ಜಗತ್ತಿನ ಮೇಲೆ ಅಗಾಧ ಪ್ರಭಾವ ಬೀರಿರುವ, ರಾಜಕೀಯ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿಯೇ ಮೈಲಿಗಲ್ಲಾದ ಮೇರು ಗ್ರಂಥ ಕಾರ್ಲ್ ಮಾರ್ಕ್ಸ್‌ರವರ ’ಬಂಡವಾಳ’ ಗ್ರಂಥದ ಸಂಪುಟ-೧ ಪುಸ್ತಕ ಬಿಡುಗಡೆಗೆ ಆಹ್ವಾನ

ಜಗತ್ತಿನ ಮೇಲೆ ಅಗಾಧ ಪ್ರಭಾವ ಬೀರಿರುವ ಮೇರು ಗ್ರಂಥ ಕಾರ್ಲ್ ಮಾರ್ಕ್ಸ್‌ರವರ ’ಬಂಡವಾಳ’. ಮೂರು ಸಂಪುಟಗಳಿರುವ ಈ ಗ್ರಂಥದ ಸಂಪುಟ-೧ ಈಗ ಕನ್ನಡದಲ್ಲಿ ಪ್ರಕಟವಾಗುತ್ತಿದೆ. ಇದೊಂದು ಚಾರಿತ್ರಿಕ ಘಟನೆ. ಇದು ಮುಖ್ಯವಾಗಿ, ಜಗತ್ತಿನ ಸಂಪತ್ತನ್ನು ಸೃಷ್ಟಿಸುವ ದುಡಿಮೆಗಾರರ ಆಂದೋಲನವನ್ನು ಒಂದು ಪ್ರಮುಖ ಶಕ್ತಿಯಾಗಿ ರೂಪಿಸಿರುವ ಗ್ರಂಥ. ಜಗತ್ತಿನ ಹಲವಾರು ಭಾಗಗಳಿಗೆ ಅನುವಾದಗೊಂಡಿರುವ ಉದ್ಗ್ರಂಥ. ಇದು ಆಳವಾದ ಅಧ್ಯಯನದ ಆಧಾರದಲ್ಲಿ ರಚಿಸಿದ, ರಾಜಕೀಯ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿಯೇ ಮೈಲಿಗಲ್ಲಾದ ಒಂದು ಗ್ರಂಥ.
ಗಂಭೀರ ಅಧ್ಯಯನಶೀಲರಿಗೂ, ದೇಶದ ಸಂಪತ್ತನ್ನು ಸೃಷ್ಟಿಸುತ್ತಿರುವ ಶ್ರಮಜೀವಿಗಳಿಗೂ ಸಮಾನ ರೀತಿಯಲ್ಲಿ ಬಹು ಉಪಯುಕ್ತವಾದ ಈ ಗ್ರಂಥವನ್ನು ನಾಡಿನ ಇಪ್ಪತ್ತಕ್ಕೂ ಹೆಚ್ಚು ಅನುವಾದಕರ ನೆರವಿನಿಂದ ಕನ್ನಡದಲ್ಲಿ ತರುತ್ತಿದ್ದು, ಆಗಸ್ಟ್ ೨ರಂದು ’ಬಂಡವಾಳ ಸಂಪುಟ-೧’ರ ಬಿಡುಗಡೆಯ ಸಮಾರಂಭವನ್ನು ಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಮೂರು ಗೋಷ್ಟಿಗಳಿರುತ್ತವೆ.
ಬೆಳಿಗ್ಗೆ ಮೊದಲ ಗೋಷ್ಠಿಯಲ್ಲಿ ’ಬಂಡವಾಳ’ದ ೧೫೦ ವ?ಗಳು ಮತ್ತು ಎಡಪಂಥದ ಮರುಶೋಧನೆ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ಇರುತ್ತದೆ. ದೇಶದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಜನಪರ ಚಿಂತಕರಾದ ಪ್ರೊ. ಪ್ರಭಾತ್ ಪಟ್ನಾಯಕ್ ದಿಕ್ಸೂಚಿ ಭಾಷಣವನ್ನು ಮಾಡುತ್ತಾರೆ. ನಂತರ ಈ ಬಗ್ಗೆ ಚರ್ಚೆಗಳು ನಡೆಯುತ್ತವೆ.
ಮಧ್ಯಾಹ್ನ ನಡೆಯುವ ಎರಡನೇ ಗೋಷ್ಠಿ ’ಬಂಡವಾಳ ಇಂದು ಯಾಕೆ ಓದಬೇಕು?’ ಎಂಬುದರ ಬಗ್ಗೆ ಇರುತ್ತದೆ.
ಸಂಜೆ ನಡೆಯುವ ಮೂರನೇ ಗೋಷ್ಠಿಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪನವರು ಇತರ ಹಲವು ಗಣ್ಯರ ಉಪಸ್ಥಿತಿಯಲ್ಲಿ ಇದರ ಲೋಕಾರ್ಪಣೆ ಮಾಡುತ್ತಾರೆ.

ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ನಿಮಗೆ ಆಹ್ವಾನ.

ಇಂದಿನಿಂದ ಪುಸ್ತಕ ಬಿಡುಗಡೆಯವರೆಗೆ `ಬಂಡವಾಳ ಸಂಪುಟ – 1′ ಕ್ಕೆ ಪ್ರಕಟಣಾ ಪೂರ್ವ ರಿಯಾಯತಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಪುಸ್ತಕದ ಸಾದಾ ಪ್ರತಿಯ ಬೆಲೆ ರೂ.1000/- ಪ್ರಕಟಣಾ ಪೂರ್ವ ಬೆಲೆ -ರೂ.700/-

ಕ್ಯಾಲಿಕೋ ಪ್ರತಿ ಬೆಲೆ ರೂ.1250/- ಪ್ರಕಟಣಾ ಪೂರ್ವ ಬೆಲೆ – 900/-

ಎಂದು ಪ್ರಕಟಿಸಲಾಗಿದೆ. ಈ ರಿಯಾಯತಿ ಬೆಲೆ ಆಗಸ್ಟ್ 2 ರವರೆಗೆ ಮಾತ್ರ ಇರುತ್ತದೆ.

ಆಸಕ್ತರು ಈ ಕೆಳಗಿನ ಬ್ಯಾಂಕ್ ಅಕೌಂಟ್ ಗೆ ಮೊತ್ತ ಪಾವತಿ ಮಾಡಿ ಪೋನ್ ನಂ 9902249150 ಗೆ ಪಾವತಿಯ ವಿವರವನ್ನು WhatApp Message ನ ಮೂಲಕ ಕಳುಹಿಸಬೇಕಾಗಿ ವಿನಂತಿ. ಹಾಗೆಯೇ ತಮ್ಮ ಹೆಸರು, ವಿಳಾಸ, ಇ-ಮೈಲ್ ವಿಳಾಸ ಹಾಗೂ ಅಂಚೆ ವಿಳಾಸ ಮುಂತಾದ ವಿವರಗಳನ್ನು ಕೊಡಬೇಕಾಗಿ ವಿನಂತಿ.

ಬ್ಯಾಂಕ್ ಅಕೌಂಟ್ ನಂ ಹೀಗಿದೆ :

Account Holders Name : Kriya Madhyama Pvt. Ltd.;

Account No : 33842510215;

Bank Name : State Bank of India

Branch : Richmond Town Branch

IFSC : SBIN0011352