ಗ್ರಾಮೀಣ ಬದುಕಿನ ಆಳ-ವಿಸ್ತಾರ ಹೊಂದಿರುವ ಕತೆಗಳು

ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ ಕತೆಗಳಲ್ಲಿ ಬಡವರು, ಸಣ್ಣ ಪುಟ್ಟ ಕಾರುಬಾರಿನವರು, ಕೆಲಸ ಇಲ್ಲದವರು ಹೀಗೆ ಸಮಾಜದ ಸಾಮಾನ್ಯ ಸ್ತರದವರು ಉಸಿರಾಡುತ್ತಾರೆ. ಸಮಾಜದಲ್ಲಿ ನೆಲೆ ನಿಲ್ಲಲು ಹರಸಾಹಸ ಪಡುತ್ತಾರೆ, ಬದುಕಿಗಾಗಿ ಹೋರಾಡುತ್ತಾರೆ, ಏನೂ ಇಲ್ಲದೆಯೂ ಎಲ್ಲವನ್ನು ಒಳಗೊಂಡವರಂತೆ ಸುಖಿಸುತ್ತಾರೆ. ತಮ್ಮದೇ ಪ್ರಪಂಚವನ್ನು ಕಟ್ಟಿಕೊಳ್ಳುತ್ತಾರೆ. ಇದು ಸಾಧ್ಯವಾಗುವುದು ಹರಗಿಯವರಿಗೆ, ಆ ಎಲ್ಲಾ  ಜನರ ಬಗೆಗಿರುವ ಪ್ರೀತಿ, ಅಭಿಮಾನ, ಸಹಾನುಭೂತಿಗಳಿಂದ. ಉತ್ತರ ಕರ್ನಾಟಕ ಭಾಷೆ ಇಲ್ಲಿಯ ಬಾಹ್ಯ ಸ್ತೋತ್ರವಾದರೆ, ಒಳಹರಿವು ಅನುಕಂಪ, ಇವೆರಡನ್ನೂ ಸಮರಸಗೊಳಿಸುತ್ತದೆ. ಲೇಖಕರದ್ದೇ ಆದ ಶೈಲಿ ಇವು ಮುಪ್ಪುರಿಗೊಂಡಾಗ ಕಥಾ ವಿಸ್ತರಣೆ ಪ್ರಿಯವಾಗುತ್ತದೆ. ಇದರಲ್ಲಿ ಎಲ್ಲಾ ಕತೆಗಳ ಪಾತ್ರಗಳು – ಸ್ವತಂತ್ರವಾಗಿ ಇರಬಹುದು, ಪ್ರತಿ ಪಾತ್ರಗಳಿಂದಾದರೂ ಆಗಬಹುದು – ಸಜೀವವಾಗಿ ಓದುಗರ ಮನೋಮಂದಿರದಲ್ಲಿ ನೆಲೆ ನಿಲ್ಲುತ್ತವೆ, ನೆನಪಾದಾಗಲೆಲ್ಲಾ ನಮ್ಮನ್ನು ಕಾಡುತ್ತವೆ, ಪರಿಹಾರಕ್ಕಾಗಿ ಬೇಡುತ್ತವೆ, ಓದುಗನ ಅನುಕಂಪದ ನಿಟ್ಟುಸಿರ ಬಿಸಿಗೆ ಬಾಡುತ್ತದೆ.
-ಪ್ರೊ. ಸಿ. ಉಪೇಂದ್ರ ಸೋಮಯಾಜಿ (ಬೆನ್ನುಡಿಯಿಂದ)

ಶೀರ್ಷಿಕೆ: ದೇವ್ರು ಬರ್ತಾನೆ ದೇವ್ರು  ಲೇಖಕರು:ವೈ.ಎಸ್.ಹರಗಿ ಪ್ರಕಾಶಕರು:ಶ್ರೀನಿವಾದ ಪುಸ್ತಕ ಪ್ರಕಾಶನ  ಪುಟ:118 ಬೆಲೆ:ರೂ.60/- ಪ್ರಕಟಣೆ: 2010

ವಸ್ತು ನಿಷ್ಟ ನಿಲುವಿನ ಬರವಣಿಗೆ

ಶೀರ್ಷಿಕೆ: ಹಳ್ಳ ಬಂತು ಹಳ್ಳ       ಲೇಖಕರು:ಶ್ರೀನಿವಾಸ ವೈದ್ಯ     ಪ್ರಕಾಶಕರು:ಮನೋಹರ ಗ್ರಂಥಮಾಲಾ ಪುಟಗಳು:281  ಬೆಲೆ:ರೂ.200/-

ಕೃಪೆ: ದೇಶ ಕಾಲ ವಿಶೇಷ

ಮೈಸೂರು ದಸರ! ಎಷ್ಟೊಂದು ಸುಂದರ!!!

ಈ ಪುಸ್ತಕದಲ್ಲಿ ವಿಜಯನಗರದಿಂದ ಮೈಸೂರಿನ ಒಡೆಯರು ದಸರಾವನ್ನು ಹೇಗೆ ಮುಂದುವರಿಸಿಕೊಂಡು ಬಂದರು. ರಾಜ್ಯದ ಇತರೆಡೆಗಳಲ್ಲಿ ಎಲ್ಲೆಲ್ಲಿ ದಸರಾ ಆಚರಣೆಯಿದೆ. ಮೈಸೂರಿನ ಸುತ್ತಮುತ್ತಲಿನ ಪ್ರಸಿದ್ಧ ಪ್ರದೇಶಗಳಾವುವು, ಮೈಸೂರು ಒಡೆಯರ ಸಾಧನೆ, ಆಳ್ವಿಕೆ, ಮೈಸೂರು ಅರಮನೆ, ಚಿನ್ನದ ಸಿಂಹಾಸನ, ಜಂಬೂಸವಾರಿ ಹೀಗೆ ಹಲವಾರು ಮಾಹಿತಿಗಳನ್ನೊಳಗೊಂಡಿದೆ. ಇದು ಈ ಪುಸ್ತಕದ ಸ್ವರೂಪ.

ಶೀರ್ಷಿಕೆ: ಮೈಸೂರು ದಸರಾ ಸಂಪಾದಕರು: ಗೌರಿ ಸುಂದರ‍್ ಪ್ರಕಾಶಕರು: ಸುಂದರ ಪ್ರಕಾಶನ ಪುಟ:313 ಬೆಲೆ:ರೂ.395/-

ಗಾಂಧೀಜಿ ಉದಾರೀಕರಣವನ್ನು ಸ್ವಾಗತಿಸುತ್ತಿದ್ದರೇ?

ಗಾಂಧೀಜಿಯ ಮಹಾನತೆಯ ಬಗ್ಗೆ ಇಂತಹ ತದ್ವಿರುದ್ಧವಾದ ನಿಲುವುಗಳು ಹೊಸದೇನಲ್ಲ. ಏಕೆ ಗಾಂಧೀಜಿಯ ಮಹಾನತೆ ಹಾಗೂ ಗಾಂಧೀವಾದದ ಬಗ್ಗೆ ಇಂತಹ ಗೊಂದಲ? ಗಾಂಧೀಜಿಯ ಮಹಾನತೆಯನ್ನು ವಿವರಿಸುವ ಕೃತಿಗಳೇನೋ ವಿಫುಲವಾಗಿ ದೊರೆಯುತ್ತವೆ. ಆದರೆ ಈ ಅಪರೂಪದ ಇತಿಹಾಸಪುರುಷನ ಮಹಾನತೆಯನ್ನು, ಗಾಂಧಿವಾದವೆಂದರೆ ನಿಜವಾಗಿ ಏನು ಎಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಕೃತಿಗಳು ಮಾತ್ರ ಅಪರೂಪ.

ಇಂತಹ ಅಪರೂಪದ ಕೃತಿಗಳಲ್ಲಿ ಹಿರಿಯ ಮಾರ್ಕ್ಸ್‌ವಾದೀ ಚಿಂತಕ ಹಾಗೂ ಮುತ್ಸದ್ದಿ ಇ.ಎಂ.ಎಸ್. ನಂಬೂದರಿಪ್ಪಾಡ್ ರವರ “The Mahatma and The Ism” ಪುಸ್ತಕವೂ ಒಂದು. ಇ.ಎಂ.ಎಸ್. ನಂಬೂದರಿಪ್ಪಾಡ್ ಅವರ ಮೂರು ಆಯ್ದ ಲೇಖನಗಳು ಈ ಪುಸ್ತಕದಲ್ಲಿವೆ.

– ಪುಸ್ತಕದ ಮುನ್ನುಡಿಯಿಂದ

ಶೀರ್ಷಿಕೆ:ಗಾಂಧೀಜಿ ಮತ್ತು ಗಾಂಧೀವಾದ ಲೇಖಕರು:ಇ.ಎಂ.ಎಸ್. ನಂಬೂದಿರಿಪಾಡ್ ಪ್ರಕಾಶಕರು: ಚಿಂತನ – ಉತ್ತರ ಕನ್ನಡ ಪುಟ:24 ಬೆಲೆ:ರೂ.4/-

ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ.

ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನಾ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬನೆ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದೆಉ.

ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯ ಮೂವರು ವಿದ್ವಾಂಸ-ಲೇಖಕರೂ, ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತೆ ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿಶದಗೊಳಿಸಿದ್ದಾರೆ.

– ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ ಲೇಖಕರು:ರೋಮಿಲ ಥಾಪರ‍್, ಹರ್ಬನ್ಸ್ ಮುಖಿಯ ಮತ್ತು ಬಿಪನ್ ಚಂದ್ರ ಅನುವಾದ:ಕೆ. ಎಲ್. ಗೋಪಾಲಕೃಷ್ಣ ರಾವ್ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪುಟ:88 ಬೆಲೆ:ರೂ.22/