“ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ” – ಪುಸ್ತಕದ ಬಗ್ಗೆ

pasha pusthaka cover

ಜಾಗತೀಕರಣ, ವ್ಯಾಪಾರೀಕರಣ ಮತ್ತು ಅತ್ಯಾಧುನಿಕ ಮಾಧ್ಯಮಗಳ ಅಂತಃಸ್ಫೋಟದ ಈ ದಿನಗಳಲ್ಲಿ ಮೂಢನಂಬಿಕೆಗಳು ಎಂದಿಗಿಂತ ಹೆಚ್ಚು ಅಪಾಯಕಾರಿಯಾಗಿ ಬೆಳೆದಿವೆ. ಹೆಚ್ಚು ಹೆಚ್ಚು ಜನರ ವಿಚಾರ, ಆಚಾರಗಳಲ್ಲಿ ಕಳೆಯದಂತೆ ಹಬ್ಬಿಕೊಂಡು ಜನತಂತ್ರದ ಕಟ್ಟಡವನ್ನೇ ಶಿಥಿಲಗೊಳಿಸುತ್ತಿವೆ. ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು, ಮತ್ತು ಜನಮಾನಸದ ವಿವಿಧ ಸ್ತರಗಳಲ್ಲಿ ಅದನ್ನು ಬಿತ್ತಿ ಬೆಳೆಸುವುದು ಈಗ ಹವ್ಯಾಸವಲ್ಲ, ಅನಿವಾರ್ಯ ಅಗತ್ಯವಾಗಿದೆ. ಇದಕ್ಕಾಗಿ ಮೂಢನಂಬಿಕೆಗಳು ಎಂದರೇನು ಎನ್ನುವುದನ್ನು ನಿಸ್ಸಂದಿಗ್ಧವಾಗಿ ಅರ್ಥಮಾಡಿಕೊಳ್ಳಬೇಕು. ಹಳೆಯ ಮೂಢನಂಬಿಕೆಗಳನ್ನು ಪೋಷಿಸುತ್ತಾ, ಹೊಸವನ್ನು ಬಿತ್ತುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಹಿತಾಸಕ್ತಿಗಳ ಪಿತೂರಿಯ ಎದುರು ಜಾಗೃತರಾಗಬೇಕು. ಸಾಮಾನ್ಯವಾಗಿ ನಾವು ದಿನನಿತ್ಯದ ವ್ಯವಹಾರಗಳಲ್ಲಿ ಈಗಾಗಲೇ ಬಳಸುತ್ತಿರುವ ವಿಜ್ಞಾನ ವಿಧಾನವನ್ನು ಸಹಜ ಜೀವನಕ್ರಮ ಮಾಡಿಕೊಳ್ಳಬೇಕು. ವೈಜ್ಞಾನಿಕ ಮನೋವೃತ್ತಿ ನಮ್ಮ ಸಹಜ ಪ್ರವೃತ್ತಿ, ಆಚರಣೆ ಆಗಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿಯು ಓದುಗರಿಗೆ ದಾರಿದೀಪವಾದೀತು ಎಂದು ಆಶಿಸಲಾಗಿದೆ.

 

ಪುಸ್ತಕಪ್ರೀತಿ ತಿಂಗಳ ಮಾತುಕತೆ-2 ಕ್ಕೆ ಬನ್ನಿ

Pusthaka Preethi Mathukathe-Aug 30

“ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ” ಬಗ್ಗೆ ಮಾತುಕತೆ ಮಾಡೋಣ ಬನ್ನಿ

Pusthaka Preethi Mathukathe-2 Aug 30 Banner