ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಶಿವರಾಜ ಪಾಟೀಲರು ಬರೆದ 19 ಕತೆಗಳು ಇಲ್ಲಿವೆ. ತಮಿಳಿನ ಜಯಕಾಂತನ್ ಅವರ ಕಥೆಗಳಿಂದ ಪ್ರಭಾವಿತನಾಗಿ ಈ ಕಥೆಗಳನ್ನು ಬರೆದಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ.
ಸಾಮಾಜಿಕ ಸಮಸ್ಯೆಗಳನ್ನು ವಸ್ತುಗಳನ್ನಾಗಿ ಇಟ್ಟುಕೊಂಡು ಇಲ್ಲಿನ ಕಥೆಗಳನ್ನು ಬರೆಯಲಾಗಿದೆ. ಹೆಚ್ಚಾಗಿ ಪರಿಚಿತ ವಸ್ತು, ಶೈಲಿ, ನಿರೂಪಣೆಯಲ್ಲಿ ಶಿವರಾಜರ ಕಥೆಗಳು ಸಾಗುತ್ತವೆ. ಅವರು ಹೇಳುವ ಕಥೆಗಳು ನೇರ ಹಾಗೂ ರೋಚಕವಾಗಿವೆ. ಅವು ಎಲ್ಲೂ ಓದುಗರ ಕಲ್ಪನೆಯನ್ನು, ನಿರೀಕ್ಷೆಯನ್ನು ಭಂಗಗೊಳಿಸುವುದಿಲ್ಲ. ಈ ಎಲ್ಲ ಅಂಶಗಳಿಂದಾಗಿ ಈ ಕತೆಗಳು ಒಂದೇ ಬಾರಿಗೆ ಯಾವುದೇ ಉದ್ದೇಶವಿಲ್ಲದೆ “ಸುಮ್ಮನೆ” ಓದುವವರಿಗೆ ಇಷ್ಟವಾಗುವ ಸಾಧ್ಯತೆಗಳಿವೆ.
ಶೀರ್ಷಿಕೆ : ಶಿವರಾಜ ಪಾಟೀಲರ ಸಣ್ಣ ಕತೆಗಳು ಲೇಖಕರು : ಶಿವರಾಜ ಪಾಟೀಲ ಪ್ರಕಾಶಕರು: ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಪುಟ:144 ಬೆಲೆ :ರೂ.85/-
ಕೃಪೆ: ಪ್ರಜಾವಾಣಿ
Filed under: Uncategorized | Tagged: ಶಿವರಾಜ ಪಾಟೀಲ, ಶಿವರಾಜ ಪಾಟೀಲರ ಸಣ್ಣ ಕತೆಗಳು, ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ |
ನಿಮ್ಮದೊಂದು ಉತ್ತರ