ಕಾವ್ಯದ ಪ್ರಾಥಮಿಕ ಪರಿಕರಗಳೊಂದಿಗೆ `ನೆನೆವ ಪರಿ ಹೊಸತು’ ಎಂಬಂತೆ ಕಾವ್ಯಕ್ಕಷ್ಟೇ ಸಾಧ್ಯವಾಗಬಲ್ಲ ಸೂಕ್ಷ್ಮ ಕಾಣ್ಕೆಗಳು, ಒಳನೋಟಗಳು, ಭಿನ್ನವೂ, ಅಮೂರ್ತ ಸೌಂದರ್ಯಾತ್ಮಕವೂ ಆದಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಕವಿತೆಯನ್ನು ಬರೆವ ಉಮೇದು ತೋರಬೇಕಿದೆ. ಈ ಕಾವ್ಯ ಸಿದ್ಧತೆಯ ಕೆಲವಾದರೂ ಲಕ್ಷಣಗಳನ್ನು ಕವಿ ಮಿತ್ರ ರಂಗಸ್ವಾಮಿಯವರು ಅಲ್ಲಲ್ಲಿ ಇಣುಕಿ ಹಾಕಿಸಿರುವುದು ಅವರ ಕಾವ್ಯ ಪ್ರಯೋಗದ ಬಗ್ಗೆ ಆಸೆ, ನಿರೀಕ್ಷೆಗಳನ್ನು ಇಟ್ಟು ಕೊಳ್ಳಬಹುದೆಂಬ ಭರವಸೆಯನ್ನು ನೀಡುತ್ತವೆ. ಅವರ `ವಿಪರ್ಯಾಸ’, `ಸಾಕ್ಷೀಭೂತಗಳು’, `ಬದುಕಿನಲ್ಲೊಂದು ದಿನ’ ಮತ್ತು `ಬಂಧನದೊಳಗೊಂದು ರಾಜಿ’ ಎಂಬ ಕವಿತೆಗಳ ಬಿಗಿಬಂಧ, ಭಾಷಾ ಪ್ರಯೋಗ ಹಾಗೂ ಅಭಿವ್ಯಕ್ತಿ ವಿಧಾನಗಳನ್ನು ಕಂಡವರಿಗೆ ಇದು ಈ ಕವಿಗೆ ಅಸಾಧ್ಯವಾದುದೇನೂ ಅಲ್ಲವೆನಿಸುತ್ತದೆ. ಒಂದು ಹಂತದ ಈ ಯಶಸ್ವೀ ಪ್ರಯೋಗಗಳನ್ನು ದಾಟಿ ಕವಿ ರಂಗಸ್ವಾಮಿಯವರು ತಮ್ಮ ಶ್ರೇಷ್ಟ ಕಾವ್ಯದ ಅಸಲೀ ಕಸುಬುದಾರಿಕೆಗೆ ಹೊರಳಲಿ ಎಂದು ಮನದುಂಬಿ ಹಾರೈಸುತ್ತೇನೆ.
-ಲಕ್ಷ್ಮೀಪತಿ ಕೋಲಾರ
(ಪುಸ್ತಕದ ಮುನ್ನುಡಿಯಿಂದ)
ಶೀರ್ಷಿಕೆ: ಪ್ರೀತಿ ಮತ್ತು ನೆತ್ತರು ಲೇಖಕರು:ಎಸ್.ರಂಗಸ್ವಾಮಿ ಪ್ರಕಾಶನ: ಬರಹ ಪಬ್ಲಿಷಿಂಗ್ ಹೌಸ್ ಬೆಂಗಳೂರು ಪುಟ:56 ಬೆಲೆ:ರೂ.50/-
Filed under: ಕಾವ್ಯ-ಕವನ | Tagged: ಎಸ್.ರಂಗಸ್ವಾಮಿ, ಪ್ರೀತಿ ಮತ್ತು ನೆತ್ತರು, ಬರಹ ಪಬ್ಲಿಷಿಂಗ್ ಹೌಸ್, ಲಕ್ಷ್ಮೀಪತಿ ಕೋಲಾರ | Leave a comment »