ಬೆಂಕಿಯಾರಿಸುವ ಹನಿಗಳು – ಸಂವಿಧಾನದ ಕಾಲಾಳಾಗಿ ತೀಸ್ತಾ ನಡೆಸಿದ ಹೋರಾಟಗಳು

ಈ ಪುಸ್ತಕವನ್ನೋದಿ ಬರಹಗಾರರಾದ ವಿನಯಾ ಒಕ್ಕುಂದ ಅವರು ನೀಡಿದ ಅಭಿಪ್ರಾಯ ಇದು.

ನಮಗೆ ಗೊತ್ತು ಎಂದುಕೊಂಡಿರುವ ತೀಸ್ತಾ ಸೆತಲ್ವಾಡ್ ಮತ್ತು ಗುಜರಾತ್ ಮಾದರಿ – ಈ ಎರಡರ ನೋಟಗಳ ಅಂದಾಜನ್ನು ಮೀರಿಸುತ್ತದೆ ಈ ಬರಹ. ಆಳದಾಳದ ಜಟಿಲ ಸಂಘರ್ಷದ ಎದುರು ನಿಲ್ಲಿಸುತ್ತದೆ. ಒಂದು ತಟಕು ಸಂವೇದನೆಯಿರುವ ಜೀವಗಳಿಗೆ “ಹೇಳು, ನೀನೇನು ಮಾಡಬಲ್ಲೆ?” ಎಂದು ಕರುಳು ಜಗ್ಗಿಸಿ ಕೇಳುತ್ತದೆ. ಈ ಓದಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದ್ದುದು ಕಾಡಿಗೆ ಬೆಂಕಿ ಬಿದ್ದಾಗ ಹೊಳೆಯಲ್ಲಿ ಮುಳುಗಿ ಗರಿಯನ್ನು ತೋಯಿಸಿಕೊಂಡು ಬೆಂಕಿಯ ಮೇಲೆ ಕೊಡವಿ ಆರಿಸಲು ಶ್ರಮಿಸಿದ ಪುಟ್ಟ ಗುಬ್ಬಿಯ ಕಥೆ. ಕಡೆಗೂ ಗುಬ್ಬಚ್ಚಿಯ ಛಲ, ನಂಬಿಕೆಗಳಿಗೆ ಗೆಲುವಾಯಿತು. ತೀಸ್ತಾ ಸೆತಲ್ವಾಡ್ ಬರಹದಲ್ಲಿ ತೊಟ್ಟಿಕ್ಕುತ್ತಿರುವುದು, ಕೋಮುವಾದಿ ಬೆಂಕಿಯನ್ನು ಆರಿಸಲು, ಧ್ಯಾನಸ್ಥವಾಗಿ ಹೋರಾಡುತ್ತಿರುವ ಗುಬ್ಬಿಯ ರೆಕ್ಕೆಯಿಂದುದುರಿದ ಹನಿಗಳೇ.

ಪ್ರಗತಿಪರ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹಾಗೂ ನ್ಯಾಯಕ್ಕಾಗಿ ಯಾವುದೇ ರಾಜಿ ಇಲ್ಲದೆ ದಿಟ್ಟತನದಿಂದ ಹೋರಾಟ ನಡೆಸುತ್ತಿರುವ ತೀಸ್ತಾ ಅವರು, ತನ್ನ ಜೀವನದಲ್ಲಿ ಸಂವಿಧಾನದ ಕಾಲಾಳಾಗಿ ತಾನು ಗುರುತಿಸಿದ, ದೇಶದಲ್ಲಿ ನಡೆದ ನಡೆಯುತ್ತಿರುವ ಕೆಲವು ಸಂವಿಧಾನವಿರೋಧಿ ಅನ್ಯಾಯಗಳ ಹಿಂದಿನ ಸತ್ಯಗಳನ್ನು ಮತ್ತು ಹೀಗೆ ಅನ್ಯಾಯಕ್ಕೊಳಗಾದವರಿಗೆ ಸಂವಿಧಾನಾತ್ಮಕವಾಗಿ ಸಲ್ಲಬೇಕಾಗಿರುವ ನ್ಯಾಯ ಹಾಗೂ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ತಾನು ನಡೆಸಿದ ಕಾನೂನಾತ್ಮಕ ಹೋರಾಟಗಳ ದಾಖಲಾತಿ ಈ ಪುಸ್ತಕ.

ಒಂದೊಂದು ವಿವರವನ್ನೂ ದಾಖಲಿಸಿರುವ ಈ ರಾಜಕೀಯ ಹೋರಾಟದ ನೆನಪುಗಳ ಪುಸ್ತಕ, ಈಗಿನ ವಿದ್ಯಮಾನಗಳ ವಿಸ್ತೃತ ಹೇಳಿಕೆಯಂತಿದೆ. ವಿಭಿನ್ನ ಹೇಳಿಕೆಗಳು ತೇಲಾಡುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಬಿಚ್ಚಿಡುವ ಇಂತಹ ದಾಖಲೆ ಅಗತ್ಯವಿದೆ. ಇಡೀ ವಿದ್ಯಮಾನವನ್ನು ಸ್ಪಷ್ಟತೆ ಹಾಗೂ ಸಮಗ್ರ ದೃಷ್ಟಿಕೋನದಿಂದ ತೀಸ್ತಾ ಕಟ್ಟಿಕೊಡುತ್ತಾರೆ. ತನ್ನ ಬಗ್ಗೆ ಹರಿಯಬಿಟ್ಟಿರುವ ಸುಳ್ಳು ಆರೋಪಗಳ ಹೊರತಾಗಿಯೂ ಅವರು ತಮ್ಮ ಹೋರಾಟವನ್ನು ಮುಂದುವರೆಸಿ ಸತ್ಯಾಂಶಗಳನ್ನು ಜನರ ಮುಂದಿಡುತ್ತಾರೆ ಎಂಬ ಭರವಸೆ ನನಗಿದೆ. ಇಂತಹವರ ಸಂತತಿ ಹೆಚ್ಚಾಗಲಿ ಎಂದು ಮನಸ್ಸು ಬಯಸುತ್ತದೆ ಎಂದು ಖ್ಯಾತ ಇತಿಹಾಸಕಾರರಾದ ರೋಮಿಲಾ ಥಾಪರ್ ಹೇಳುತ್ತಾರೆ.

ಅನುವಾದಿತ ಬರಹ ಎಂಬುದು ತಿಳಿಯದ ರೀತಿಯಲ್ಲಿ ತೀಸ್ತಾ ಅವರ ಬರಹವನ್ನು ಸತ್ಯಾ ಎಸ್ ಅವರು ಕನ್ನಡ ಭಾಷೆಯಲ್ಲಿ ಇಳಿಸಿದ್ದಾರೆ.

ಶೀರ್ಷಿಕೆ : ಸಂವಿಧಾನದ ಕಾಲಾಳು ತೀಸ್ತಾ ಸೆತಲ್ವಾಡ್ ನೆನಪುಗಳು ಮೂಲ: ತೀಸ್ತಾ ಸೆತಲ್ವಾಡ್  ಅನುವಾದ : ಸತ್ಯಾ ಎಸ್. ಪ್ರಕಾಶನ : ಕ್ರಿಯಾ ಪುಸ್ತಕ  ಬೆಲೆ : ರೂ.210 ಪುಟಗಳು :272 ಪ್ರಕಟಣಾ ವರ್ಷ: 2019 ಪುಸ್ತಕಗಳಿಗಾಗಿ ಸಂಪರ್ಕಿಸಲು : 9902249150

 

ಮಂಗಳೂರಿನಲ್ಲಿ : ಜಾತ್ಯತೀತತೆಯ ರಕ್ಷಣೆಯಲ್ಲಿ ನಾವು-ನೀವು ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆಗೆ ಆಹ್ವಾನ

ಕಾರ್ಯಕ್ರಮ : ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ

ಪುಸ್ತಕದ ಶೀರ್ಷಿಕೆ : ಸಂವಿಧಾನದ ಕಾಲಾಳು ತೀಸ್ತಾ ಸೆತಲ್ವಾಡ್ ನೆನೆಪುಗಳು

ನಡೆಸಿಕೊಡುವವರು : ಕ್ರಿಯಾ ಮಾಧ್ಯಮ ಪ್ರೈ ಲಿಮಿಟೆಡ್, ಸೈಂಟ್ ಅಲೋಶಿಯಸ್ ಕಾಲೇಜು, ಸಮುದಾಯ ಮಂಗಳೂರು

ಉಪಸ್ಥಿತಿ : ಪ್ರೊ.ಎ.ಎಂ.ನರಹರಿ, ಜಿ.ರಾಜಶೇಖರ್, ದಿನೇಶ್ ಅಮೀನ್ ಮಟ್ಟು, ಟಿ.ಸಿ.ಎಂ ಶರೀಫ್, ತೀಸ್ತಾ ಸೆತಲ್ವಾಡ್, ಸತ್ಯಾ ಎಸ್ ಮತ್ತು ನಾವು ನೀವು

ಸ್ಥಳ : ಸೈಂಟ್ ಅಲೋಶಿಯಸ್ ಕಾಲೇಜು ಸಭಾಂಗಣ, ಬಾವುಟಗುಡ್ಡೆ, ಮಂಗಳೂರು

ಸಮಯ : ಮೇ 19, 2019 ಬೆಳಿಗ್ಗೆ 10:30

We, the People – In defence of Secularism

 

 

ಬೆಂಗಳೂರಿನಲ್ಲಿ : ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನಾವು-ನೀವು ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆಗೆ ಆಹ್ವಾನ

ಕಾರ್ಯಕ್ರಮ : ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ

ಪುಸ್ತಕದ ಶೀರ್ಷಿಕೆ : ಸಂವಿಧಾನದ ಕಾಲಾಳು ತೀಸ್ತಾ ಸೆತಲ್ವಾಡ್ ನೆನೆಪುಗಳು

ನಡೆಸಿಕೊಡುವವರು : ಕ್ರಿಯಾ ಮಾಧ್ಯಮ ಪ್ರೈ ಲಿಮಿಟೆಡ್, ಸೈಂಟ್ ಜೊಸೆಫ್ಸ್ ಕಾಲೇಜು

ಉಪಸ್ಥಿತಿ : ಪ್ರೊ.ಬಿ.ಕೆ.ಚಂದ್ರಶೇಖರ್, ಶಿವಸುಂದರ್, ತೀಸ್ತಾ ಸೆತಲ್ವಾಡ್, ಪ್ರೊ.ಮುಸಫರ್ ಅಸಾದಿ, ಸತ್ಯಾ ಎಸ್ ಮತ್ತು ನಾವು ನೀವು

ಸ್ಥಳ : ಕ್ಸೇವಿಯರ್ ಹಾಲ್, ಸೈಂಟ್ ಜೊಸೆಫ್ಸ್ ಕಾಲೇಜು, ಪಿ ಜಿ ಬ್ಲಾಕ್, ಶಾಂತಿನಗರ, ಬೆಂಗಳೂರು

ಸಮಯ : ಮೇ 18, 2019 ಮಧ್ಯಾಹ್ನ 3:00

We, the people – in Defence of Democracy