ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಲ್ಪಟ್ಟ ವಿಶೇಷ ಪುಸ್ತಕಗಳಲ್ಲೊಂದು ಈ ಪುಸ್ತಕ. ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.
`ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಇಂಗ್ಲೀಷ್ ಗೆ ಅನುವಾದವಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಪುಸ್ತಕದ ಪರಿಚಯ ಹಿಂದೆ ಪುಸ್ತಕ ಪ್ರೀತಿಯಲ್ಲಿ ಬಂದಾಗೆ ಉತ್ತರ ಕನ್ನಡದ ಕಿರಣ್ ಭಟ್ ಅವರು ಈ ರೀತಿ ಸ್ಪಂದಿಸಿದ್ದರು.
ಕನ್ನಡದ ಮಕ್ಕಳಿಗೆ ಗಾಂಧಿಯನ್ನು ಸರಳವಾಗಿ ಪರಿಚಯಿಸಬಲ್ಲ ಅತ್ಯುತ್ತಮ ಪುಸ್ತಕ ಇದು.
ಈ ಪುಸ್ತಕವನ್ನಧರಿಸಿ ನಾವು `ಚಿಂತನ ರಂಗ ಅಧ್ಯಯನ ಕೇಂದ್ರ’ ದ `ಚಿಂತನ ರೆಪರ್ಟರಿ’ ಗಾಗಿ `ಪಾಪು ಬಾಪು ಆದ ಕತೆ’ ನಾಟಕವನ್ನು ಕಳೆದ ವರ್ಷ ಆಡಿದ್ದೆವು.
ಹಳ್ಳಿಯ ಶಾಲೆಗಳಲ್ಲಿ, ಸಾರ್ವಜನಿಕರಿಗಾಗಿ ಸುಮಾರು ಅರವತ್ತು ಪ್ರದರ್ಶನಗಳನ್ನು ನೀಡಿದ್ದೆವು. ರೆಪರ್ಟರಿಯ ತಿರುಗಾಟದ ಜೊತೆಯಲ್ಲಿ ಈ ಪುಸ್ತಕವನ್ನೂ ಒಯ್ದು ಸಾಕಷ್ಟು ಸಂಖ್ಯೆಯಲ್ಲಿ ಮಾರಿದ್ದೆವು.
ಇದು ಕನ್ನಡ ಬಾರದ ಇಂಗ್ಲೀಷ್ ಓದಬಲ್ಲ ನಮ್ಮ ಕಂದಮ್ಮಗಳಿಗೆ ಉಡುಗೊರೆಯಾಗಿ ಕೊಡಲೇ ಬೇಕಾದ ಒಂದು ಒಳ್ಳೆಯ ಪುಸ್ತಕ.
ಮಹಾತ್ಮ ಗಾಂಧಿಯೆಂದರೆ ಯಾರಿಗೂ ನಿಲುಕದ ಅತಿಮಾನವನಲ್ಲ
ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು
Filed under: ಜೀವನ-ಚರಿತ್ರೆ/ಕಥನ, ಮಕ್ಕಳ ಸಾಹಿತ್ಯ | Tagged: ಆರ್ಯ, ಕಿರಣ್ ಭಟ್, ಕೇಂದ್ರ ಸಾಹಿತ್ಯ ಅಕಾಡ, ಚಿಂತನ ರಂಗ ಅಧ್ಯಯನ ಕೇಂದ್ರ, ಚಿಂತನ ರೆಪರ್ಟರಿ, ಪಾಪು ಬಾಪು ಆದ ಕತೆ, ಬೋಳುವಾರ‍್ ಮಹಮ್ಮದ್ ಕುಞ್ಙಿ, ಯು. ಆರ್. ಅನಂತಮೂರ್ತಿ, ರಾಜಗೋಪಾಲ್ ಆಚಾರ್ಯ | 1 Comment »