ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನವ ಉದಾರವಾದಿ ವರಸೆ ಭಾಷೆ ಮತ್ತು ಆ ಭಾಷೆಯನ್ನಾಡುವ ಜನರನ್ನು ತಮ್ಮ ನಿರ್ದಿಷ್ಟವಾದ ಅನುಭವ ಜಗತ್ತಿಗೆ ಮತ್ತೆ ಮತ್ತೆ ತಳ್ಳುತ್ತಿರುತ್ತದೆ. ಈ ಮೂಲಕ ಮಾರುಕ್ಟ್ಟೆ ತನ್ನ ವಿಶ್ವಸ್ಥ ಸ್ವರೂಪವನ್ನು ಸಾಧಿಸುತ್ತದೆ ಮತ್ತು ನಮ್ಮನ್ನು ಅದರೊಳಗೆ ಸೇರಿಯೂ ಸೇರದಂಥ `ಪ್ರತ್ಯೇಕತೆ’ಯನ್ನು ಉಳಿಸಿಕೊಳ್ಳುತ್ತಿರುತ್ತದೆ. ಇದು ಲಾಭಕೋರತನವನ್ನು ಪುಸಲಾಯಿಸುವ ನುರಿತ ಚೇಷ್ಟೆ. ಆದರೆ ಇಲ್ಲಿ ಆಡುಮಾತಿನ ವರಸೆಯತ್ತ ಬರಹ ದಾಪುಗಾಲಿಟ್ಟು, ಬರಹದ ಮೂಲಕ ಭಾಷೆಯನ್ನು ಪ್ರಮಾಣೀಕರಿಸಿರುವ ಬಗೆಯನ್ನು ನಾವು ಗಮನಿಸಲೇ ಬೇಕು. ಆದರೆ ಹಾಗೆ ಮಾಡುವಾಗ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಅವಕಾಶಗಳನ್ನು ಮರೆಯಬಾರದಷ್ಟೆ.
ಶೀರ್ಷಿಕೆ: ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ ಲೇಖಕರು: ಆರ‍್. ಚಲಪತಿ ಪ್ರಕಾಶಕರು:ಸಖಿ ಪ್ರಕಾಶನ ಪುಟ:110 ಬೆಲೆ:ರೂ.60/-