ಗಾಂಧೀಜಿಯ ಮಹಾನತೆಯ ಬಗ್ಗೆ ಇಂತಹ ತದ್ವಿರುದ್ಧವಾದ ನಿಲುವುಗಳು ಹೊಸದೇನಲ್ಲ. ಏಕೆ ಗಾಂಧೀಜಿಯ ಮಹಾನತೆ ಹಾಗೂ ಗಾಂಧೀವಾದದ ಬಗ್ಗೆ ಇಂತಹ ಗೊಂದಲ? ಗಾಂಧೀಜಿಯ ಮಹಾನತೆಯನ್ನು ವಿವರಿಸುವ ಕೃತಿಗಳೇನೋ ವಿಫುಲವಾಗಿ ದೊರೆಯುತ್ತವೆ. ಆದರೆ ಈ ಅಪರೂಪದ ಇತಿಹಾಸಪುರುಷನ ಮಹಾನತೆಯನ್ನು, ಗಾಂಧಿವಾದವೆಂದರೆ ನಿಜವಾಗಿ ಏನು ಎಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಕೃತಿಗಳು ಮಾತ್ರ ಅಪರೂಪ.
ಇಂತಹ ಅಪರೂಪದ ಕೃತಿಗಳಲ್ಲಿ ಹಿರಿಯ ಮಾರ್ಕ್ಸ್ವಾದೀ ಚಿಂತಕ ಹಾಗೂ ಮುತ್ಸದ್ದಿ ಇ.ಎಂ.ಎಸ್. ನಂಬೂದರಿಪ್ಪಾಡ್ ರವರ “The Mahatma and The Ism” ಪುಸ್ತಕವೂ ಒಂದು. ಇ.ಎಂ.ಎಸ್. ನಂಬೂದರಿಪ್ಪಾಡ್ ಅವರ ಮೂರು ಆಯ್ದ ಲೇಖನಗಳು ಈ ಪುಸ್ತಕದಲ್ಲಿವೆ.
– ಪುಸ್ತಕದ ಮುನ್ನುಡಿಯಿಂದ
ಶೀರ್ಷಿಕೆ:ಗಾಂಧೀಜಿ ಮತ್ತು ಗಾಂಧೀವಾದ ಲೇಖಕರು:ಇ.ಎಂ.ಎಸ್. ನಂಬೂದಿರಿಪಾಡ್ ಪ್ರಕಾಶಕರು: ಚಿಂತನ – ಉತ್ತರ ಕನ್ನಡ ಪುಟ:24 ಬೆಲೆ:ರೂ.4/-
Filed under: ಐತಿಹಾಸಿಕ, ವೈಚಾರಿಕ ಸಾಹಿತ್ಯ | Tagged: ಇ.ಎಂ.ಎಸ್. ನಂಬೂದಿರಿಪಾಡ್, ಗಾಂಧೀಜಿ, ಗಾಂಧೀಜಿ ಮತ್ತು ಗಾಂಧೀವಾದ, ಚಿಂತನ - ಉತ್ತರ ಕನ್ನಡ, The Mahatma and The Ism |
ನಿಮ್ಮದೊಂದು ಉತ್ತರ