ಇಂದು ವಿಶ್ವ ರಂಗಭೂಮಿ ದಿನ

 
 
ಶೀರ್ಷಿಕೆ: ನಟನೆಯ ಪಾಠಗಳು ಲೇಖಕರು:ಪ್ರಸನ್ನ ಪ್ರಕಾಶಕರು:ಕನ್ನಡ ಪುಸ್ತಕ ಪ್ರಾಧಿಕಾರ ಪುಟ:368 ಬೆಲೆ:ರೂ.150/-

 

ಮರೆಯಲಾರದ ಮರೆಯಬಾರದ ಚೈತನ್ಯಕ್ಕೆ ನಮನ!

ಇಂದು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದ ದಿನ. ಅಲ್ಲ! ಭಗತ್ ಸಿಂಗ್ ಗಲ್ಲಿಗೇರಿದ ದಿನ. ಹೌದು. ಭಗತ್ ಸಿಂಗ್ ಮನಸ್ಸು ಮಾಡಿದ್ದರೆ ಬಹುಶಃ ಗಲ್ಲು ಶಿಕ್ಷೆಯಿಂದ ಪಾರಾಗಬಹುದಾಗಿತ್ತೋ ಏನೋ. (ಗೊತ್ತಿಲ್ಲ) ಆದರೂ ಭಗತ್ ಸಿಂಗ್ ತನ್ನ ಸಂಗಾತಿಗಳೊಡನೆ ಗಲ್ಲಿಗೇರಿದರು.

ಭಗತ್ ಸಿಂಗ್ ಸುಮ್ಮನೆ ಹುಚ್ಚು ದೇಶಪ್ರೇಮದಲ್ಲಿ ಗಲ್ಲಿಗೇರಿದವರಲ್ಲ. ಅವರ ಪ್ರತೀ ಹೆಜ್ಜೆಯೂ ಯೋಚಿಸಿ ಇಟ್ಟ ಹೆಜ್ಜೆ. ಆ ಹೆಜ್ಜೆಯ ಗುರಿ ಸ್ವರಾಜ್ಯ. ಗಲ್ಲಿಗೇರುವ ಮೂಲಕ ಇಡೀ ಸ್ವಾತಂತ್ರ ಸಂಗ್ರಾಮದ ಚಿತ್ರವನ್ನೇ ಬದಲಿಸಿದರು ಭಗತ್ ಸಿಂಗ್.

ಭಗತ್ ಸಿಂಗ್ ನ್ನು ಗಲ್ಲಿಗೇರಿಸದೇ ಇದ್ದಿದ್ದರೆ ! ಅಮ್ಮಾ ! ಮೈನವಿರೇಳಿಸುವ ಯೋಚನೆ! ಆದರೆ ಎಂದೆಂದಿಗೂ ವಾಸ್ತವಕ್ಕೆ ಬರಲಾಗದ ಯೋಚನೆ. ಆದರೆ ಭಗತ್ ಸಿಂಗ್ ಹುತಾತ್ಮರಾಗಿರದಿದ್ದರೆ ಅವರ ಮುಂದಿನ ಹೆಜ್ಜೆ ಏನಿರಬಹುದಾಗಿತ್ತು ಎಂಬುದು ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರವಾಗಿ ಈ ಪುಸ್ತಕ ಇದೆ.

ಭಗತ್ ಸಿಂಗ್ ಬರೆದ ಕೆಲವು ಲೇಖನಗಳ ಸಂಗ್ರಹ ಇದರಲ್ಲಿದೆ. ಅವರನ್ನು ಗಲ್ಲು ಶಿಕ್ಷೆಯ ಸಂಬಂಧದ ಸರ್ಕಾರಿ ಡಾಕ್ಯುಮೆಂಟ್ ಗಳೂ ಇದರಲ್ಲಿದೆ.

ಶೀರ್ಷಿಕೆ: Selected Writings of Shaheed Bhagat Singh ಸಂಪಾದಕರು: ಶಿವ್ ವರ್ಮಾ (Shiv Varma) ಪ್ರಕಾಶಕರು : ಸಮಾಜವಾದಿ ಸಾಹಿತ್ಯ ಸದನ (Samajawadi Sahitya Sadan) ಪುಟ:181 ಬೆಲೆ:

ಶತಮಾನದ ಸಂದರ್ಭದಲ್ಲಿ ವಿಮರ್ಶೆಗಳು

 ನೂರು ವರ್ಷದ ಹಿಂದೆ ಪ್ರಕಟವಾದ ಮಹಾತ್ಮ ಗಾಂಧಿಯವರ ಪುಸ್ತಕ `ಹಿಂದ್ ಸ್ವರಾಜ್. ಇದು ಕಳೆದ ಒಂದು ಶತಮಾನದಲ್ಲಿ ಬೀರಿದ ಪ್ರಭಾವ ಅಪಾರ. ಸಂಪಾದಕ ಹಾಗೂ ಓದುಗನ ನಡುವಿನ ಸಂವಾದದಂತಿರುವ ಈ ಪುಟ್ಟ ಪುಸ್ತಕ ಗಾಂಧೀಜಿಯವರ ಪ್ರಾತಿನಿಧಿಕ ಚಿಂತನೆಯಂತಿದೆ. ಈ ಪುಸ್ತಕ ಕುರಿತು ಮಾಡಲಾದ ಇತ್ತೀಚಿನ ವಿಮರ್ಶೆಗಳನ್ನು ಸಂಪಾದಿಸಿದ್ದಾರೆ ಮುಜಾಫರ‍್ ಅಸ್ಸಾದಿ.

`ಹಿಂದ್ ಸ್ವರಾಜ್ ಕುರಿತಂತೆ ಬರುತ್ತಿರುವ ವಿಮರ್ಶೆಗಳಾಗಲೀ, ಲೇಖನಗಳಾಗಲೀ ಅದರ ಪ್ರಸ್ತುತತೆಯನ್ನು ತೋರುತ್ತದೆ. ನಮ್ಮ ಕನ್ನಡದ ಚಿಂತಕರಾದ ಜೆ.ಎಸ್. ಸದಾನಂದ, ಕೆ. ರಾಘವೇಂದ್ರರಾವ್, ಎಚ್.ಪಟ್ಟಾಭಿರಾಮ ಸೋಮಯಾಜಿ, ರಾಜರಾಮ ತೋಳ್ಪಾಡಿ `ಹಿಂದ್ ಸ್ವರಾಜ್ ಕುರಿತಂತೆ ಬರೆದಿದ್ದಾರೆ. ಗಾಂಧೀಜಿಯವರ ವಿಚಾರಗಳನ್ನು ಇಂದಿನ ಸಂದರ್ಭದಲ್ಲಿಟ್ಟು, ಅವು ವರ್ತಮಾನಕ್ಕೆ ಹೊಂದುತ್ತದೆಯೇ ಎಂಬುದನ್ನು ಇಲ್ಲಿನ ಅನೇಕ ಲೇಖನಗಳು ಚಿಂತಿಸಿವೆ. ಏಕೆಂದರೆ ಗಾಂಧೀಜಿ ನೂರು ವರ್ಷದ ಹಿಂದೆ ವಸಾಹತುಶಾಹಿಗೆ ವಿರುದ್ಧವಾಗಿ ಅದನ್ನು ಬರೆದಿದ್ದರು. ಇದೇನೇ ಇದ್ದರೂ ಗಾಂಧಿಯವರ ವಿಚಾರಗಳನ್ನು ಇಂದಿನ ಸಂದರ್ಭಕ್ಕೆ ಮರುಪರಿಶೀಲಿಸಿದ್ದು `ಹಿಂದ್ ಸ್ವರಾಜ್ನ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯುತ್ತದೆ.

ಶೀರ್ಷಿಕೆ: ಗಾಂಧಿಯ ಹಿಂದ್ ಸ್ವರಾಜ್ (ಶತಮಾನದ ಸಂದರ್ಭದಲ್ಲಿ ವಿಮರ್ಶೆಗಳು) ಸಂಪಾದನೆ:ಮುಜಾಫರ‍್ ಅಸ್ಸಾದಿ ಪ್ರಕಾಶಕರು: ವಿಸ್ಮಯ ಪ್ರಕಾಶನ ಪುಟ:128 ಬೆಲೆ:ರೂ.100/-
 

 

ಕೃಪೆ : ಪ್ರಜಾವಾಣಿ

 

ನೇರ ಹಾಗೂ ರೋಚಕವಾದ ಸಾಮಾಜಿಕ ಸಮಸ್ಯೆಗಳ ವಸ್ತು ಹೊಂದಿರುವ ಕತೆಗಳು

 ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಶಿವರಾಜ ಪಾಟೀಲರು ಬರೆದ 19 ಕತೆಗಳು ಇಲ್ಲಿವೆ. ತಮಿಳಿನ ಜಯಕಾಂತನ್ ಅವರ ಕಥೆಗಳಿಂದ ಪ್ರಭಾವಿತನಾಗಿ ಈ ಕಥೆಗಳನ್ನು ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ.

 ಸಾಮಾಜಿಕ ಸಮಸ್ಯೆಗಳನ್ನು ವಸ್ತುಗಳನ್ನಾಗಿ ಇಟ್ಟುಕೊಂಡು ಇಲ್ಲಿನ ಕಥೆಗಳನ್ನು ಬರೆಯಲಾಗಿದೆ. ಹೆಚ್ಚಾಗಿ ಪರಿಚಿತ ವಸ್ತು, ಶೈಲಿ, ನಿರೂಪಣೆಯಲ್ಲಿ ಶಿವರಾಜರ ಕಥೆಗಳು ಸಾಗುತ್ತವೆ. ಅವರು ಹೇಳುವ ಕಥೆಗಳು ನೇರ ಹಾಗೂ ರೋಚಕವಾಗಿವೆ. ಅವು ಎಲ್ಲೂ ಓದುಗರ ಕಲ್ಪನೆಯನ್ನು, ನಿರೀಕ್ಷೆಯನ್ನು ಭಂಗಗೊಳಿಸುವುದಿಲ್ಲ. ಈ ಎಲ್ಲ ಅಂಶಗಳಿಂದಾಗಿ ಈ ಕತೆಗಳು ಒಂದೇ ಬಾರಿಗೆ ಯಾವುದೇ ಉದ್ದೇಶವಿಲ್ಲದೆ “ಸುಮ್ಮನೆ” ಓದುವವರಿಗೆ ಇಷ್ಟವಾಗುವ ಸಾಧ್ಯತೆಗಳಿವೆ.

 ಶೀರ್ಷಿಕೆ : ಶಿವರಾಜ ಪಾಟೀಲರ ಸಣ್ಣ ಕತೆಗಳು ಲೇಖಕರು : ಶಿವರಾಜ ಪಾಟೀಲ ಪ್ರಕಾಶಕರು: ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಪುಟ:144 ಬೆಲೆ :ರೂ.85/-

ಕೃಪೆ: ಪ್ರಜಾವಾಣಿ

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,

ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.

ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.

ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ‍್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.

– ಯು. ಆರ‍್. ಅನಂತಮೂರ್ತಿ

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಸ್ತ್ರೀಮತವನುತ್ತರಿಸಲಾಗದೆ? ಲೇಖಕರು: ಎಂ.ಎಸ್. ಆಶಾದೇವಿ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟ:144 ಬೆಲೆ: ರೂ.90/-

ಪವಿತ್ರ ಗೋವಿನ ಪ್ರಶ್ನೆ

ಗೋವಿನ ಪವಿತ್ರತೆಯ ಪ್ರಶ್ನೆ ಇಂದು ದಲಿತರನ್ನೂ ದಾರಿ ತಪ್ಪಿಸುತ್ತದೆ.ಕೆಳವರ್ಗಗಳು ತಮ್ಮ ಆಹಾರವ್ಯವಸ್ಥೆಯನ್ನು ಬಿಟ್ಟು ಕೊಡುತ್ತಿದ್ದಾರೆ. ಅವರ ಹಸಿವಿನ ಪ್ರಮಾಣ ಹೆಚ್ಚುತ್ತಿದೆ. ಶಿಕ್ಷಣ, ಬಡತನ, ಆಹಾರ ಎಲ್ಲದರಲ್ಲೂ ತಮ್ಮ ನಿಜವಾದ ಬಂದುಗಳಾಗಿರುವ ಅಲ್ಪ ಸಂಖ್ಯಾತರನ್ನು ದ್ವೇಷಿಸತೊಡಗಿದ್ದಾರೆ. ಪುರೋಹಿತಶಾಹಿ ರಾಜಕಾರಣದ ಅರಿವಿಲ್ಲದೇ ಮುಗ್ಧವಾಗಿ ಬಲಿಪಶುಗಳಾಗುತ್ತಿದ್ದಾರೆ.
ಅಂಬೇಡ್ಕರ‍್ ಮೂರ್ತಿಗೆ ಅಪಮಾನವಾದರೆ ದಲಿತ ಸಮುದಾಯ, ಕನಕದಾಸನಿಗ ಅಪಮಾನಿಸಿದರೆ ಕುರುಬ ಸಮುದಾಯ, ಮಹ್ಮದ್ ಹೆಸರಿಗೆ ಧಕ್ಕೆಯಾದರೆ ಮುಸ್ಲಿಂ ಸಮುದಾಯ ರೌದ್ರಾವತಾರ ತಾಳುತ್ತಾರೆ. ಹೀಗೆ ಇನ್ನೂ ಹಲವಾರು ತಳಸಮುದಾಯಗಳು ತಾವು ಗುರುತಿಸಿಕೊಂಡಿರುವ `ಪವಿತ್ರ ವಸ್ತುವಿಷಯ ವ್ಯಕ್ತಿಗಳಿಗೆ ಅಪಮಾನಗಳು ನಡೆದರೆ ಪುಟಿದೇಳುತ್ತವೆ. ಅದು ಅನಿವಾರ್ಯ ಕೂಡ.

ಆದರೆ ತಮ್ಮ ಆಹಾರ ವ್ಯವಸ್ಥೆ ಅದರ ಗುಂಟ ಬೆಳೆದು ಬಂದಿರುವ ಸಾಂಸ್ಕೃತಿಕ ಅನನ್ಯತೆಗಳ ಮೇಲೆ ತಾವೇ ಆರಿಸಿ ಕಳಿಸಿದ ಸರಕಾರದಿಂದ ನೇರವಾದ ಆಕ್ರಮಣ ನಡೆದೂ ಅದರ ವಿರುದ್ಧ ದೊಡ್ಡ ಪ್ರಮಾಣದ ಹೋರಾಟವನ್ನು ಹುಟ್ಟು ಹಾಕದಿರುವುದು ಆಶ್ಚರ್ಯದ ಸಂಗತಿ. ಪ್ರಕ್ಷ ರಾಜಕಾರಣದ ಅಧಿಕಾರಿಗಳಿಗೆ ಈ ಸಮುದಾಯಗಳ ನಾಯಕರುಗಳು ಕೂಡ ತಮ್ಮನ್ನು ಮಾರಿಕೊಂಡಿರುವುದೂ ಕೂಡ ಇದಕ್ಕೆ ಕಾರಣ. `ಅಹಿಂದ ಸಂಘಟನೆ ಅಹಿಂದ ವರ್ಗದ ಮೇಲಾಗುತ್ತಿರುವ ಈ ಸಾಂಸ್ಕೃತಿಕ ಹಲ್ಲೆಯನ್ನು ವಿರೋಧಿಸಿ ಹೋರಾಟ ಹುಟ್ಟುಹಾಕದೇ ಇರುವುದು ಅದರ ಹಿಂದಿನ ರಾಜಕೀಯ ಅವಕಾಶವಾದಿತನವು ಕಾರಣವಾಗಿದೆ. ಈಗಲಾದರೂ ಈ ವರ್ಗಗಳು ಎಚ್ಚರಗೊಳ್ಳದಿದ್ದರೆ ಅವರ ಆಹಾರ ಮಾತ್ರವಲ್ಲ, ಅವರ ಬದುಕನ್ನು ಕಿತ್ತುಕೊಳ್ಳುವ ದಿನಗಳು ದೂರವಿಲ್ಲ

– ಎಂ. ಡಿ. ಒಕ್ಕುಂದ

-ಪುಸ್ತಕದ ಮುನ್ನುಡಿಯಿಂದ

ಶೀರ್ಷಿಕೆ: ಗೋಹತ್ಯೆ ನಿಷೇಧದ ಸುತ್ತಲಿನ ರಾಜಕೀಯ ಲೇಖಕರು: ಪ್ರೊ. ಬಿ. ಗಂಗಾಧರಮೂರ್ತಿ ಪ್ರಕಾಶನ:ಲಡಾಯಿ ಪ್ರಕಾಶನ ಪುಟ:60 ಬೆಲೆ: ರೂ.30/-

ಸ್ತ್ರೀವಾದಿ ಚಿಂತನೆಗೆ ಲಡಾಯಿಯ ಕೊಡುಗೆ

ಶೀರ್ಷಿಕೆ: ನಮಗೆ ಗೋಡೆಗಳಿಲ್ಲ ಲೇಖಕರು:ಮೂಲ ತೆಲುಗು `ಫೆಮಿನಿಸ್ಟ್ ಸ್ಟಡಿ ಸರ್ಕಲ್’ ಕನ್ನಡಕ್ಕೆ ಅನುವಾದ:ಬಿ ಸುಜ್ಞಾನ ಮೂರ್ತಿ ಪ್ರಕಾಶನ : ಲಡಾಯಿ ಪ್ರಕಾಶನ ಪುಟ: ಬೆಲೆ: ರೂ.

ಮಹಿಳಾ ದಿನಾಚರಣೆಯ ಶತಮಾನೋತ್ಸವದ ಶುಭಾಶಯಗಳು

ಶೀರ್ಷಿಕೆ : ಮಹಿಳಾ ಚಳುವಳಿಯ ಮಜಲುಗಳು ಲೇಖಕರು: ಎನ್. ಗಾಯತ್ರಿ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟ: ಬೆಲೆ:ರೂ.35/-