ಕವಿ ಯೇಟ್ಸ್ ಕನ್ನಡಕ್ಕೆ

scan0032-1

`ಮನುಷ್ಯ ಸಾವನ್ನು ಸೃಷ್ಟಿಸಿದಎಂದು ಬರೆದವ. `ಅದು ಮುದುಕರಿಗೆ ತಕ್ಕ ನಾಡಲ್ಲಎಂದು ಗುಡುಗಿದ್ದವ. ಹಾಗೆಲ್ಲಾ ಹುಚ್ಚು ಹಿಡಿಯುವಂತೆ ಬರೆದು, ಜಗತ್ತಿನ ಎಲ್ಲಾ ಸಾಹಿತ್ಯ ವಲಯವನ್ನೂ ಪ್ರಭಾವಿಸಿಹೋದ ಕವಿ ಡಬ್ಲ್ಯೂ. ಬಿ. ಯೇಟ್ಸ್, ಕವಿತೆ ಎಂಬ ಮೀಸೆ ತರುಣ ಕವಿಗಳ ಮುಖದ ಮೇಲೆ ಮೂಡಿದಾಗಲೆಲ್ಲಾ ಆ ಕವಿಯ ಕವಿತೆಗಳಿಗೆ ಮತ್ತೆ ತಾರುಣ್ಯ ಮೂಡುತ್ತಾ ಹೋಗಿದೆ.

ಕನ್ನಡದಲ್ಲಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಹಿಂದೆ `ಚಿನ್ನದ ಹಕ್ಕಿಹೆಸರಲ್ಲಿ ಯೇಟ್ಸ್ನ ಕವಿತೆಗಳನ್ನು ಅನುವಾದಿಸಿದ್ದರು. ಇದೀಗ ಮತ್ತೆ ಯೇಟ್ಸ್ನ ಕವಿತೆಗಳು ಕನ್ನಡದಲ್ಲಿ ಸಿಗಲು ಡಾ. ಯು. ಆರ್. ಅನಂತಮೂರ್ತಿ ಕಾರಣರಾಗಿದ್ದಾರೆ. ಅಭಿನವ ಪ್ರಕಟಿಸಿರುವ `ಶತಮಾನದ ಕವಿ ಯೇಟ್ಸ್ ಸಂಕಲನದ ಮೂಲಕ ಹೊಸಬರು ಆ ಮಹಾ ಕವಿಯನ್ನು ಅರಿಯಬಹುದು. ಆತನ ಅಭಿಮಾನಿಗಳು ಇನ್ನಷ್ಟು ತಿಳಿಯಬಹುದು.

ಇಲ್ಲಿ ಯೇಟ್ಸ್ ನ ಒಂದಿಷ್ಟು ಕವಿತೆಗಳ ಮೂಲರೂಪ ಮತ್ತು ಅನುವಾದಗಳಿವೆ. ಜೊತೆಗೆ ಎಲ್ಲಾ ಕವಿತೆಗಳ ಬಗ್ಗೆ ಒಂದು ಟಿಪ್ಪಣಿ ಇದೆ. ಅದರೊಂದಿಗೆ ಅನಂತಮೂರ್ತಿಗಳು ಹಿಂದೆ ಈ ಕವಿಯ ಬಗ್ಗೆ ಬರೆದಿದ್ದ ಎರಡು ಲೇಖನಗಳಿವೆ.

ಶೀರ್ಷಿಕೆ: ಶತಮಾನದ ಕವಿ ಯೇಟ್ಸ್ ಲೇಖಕರು: ಡಾ. ಯು. ಆರ್. ಅನಂತಮೂರ್ತಿ ಪ್ರಕಾಶಕರು: ಅಭಿನವ ಪುಟಗಳು: 124 ಬೆಲೆ:ರೂ.75/-

ಕೃಪೆ : ಕನ್ನಡ ಪ್ರಭ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: