ಮಹಿಳೆಯರ ಪ್ರಶ್ನೆಗಳು, ಮಹಿಳಾ ಅಧ್ಯಯನ, ಸಮಾನ ಹಕ್ಕುಗಳು ಎಂಬುದೆಲ್ಲಾ ಇದೆ ಎಂದೂ ಗೊತ್ತಿರದ, ತಮ್ಮ ಬದುಕ ಬಟ್ಟಲಿನಲ್ಲಿ ಸಿಕ್ಕಿದ್ದು, ಅದನ್ನು ತಮ್ಮದೇ ಆದ ರೀತಿಯಲ್ಲಿ ದಕ್ಕಿಸಿಕೊಂಡು ವೈಯಕ್ತಿಕ ಹಕ್ಕು ಸ್ಥಾಪಿಸಿಕೊಂಡ ಜೀವಗಳ ಕಥನಗಳಿವು.
ಲೇಖಕಿ ಹೇಳುತ್ತಾರೆ,
“ನಾನು ಚಿಕ್ಕಂದಿನಿಂದಲೂ ಮಠಗಳ ಪರಿಸರದಲ್ಲಿ ಓಡಾಡಿಕೊಂಡು ಭಾಷಣ, ಪ್ರವಚನವೆಂದು ತಿರುಗಾಡಿದವಳು. ನಮ್ಮ ಭಾಗದ ಮಠಗಳ ಫೌಳಿಯಲ್ಲಿಯ ಬದುಕೆಂದರೆ ಅದೊಂದು ಸಂಕೀರ್ಣ ಅನನ್ಯ ಅನುಭವ. ಧಾರ್ಮಿಕತೆಯೊಂದಿಗೆ ಸಾಮಾಜಿಕ ಸಂಘರ್ಷ, ಬಡತನದೊಂದಿಗೆ ಜಮೀನ್ದಾರಿಯ ಒಣಧಿಮಾಕು, ಮುಗ್ಧರ ನಡುವೆಯೂ ಚಾಲಬಾಜಿಗಳ ಸಂತೆ, ಭಾವುಕ ಭಕ್ತರ ನಡುವೆಯೂ ನಾಸ್ತಿಕರ ದಂಡು. ತೀರ ಸಂಪ್ರದಾಯ ಜೀವಿಗಳ ಸಮೂಹದ ನಡುವೆ ಉಗ್ರ ವಾಸ್ತವವಾದಿಗಳ ಪಡೆಯು ಮೇಳೈಸಿಕೊಂಡಿರುತ್ತದೆ.”
ಇಲ್ಲಿನ ಬಹುತೇಕ ಲೇಖನಗಳಲ್ಲಿ ವ್ಯವಸ್ಥೆಯ ವಿರುದ್ಧ ತಮ್ಮ ಮಿತಿಯಲ್ಲಿಯೇ ದಂಗೆ ಎದ್ದ ಮಹಿಳೆಯರ ಕಥನಗಳಿವೆ. ಆ ದಂಗೆಯು ಒಮ್ಮೊಮ್ಮೆ ವೈಯಕ್ತಿಕ ರೂಪದಲ್ಲಿ ಕೆಲವೊಮ್ಮೆ ಸಂಘಟನೆಯ ರೂಪದಲ್ಲಿಯೂ ಕಾಣಿಸಕೊಂಡಿವೆ. ಹಾಗಾಗಿ ಇವು ಕತ್ತಲಂಚಿನ ಕಿಡಿಗಳು
ಶೀರ್ಷಿಕೆ: ಕತ್ತಲಂಚಿನ ಕಿಡಿಗಳು, ಲೇಖಕರು:ಮೀನಾಕ್ಷಿ ಬಾಳಿ ಪ್ರಕಾಶಕರು:ಚಿಂತನ ಪುಸ್ತಕ, ಪುಟ:76 ಬೆಲೆ:ರೂ.40/- ಪ್ರಕಟಣಾ ವರ್ಷ:2010
Filed under: ಮಹಿಳಾ ಸಾಹಿತ್ಯ | Tagged: ಅಂತರ ರಾಷ್ಟ್ರೀಯ ಮಹಿಳಾ ದಿನ, ಕತ್ತಲಂಚಿನ ಕಿಡಿಗಳು, ಚಿಂತನ ಪುಸ್ತಕ, ಮೀನಾಕ್ಷಿ ಬಾಳಿ | Leave a comment »