣಗೆ ಪ್ರಶ್ನಿಸುತ್ತಲೇ ಕನಸು ಕಂಗಳ ಹುಡುಗಿಯರ ಸ್ಥಿತಿಯನ್ನು ಚಿತ್ರಿಸುವ ಎನ್.ಆರ್.ರೂಪಶ್ರೀ ತಮ್ಮ ಈ ಮೊದಲ ಕವನ ಸಂಗ್ರಹದಲ್ಲಿ ಇಂಥ ಹಲವಾರು ಚಿತ್ರಗಳನ್ನು ಕೊಡುತ್ತಾರೆ. ಇಂಥ ಚಿತ್ರಗಳನ್ನು ತಮ್ಮ ಕವಿತೆಗಲ್ಲಿ ಕೊಡುವಾಗಲೆಲ್ಲ ಅವರು ಒಂದು ಬಗೆಯ ನಿರ್ಲಿಪ್ತ ದೃಷ್ಟಿಯಿಂದ ಬದುಕನ್ನು, ಈ ಲೌಕಿಕವನ್ನು ನೋಡುತ್ತಾರೆ ಎಂಬುದು ಮುಖ್ಯವಾಗಿ ಕಾಣುತ್ತದೆ.

ಅವನು ಕೈ ಹಿಡಿದಾಗಲೆಲ್ಲ / `ಅವನನೆನಪು / ಅಲ್ಲಿ ಬೆಚ್ಚಗಿದ್ದಿದ್ದೆಲ್ಲ / ಇಲ್ಲಿ ತಣ್ಣಗೆ (ಹಸಿರ ಹೊದಿಕೆ) ಎಂದು ತೀವ್ರವಾಗಿ ಕವಿ ಬರೆಯಬಲ್ಲರು.

`ವೈಯಕ್ತಿಕ ನೆಲೆಯಿಂದ ಅರ್ಥೈಬಹುದಾದ ಇಲ್ಲಿಯ ಮಾತುಗಳು ಸಮೂಹ ಪ್ರಶ್ನೆಯಾಗಿ ನಿಲ್ಲುವುದು ವಿಶೇಷವಾಗಿದೆಎಂದು ಕವಿಯ ಕವನಗಳನ್ನು ವಿಶ್ಲೇಷಿಸಿ ಮುನ್ನುಡಿ ಬರೆದಿದ್ದಾರೆ ಕವಿ ವಿಷ್ಣುನಾಯ್ಕ.

`ಗೆರೆಗಳು‘ , `ಕಳೆದು ಹೋಗುತ್ತೇವೆ‘, `ಸಂಘರ್ಷ‘, `ಮೌನಕಾಲ‘, `ಕಾಲ‘, `ಎಚ್ಚರಿಕೆ‘, `ಮನ್ವಂತರದಂತಹ ಒಳ್ಳೆಯ ಕವಿತೆಗಳು ಗದ್ಯದ ಸಾಲುಗಳನ್ನು ಕತ್ತರಿಸಿಟ್ಟಂತೆ ಕಾಣುತ್ತವೆ. ಕವಿತೆಯ ಲಯವನ್ನು ಅರಿತು ಬರೆದರೆ ಇನ್ನೂ ಒಳ್ಳೆಯ ಕವಿತೆಗಳನ್ನು ಕೊಡಲು ಸಾಧ್ಯ.

ಶೀರ್ಷಿಕೆ:ಮೌನಕಾಲ ಲೇಖಕರು:ಎನ್.ಆರ್.ರೂಪಶ್ರೀ ಪ್ರಕಾಶಕರು:ಶ್ರೀ ಸದ್ಗುರು ಕಮಲಾನಂದ ಜ್ಞಾನ ಪ್ರಕಾಶನ ಪುಟಗಳು:102 ಬೆಲೆ:ರೂ.50/-

ಕೃಪೆ : ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: