2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ

ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 102 ದಿನ ತುಂಬಿತು. ಈ ಐತಿಹಾಸಿಕ ರೈತ ಹೋರಾಟದ ಸಂಯೋಜಕರು ತಮ್ಮ ಹೋರಾಟದಲ್ಲಿ ಪುರುಷ ರೈತರಷ್ಟೇ ಕಾಣಿಕೆ ಮಹಿಳಾ ರೈತರದ್ದೂ ಇದೆ ಎಂದು ಘೋಷಿಸಿದ್ದಾರೆ ಮಾತ್ರವಲ್ಲದೇ ಇಂದಿನ ದಿನವನ್ನು ಮಹಿಳಾ ರೈತರ ದಿನವಾಗಿ ಆಚರಿಸುತ್ತಿದ್ದಾರೆ.
ರೈತರ ಈ ಐತಿಹಾಸಿಕ ಹೋರಾಟವನ್ನು ದಾಖಲಿಸಿಲೆಂದೇ ಅದರಲ್ಲಿ ಭಾಗವಹಿಸಿ ಹೋರಾಟದ ಅನುಭವವನ್ನು ಕನ್ನಡಿಗರಿಗೆ ಉಣಬಡಿಸಿದ ನವೀನ್ ಕುಮಾರ್ ಅವರು ತಮ್ಮ ದಿನಚರಿ ದಾಖಲು ಮಾಡಿದ ಈ ಪುಸ್ತಕದಲ್ಲಿ ಅಲ್ಲಿಯ ಕೆಲವು ಒಳನೋಟಗಳನ್ನು ಹಿಡಿದಿಟ್ಟಿದ್ದಾರೆ. ಅವುಗಳಲ್ಲಿ ಒಂದು ಅಲ್ಲಿ ಢಾಳಾಗಿ ಕಂಡುಬರುತ್ತಿದ್ದ ಮಹಿಳಾ ಶಕ್ತಿ.
ಹಾಗಾಗಿ ನಾವು ಭಾರತೀಯ ಮಹಿಳೆಯರು 2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ.

ಶೀರ್ಷಿಕೆ : ಕದನ ಕಣ – ದೆಹಲಿ ಗಡಿಗಳಲ್ಲಿ ರೈತರೊಂದಿಗೆ ಲೇಖಕರು ಹೆಚ್. ಆರ್.ನವೀನ್ ಕುಮಾರ್ ಪ್ರಕಾಶಕರು:ಕ್ರಿಯಾ ಮಾಧ್ಯಮ ಪ್ರೈ.ಲಿ. ಬೆಲೆ:ರೂ.120/- ಪುಟಗಳು:132 ಪ್ರಕಟಣಾ ವರ್ಷ:2021