ಅಶೋಕ ವೃಕ್ಷ

saahithya-sambandha1

ಟಿ.ಪಿ.ಅಶೋಕ ಕಳೆದ 15 ವರ್ಷಗಳಲ್ಲಿ ಬರೆದ 37 ವಿಮರ್ಶಾತ್ಮಕ ಲೇಖನಗಳ ಸಂಕಲನ `ಸಾಹಿತ್ಯ ಸಂಬಂಧ‘. ಆಧುನಿಕ ಕನ್ನಡ ಸಾಹಿತ್ಯದ ಅನೇಕ ಮುಖ್ಯ ಲೇಖಕರು, ಕೃತಿಗಳು ಮತ್ತು ಅನುಭವಗಳ ಸುತ್ತ ಹೆಣೆದಿರುವ ಬರಹಗಳಿವು. ಕಂಬಾರರಿಂದ ಶಂಕರ ಮೊಕಾಶಿಯವರೆಗೆ, ಚಿನು ಅಚಿಬೆಯಿಂದ ಚದುರಂಗರವರೆಗೆ ಈ ಪುಸ್ತಕ ವಿಸ್ತರಿಸುತ್ತದೆ.

ಕವಿತೆ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಈ ವಿಭಾಗಗಳಲ್ಲಿ ಟಿ.ಪಿ.ಚಿಂತನೆಯ ಬೀಜ ಬಿತ್ತಿದ್ದಾರೆ. `ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಓದುಗರೊಡನೆ ಅವರು ನಡೆಸಿರುವ ನೇರ ಸಂವಾದಗಳಿಂದ ಚೋದಿತವಾಗಿರುವ ಇಲ್ಲಿನ ಬಹಳಷ್ಟು ಬರಹಗಳು ತೋಂಡಿ ಮತ್ತು ಲಿಖಿತ ಸಂವಹನಗಳ ಅಂತರವನ್ನು ಅಳಿಸಿಹಾಕುವ ಮಹತ್ವಾಕಾಂಕ್ಷೆಯನ್ನು ಪ್ರಕಟಪಡಿಸುತ್ತವೆಎನ್ನುತ್ತದೆ ಬೆನ್ನುಡಿ.

ಕೆ.ವಿ. ಅಕ್ಷರರ ಮುನ್ನುಡಿಯ ಕೆಲವು ಸಾಲುಗಳು. `ಆಗಾಗ ಮಾಧ್ಯಮದಲ್ಲಿ ಬರುವ ವಿಮರ್ಶೆಗಳು ಸಾಹಿತ್ಯದ ಉಲ್ಲೇಖ ಮಾಡುತ್ತವೆಯಾದರೂ, ಸರಳೀಕೃತ ಪರಿಚಯ ಮತ್ತು ಕೆಲವೊಮ್ಮೆ ತತ್ಕಾಲೀನ ರಾಜಕಾರಣದಲ್ಲಿ ಸಮರ್ಪಕವೆನ್ನಿಸುವ ಮೇಲುಮೇಲಿನ ಪ್ರತಿಕ್ರಿಯೆ – ಇದಕ್ಕಿಂತ ಹೆಚ್ಚು ಮಾಡಿದ್ದು ತೀರ ಅಪರೂಪ. ಈಚೀಚಿಗಂತೂ ನಮ್ಮ ಮಾಧ್ಯಮಗಳಲ್ಲಿ ಸಾಹಿತ್ಯಕ್ಕಿಂತ ಸಾಹಿತ್ಯದ ರಾಜಕಾರಣವನ್ನೇ ಮೇಲೆತ್ತಿ ರಂಜಿಸುವ ಪರಿ ಎದ್ದು ಕಾಣುತ್ತದೆ‘.

ಅಶೋಕರ ಹಲವು ಉತ್ತಮ ಬರಹಗಳಿರುವ ಪುಸ್ತಕವಿದು, ಅಕ್ಷರ ಖಜಾನೆ ಎಂದು ವಿಮರ್ಶಕರು ಖಂಡಿತಾ ಮೆಚ್ಚಬಹುದು. ಸಾಹಿತ್ಯದ ಹುಚ್ಚರಿದ್ದರೆ ಖಂಡಿತಾ ಪ್ರಿಯವಾಗುತ್ತದೆ.

ಶೀರ್ಷಿಕೆ: ಸಾಹಿತ್ಯ ಸಂಬಂಧ ಲೇಖಕರು: ಟಿ.ಪಿ.ಅಶೋಕ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟಗಳು:360 ಬೆಲೆ:ರೂ.215/-

ಕೃಪೆ : ಕನ್ನಡ ಪ್ರಭ