ಶಾಂತಾರಾಮ್ ಹಾಜಿರ್ ಹೈ

kuruda-kurudi1

ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.

ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.

ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು:316 ಬೆಲೆ:ರೂ.200/-

ಕೃಪೆ : ಕನ್ನಡ ಪ್ರಭ