ಇಂದು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದ ದಿನ. ಅಲ್ಲ! ಭಗತ್ ಸಿಂಗ್ ಗಲ್ಲಿಗೇರಿದ ದಿನ. ಹೌದು. ಭಗತ್ ಸಿಂಗ್ ಮನಸ್ಸು ಮಾಡಿದ್ದರೆ ಬಹುಶಃ ಗಲ್ಲು ಶಿಕ್ಷೆಯಿಂದ ಪಾರಾಗಬಹುದಾಗಿತ್ತೋ ಏನೋ. (ಗೊತ್ತಿಲ್ಲ) ಆದರೂ ಭಗತ್ ಸಿಂಗ್ ತನ್ನ ಸಂಗಾತಿಗಳೊಡನೆ ಗಲ್ಲಿಗೇರಿದರು.
ಭಗತ್ ಸಿಂಗ್ ಸುಮ್ಮನೆ ಹುಚ್ಚು ದೇಶಪ್ರೇಮದಲ್ಲಿ ಗಲ್ಲಿಗೇರಿದವರಲ್ಲ. ಅವರ ಪ್ರತೀ ಹೆಜ್ಜೆಯೂ ಯೋಚಿಸಿ ಇಟ್ಟ ಹೆಜ್ಜೆ. ಆ ಹೆಜ್ಜೆಯ ಗುರಿ ಸ್ವರಾಜ್ಯ. ಗಲ್ಲಿಗೇರುವ ಮೂಲಕ ಇಡೀ ಸ್ವಾತಂತ್ರ ಸಂಗ್ರಾಮದ ಚಿತ್ರವನ್ನೇ ಬದಲಿಸಿದರು ಭಗತ್ ಸಿಂಗ್.
ಭಗತ್ ಸಿಂಗ್ ನ್ನು ಗಲ್ಲಿಗೇರಿಸದೇ ಇದ್ದಿದ್ದರೆ ! ಅಮ್ಮಾ ! ಮೈನವಿರೇಳಿಸುವ ಯೋಚನೆ! ಆದರೆ ಎಂದೆಂದಿಗೂ ವಾಸ್ತವಕ್ಕೆ ಬರಲಾಗದ ಯೋಚನೆ. ಆದರೆ ಭಗತ್ ಸಿಂಗ್ ಹುತಾತ್ಮರಾಗಿರದಿದ್ದರೆ ಅವರ ಮುಂದಿನ ಹೆಜ್ಜೆ ಏನಿರಬಹುದಾಗಿತ್ತು ಎಂಬುದು ಎಲ್ಲರ ಪ್ರಶ್ನೆ. ಅದಕ್ಕೆ ಉತ್ತರವಾಗಿ ಈ ಪುಸ್ತಕ ಇದೆ.
ಭಗತ್ ಸಿಂಗ್ ಬರೆದ ಕೆಲವು ಲೇಖನಗಳ ಸಂಗ್ರಹ ಇದರಲ್ಲಿದೆ. ಅವರನ್ನು ಗಲ್ಲು ಶಿಕ್ಷೆಯ ಸಂಬಂಧದ ಸರ್ಕಾರಿ ಡಾಕ್ಯುಮೆಂಟ್ ಗಳೂ ಇದರಲ್ಲಿದೆ.
ಶೀರ್ಷಿಕೆ: Selected Writings of Shaheed Bhagat Singh ಸಂಪಾದಕರು: ಶಿವ್ ವರ್ಮಾ (Shiv Varma) ಪ್ರಕಾಶಕರು : ಸಮಾಜವಾದಿ ಸಾಹಿತ್ಯ ಸದನ (Samajawadi Sahitya Sadan) ಪುಟ:181 ಬೆಲೆ:
Filed under: ವೈಚಾರಿಕ ಸಾಹಿತ್ಯ | Tagged: ಶಿವ್ ವರ್ಮಾ (Shiv Varma), ಸಮಾಜವಾದಿ ಸಾಹಿತ್ಯ ಸದನ (Samajawadi Sahitya Sadan), Selected Writings of Shaheed Bhagat Singh |
ನಿಮ್ಮದೊಂದು ಉತ್ತರ