
`ಹಿಂದ್ ಸ್ವರಾಜ್‘ ಕುರಿತಂತೆ ಬರುತ್ತಿರುವ ವಿಮರ್ಶೆಗಳಾಗಲೀ, ಲೇಖನಗಳಾಗಲೀ ಅದರ ಪ್ರಸ್ತುತತೆಯನ್ನು ತೋರುತ್ತದೆ. ನಮ್ಮ ಕನ್ನಡದ ಚಿಂತಕರಾದ ಜೆ.ಎಸ್. ಸದಾನಂದ, ಕೆ. ರಾಘವೇಂದ್ರರಾವ್, ಎಚ್.ಪಟ್ಟಾಭಿರಾಮ ಸೋಮಯಾಜಿ, ರಾಜರಾಮ ತೋಳ್ಪಾಡಿ `ಹಿಂದ್ ಸ್ವರಾಜ್‘ ಕುರಿತಂತೆ ಬರೆದಿದ್ದಾರೆ. ಗಾಂಧೀಜಿಯವರ ವಿಚಾರಗಳನ್ನು ಇಂದಿನ ಸಂದರ್ಭದಲ್ಲಿಟ್ಟು, ಅವು ವರ್ತಮಾನಕ್ಕೆ ಹೊಂದುತ್ತದೆಯೇ ಎಂಬುದನ್ನು ಇಲ್ಲಿನ ಅನೇಕ ಲೇಖನಗಳು ಚಿಂತಿಸಿವೆ. ಏಕೆಂದರೆ ಗಾಂಧೀಜಿ ನೂರು ವರ್ಷದ ಹಿಂದೆ ವಸಾಹತುಶಾಹಿಗೆ ವಿರುದ್ಧವಾಗಿ ಅದನ್ನು ಬರೆದಿದ್ದರು. ಇದೇನೇ ಇದ್ದರೂ ಗಾಂಧಿಯವರ ವಿಚಾರಗಳನ್ನು ಇಂದಿನ ಸಂದರ್ಭಕ್ಕೆ ಮರುಪರಿಶೀಲಿಸಿದ್ದು `ಹಿಂದ್ ಸ್ವರಾಜ್‘ನ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯುತ್ತದೆ.
ಶೀರ್ಷಿಕೆ: ಗಾಂಧಿಯ ಹಿಂದ್ ಸ್ವರಾಜ್ (ಶತಮಾನದ ಸಂದರ್ಭದಲ್ಲಿ ವಿಮರ್ಶೆಗಳು) ಸಂಪಾದನೆ:ಮುಜಾಫರ‍್ ಅಸ್ಸಾದಿ ಪ್ರಕಾಶಕರು: ವಿಸ್ಮಯ ಪ್ರಕಾಶನ ಪುಟ:128 ಬೆಲೆ:ರೂ.100/-
ಕೃಪೆ : ಪ್ರಜಾವಾಣಿ
Filed under: ವೈಚಾರಿಕ ಸಾಹಿತ್ಯ | Tagged: ಗಾಂಧಿಯ ಹಿಂದ್ ಸ್ವರಾಜ್, ಮುಜಾಫರ‍್ ಅಸ್ಸಾದಿ, ವಿಸ್ಮಯ ಪ್ರಕಾಶನ |
ನಿಮ್ಮದೊಂದು ಉತ್ತರ