ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ

scan00011

ಈ ಪುಸ್ತಕ ನಾರಾಯಣ ಮಧ್ಯಸ್ಥ ಅವರ ಅಧ್ಯಯನದ ಫಲವಾಗಿದೆ. ಅವರು ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಯಕ್ಷಗಾನ ಮೇಳದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಂದಿನ ಅಕಡಮಿಕ್ ಅಧ್ಯಯನದ ಕ್ರಮವನ್ನು ಅನುಸರಿಸಿರುವ ಮಧ್ಯಸ್ಥರು ಮೊದಲ ಮೂರು ಅಧ್ಯಾಯಗಳನ್ನು ಅಧ್ಯಯನದ ಉದ್ದೇಶ, ವ್ಯಾಪ್ತಿ, ಯಕ್ಷಗಾನದ ಹಿನ್ನೆಲೆಗೆ ಮೀಸಲಾಗಿರಿಸಿದ್ದಾರೆ.

ಉತ್ತರ ಕನ್ನಡ ತಿಟ್ಟಿನ ಪರಂಪರೆ ಪ್ರಸಂಗ, ಬಣ್ಣಗಾರಿಕೆ, ನೃತ್ಯಾಭಿನಯ, ಮುದ್ರೆಗಳ ಬಳಕೆ, ಹಿಮ್ಮೇಳಗಳ ವಿಶೇಷತೆಯಿಂದಾಗಿ ಪಡುವಲಪಾಯ ಯಕ್ಷಗಾನದಲ್ಲಿ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ – ಎಂದು ಗುರುತಿಸುತ್ತಾರೆ ಲೇಖಕರು. ಈ ಪರಂಪರೆಯ ಮೊದಲ ಮೇಳ ಕರ್ಕಿಯ ಹಾಸ್ಯಗಾರ ಮೇಳ. ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ. ಎರಡು ಶತಮಾನಕ್ಕೂ ಹೆಚ್ಚು ಕಾಲ ನಡೆದುಬಂದ ದಾಖಲೆ ಅದರದ್ದು. ನಡುವೆ ಈ ಮೇಳ ಬಡೋದೆಯ ಸಂಸ್ಥಾನದ ಮೆಚ್ಚುಗೆಗೂ ಪಾತ್ರವಾಗಿತ್ತಲ್ಲದೆ, ಹನ್ನೆರಡು ನೂರು ರೂಪಾಯಿಯ ವರುಷಾಸನವು ಅದಕ್ಕೆ ಸಿಗುತ್ತಿತ್ತು. ಒಂಬತ್ತು ತಲೆಮಾರುಗಳ ಕಾಲ ನಡೆಸಿಕೊಂಡು ಬಂದ ಅಪರೂಪದ ಮೇಳ ಇದು. ಅದು ಯಕ್ಷಗಾನದ ಇತಿಹಾಸದ ಸಂದರ್ಭದಲ್ಲಿ ವಿಶೇಷವಾದ ದಾಖಲೆ. ಆದರೆ ಈ ಮೇಳಕ್ಕೆ ಪ್ರಸಾದಿತ ಯಕ್ಷಗಾನ ಮಂಡಳಿ ಕರ್ಕಿ  ಎಂಬ ಹೆಸರು ಬಂದಿದ್ದು 1942ರಲ್ಲಿ. ಈ ನಡುವೆ ಕ್ರಿಯಾಶೀಲವಾಗಿಲ್ಲದ ಕಾಲವೂ ಇತ್ತು.

ಇಂಥ ಕುತೂಹಲಕಾರಿಯಾದ ಹಾಗೂ ಮೇಳಕ್ಕೆ ಸಂಬಂಧಿಸಿದ ಹಲವಾರು ವಿವರಗಳನ್ನು ಇಲ್ಲಿ ಕೊಟ್ಟಿದ್ದಾರೆ ನಾರಾಯಣ ಮಧ್ಯಸ್ಥ. ಇಲ್ಲಿ ವಿವರಗಳು ಮಾತ್ರ ಇರುವುದರಿಂದ ಮೇಳದ ಬಗ್ಗೆ ಒಂದು ಸ್ಥೂಲ ಚಿತ್ರವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಅದಕ್ಕೊಂದು ಸುಸಂಗತ ನಿರೂಪಣೆ ಇದ್ದರೆ ಬರವಣಿಗೆ ಕಳೆಕಟ್ಟುತ್ತಿತ್ತು. ಆದರೂ ಯಕ್ಷಗಾನದ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಆಕರವಾಗುವುದರಲ್ಲಿ ಸಂದೇಹವಿಲ್ಲ.

ಶೀರ್ಷಿಕೆ: ಕರ್ಕಿ ಹಾಸ್ಯಗಾರ ಮೇಳ ಸಂಪ್ರದಾಯ ಮತ್ತು ಪ್ರಯೋಗಶೀಲತೆ ಲೇಖಕರು: ಡಾ.ನಾರಾಯಣ ಮಧ್ಯಸ್ಥ ಪ್ರಕಾಶಕರು: ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು ಜಿಲ್ಲೆ  ಪುಟಗಳು:176 ಬೆಲೆ :ರೂ.150/-

ಕೃಪೆ: ಪ್ರಜಾವಾಣಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: