ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಸೃಷ್ಟಿಸಿದ ಕವಿ ಸಿದ್ಧಲಿಂಗಯ್ಯಗೆ ಅಂತಿಮ ನಮನಗಳು

ಇದು ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ನಾನು ಬೆಳಿಗ್ಗೆ ಸಂಜೆ ಬಸ್ಸಿನಲ್ಲಿ ಓಡಾಡುತ್ತಿದ್ದೆ. ದಿನ ನಿತ್ಯದ ಒಂದು ಗಂಟೆಯಷ್ಟು ದೀರ್ಘ ಪ್ರಯಾಣ ಸುಮ್ಮನೆ ಕೂತು ಕಳೆಯಲು ಸಾಧ್ಯವೇ. ಅದಕ್ಕೆ ಪ್ರತಿದಿನ ಯಾವುದಾದರೂ ಪುಸ್ತಕವನ್ನು ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೆ. ಅದೊಂದು ದಿನ ಸಿದ್ಧಲಿಂಗಯ್ಯನವರ ಪ್ರಬಂಧ ಸಂಕಲನ `ಅವತಾರಗಳು’ ಓದುತ್ತಿದ್ದೆ. ಓದುತ್ತಾ ಓದುತ್ತಾ ನಗು ತಡೆಯಲಾಗುತ್ತಿರಲಿಲ್ಲ. ಪುಸ್ತಕ ಓದುತ್ತಾ ಓದುತ್ತಾ ನಾನು ನನ್ನಷ್ಟಕ್ಕೆ ನಗುವುದನ್ನು ಯಾರಾದರೂ ನೋಡುತ್ತಿದ್ದಾರೇನೋ ಎಂದು ಓರೆ ಕಣ್ಣಿನಲ್ಲಿ ಸಹಪ್ರಯಣಿಕರನ್ನು ನೋಡುತ್ತಾ ಯಾರೂ ನನ್ನನ್ನು ನೋಡುತ್ತಿಲ್ಲ ಎಂದು ದೃಢ ಪಡಿಸಿಕೊಂಡು ಓದು ಮುಂದುವರೆಸುತ್ತಿದ್ದದ್ದು ಇನ್ನೂ ನೆನಪಿನಲ್ಲಿದೆ.

ಆ ನಂತರದಲ್ಲಿ ಆ ಅನುಭವವನ್ನು ನೆನೆದು ಖುಷಿಪಟ್ಟ, ಬೇರೆಯವರೊಂದಿಗೆ ಹಂಚಿಕೊಂಡು ನಕ್ಕ ಸಂದರ್ಭಗಳು ಅದೆಷ್ಟೋ.

ಸಿದ್ಧಲಿಂಗಯ್ಯನವರ ಕವನಗಳಂತೂ ಅದ್ಭುತ.

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳನ್ನು ಸೃಷ್ಟಿಸಿದ ತಾನೂ ಸಾಗರವೂ ಆಗದೆ ಕೊನೆಗೆ ನದಿಯೂ ಆಗದೇ ದೂರ ಸರಿದ ಬಗ್ಗೆ ಹಲವರು ಬೇಸರ ವ್ಯಕ್ತಿಪಡಿಸಿದ್ದಿದೆ. ಇರಬಹುದು ಅವರು ಹೋರಾಟದ ದಾರಿಯಿಂದ ದೂರ ಹೋಗಿರಬಹುದು ಆದರೆ ಅವರು ಆ ಕಾಲದಲ್ಲಿ ಬರೆದ ಕವನಗಳು ಇಂದಿಗೂ ಜನಸಮೂಹವನ್ನು ಹೋರಾಟದ ಸಾಗರಕ್ಕೆ ಸೆಳೆದೊಯ್ಯುತ್ತಿದೆ ಅನ್ನುವುದು ಕಡಿಮೆ ಸಾಧನೆಯೇನಲ್ಲ.

ಕವಿ ಸಿದ್ಧಲಿಂಗಯ್ಯ ಇನ್ನಿಲ್ಲ. ಆದರೂ ಅವರು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಯನ್ನು ಗುರುತಿಸಿ ಸಮಾಜವನ್ನು ಶೋಷಣಾರಹಿತವನ್ನಾಗಿ ಮಾಡಬೇಕು ಎನ್ನುವ ತುಡಿತದ ಕನ್ನಡಿಗರ ಮನಸ್ಸಿನಲ್ಲಿ ಸದಾ ಇರುತ್ತಾರೆ.

ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ಅಂತಿಮ ನಮನ.

ಅವತಾರಗಳು ಎಂಬ ಹೆಸರು ದಶಾವತಾರಗಳನ್ನು ನೆನಪಿಗೆ ತರುತ್ತದೆ. ಆದರೆ ಜನಪದ ದೇವತೆಗಳ ಅವತಾರಗಳು ಸಾವಿರಾರು. ಇಲ್ಲಿರುವ ವೈವಿಧ್ಯತೆ ಶಿಷ್ಟದೇವರುಗಳಲ್ಲಿ ಕಂಡು ಬರುವುದಿಲ್ಲ. ಅವತಾರಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಜನ ಭಿನ್ನವಾಗಿ ಕಾಣಿಸಿಕೊಳ್ಳುವ ರೀತಿ. ಯಾರಾದರೂ ತರಲೆ ಮಾಡಿದರೆ “ಏನು ನಿನ್ನ ಅವತಾರ” ಎನ್ನುತ್ತಾರೆ. “ಅವತಾರ ಮಾಡಬೇಡ, ನಿನ್ನ ಅವತಾರ ನನ್ನ ಹತ್ತಿರ ನಡೆಯೋದಿಲ್ಲ” ಎನ್ನುತ್ತಾರೆ. ಅವತಾರವೆಂದರೆ ಅಸಹಜ ವಾದದ್ದು, ತನ್ನ ಅಸಹಜತನದಿಂದ ಆಶ್ಚರ್ಯವನ್ನು ಉಂಟುಮಾಡುವಂಥದ್ದು ಎಂದು ಭಾವಿಸಲಾಗಿದೆ. ಈ ಪುಸ್ತಕವೂ ಸೂಚಿಸಲು ಪ್ರಯತ್ನಿಸುವುದು ಗ್ರಾಮಜೀವನದಲ್ಲಿ ಮೇಲಿಂದ ಮೇಲೆ ಕಾಣಿಸುವ ದೇವರ ಮತ್ತು ಈ ದೇವರಿಗೆ ಗಂಟುಬಿದ್ದ ಭಕ್ತರ ಅವತಾರಗಳನ್ನು, ದೂರನಿಂತು ನೋಡುವವರಿಗೆ ಇದು ಮನರಂಜನೆಯನ್ನೇನೋ ಒದಗಿಸೀತು, ಆದರೆ ಇದರ ಹಿಂದೆ ಮೌಡ್ಯ, ಅಜ್ಞಾನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ ಬಹಳ ಸಲ, ದೇವರ ಅವತಾರಗಳ ಹಿಂದೆ ಜನರ ಅಜ್ಞಾನವನ್ನು ಬಳಸಿಕೊಳ್ಳುವ ಯಾವನಾದರೊಬ್ಬನ ಜಾಣತನವೂ ಗೋಚರಿಸುತ್ತದೆ.

ಶೀರ್ಷಿಕೆ : ಅವತಾರಗಳು – ವೈನೋದಿಕ ಸಾಂಸ್ಕೃತಿಕ ಚಿಂತನೆ; ಲೇಖಕರು : ಡಾ. ಸಿದ್ಧಲಿಂಗಯ್ಯ ; ಪ್ರಕಾಶಕರು : ಅಂಕಿತ ಪುಸ್ತಕ ; ಸಾಹಿತ್ಯ ಪ್ರಕಾರ : ಪ್ರಬಂಧ ಸಂಕಲನ ; ಪುಟಗಳು : 120 ; ಬೆಲೆ ರೂ.95 ; ಪ್ರಕಟಣಾ ವರ್ಷ:1991

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: