Filed under: ಬಿಡುಗಡೆ | Tagged: ಇ.ಎಂ.ಎಸ್. ಸ್ಟಡಿ ಸೆಂಟರ್, ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ, ಕೆ.ಎಸ್.ಪಾರ್ಥಸಾರಥಿ, ಕ್ರಿಯಾ, ಜಿ.ಎನ್.ನಾಗರಾಜ್, ಡಾ. ಎನ್. ಗಾಯತ್ರಿ, ಡಾ. ಕೆ. ಮರುಳಸಿದ್ದಪ್ಪ, ಡಾ. ಬಂಜಗೆರೆ ಜಯಪ್ರಕಾಶ್., ಡಾ.ಜಿ. ರಾಮಕೃಷ್ಣ, ಡಾ.ಬಿ.ಆರ್.ಮಂಜುನಾಥ, ತತ್ವಶಾಸ್ತ್ರದ ದಾರಿದ್ರ್ಯ, ನವಕರ್ನಾಟಕ, ಪ್ಯಾರಿಸ್ ಕಮ್ಯೂನ್, ಪ್ರಾನ್ಸಿನಲ್ಲಿ ಅಂತರ್ಯುದ್ಧ, ಪ್ರೊ. ರಾಜೇಂದ್ರ ಚೆನ್ನಿ, ಪ್ರೊ.ವಿ.ಎನ್.ಲಕ್ಷ್ಮಿನಾರಾಯಣ, ಪ್ರೊ.ವೆಂಕಟೇಶ ಆತ್ರೇಯ, ವಿಶ್ವ ಕುಂದಾಪುರ, ಶಿವಸುಂದರ್, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ, Young Karl Marx | Leave a comment »
ಆಹ್ವಾನ : `ಮಾರ್ಕ್ಸ್ 200 ಕ್ಯಾಪಿಟಲ್ 150′ ಮಾಲಿಕೆಯ ಮೊದಲ ಕಂತಿನ ಪುಸ್ತಕಗಳ ಬಿಡುಗಡೆ ಮತ್ತು ವಿಚಾರ ಸಂಕಿರಣ
`ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು’ ಎಂದ ಈ ಶತಮಾನದ ಜಗತ್ಪ್ರಸಿದ್ಧ ಕೃತಿಯ ಲೇಖಕ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿ ಇಂದಿಗೆ 200 ವರ್ಷ
ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು ಎಂದ ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಅವರ ಜನ್ಮದಿನ ಮೇ ೫ ೧೮೧೮ ಆಗಿದ್ದು, ಈ ವರ್ಷ(೨೦೧೮) ಮಾರ್ಕ್ಸ್‌ಅವರ ದ್ವಿಶತಾಬ್ದಿ ವರ್ಷ.
ಸೆಪ್ಟೆಂಬರ್ ೧೪, ೧೮೬೭ ಮಾರ್ಕ್ಸ್‌ಅವರ ಮೇರುಗ್ರಂಥ ’ದಾಸ್‌ಕ್ಯಾಪಿಟಲ್’ ಮೊದಲ ಸಂಪುಟ ಪ್ರಕಟವಾದ ದಿನವಾಗಿದ್ದು ಈ ವರ್ಷ(೨೦೧೮) ಆ ಗಮನಾರ್ಹ ದಿನದ ೧೫೦ ತುಂಬಿದ ವರ್ಷ.
ಇವೆರಡೂ ದಿನಗಳನ್ನು ನೆನಪಿಸಿಕೊಂಡು ಈ ವರ್ಷವನ್ನು ಸೂಕ್ತವಾಗಿ ಆಚರಿಸಲು, ಪ್ರಗತಿಪರ ಪುಸ್ತಕಗಳ ಪ್ರಮುಖ ಪ್ರಕಾಶಕರಾದ ನವಕರ್ನಾಟಕ ಮತು ಕ್ರಿಯಾ ಮಾಧ್ಯಮ ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦ ಎಂಬ ಮಾಲಿಕೆಯಲ್ಲಿ ಕನ್ನಡದಲ್ಲಿ ಲಭ್ಯವಿಲ್ಲದ ಮಾರ್ಕ್ಸ್‌ವಾದದ ಸಾರ ಎನ್ನಬಹುದಾದ ಪ್ರಮುಖ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಿವೆ. ಮೇ ೨೦ರಂದು (ಈ ಕೆಳಗೆ ಕಾಣಿಸಿದ) ಪುಸ್ತಕ ೩ ಮತ್ತು ೭ ಬಿಡುಗಡೆಯಾಗಲಿವೆ. ಉಳಿದವು ಸೆಪ್ಟೆಂಬರ್ ೧೪, ೨೦೧೮ರೊಳಗೆ ಬಿಡುಗಡೆಯಾಗಲಿವೆ.
ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦
ಮಾಲಿಕೆಯಲ್ಲಿ ಪ್ರಕಟವಾಗಲಿರುವ ಏಳು ಕೃತಿಗಳು ಈ ಕೆಳಗಿಂತಿವೆ
೧. ಬಂಡವಾಳ ಸಂಪುಟ ೧ (ಹಲವು ಪರಿಣತ ಲೇಖಕರು/ಅನುವಾದಕರು * ಅನುವಾದಕರ ಪಟ್ಟಿ ಕೆಳಗಿದೆ)
೨. ಭಾರತದಕುರಿತು ಮಾರ್ಕ್ಸ್- ಅನು: ವಿಶ್ವಕುಂದಾಪುರ
೩. ಫ್ರಾನ್ಸಿನಅಂತರ್ಯುದ್ಧ (ಪ್ಯಾರಿಸ್ ಕಮ್ಯೂನ್-೧೮೭೧, ಮೊದಲ ಕಾರ್ಮಿಕಕ್ರಾಂತಿ)ಅನು: ವಿಶ್ವಕುಂದಾಪುರ
೪. ಆರ್ಥಿಕ ಮತ್ತು ತತ್ವಶಾಸ್ತ್ರೀಯ ಕೈಬರಹಗಳು-೧೮೪೪ – ಅನು: ನಾ.ದಿವಾಕರ್
೫. ರಾಜಕೀಯಅರ್ಥಶಾಸ್ತ್ರದ ವಿಮರ್ಶೆಗೆಒಂದುಕೊಡುಗೆ – ಅನು: ಸಿ.ಆರ್.ಶಾನಭಾಗ
೬. ಲೂಯಿ ಬೊನಪಾರ್ಟೆಯ ೧೮ನೇ ಬ್ರೂಮೈರ್ – ಅನು: ಫಣಿರಾಜ್ ಕೆ.
೭. ತತ್ವಶಾಸ್ತ್ರದದಾರಿದ್ರ್ಯ – ಅನು: ಕೆ.ಪಿ.ವಾಸುದೇವನ್
ಈ ಮಾಲಿಕೆಯಒಟ್ಟು ಬೆಲೆ ರೂ. ೨೧೦೦ ಆಗಿದ್ದು ಪ್ರಕಟಣಾ-ಪೂರ್ವ (ಅಂದರೆ ಸೆಪ್ಟೆಂಬರ್ ೧೪, ೨೦೧೮ರ ಮೊದಲು) ಬೆಲೆ ರೂ. ೧೪೦೦ ಆಗಿರುತ್ತದೆ.
ಈ ಮಾಲಿಕೆಯ ಪ್ರಕಟಣೆಯಲ್ಲಿ ಸುಮಾರು ಮೂವತ್ತು ಅತ್ಯಂತ ಪರಿಣತ ಕನ್ನಡ ಲೇಖಕರು, ಅನುವಾದಕರು ಈ ಕಾಯಕದಲ್ಲಿ ವಿವಿಧರೀತಿಯಲ್ಲಿ ಕೈಜೋಡಿಸಿದ್ದಾರೆ.
ಈ ಮಾಲಿಕೆಯಲ್ಲಿ ಬರುವ ಪುಸ್ತಕಗಳು ಬರಿಯ ಬಿಡಿ ಪುಸ್ತಕಗಳಾಗಿರದೆ, ಮುಂದಿನ ಪೀಳಿಗೆಗೆ ಮಾರ್ಕ್ಸ್‌ವಾದದ ಪ್ರಮುಖ ಸಾರಕೊಡುವ ಪುಸ್ತಕಗಳ ಸಮಗ್ರ ಸಂಪುಟವಾಗಿದೆ. ಮಾರ್ಕ್ಸ್ ಕೃತಿಗಳನ್ನು – ನೇರ ಅನುವಾದ, ಸಂಗ್ರಹಾನುವಾದ ಅಥವಾ ಸಾರ ಕೊಡುವ ಸ್ವತಂತ್ರ ಬರಹಗಳ ರೂಪಗಳು- ಇವುಗಳಲ್ಲಿ ಯಾವ ರೂಪದಲ್ಲಿ ತರಬೇಕು ಎಂಬ ಆಯ್ಕೆಯನ್ನು ಕೃತಿವಾರಾಗಿ ಮಾಡಲಾಗಿದೆ. ಈ ಮಾಲಿಕೆಯಲ್ಲಿ ಪ್ರಕಟವಾಗುವ ಪ್ರತಿ ಕೃತಿಗೂ ಕೃತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾಗುವ – ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ಆ ಮೇಲಿನ ಚರ್ಚೆ-ವಿವಾದಗಳು -ಇವನ್ನು ಒಳಗೊಂಡ ಒಂದು ಪ್ರವೇಶಿಕೆ ಇರುತ್ತದೆ.
* ಬಂಡವಾಳ ಸಂಪುಟ ೧ ಅನುವಾದ ಸಂಯೋಜನೆ : ಡಾ. ಜಿ.ರಾಮಕೃಷ್ಣ
ಅನುವಾದಕರ ಪಟ್ಟಿ : ಜಿ.ರಾಜಶೇಖರ, ಎಸ್.ಶಿವಾನಂದ, ನಗರಗೆರೆರಮೇಶ್, ಬಿ.ಆರ್. ಮಂಜುನಾಥ, ವಿ.ಎನ್.ಲಕ್ಷ್ಮಿನಾರಾಯಣ, ಟಿ. ವೆಂಕಟೇಶ ಮೂರ್ತಿ, ಟಿ.ಎಸ್.ವೇಣುಗೋಪಾಲ್, ಶೈಲಜಾ, ಬಿ.ಶ್ರೀಪಾದ ಭಟ್, ವೇದರಾಜಎನ್.ಕೆ., ವಸಂತರಾಜಎನ್.ಕೆ., ಎ.ಎಸ್. ಆಚಾರ್ಯ, ಯಡೂರ ಮಹಾಬಲ, ವಿ.ಎಸ್.ಶ್ರೀಧರ, ಎಚ್.ಜಿ.ಜಯಲಕ್ಷ್ಮಿ, ಎಚ್.ವಿ.ರಾವ್, ಎಂ.ಸಿ. ದೋಂಗ್ರೆ
ಕೂಪನ್ ಖರೀದಿಸಲು ಇಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆ 9902249150 ಗೆ ಕರೆಮಾಡಿ.
Filed under: Uncategorized | 6 Comments »