ಕನ್ನಡದಲ್ಲಿ ಕಾಳೀಪಟ್ನಂ ರಾಮಾರಾವ್

scan0003

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರುಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ, `ಅಭಿಮಾನಾಲು ಅವರ ಕಾದಂಬರಿಗಳು.

ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.

ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು ಕಥೆಗಳು ಮಾತ್ರ. ಕೊಳ್ಳುವವರಿಗೆ ಭಾರವಾಗುತ್ತದೆ ಎಂಬ ಕಾರಣಕ್ಕೆ ರಾಮಾರಾವ್ ಅವರ ತುಂಬಾ ಜನಕ್ಕೆ ಇಷ್ಟವಾಗಿರುವ ಕಥೆಗಳನ್ನು ಮಾತ್ರ ಸೇರಿಸಿ ಈ ಸಂಕಲನವನ್ನು ಪ್ರಕಟಿಸಿದ್ದಾರೆ.

ಅತ್ಯಂತ ಚಿಕ್ಕ ವಾಕ್ಯಗಳು, ದೀರ್ಘವಾದ ಕಥೆಗಳು, ಚಿಕ್ಕ ತಲೆ ಬರಹ (ಯಜ್ಞ, ಹಿಂಸೆ, ನೋ ರೂಮ್, ನೋವು … ಇತ್ಯಾದಿ( ರಾಮಾರಾವ್ ಅವರ ಕಥೆಗಳ ವಿಶೇಷ ಅಂಶಗಳು. ಅವರ ಸರಳ ನಿರೂಪಣೆಯ ಶೈಲಿಯನ್ನು ಕನ್ನಡ ನುಡಿಗಟ್ಟಿಗೆ ಅನುವಾದಿಸಿದ್ದಾರೆ ಚಿದಾನಂದ ಸಾಲಿ. ಅನುವಾದ ರಾಮರಾವು ಕಥಾಲೋಕವನ್ನು ಅರಿಯಲು ಸಹಾಯವಾಗುವಂತಿದೆ. ಭಿನ್ನವಾದ ಹಾಗೂ ದೀರ್ಘ ಎನಿಸುವ ಈ ಕಥೆಗಳು ಓದುತ್ತಾ ಓದುತ್ತಾ ಮರಳು ಮಾಡುವಷ್ಟು ಶಕ್ತಿಶಾಲಿಯಾಗಿವೆ.

ಶೀರ್ಷಿಕೆ:ಯಜ್ಞ (ಒಂಬತ್ತು ಕತೆಗಳು ) ಲೇಖಕರು:ಕಾಳೀಪಟ್ನಂ ರಾಮಾರಾವ್ ಕನ್ನಡಕ್ಕೆ:ಚಿದಾನಂದ ಸಾಲಿ ಪ್ರಕಾಶಕರು: ಸಾಹಿತ್ಯ ಅಕಾಡಮಿ ಪುಟಗಳು: 328 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ

 

 

2 Responses

 1. ಆಂಧ್ರದ ಕಥಾ ಸಾಹಿತ್ಯ

  ಜಗತ್ತಿನಲ್ಲಿ ಉತ್ತಮ ಕೃಷಿ ಮಾಡಿ

  ಹೆಸರಾದ ಕಾಳೀಪಟ್ನಂ ರಾಮಾರಾವ್

  ಅವರ ಕಥೆಗಳನ್ನು ಕನ್ನಡಕ್ಕೆ ತಂದ

  ಕಥೆಗಾರರಾದ ಚಿದಾನಂದ ಸಾಲಿ ಅವರ

  ಹಾಗೂ ಪುಸ್ತಕ ಪರಿಚಯಿಸಿದ

  ಪುಸ್ತಕ ಪ್ರೀತಿಯ

  ಕಾರ್ಯ ಶ್ಲಾಘನೀಯ….

  -ಗವಿಸಿದ್ಧ ಹೊಸಮನಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: