ಅದು ಬಲು ಕಷ್ಟದ ಕೆಲಸ

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆಯ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು

ಹುಸಿನಗುತ್ತಾ ಎದುರಿಸುವುದಿದೆಯಲ್ಲಾ

ಅದು ಬಲು ಕಷ್ಟದ ಕೆಲಸ

 – ಕೆ ಎಸ್ ನಿಸಾರ್ ಅಹ್ಮದ್

ಸಾವಿರಾರು ನೂರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿನ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಬೇಧಗಳನ್ನು ಮೀರಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ.

ಈ ಶತಮಾನದ ’ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ  ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ.

ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು  ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನೆನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ’ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆಯವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಶ್ ಸರ್ಕಾರ. ಆ ಮೆಲೆಯೂ ಇಂತ ಪ್ರಕರಣಗಳು ಆಗಾಗ ನಡೆದದ್ದಿದೆ.  ಆದರೆ ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ  ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.

ಒಂದು ಕವಿತೆಯ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಪ್ರತಿಭಟಿಸಿ, ಸಿ.ಎ.ಎ-ಎನ್.ಆರ್.ಸಿ-ಎನ್.ಪಿ.ಆರ್ ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿಯವರ ಪದ್ಯ ಕೇವಲ ಎರಡು ದಿನಗಳಲ್ಲಿ ೧೧ ಭಾಷೆಗಳಿಗೆ ಅನುವಾದವಾಗಿ ’ವೈರಲ್ ಆಗಿದೆ. ಈಗಾಗಲೇ ಎನ್‌ಆರ್‌ಸಿ-ಪ್ರತಿರೋಧದ ಸಭೆ, ರ‍್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ’ಎನ್‌ಆರ್‌ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.

’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಇಲ್ಲಿ ಕನ್ನಡದಲ್ಲಿ ಪ್ರಮುಖವಾಗಿ ಎನ್‌ಆರ್‌ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ ಚಳುವಳಿಯ ’ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ’ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳುವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ. ಇಲ್ಲಿರುವ ಕವಿತೆಗಳಲ್ಲಿ ’ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ’ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ ಹಿಟ್ಟರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳುವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್‌ಆರ್‌ಸಿ ವಿರುದ್ಧ ಚಳುವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ’ಹಮ್ ದೇಖೇಂಗೆ’ಯ ಅನುವಾದವೂ ಇದೆ. ಇವಲ್ಲದೆ ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ.

ಶೀರ್ಷಿಕೆ: ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ ಆರ್ ಸಿ ಗೆ ಕಲಾ ಪ್ರತಿರೋಧ ಸಂಪಾದಕರು ಯಮುನಾ ಗಾಂವ್ಕರ್ ಪ್ರಕಾಶಕರು ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:64 ಬೆಲೆ: ರೂ.50/- ಪ್ರಕಟಣಾ ವರ್ಷ:2020

 

ನಾಚಿಕೆಯಿಂದ ತಲೆತಗ್ಗಿಸುವ ದಿನ


ಡಿಸೆಂಬರ‍್ 6, 1992.
ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ.

ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.

ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಅಯೊಧ್ಯಾ ಕಣೀರ ಕಾಂಡ ಕಲಾವಿದರು:ಪಿ. ಮಹಮ್ಮದ್ ಪ್ರಕಾಶಕರು:ಜನಸ್ನೇಹ ಪ್ರಕಾಶನ ಪುಟ:28 ಮೊದಲ ಮುದ್ರಣ:1993 ಬೆಲೆ:ರೂ.3/-

ಕಲೆಯ ವಿರಾಟ ದರ್ಶನ ಮಾಡಿಸುವ “ಕರ್ನಾಟಕ ಕಲಾದರ್ಶನ”

ನವೆಂಬರ್ ಹತ್ತಿರ ಬಂತೆಂದರೆ ಕನ್ನಡ, ಕರ್ನಾಟಕ ಪದಗಳಿಗೆ ಜೀವ ಬರುತ್ತದೆ.  ಕನ್ನಡಮ್ಮನ ತೇರು ಎಳೆಯುವ ಉತ್ಸಾಹ, ರಾಜ್ಯೋತ್ಸವದ ಭರಾಟೆ ಎಲ್ಲೆಡೆ.  ಕನ್ನಡ ಸಾಹಿತ್ಯದ ದಾಖಲೀಕರಣಗೊಂಡು ಒಂದು ಸಾವಿರದ ಐದುನೂರು ವರ್ಷಗಳಾಗಿವೆ.  ಅದಕ್ಕೂ ಅನೇಕ ಶತಮಾನಗಳ ಹಿಂದಿನಿಂದಲೂ ಕರ್ನಾಟಕ ಸಂಸ್ಕೃತಿ ಜನಪದ, ಕಲೆ, ವಾಸ್ತುಶಿಲ್ಪ ಇತ್ಯಾದಿ ರೂಪದಲ್ಲಿ ಜೀವಂತವಾಗಿ ಇಂದಿಗೂ ಉಳಿದಿದೆ.  ಈ ಸಜೀವ ಸಂಸ್ಕೃತಿಯನ್ನು ಒಂದೆಡೆ ದಾಖಲಿಸುವ, ಕರ್ನಾಟಕ ಸುವರ್ಣ ಸಂಭ್ರಮಕ್ಕೆ ನವಕರ್ನಾಟಕ  ಸುವರ್ಣ ಸಂಭ್ರಮದ ಎರಡು ಬೃಹತ್ ಸಂಪುಟಗಳು ಕಲಾಕಾಣಿಕೆಯಾಗಿ ಲೋಕಾರ್ಪಣೆಯಾಗಿವೆ.
ಎರಡು ಸಾವಿರ ವರ್ಷಗಳ ಕಲೆಯ ಸುದೀರ್ಘ ಇತಿಹಾಸವನ್ನು ಸಚಿತ್ರವಾಗಿ ಕಟ್ಟಿಕೊಟ್ಟಿರುವ ಇದು ಕಲಾದರ್ಶನವಲ್ಲ, ಕಲಾ ದರ್ಪಣ.  ಇದು ಬೇರೆ ಭಾಷೆಗಳಿಗೂ ಭಾಷಾಂತರಗೊಂಡು ನಮ್ಮ ದೇಶದ ಎಲ್ಲೆಡೆ ಸಿಗುವಂತಾಗಬೇಕು.  ಕನ್ನಡ ಸಂಸ್ಕೃತಿ ಮತ್ತು ಕಲೆ ವಿದೇಶವನ್ನು ತಲುಪುವಂತೆ ಮಾಡಬೇಕು.  ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿಗಳನ್ನೊಳಗೊಂಡ ಕರ್ನಾಟಕ ಕಲಾದರ್ಶನ ಕೃತಿಗಳನ್ನು ಸಂಸತ್ತಿನ ಗ್ರಂಥಭಂಡಾರಕ್ಕೆ ಕೊಡುಗೆಯಾಗಿ ನೀಡಲಾಗುವುದು. ಇದು ರಾಜ್ಯಸಭಾ ಸದಸ್ಯೆ ಹಾಗೂ ಖ್ಯಾತ ಚಲನಚಿತ್ರ ಮತ್ತು ರಂಗಕಲಾವಿದೆ ಶ್ರೀಮತಿ ಬಿ. ಜಯಶ್ರೀ ಅಭಿಪ್ರಾಯ.
ಕನರ್ಾಟಕದ ಸಾಂಸ್ಕೃತಿಕ ಲೋಕದ ಭಂಡಾರ. ಕಲೆಯ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಸಾವಿರಾರು ಚಿತ್ರಗಳ ಮೂಲಕ ವಿವರಿಸಿರುವುದರಿಂದ ಕೇವಲ ಅಕ್ಷರಸ್ಥರು ಮಾತ್ರವಲ್ಲದೇ ಅನಕ್ಷರಸ್ಥರೂ ಕೂಡ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು,ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕರ್ನಾಟಕ ಕಲಾದರ್ಶನ ಕೃತಿಗಳನ್ನು ಮನಸಾರೆ ಕೊಂಡಾಡಿದರು.
ಕಲೆಗೆ ನೆಲೆ ಬೇಕು.  ನೆಲೆ ದೊರಕಿದಲ್ಲಿ ಕಲೆಯ ಶಾಖೋಪಶಾಖೆಗಳು ವ್ಯಾಪಿಸುತ್ತವೆ.  ವಿಶ್ವ ಕಲಾ ಪರಂಪರೆಗೆ ಭಾರತೀಯರ ಕೊಡುಗೆ ಗಣನೀಯ ಪ್ರಮಾಣದ್ದು.  ಭಾರತದ ಕಲಾ ಪ್ರಪಂಚಕ್ಕೆ ಕನರ್ಾಟಕದ ಕೊಡುಗೆಯೂ ಅನನ್ಯ.  ಈ ಕೊಡುಗೆ ಆರಂಭದಲ್ಲಿ ರಾಜಾಶ್ರಯದ ಹಂಗಿಗೊಳಗಾಗಿದ್ದರೂ ಜನಪದರಲ್ಲಿ ಸ್ವತಂತ್ರ ಲಹರಿಯಾಗಿ ಹರಿದಾಡಿತ್ತು.  ಈಗ ಕಲೆಗೆ ಭದ್ರ ನೆಲೆ ಸಿಕ್ಕಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.  ಆದರೂ ಕಲೆಯ ನೂರಾರು ಪ್ರಕಾರಗಳನ್ನು ಒಂದೆಡೆ ದಾಖಲಿಸುವ ಅಪರೂಪದ ಪ್ರಯತ್ನವೊಂದು ನವಕರ್ನಾಟಕ ಪ್ರಕಾಶನದ ಆಸಕ್ತಿಯಿಂದಾಗಿ, ಪ್ರೊ. ಎಂ. ಎಚ್. ಕೃಷ್ಣಯ್ಯ, ಡಾ. ವಿಜಯಾ, ಸಿ.ಆರ್. ಕೃಷ್ಣರಾವ್ ಅವರ ಪರಿಶ್ರಮದಿಂದ, ಕಲಾಪ್ರಕಾರಗಳಲ್ಲಿ ನುರಿತ ತಜ್ಞರು, ತಂತ್ರಜ್ಞರು, ಛಾಯಾಗ್ರಾಹಕರಿಂದ ಜನಮನ ತಲುಪಲು ಸಿದ್ಧವಾಗಿ ಕಳೆದ ಆಗಸ್ಟ್ನಲ್ಲಿ ಲೋಕಾರ್ಪಣೆಗೊಂಡಿದೆ.
ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕರ್ನಾಟಕ ಕಲಾ ಪರಂಪರೆಯನ್ನು ಅನಾವರಣಗೊಳಿಸುವ ನವಕರ್ನಾಟಕ ಪ್ರಕಾಶನದ ವಿಶಿಷ್ಟ ಯೋಜನೆಯ ಫಲವಾಗಿ 4000ಕ್ಕೂ ಹೆಚ್ಚು ಅಪರೂಪದ ಕಪ್ಪು-ಬಿಳುಪು ಮತ್ತು ವರ್ಣಚಿತ್ರಗಳಿರುವ, 9 ವಿಭಾಗಗಳಿಂದ ಕೂಡಿದ 55 ಪರಿಣತರು ರಚಿಸಿದ 50 ಲೇಖನಗಳ 1200 ಪುಟಗಳ  1/4 ಡೆಮಿ ಆಕಾರದ ಆರ್ಟ್ ಪೇಪರ್ ಮೇಲೆ ಮುದ್ರಿತವಾಗಿರುವ ಬೃಹತ್ ಸಂಕಲನ ‘ಕನರ್ಾಟಕ ಕಲಾದರ್ಶನ’ ನವಕರ್ನಾಟಕ ಪ್ರಕಾಶನ ಸಂಸ್ಥೆ ತನ್ನ ಚಿನ್ನದ ಹಬ್ಬದ ಸಂದರ್ಭದಲ್ಲಿ ನಾಡುನುಡಿಗೆ ಸಲ್ಲಿಸಿದ ವಿಶೇಷ ಕಾಣಿಕೆ, ಸಾಂಸ್ಕೃತಿಕ ರಂಗಕ್ಕೆ ಕೊಟ್ಟ ಮಹಾನ್ ಕೊಡುಗೆಯಾಗಿದೆ.
‘ಚಿತ್ರಕಲೆ’ ವಿಭಾಗದಲ್ಲಿ ಸಾಂಪ್ರದಾಯಿಕ ಚಿತ್ರಕಲೆ, ಗಂಜೀಫಾ ಚಿತ್ರಕಲೆ, ಜನಪದ ಚಿತ್ರಕಲೆ, ಚಿಕಣಿ ಚಿತ್ರಕಲೆ, ತೊಗಲು ಬೊಂಬೆ, ರೇಖಾ ಚಿತ್ರಕಲೆ, ನವೋದಯ ಕಲೆ, ಗ್ರಾಫಿಕ್ ಕಲೆ, ಆಧುನಿಕ ಚಿತ್ರಕಲೆ, ಸ್ಥಾಪನಾ ಕಲೆ, ವಿಡಿಯೋ ಕಲೆ ಮತ್ತು  ವ್ಯಂಗ್ಯ ಚಿತ್ರಕಲೆ ಎಂಬ ಹನ್ನೆರಡು ಲೇಖನಗಳಿದ್ದು ಪ್ರತಿಯೊಂದನ್ನೂ ಹತ್ತಾರು ವರ್ಣ ಹಾಗೂ ಕಪ್ಪು-ಬಿಳುಪು ಸಾಂದರ್ಭಿಕ ಪ್ರಾತಿನಿಧಿಕ ಚಿತ್ರಗಳ ಮೂಲಕ ಸೂಕ್ತ ಕಲಾ ಇತಿಹಾಸದ ಹಿನ್ನೆಲೆಯಲ್ಲಿ ಪರಿಚಯಿಸಲಾಗಿದೆ.  ದೇವ ದೇವತೆಗಳಷ್ಞೇ ಅಲ್ಲದೇ ಪ್ರಸ್ತುತ ಸಮಾಜದ ಪಾಶ್ರ್ವನೋಟವನ್ನು ಯಥಾವತ್ತಾಗಿ ಚಿತ್ರಿಸುವ ಪ್ರಯತ್ನ ಇಲ್ಲಿದೆ.  ಕೊಲಾಜ್ ಕಲೆಯನ್ನೂ ಪ್ರಸ್ತಾಪಿಸಲಾಗಿದೆ.
‘ಶಿಲ್ಪಕಲೆ’ ವಿಭಾಗದಲ್ಲಿ ಸಾಂಪ್ರದಾಯಿಕ ಶಿಲ್ಪಕಲೆ, ಜನಪದ ಶಿಲ್ಪಕಲೆ, ಆಧುನಿಕ ಶಿಲ್ಪಕಲೆ, ಆಧುನಿಕ ಭಿತ್ತಿರೂಪಗಳು, ಮೂರ್ತಿ ಶಿಲ್ಪ, ವ್ಯಕ್ತಿ ಶಿಲ್ಪ ಕುರಿತಂತೆ ಐದು ಲೇಖನಗಳಿದ್ದು ಶಿಲ್ಪಕಲೆಯ ಮಾಧ್ಯಮವನ್ನು ಸಮಗ್ರವಾಗಿ ಹಿಡಿದಿಡುವ ಕೆಲಸ ಮಾಡಿವೆ.  ಶಿಲೆ, ಕಾಷ್ಠ, ಲೋಹ, ಪ್ಲಾಸ್ಟರ್ ಆಫ್ ಪ್ಯಾರಿಸ್, ಪೇಪರ್ ಮ್ಯಾಷೆ, ಮ್ಯೂರಲ್ ರಚನೆಗಳು, ರಚನಕಾರರ ಸಾಹಸ ಮತ್ತು ಆಧುನಿಕ ಜಗತ್ತಿನಲ್ಲಿ ಶಿಲ್ಪಕಲೆಯ ಸ್ಥಾನ ಕುರಿತಂತೆ ಸುದೀರ್ಘ ವಿವರಣೆಯ ಲೇಖನಗಳಿವೆ.
ಕರಕುಶಲ ಕಲೆ ಮತ್ತು ಕುಂದಣ ಕಲೆ ಎಂಬ ಎರಡೇ ಲೇಖನಗಳಿರುವ ‘ಕರಕುಶಲ ಕಲೆ’ ವಿಭಾಗದಲ್ಲಿ ರಾಮಾಯಣ ಕಾಲದಿಂದ ಇಲ್ಲಿಯವರೆಗೆ ಕುಶಲ ಕರ್ಮಿಗಳು ಶ್ರದ್ಧಾಭಕ್ತಿಗಳಿಂದ ಮುಂದುವರೆಸಿಕೊಂಡು ಬರುತ್ತಿರುವ ಪರಂಪರೆಯ ಪರಿಚಯವಿದೆ.  ಕುಂಭಕಲೆ, ಬಾಗಿಲ ವಿನ್ಯಾಸ, ಪೀಠೋಪಕರಣ, ಭಿತ್ತಿ ಫಲಕ, ಆಟಿಕೆಗಳಲ್ಲಿ ಮೂಡಿಬರುವ ಕರಕುಶಲತೆ ಮತ್ತು ಲೋಹ, ಕಾಷ್ಠಗಳ ಜೊತೆ ಮಣ್ಣಿನಿಂದ ಮಾಡುವ ಮೂರ್ತಿಗಳು, ಮರದ ಶಿಲ್ಪಗಳಲ್ಲಿ ಹುದುಗಿಸುವ ಪ್ಲಾಸ್ಟಿಕ್, ಲೋಹ, ಗಾಜು ಮೊದಲಾದ ವಸ್ತುಗಳಿಂದ ಒಡಮೂಡುವ ಸುಂದರ ಕಲಾಕೃತಿಗಳ ಸಚಿತ್ರ ನಿರೂಪಣೆ ಇದೆ.
‘ವಾಸ್ತುಶಿಲ್ಪ’ ವಿಭಾಗದಲ್ಲಿ ಪ್ರಾಚೀನ ವಾಸ್ತುಶಿಲ್ಪ, ಧ್ಯಾನ ಮಂದಿರಗಳು, ಔಪಯೋಗಿಕ ವಾಸ್ತುಕಲೆ, ಒಳಾಂಗಣ ವಿನ್ಯಾಸ, ಉದ್ಯಾನಗಳು ಎಂಬ ಐದು ಲೇಖನಗಳಿದ್ದು ಗುಡಿ ಗುಂಡಾರಗಳು, ಧ್ಯಾನ ಮಂದಿರಗಳು, ವಿವಿಧ ಧರ್ಮಗಳಿಗೆ ಸೇರಿದ ಪ್ರಾರ್ಥನಾ ಸ್ಥಳಗಳು ಮತ್ತು ಇತ್ತೀಚಿನ ವಾಣಿಜ್ಯ ಕಲೆಯಾದ ಒಳಾಂಗಣ ವಿನ್ಯಾಸ ಹಾಗೂ ಉದ್ಯಾನ ಕಲೆಗಳ ಸಮಗ್ರ ಪರಿಚಯ ಇಲ್ಲಿದೆ.  ಕರ್ನಾಟಕದ ಉದ್ದಗಲಕ್ಕೂ ಓಡಾಡಿ ಸೂಕ್ತ ಚಿತ್ರಗಳನ್ನು ಸಂಗ್ರಹಿಸಿ ನೀಡಲಾಗಿದೆ.
‘ಛಾಯಾಚಿತ್ರಕಲೆ’ ವಿಭಾಗದಲ್ಲಿ ಛಾಯಾ ಚಿತ್ರಕಲೆ, ವನ್ಯಜೀವಿ ಛಾಯಾ ಚಿತ್ರಕಲೆ, ವಾಣಿಜ್ಯ ಮತ್ತು ಗಣಕ ಕಲೆ ಎಂಬ ಮೂರು ಲೇಖನಗಳಿದ್ದು ಕಳೆದ ಎರಡು ಶತಮಾನಗಳಲ್ಲಿ ನೆರಳು ಬೆಳಕಿನ ಆಟವೇ ಕಲೆಯಾಗಿ ಸಾರ್ವಕಾಲಿಕ ದಾಖಲೆಯಾಗಿರುವುದರ ಜೊತೆಗೆ ರಮ್ಯ ಮನೋಹರ ಒಳಾಂಗಣ, ಹೊರಾಂಗಣ ಛಾಯಾಚಿತ್ರಗಳ ಅಪರೂಪದ ಸಂಕಲನವೇ ಇಲ್ಲಿದೆ.  ವನ್ಯಜೀವಿಗಳ ಚಿತ್ರಗಳಿಗಾಗಿ ಜೀವಮಾನ ಪರ್ಯಂತ ಕಾಡುಗಳಲ್ಲೇ ಸಂಚರಿಸಿ, ಜೀವವನ್ನೇ ಪಣಕ್ಕಿಟ್ಟು ಚಿತ್ರಿಸಿದ ಛಾಯಾಗ್ರಾಹಕರ ಪರಿಶ್ರಮಕ್ಕೆ ಎಷ್ಟು ಬೆಲೆಕಟ್ಟಿದರೂ ಸಾಲದು.  ಅನಘ್ರ್ಯ ವನರಾಜ್ಞಿಯನ್ನು ಪುಟ್ಟ ಕಿಟಕಿಯಲ್ಲಿ ಹಿಡಿದುಕೊಡುವ ಈ ಸಾಹಸಿಗಳ ಚಿತ್ರಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಲೇ ನಮ್ಮನ್ನು ವನಪ್ರದೇಶಗಳಿಗೆ ಕರೆದೊಯ್ಯುತ್ತವೆ.
‘ರಂಗಭೂಮಿ’ ವಿಭಾಗದಲ್ಲಿ ವೃತ್ತಿರಂಗಭೂಮಿ – ಮೈಸೂರು, ವೃತಿರಂಗಭೂಮಿ – ಉತ್ತರ ಕರ್ನಾಟಕ, ಆಧುನಿಕ ರಂಗಭೂಮಿ, ಅನ್ಯಭಾಷಾ ರಂಗಭೂಮಿ, ಮೌನ ನಾಟಕ, ಬೀದಿ ನಾಟಕ, ಜನಪದ ರಂಗಭೂಮಿ, ರಂಗಮಂದಿರಗಳು, ರಂಗ ಸಂಗೀತ, ರಂಗಸಜ್ಜಿಕೆ ಎಂಬ ಹತ್ತು ಲೇಖನಗಳಿದ್ದು ರಂಗಕಲೆಯ ಇತಿಹಾಸದ ಜೊತೆ ಪ್ರಸ್ತುತ ಸ್ಥಿತಿಗತಿಯನ್ನೂ ಚರ್ಚಿಸುವ ಸಚಿತ್ರ ನಿರೂಪಣೆ ಇಲ್ಲಿದೆ.  ರಂಗಕಲೆಗಾಗಿ ಬದುಕು ಸವೆಸಿದವರನ್ನು ನೆನೆಯುತ್ತಲೇ ರಂಗಮಂಚದಲ್ಲಾದ ಸ್ಥಿತ್ಯಂತರಗಳನ್ನು ಇಲ್ಲಿ ದಾಖಲಿಸಲಾಗಿದೆ.  ರಂಗಭೂಮಿ ಹೊಸ ಪ್ರಯೋಗಗಳಿಂದ ಇನ್ನೂ ಆಕರ್ಷಣೆ ಉಳಿಸಿಕೊಂಡಿದ್ದು ಇನ್ನಷ್ಟು ಕಳೆಕಳೆಯಾಗಿ ಹೊಸ ಪೀಳಿಗೆಯವರನ್ನು ಸೆಳೆಯುತ್ತಿದೆ.  ರಂಗಸಜ್ಜಿಕೆಯೂ ಆಧುನಿಕತೆಯ ಮೆರಗನ್ನು ಪಡೆಯುತ್ತಿದೆ.  ಇತ್ತೀಚಿನ ಬೆಳವಣಿಗೆಗಳಾದ ಮಲ್ಟಿಮೀಡಿಯಾ ಪ್ರೊಜೆಕ್ಟರ್ಬಳಕೆ, ಬಣ್ಣದ ಹದಮಿಶ್ರಣಕ್ಕಾಗಿ ಕಂಪ್ಯೂಟರ್ ನೆರವು ಬೀದಿಬದಿಯ ಹೈಕಳಿಂದ ಹಿಡಿದು ಐ.ಟಿ. ತಜ್ಞರವರೆಗೆ ಎಲ್ಲರನ್ನೂ ರಂಗಭೂಮಿ ಆವರಿಸಿದೆ.  ಆರಂಭದ ರಂಗಪ್ರದರ್ಶನದಿಂದ ಇತ್ತೀಚಿನ ‘ರಂಗಾಯಣದ ಮಲೆಗಳಲ್ಲಿ ಮದುಮಗಳು’  ನಾಟಕ ಪ್ರದರ್ಶನದವರೆಗೆ ಸಚಿತ್ರ ನಿರೂಪಣೆಯೊಂದಿಗೆ ಪ್ರಕೃತಿಯ ಮಡಿಲಲ್ಲಿ ನಡೆಸಿದ ವಿವಿಧ ಪ್ರಯೋಗಗಳು, ಬೀದಿನಾಟಕಗಳು,  ಮೈಮ್ ಷೋ, ಜನಪದ ರಂಗಭೂಮಿಯ ಡಪ್ಪಿನಾಟ, ರಾಧಾನಾಟ, ಶ್ರೀಕೃಷ್ಣ ಪಾರಿಜಾತಗಳು ಚಿತ್ರಸಮೇತ ಪ್ರಸ್ತಾಪಿತವಾಗಿರುವುದು ಇಲ್ಲಿನ ವಿಶೇಷ.  ರಂಗಶಾಲೆಗಳಿಗೆ, ಸಂಗೀತ ಶಾಲೆಗಳಿಗೆ ಮತ್ತು ಕಲೆಯ ಯಾವುದೇ ಪ್ರಕಾರದ ಶೈಕ್ಷಣಿಕ ಸಂಸ್ಥೆಗಳಿಗೆ ಇವು ಅಗತ್ಯ ಆಕರಗ್ರಂಥಗಳಾಗಿವೆ.
‘ಸಂಗೀತ’ ವಿಭಾಗದಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಪಾಶ್ಚಾತ್ಯ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ಗಮಕ ಕಲೆ, ಕಥಾ ಕೀರ್ತನೆ ಎಂಬ ಏಳು ಲೇಖನಗಳಿದ್ದು ಭಾರತೀಯ ಸಂಗೀತ ಪರಂಪರೆಯ ಎರಡು ಕವಲುಗಳನ್ನು, ಕರ್ನಾಟಕ ಸಂಗೀತದ ಪೂರ್ವಸೂರಿಗಳನ್ನು, ಆಧುನಿಕತೆಯ ಮೆರಗನ್ನು ನೀಡಿರುವ ವಾದ್ಯಗಳನ್ನು, ಬುರ್ರಕಥಾ, ಗೀಗೀ, ಹಂತಿ, ಜುಂಜಪ್ಪನ ಪದ, ಸೋಬಾನೆ ಪದ, ಬೀಸೋಕಲ್ಲಿನ ಪದ, ಸುಗ್ಗಿಹಾಡು, ಮೊದಲಾದ ಜನಪದ ಪ್ರಕಾರಗಳನ್ನು, ಸುಗಮಸಂಗೀತದೆಡೆಗೆ ತುಡಿಯುತ್ತಿರುವ ಪ್ರವೃತ್ತಿಯನ್ನು ಸುದೀರ್ಘವಾಗಿ ಇಲ್ಲಿ ಚರ್ಚಿಸಲಾಗಿದೆ.  ಪಂಡಿತ್ ಭೀಮಸೇನಜೋಷಿ ಮತ್ತು ಗಂಗೂಬಾಯಿ ಹಾನಗಲ್ಅವರ ಅಪರೂಪದ ಚಿತ್ರಗಳು ಇಲ್ಲಿನ ಆಕರ್ಷಣೆಗಳಾಗಿವೆ.
‘ನೃತ್ಯಕಲೆ’ ವಿಭಾಗದಲ್ಲಿ  ಕನರ್ಾಟಕದಲ್ಲಿ ನೃತ್ಯಕಲೆ, ಯಕ್ಷಗಾನ, ಜನಪದ ನೃತ್ಯಕಲೆ ಎಂಬ ಮೂರು ಲೇಖನಗಳಿದ್ದು ಶಾಸ್ತ್ರೀಯ ನೃತ್ಯ ಮತ್ತು ಜನಪದ ನೃತ್ಯಗಳ ಜೊತೆ ಯಕ್ಷಗಾನವೂ ಪ್ರಸ್ತಾಪಿತವಾಗಿದೆ.  ಸೋಮನಕುಣಿತ, ಪಟದ ಕುಣಿತ, ನಂದೀಧ್ವಜ ಕುಣಿತ, ಹೋಳಿ ಕುಣಿತ, ಕರಗ ಮುಂತಾದ ಜನಪದ ನರ್ತನ ಪ್ರಕಾರಗಳ ವಿಶೇಷ ಚಿತ್ರಗಳು ಇಲ್ಲಿವೆ.
‘ಚಲನಚಿತ್ರ’ ವಿಭಾಗದಲ್ಲಿ ಚಲನಚಿತ್ರ, ಹೊಸ ಅಲೆ, ಚಿತ್ರ ಸಂಗೀತ ಮತ್ತು ಸಾಕ್ಷ್ಯಚಿತ್ರಗಳು ಎಂಬ ನಾಲ್ಕು ಅಧ್ಯಾಯಗಳಲ್ಲಿ 1925 ರಿಂದ ಆರಂಭಗೊಂಡ ಕನ್ನಡಿಗರು ತಯಾರಿಸಿದ ಮೂಕಿ ಚಿತ್ರಗಳು, 75 ವಸಂತಗಳನ್ನು ಪೂರೈಸಿರುವ ಕನ್ನಡ ವಾಕ್ಚಿತ್ರಗಳು, ನಡೆದುಬಂದ ದಾರಿಯ ಪಕ್ಷಿನೋಟವಿದೆ.  ಗುಬ್ಬೀವೀರಣ್ಣನವರಿಂದ ಆರಂಭಿಸಿ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಪ್ರಮುಖ ನಟರು, ಚಲನಚಿತ್ರ ಸಂಗೀತಕಾರರು, ನಿರ್ದೇಶಕರ ಪರಿಶ್ರಮ ಇಲ್ಲಿನ ಛಾಯಾ ಚಿತ್ರಗಳಲ್ಲಿ ದಾಖಲೆಗೊಂಡಿವೆ.
ಕಲೆಯ ಇತಿಹಾಸ-ವರ್ತಮಾನ-ಭವಿಷ್ಯದ ಯೋಜನೆಗಳನ್ನು ದಾಖಲಿಸುವ, ಕಲಾಪ್ರಪಂಚದ ವಿರಾಟ್ದರ್ಶನ ಮಾಡಿಸುವ ‘ಕನರ್ಾಟಕ ಕಲಾದರ್ಶನ’ದ ಬೃಹತ್ ಸಂಪುಟಗಳು ಇದೇ ಆಗಸ್ಟ್ನಲ್ಲಿ ಬಿಡುಗಿವೆ.  ಈ ಸಂಪುಟಗಳೊಂದಿಗೆ ಇಡೀ ಕೃತಿಯ ವಿದ್ಯುನ್ಮಾನ ಪುಸ್ತಕ (ಇ-ಬುಕ್) ಅಡಕ ಬಿಲ್ಲೆ (ಸಿ.ಡಿ.) ರೂಪದಲ್ಲಿ ಉಚಿತವಾಗಿ ನೀಡಲಾಗಿದೆ.  ಕನ್ನಡಿಗರ ಮನೆ, ಶಾಲೆ, ಕಾಲೇಜು, ಕಛೇರಿಗಳಲ್ಲಿ ಅತ್ಯಗತ್ಯವಾಗಿ ಶೋಭಿಸಬೇಕಿರುವ ಈ ‘ಕನರ್ಾಟಕ ಕಲಾದರ್ಶನ’ದ ಮಾದರಿ ಪುಟಗಳು ಬ್ಲಾಗ್ನಲ್ಲಿ ಲಭ್ಯವಿವೆ. ಮಾಹಿತಿಗಾಗಿ ಭೇಟಿ ನೀಡಿ : http://navakarnataka.blogspot.com

ಶೀರ್ಷಿಕೆ: ಕರ್ನಾಟಕ ಕಲಾದರ್ಶನ (ಎರಡು ಸಂಪುಟಗಳು – ಸಿಡಿ ಸಹಿತ) ಸಂಪಾದಕರು:ಪ್ರೊ.ಎಂ.ಎಚ್.ಕೃಷ್ಣಯ್ಯ, ಡಾ.ವಿಜಯಾ, ಸಿ.ಆರ‍್.ಕೃಷ್ಣರಾವ್ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:1200 ಬೆಲೆ:ರೂ.3000/-

PÀ¯ÉAiÀÄ «gÁmï zÀ±Àð£À ªÀiÁr¸ÀĪÀ “PÀ£ÁðlPÀ PÀ¯ÁzÀ±Àð£À”

£ÀªÉA§gï ºÀwÛgÀ §AvÉAzÀgÉ PÀ£ÀßqÀ, PÀ£ÁðlPÀ ¥ÀzÀUÀ½UÉ fêÀ §gÀÄvÀÛzÉ.  PÀ£ÀßqÀªÀÄä£À vÉÃgÀÄ J¼ÉAiÀÄĪÀ GvÁìºÀ, gÁeÉÆåÃvÀìªÀzÀ ¨sÀgÁmÉ J¯ÉèqÉ.  PÀ£ÀßqÀ ¸Á»vÀåzÀ zÁR°ÃPÀgÀtUÉÆAqÀÄ MAzÀÄ ¸Á«gÀzÀ LzÀÄ£ÀÆgÀÄ ªÀµÀðUÀ¼ÁVªÉ.  CzÀPÀÆÌ C£ÉÃPÀ ±ÀvÀªÀiÁ£ÀUÀ¼À »A¢¤AzÀ®Æ PÀ£ÁðlPÀ ¸ÀA¸ÀÌøw d£À¥ÀzÀ, PÀ¯É, ªÁ¸ÀÄÛ²®à EvÁå¢ gÀÆ¥ÀzÀ°è fêÀAvÀªÁV EA¢UÀÆ G½¢zÉ.  F ¸ÀfêÀ ¸ÀA¸ÀÌøwAiÀÄ£ÀÄß MAzÉqÉ zÁR°¸ÀĪÀ, PÀ£ÁðlPÀzÀ ¸ÀĪÀtð ¸ÀA¨sÀæªÀÄPÉÌ £ÀªÀPÀ£ÁðlPÀ  ¸ÀĪÀtð ¸ÀA¨sÀæªÀÄzÀ JgÀqÀÄ §ÈºÀvï ¸ÀA¥ÀÄlUÀ¼ÀÄ PÀ¯ÁPÁtÂPÉAiÀiÁV ¯ÉÆÃPÁ¥ÀðuÉAiÀiÁVªÉ.

“JgÀqÀÄ ¸Á«gÀ ªÀµÀðUÀ¼À PÀ¯ÉAiÀÄ ¸ÀÄ¢ÃWÀð EwºÁ¸ÀªÀ£ÀÄß ¸ÀavÀæªÁV PÀnÖPÉÆnÖgÀĪÀ EzÀÄ PÀ¯ÁzÀ±Àð£ÀªÀ®è, PÀ¯Á zÀ¥Àðt.  EzÀÄ ¨ÉÃgÉ ¨sÁµÉUÀ½UÀÆ ¨sÁµÁAvÀgÀUÉÆAqÀÄ £ÀªÀÄä zÉñÀzÀ J¯ÉèqÉ ¹UÀĪÀAvÁUÀ¨ÉÃPÀÄ.  PÀ£ÀßqÀ ¸ÀA¸ÀÌøw ªÀÄvÀÄÛ PÀ¯É «zÉñÀªÀ£ÀÄß vÀ®Ä¥ÀĪÀAvÉ ªÀiÁqÀ¨ÉÃPÀÄ.  F ¤nÖ£À°è PÀ£ÀßqÀ ¸ÀA¸ÀÌøwUÀ¼À£ÉÆß¼ÀUÉÆAqÀ PÀ£ÁðlPÀ PÀ¯ÁzÀ±Àð£À PÀÈwUÀ¼À£ÀÄß ¸ÀA¸ÀwÛ£À UÀæAxÀ¨sÀAqÁgÀPÉÌ PÉÆqÀÄUÉAiÀiÁV ¤ÃqÀ¯ÁUÀĪÀÅzÀÄ.” EzÀÄ gÁdå¸À¨sÁ ¸ÀzÀ¸Éå ºÁUÀÆ SÁåvÀ ZÀ®£ÀavÀæ ªÀÄvÀÄÛ gÀAUÀPÀ¯Á«zÉ ²æêÀÄw ©. dAiÀIJæà C©ü¥ÁæAiÀÄ.

“PÀ£ÁðlPÀzÀ ¸ÁA¸ÀÌøwPÀ ¯ÉÆÃPÀzÀ ¨sÀAqÁgÀ. PÀ¯ÉAiÀÄ EwºÁ¸ÀªÀ£ÀÄß PÀtÂÚUÉ PÀlÄÖªÀAvÉ ¸Á«gÁgÀÄ avÀæUÀ¼À ªÀÄÆ®PÀ «ªÀj¹gÀĪÀÅzÀjAzÀ PÉêÀ® CPÀëgÀ¸ÀÜgÀÄ ªÀiÁvÀæªÀ®èzÉà C£ÀPÀëgÀ¸ÀÜgÀÆ PÀÆqÀ EzÀ£ÀÄß ¸ÀÄ®¨sÀªÁV CxÀðªÀiÁrPÉƼÀÀÄzÀÄ,”JAzÀÄ PÀ£ÀßqÀ C©üªÀÈ¢Þ ¥Áæ¢üPÁgÀ CzsÀåPÀë ªÀÄÄRåªÀÄAwæ ZÀAzÀÄæ PÀ£ÁðlPÀ PÀ¯ÁzÀ±Àð£À PÀÈwUÀ¼À£ÀÄß ªÀÄ£À¸ÁgÉ PÉÆAqÁrzÀgÀÄ.

PÀ¯ÉUÉ £É¯É ¨ÉÃPÀÄ.  £É¯É zÉÆgÀQzÀ°è PÀ¯ÉAiÀÄ ±ÁSÉÆÃ¥À±ÁSÉUÀ¼ÀÄ ªÁ妸ÀÄvÀÛªÉ.  «±Àé PÀ¯Á ¥ÀgÀA¥ÀgÉUÉ ¨sÁgÀwÃAiÀÄgÀ PÉÆqÀÄUÉ UÀt¤ÃAiÀÄ ¥ÀæªÀiÁtzÀÄÝ.  ¨sÁgÀvÀzÀ PÀ¯Á ¥Àæ¥ÀAZÀPÉÌ PÀ£ÁðlPÀzÀ PÉÆqÀÄUÉAiÀÄÆ C£À£Àå.  F PÉÆqÀÄUÉ DgÀA¨sÀzÀ°è gÁeÁ±ÀæAiÀÄzÀ ºÀAVUÉƼÀUÁVzÀÝgÀÆ d£À¥ÀzÀgÀ°è ¸ÀévÀAvÀæ ®ºÀjAiÀiÁV ºÀjzÁrvÀÄÛ.  FUÀ PÀ¯ÉUÉ ¨sÀzÀæ £É¯É ¹QÌzÉAiÉÄà JA§ÄzÀÄ AiÀÄPÀë¥Àæ±ÉßAiÀiÁVzÉ.  DzÀgÀÆ PÀ¯ÉAiÀÄ £ÀÆgÁgÀÄ ¥ÀæPÁgÀUÀ¼À£ÀÄß MAzÉqÉ zÁR°¸ÀĪÀ C¥ÀgÀÆ¥ÀzÀ ¥ÀæAiÀÄvÀߪÉÇAzÀÄ £ÀªÀPÀ£ÁðlPÀ ¥ÀæPÁ±À£ÀzÀ D¸ÀQÛ¬ÄAzÁV, ¥ÉÆæ. JA. JZï. PÀȵÀÚAiÀÄå, qÁ. «dAiÀiÁ, ¹.Dgï. PÀȵÀÚgÁªï CªÀgÀ ¥Àj±ÀæªÀÄ¢AzÀ, PÀ¯Á¥ÀæPÁgÀUÀ¼À°è £ÀÄjvÀ vÀdÕgÀÄ, vÀAvÀædÕgÀÄ, bÁAiÀiÁUÁæºÀPÀjAzÀ d£ÀªÀÄ£À vÀ®Ä¥À®Ä ¹zÀÞªÁV PÀ¼ÉzÀ DUÀ¸ïÖ£À°è ¯ÉÆÃPÁ¥ÀðuÉUÉÆArzÉ.

¸ÀĪÀiÁgÀÄ JgÀqÀÄ ¸Á«gÀ ªÀµÀðUÀ½UÀÆ ºÉaÑ£À EwºÁ¸À ºÉÆA¢gÀĪÀ PÀ£ÁðlPÀ PÀ¯Á ¥ÀgÀA¥ÀgÉAiÀÄ£ÀÄß C£ÁªÀgÀtUÉƽ¸ÀĪÀ £ÀªÀPÀ£ÁðlPÀ ¥ÀæPÁ±À£ÀzÀ «²µÀÖ AiÉÆÃd£ÉAiÀÄ ¥sÀ®ªÁV 4000PÀÆÌ ºÉZÀÄÑ C¥ÀgÀÆ¥ÀzÀ PÀ¥ÀÄà-©¼ÀÄ¥ÀÄ ªÀÄvÀÄÛ ªÀtðavÀæUÀ½gÀĪÀ, 9 «¨sÁUÀUÀ½AzÀ PÀÆrzÀ 55 ¥ÀjtvÀgÀÄ gÀa¹zÀ 50 ¯ÉÃR£ÀUÀ¼À 1200 ¥ÀÄlUÀ¼À  1/4 qÉ«Ä DPÁgÀzÀ Dmïð ¥ÉÃ¥Àgï ªÉÄÃ¯É ªÀÄÄ¢ævÀªÁVgÀĪÀ §ÈºÀvï ¸ÀAPÀ®£À ‘PÀ£ÁðlPÀ PÀ¯ÁzÀ±Àð£À’ £ÀªÀPÀ£ÁðlPÀ ¥ÀæPÁ±À£À ¸ÀA¸ÉÜ vÀ£Àß a£ÀßzÀ ºÀ§âzÀ ¸ÀAzÀ¨sÀðzÀ°è £ÁqÀÄ£ÀÄrUÉ ¸À°è¹zÀ «±ÉõÀ PÁtÂPÉ, ¸ÁA¸ÀÌøwPÀ gÀAUÀPÉÌ PÉÆlÖ ªÀĺÁ£ï PÉÆqÀÄUÉAiÀiÁVzÉ.

avÀæPÀ¯É’ «¨sÁUÀzÀ°è ¸ÁA¥ÀæzÁ¬ÄPÀ avÀæPÀ¯É, UÀAfÃ¥sÁ avÀæPÀ¯É, d£À¥ÀzÀ avÀæPÀ¯É, aPÀt avÀæPÀ¯É, vÉÆUÀ®Ä ¨ÉÆA¨É, gÉÃSÁ avÀæPÀ¯É, £ÀªÉÇÃzÀAiÀÄ PÀ¯É, UÁæ¦üPï PÀ¯É, DzsÀĤPÀ avÀæPÀ¯É, ¸ÁÜ¥À£Á PÀ¯É, «rAiÉÆà PÀ¯É ªÀÄvÀÄÛ ªÀåAUÀå avÀæPÀ¯É JA§ ºÀ£ÉßgÀqÀÄ ¯ÉÃR£ÀUÀ½zÀÄÝ ¥ÀæwAiÉÆAzÀ£ÀÆß ºÀvÁÛgÀÄ ªÀtð ºÁUÀÆ PÀ¥ÀÄà-©¼ÀÄ¥ÀÄ ¸ÁAzÀ©üðPÀ ¥Áæw¤¢üPÀ avÀæUÀ¼À ªÀÄÆ®PÀ ¸ÀÆPÀÛ PÀ¯Á EwºÁ¸ÀzÀ »£É߯ÉAiÀÄ°è ¥ÀjZÀ¬Ä¸À¯ÁVzÉ.  zÉêÀ zÉêÀvÉUÀ¼ÀµÉÕà C®èzÉà ¥Àæ¸ÀÄÛvÀ ¸ÀªÀiÁdzÀ ¥Á±Àéð£ÉÆÃlªÀ£ÀÄß AiÀÄxÁªÀvÁÛV awæ¸ÀĪÀ ¥ÀæAiÀÄvÀß E°èzÉ.  PÉƯÁeóï PÀ¯ÉAiÀÄ£ÀÆß ¥Àæ¸ÁÛ¦¸À¯ÁVzÉ.

²®àPÀ¯É’ «¨sÁUÀzÀ°è ¸ÁA¥ÀæzÁ¬ÄPÀ ²®àPÀ¯É, d£À¥ÀzÀ ²®àPÀ¯É, DzsÀĤPÀ ²®àPÀ¯É, DzsÀĤPÀ ©üwÛgÀÆ¥ÀUÀ¼ÀÄ, ªÀÄÆwð ²®à, ªÀåQÛ ²®à PÀÄjvÀAvÉ LzÀÄ ¯ÉÃR£ÀUÀ½zÀÄÝ ²®àPÀ¯ÉAiÀÄ ªÀiÁzsÀåªÀĪÀ£ÀÄß ¸ÀªÀÄUÀæªÁV »r¢qÀĪÀ PÉ®¸À ªÀiÁrªÉ.  ²¯É, PÁµÀ×, ¯ÉÆúÀ, ¥Áè¸ÀÖgï D¥sï ¥Áåj¸ï, ¥ÉÃ¥Àgï ªÀiÁåµÉ, ªÀÄÆågÀ¯ï gÀZÀ£ÉUÀ¼ÀÄ, gÀZÀ£ÀPÁgÀgÀ ¸ÁºÀ¸À ªÀÄvÀÄÛ DzsÀĤPÀ dUÀwÛ£À°è ²®àPÀ¯ÉAiÀÄ ¸ÁÜ£À PÀÄjvÀAvÉ ¸ÀÄ¢ÃWÀ𠫪ÀgÀuÉAiÀÄ ¯ÉÃR£ÀUÀ½ªÉ.

PÀgÀPÀıÀ® PÀ¯É ªÀÄvÀÄÛ PÀÄAzÀt PÀ¯É JA§ JgÀqÉà ¯ÉÃR£ÀUÀ½gÀĪÀ ‘PÀgÀPÀıÀ® PÀ¯É’ «¨sÁUÀzÀ°è gÁªÀiÁAiÀÄt PÁ®¢AzÀ E°èAiÀĪÀgÉUÉ PÀıÀ® PÀ«ÄðUÀ¼ÀÄ ±ÀæzÁÞ¨sÀQÛUÀ½AzÀ ªÀÄÄAzÀĪÀgɹPÉÆAqÀÄ §gÀÄwÛgÀĪÀ ¥ÀgÀA¥ÀgÉAiÀÄ ¥ÀjZÀAiÀÄ«zÉ.  PÀÄA¨sÀPÀ¯É, ¨ÁV® «£Áå¸À, ¦ÃoÉÆÃ¥ÀPÀgÀt, ©üwÛ ¥sÀ®PÀ, DnPÉUÀ¼À°è ªÀÄÆr§gÀĪÀ PÀgÀPÀıÀ®vÉ ªÀÄvÀÄÛ ¯ÉÆúÀ, PÁµÀ×UÀ¼À eÉÆvÉ ªÀÄtÂÚ¤AzÀ ªÀiÁqÀĪÀ ªÀÄÆwðUÀ¼ÀÄ, ªÀÄgÀzÀ ²®àUÀ¼À°è ºÀÄzÀÄV¸ÀĪÀ ¥Áè¹ÖPï, ¯ÉÆúÀ, UÁdÄ ªÉÆzÀ¯ÁzÀ ªÀ¸ÀÄÛUÀ½AzÀ MqÀªÀÄÆqÀĪÀ ¸ÀÄAzÀgÀ PÀ¯ÁPÀÈwUÀ¼À ¸ÀavÀæ ¤gÀÆ¥ÀuÉ EzÉ.

ªÁ¸ÀÄÛ²®à’ «¨sÁUÀzÀ°è ¥ÁæaãÀ ªÁ¸ÀÄÛ²®à, zsÁå£À ªÀÄA¢gÀUÀ¼ÀÄ, O¥ÀAiÉÆÃVPÀ ªÁ¸ÀÄÛPÀ¯É, M¼ÁAUÀt «£Áå¸À, GzÁå£ÀUÀ¼ÀÄ JA§ LzÀÄ ¯ÉÃR£ÀUÀ½zÀÄÝ UÀÄr UÀÄAqÁgÀUÀ¼ÀÄ, zsÁå£À ªÀÄA¢gÀUÀ¼ÀÄ, ««zsÀ zsÀªÀÄðUÀ½UÉ ¸ÉÃjzÀ ¥ÁæxÀð£Á ¸ÀܼÀUÀ¼ÀÄ ªÀÄvÀÄÛ EwÛÃa£À ªÁtÂdå PÀ¯ÉAiÀiÁzÀ M¼ÁAUÀt «£Áå¸À ºÁUÀÆ GzÁå£À PÀ¯ÉUÀ¼À ¸ÀªÀÄUÀæ ¥ÀjZÀAiÀÄ E°èzÉ.  PÀ£ÁðlPÀzÀ GzÀÝUÀ®PÀÆÌ NqÁr ¸ÀÆPÀÛ avÀæUÀ¼À£ÀÄß ¸ÀAUÀ滹 ¤ÃqÀ¯ÁVzÉ.

bÁAiÀiÁavÀæPÀ¯É’ «¨sÁUÀzÀ°è bÁAiÀiÁ avÀæPÀ¯É, ªÀ£Àåfë bÁAiÀiÁ avÀæPÀ¯É, ªÁtÂdå ªÀÄvÀÄÛ UÀtPÀ PÀ¯É JA§ ªÀÄÆgÀÄ ¯ÉÃR£ÀUÀ½zÀÄÝ PÀ¼ÉzÀ JgÀqÀÄ ±ÀvÀªÀiÁ£ÀUÀ¼À°è £ÉgÀ¼ÀÄ ¨É¼ÀQ£À DlªÉà PÀ¯ÉAiÀiÁV ¸ÁªÀðPÁ°PÀ zÁR¯ÉAiÀiÁVgÀĪÀÅzÀgÀ eÉÆvÉUÉ gÀªÀÄå ªÀÄ£ÉÆúÀgÀ M¼ÁAUÀt, ºÉÆgÁAUÀt bÁAiÀiÁavÀæUÀ¼À C¥ÀgÀÆ¥ÀzÀ ¸ÀAPÀ®£ÀªÉà E°èzÉ.  ªÀ£ÀåfëUÀ¼À avÀæUÀ½UÁV fêÀªÀiÁ£À ¥ÀgÀåAvÀ PÁqÀÄUÀ¼À¯Éèà ¸ÀAZÀj¹, fêÀªÀ£Éßà ¥ÀtQÌlÄÖ awæ¹zÀ bÁAiÀiÁUÁæºÀPÀgÀ ¥Àj±ÀæªÀÄPÉÌ JµÀÄÖ ¨É¯ÉPÀnÖzÀgÀÆ ¸Á®zÀÄ.  C£ÀWÀåð ªÀ£ÀgÁfÕAiÀÄ£ÀÄß ¥ÀÄlÖ QlQAiÀÄ°è »rzÀÄPÉÆqÀĪÀ F ¸ÁºÀ¹UÀ¼À avÀæUÀ¼ÀÄ PÀtÂÚUÉ ºÀ§âªÀ£ÀÄßAlĪÀiÁqÀÄvÀÛ¯Éà £ÀªÀÄä£ÀÄß ªÀ£À¥ÀæzÉñÀUÀ½UÉ PÀgÉzÉÆAiÀÄÄåvÀÛªÉ.

gÀAUÀ¨sÀÆ«Ä’ «¨sÁUÀzÀ°è ªÀÈwÛgÀAUÀ¨sÀÆ«Ä – ªÉÄʸÀÆgÀÄ, ªÀÈwgÀAUÀ¨sÀÆ«Ä – GvÀÛgÀ PÀ£ÁðlPÀ, DzsÀĤPÀ gÀAUÀ¨sÀÆ«Ä, C£Àå¨sÁµÁ gÀAUÀ¨sÀÆ«Ä, ªÀiË£À £ÁlPÀ, ©Ã¢ £ÁlPÀ, d£À¥ÀzÀ gÀAUÀ¨sÀÆ«Ä, gÀAUÀªÀÄA¢gÀUÀ¼ÀÄ, gÀAUÀ ¸ÀAVÃvÀ, gÀAUÀ¸ÀfÓPÉ JA§ ºÀvÀÄÛ ¯ÉÃR£ÀUÀ½zÀÄÝ gÀAUÀPÀ¯ÉAiÀÄ EwºÁ¸ÀzÀ eÉÆvÉ ¥Àæ¸ÀÄÛvÀ ¹ÜwUÀwAiÀÄ£ÀÆß ZÀað¸ÀĪÀ ¸ÀavÀæ ¤gÀÆ¥ÀuÉ E°èzÉ.  gÀAUÀPÀ¯ÉUÁV §zÀÄPÀÄ ¸ÀªÉ¹zÀªÀgÀ£ÀÄß £É£ÉAiÀÄÄvÀÛ¯Éà gÀAUÀªÀÄAZÀzÀ¯ÁèzÀ ¹ÜvÀåAvÀgÀUÀ¼À£ÀÄß E°è zÁR°¸À¯ÁVzÉ.  gÀAUÀ¨sÀÆ«Ä ºÉƸÀ ¥ÀæAiÉÆÃUÀUÀ½AzÀ E£ÀÆß DPÀµÀðuÉ G½¹PÉÆArzÀÄÝ E£ÀßµÀÄÖ PÀ¼ÉPÀ¼ÉAiÀiÁV ºÉƸÀ ¦Ã½UÉAiÀĪÀgÀ£ÀÄß ¸É¼ÉAiÀÄÄwÛzÉ.  gÀAUÀ¸ÀfÓPÉAiÀÄÆ DzsÀĤPÀvÉAiÀÄ ªÉÄgÀUÀ£ÀÄß ¥ÀqÉAiÀÄÄwÛzÉ.  EwÛÃa£À ¨É¼ÀªÀtÂUÉUÀ¼ÁzÀ ªÀÄ°Ö«ÄÃrAiÀiÁ ¥ÉÆæeÉPÀÖg識ÀPÉ, §tÚzÀ ºÀzÀ«Ä±ÀætPÁÌV PÀA¥ÀÆålgï £ÉgÀªÀÅ ©Ã¢§¢AiÀÄ ºÉÊPÀ½AzÀ »rzÀÄ L.n. vÀdÕgÀªÀgÉUÉ J®ègÀ£ÀÆß gÀAUÀ¨sÀÆ«Ä DªÀj¹zÉ.  DgÀA¨sÀzÀ gÀAUÀ¥ÀæzÀ±Àð£À¢AzÀ EwÛÃa£À ‘gÀAUÁAiÀÄtzÀ ªÀįÉUÀ¼À°è ªÀÄzÀĪÀÄUÀ¼ÀÄ’  £ÁlPÀ ¥ÀæzÀ±Àð£ÀzÀªÀgÉUÉ ¸ÀavÀæ ¤gÀÆ¥ÀuÉAiÉÆA¢UÉ ¥ÀæPÀÈwAiÀÄ ªÀÄr®°è £ÀqɹzÀ ««zsÀ ¥ÀæAiÉÆÃUÀUÀ¼ÀÄ, ©Ã¢£ÁlPÀUÀ¼ÀÄ,  ªÉÄʪÀiï µÉÆÃ, d£À¥ÀzÀ gÀAUÀ¨sÀÆ«ÄAiÀÄ qÀ¦à£Ál, gÁzsÁ£Ál, ²æÃPÀȵÀÚ ¥ÁjeÁvÀUÀ¼ÀÄ avÀæ¸ÀªÉÄÃvÀ ¥Àæ¸ÁÛ¦vÀªÁVgÀĪÀÅzÀÄ E°è£À «±ÉõÀ.  gÀAUÀ±Á¯ÉUÀ½UÉ, ¸ÀAVÃvÀ ±Á¯ÉUÀ½UÉ ªÀÄvÀÄÛ PÀ¯ÉAiÀÄ AiÀiÁªÀÅzÉà ¥ÀæPÁgÀzÀ ±ÉÊPÀëtÂPÀ ¸ÀA¸ÉÜUÀ½UÉ EªÀÅ CUÀvÀå DPÀgÀUÀæAxÀUÀ¼ÁVªÉ.

¸ÀAVÃvÀ’ «¨sÁUÀzÀ°è PÀ£ÁðlPÀ ¸ÀAVÃvÀ, »AzÀƸÁÛ¤ ¸ÀAVÃvÀ, ¥Á±ÁÑvÀå ¸ÀAVÃvÀ, ¸ÀÄUÀªÀÄ ¸ÀAVÃvÀ, d£À¥ÀzÀ ¸ÀAVÃvÀ, UÀªÀÄPÀ PÀ¯É, PÀxÁ QÃvÀð£É JA§ K¼ÀÄ ¯ÉÃR£ÀUÀ½zÀÄÝ ¨sÁgÀwÃAiÀÄ ¸ÀAVÃvÀ ¥ÀgÀA¥ÀgÉAiÀÄ JgÀqÀÄ PÀªÀ®ÄUÀ¼À£ÀÄß, PÀ£ÁðlPÀ ¸ÀAVÃvÀzÀ ¥ÀƪÀð¸ÀÆjUÀ¼À£ÀÄß, DzsÀĤPÀvÉAiÀÄ ªÉÄgÀUÀ£ÀÄß ¤ÃrgÀĪÀ ªÁzÀåUÀ¼À£ÀÄß, §ÄgÀæPÀxÁ, VÃVÃ, ºÀAw, dÄAd¥Àà£À ¥ÀzÀ, ¸ÉÆèÁ£É ¥ÀzÀ, ©Ã¸ÉÆÃPÀ°è£À ¥ÀzÀ, ¸ÀÄVκÁqÀÄ, ªÉÆzÀ¯ÁzÀ d£À¥ÀzÀ ¥ÀæPÁgÀUÀ¼À£ÀÄß, ¸ÀÄUÀªÀĸÀAVÃvÀzÉqÉUÉ vÀÄrAiÀÄÄwÛgÀĪÀ ¥ÀæªÀÈwÛAiÀÄ£ÀÄß ¸ÀÄ¢ÃWÀðªÁV E°è ZÀað¸À¯ÁVzÉ.  ¥ÀArvï ©üêÀĸÉãÀeÉÆö ªÀÄvÀÄÛ UÀAUÀƨÁ¬Ä ºÁ£ÀUÀ¯ïCªÀgÀ C¥ÀgÀÆ¥ÀzÀ avÀæUÀ¼ÀÄ E°è£À DPÀµÀðuÉUÀ¼ÁVªÉ.

£ÀÈvÀåPÀ¯É’ «¨sÁUÀzÀ°è  PÀ£ÁðlPÀzÀ°è £ÀÈvÀåPÀ¯É, AiÀÄPÀëUÁ£À, d£À¥ÀzÀ £ÀÈvÀåPÀ¯É JA§ ªÀÄÆgÀÄ ¯ÉÃR£ÀUÀ½zÀÄÝ ±Á¹ÛçÃAiÀÄ £ÀÈvÀå ªÀÄvÀÄÛ d£À¥ÀzÀ £ÀÈvÀåUÀ¼À eÉÆvÉ AiÀÄPÀëUÁ£ÀªÀÇ ¥Àæ¸ÁÛ¦vÀªÁVzÉ.  ¸ÉÆêÀÄ£ÀPÀÄtÂvÀ, ¥ÀlzÀ PÀÄtÂvÀ, £ÀA¢ÃzsÀéd PÀÄtÂvÀ, ºÉÆý PÀÄtÂvÀ, PÀgÀUÀ ªÀÄÄAvÁzÀ d£À¥ÀzÀ £ÀvÀð£À ¥ÀæPÁgÀUÀ¼À «±ÉõÀ avÀæUÀ¼ÀÄ E°èªÉ.

ZÀ®£ÀavÀæ’ «¨sÁUÀzÀ°è ZÀ®£ÀavÀæ, ºÉƸÀ C¯É, avÀæ ¸ÀAVÃvÀ ªÀÄvÀÄÛ ¸ÁPÀëöåavÀæUÀ¼ÀÄ JA§ £Á®ÄÌ CzsÁåAiÀÄUÀ¼À°è 1925 jAzÀ DgÀA¨sÀUÉÆAqÀ PÀ£ÀßrUÀgÀÄ vÀAiÀiÁj¹zÀ ªÀÄÆQ avÀæUÀ¼ÀÄ, 75 ªÀ¸ÀAvÀUÀ¼À£ÀÄß ¥ÀÆgÉʹgÀĪÀ PÀ£ÀßqÀ ªÁPïavÀæUÀ¼ÀÄ, £ÀqÉzÀħAzÀ zÁjAiÀÄ ¥ÀQë£ÉÆÃl«zÉ.  UÀÄ©âëÃgÀtÚ£ÀªÀjAzÀ DgÀA©ü¹ qÁ. gÁeïPÀĪÀiÁgï, qÁ. «µÀÄÚªÀzsÀð£ï ¸ÉÃjzÀAvÉ PÀ£ÀßqÀzÀ ¥ÀæªÀÄÄR £ÀlgÀÄ, ZÀ®£ÀavÀæ ¸ÀAVÃvÀPÁgÀgÀÄ, ¤zÉÃð±ÀPÀgÀ ¥Àj±ÀæªÀÄ E°è£À bÁAiÀiÁ avÀæUÀ¼À°è zÁR¯ÉUÉÆArªÉ.

PÀ¯ÉAiÀÄ EwºÁ¸À-ªÀvÀðªÀiÁ£À-¨sÀ«µÀåzÀ AiÉÆÃd£ÉUÀ¼À£ÀÄß zÁR°¸ÀĪÀ, PÀ¯Á¥Àæ¥ÀAZÀzÀ «gÁmïzÀ±Àð£À ªÀiÁr¸ÀĪÀ ‘PÀ£ÁðlPÀ PÀ¯ÁzÀ±Àð£À’zÀ §ÈºÀvï ¸ÀA¥ÀÄlUÀ¼ÀÄ EzÉà DUÀ¸ïÖ£À°è ©qÀÄVªÉ.  F ¸ÀA¥ÀÄlUÀ¼ÉÆA¢UÉ Erà PÀÈwAiÀÄ «zÀÄå£Áä£À ¥ÀĸÀÛPÀ (E-§ÄPï) CqÀPÀ ©¯Éè (¹.r.) gÀÆ¥ÀzÀ°è GavÀªÁV ¤ÃqÀ¯ÁVzÉ.  PÀ£ÀßrUÀgÀ ªÀÄ£É, ±Á¯É, PÁ¯ÉÃdÄ, PÀbÉÃjUÀ¼À°è CvÀåUÀvÀåªÁV ±ÉÆéü¸À¨ÉÃQgÀĪÀ F ‘PÀ£ÁðlPÀ PÀ¯ÁzÀ±Àð£À’zÀ ªÀiÁzÀj ¥ÀÄlUÀ¼ÀÄ ¨ÁèUï£À°è ®¨sÀ嫪É. ªÀiÁ»wUÁV ¨sÉÃn ¤Ãr : http://navakarnataka.blogspot.com

PÀÈw                  : PÀ£ÁðlPÀ PÀ¯ÁzÀ±Àð£À

JgÀqÀÄ ¸ÀA¥ÀÄlUÀ¼ÀÄ (¹.r. ¸À»vÀ)

¸ÀA¥ÁzÀPÀgÀÄ            : ¥ÉÆæ. JA. JZï. PÀȵÀÚAiÀÄå, qÁ. «dAiÀiÁ, ¹.Dgï. PÀȵÀÚgÁªï

¥ÀæPÁ±ÀPÀgÀÄ             : £ÀªÀPÀ£ÁðlPÀ ¥ÀæPÁ±À£À, ¨ÉAUÀ¼ÀÆgÀÄ

ªÉÆzÀ® ªÀÄÄzÀæt        : 2010 (DUÀ¸ïÖ)

¥ÀÄlUÀ¼ÀÄ                     : 1200        ¨É¯É : gÀÆ. 3000-00

(ºÉƸÀvÀÄ ªÀiÁ¹PÀzÀ ZÀAzÁzÁjUÉ 20% jAiÀiÁ¬Äw EzÉ.)

PÀÈw ¥ÀjZÀAiÀÄ : ¨ÉÃzÉæ ªÀÄAdÄ£ÁxÀ

«¼Á¸À :  ¨ÉÃzÉæ ¥ÀæwµÁ×£À – C£Ë¥ÀZÁjPÀ ²PÀët, ¸ÀA±ÉÆÃzsÀ£É ªÀÄvÀÄÛ vÀgÀ¨ÉÃw ¸ÀA¸ÉÜ

PÁAiÀÄðPÀæªÀÄ ¤ªÁðºÀPÀgÀÄ, DPÁ±ÀªÁt PÉÃAzÀæ, avÀæzÀÄUÀð – 577 501

¥sÉÆÃ: 9448589089 <bedre.manjunath@gmail.com>

ಅವು ಯಾವ ದೇವತೆಗಳಿಗೆ ಸೇರಿದ್ದು?

somanaathapura

ಸೋಮನಾಥಪುರವನ್ನು ನೋಡದಿರುವವರಾರು? ಆದರೆ ಇತಿಹಾಸಜ್ಞ ಸಂಶೋಧಕ ಷ.ಶೆಟ್ಟರ್ ಬರೆದಿರುವ ಈ ಸಚಿತ್ರ ಪುಸ್ತಿಕೆಯ ಗುರಿ, ಪ್ರೌಢ ಓದುಗ ಮತ್ತು ಪ್ರಬುದ್ಧ ಸಂದರ್ಶಕರಿಗಾಗಿ ಬೇಕಾದ ಮಾಹಿತಿ ಒದಗಿಸುವುದು. ಪುಸ್ತಕ ತಿರುವಿಹಾಕಿದಾಗ ದೊರೆಯುವ ಅನೇಕ `ಮಾಹಿತಿ ಮುತ್ತುಗಳಲ್ಲಿ ಕೆಲವು ಹೀಗಿವೆ:

ಸೋಮನಾಥಪುರ ಒಂದು ಪರಿಪೂರ್ಣ ದೇವಾಲಯ ನಗರ, ಮಧ್ಯಕಾಲೀನ ಅಗ್ರಹಾರ ಕೇಂದ್ರವಾಗಿರುವುದರಿಂದ ಇದರ ವಿವರಗಳು ಮಧ್ಯಕಾಲೀನ ನಗರ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೂ ಉಪಯುಕ್ತ ಮಾಹಿತಿ.

ಈ ಶೈಲಿಯ ಪ್ರಮುಖ ವಾಸ್ತು ಮತ್ತು ಶಿಲ್ಪ ಕಲಾಂಶಗಳು ಚಾಳುಕ್ಯರಿಂದ, ಹೊಯ್ಸಳರಿಗೆ ಬಳುವಳಿಯಾಗಿ ಬಂದವು

ಈ ಸಮುಚ್ಛಯದಲ್ಲಿರುವ ಒಟ್ಟು ದೇವಾಲಯಗಳ ಸಂಖ್ಯೆ ಮತ್ತು ಅವು ಯಾವ ದೇವತೆಗಳಿಗೆ ಸೇರಿದ್ದವೆಂಬುದರ ಬಗ್ಗೆ ಇರುವ ಗೊಂದಲಗಳು ಪೂರ್ತಿ ಪರಿಹಾರವಾಗಿಲ್ಲ.

ಜಕ್ಕಣಾಚಾರಿ ಎಂಬ ಶಿಲ್ಪಿ ಈ ದೇವಾಲಯವನ್ನು ಕಟ್ಟಲಿಲ್ಲ ಎನ್ನುವುದು ಖಾತರಿಯಾಗಿದೆ. ಬದಲಾಗಿ ಸುಮಾರು ಇಪ್ಪತ್ತು ಹಿರಿಯ ಶಿಲ್ಪಿಗಳ ಸಾಮೂಹಿಕ ಶ್ರಮದ ಫಲ ಇದಾಗಿದೆ ಎನ್ನುವ ಅಂಶ ದೃಢಪಟ್ಟಿದೆ. ಇವರಲ್ಲಿ ಕೆಲವರು ತಮ್ಮ ಹೆಸರಿನ ಅಕ್ಷರ ಸಂಯೋಜನೆಯೊಡನೆ ಆಟವಾಡಿದ್ದರೆ, ಒಬ್ಬಾತ ಐದು ಬಗೆಯಲ್ಲಿ ಅಕ್ಷರ ಸಂಯೋಜನೆ ಮಾಡಿ ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿ ಮಾಡಿದ್ದಾನೆ!

ಇದರೊಂದಿಗೆ ಸೋಮನಾಥಪುರದ ಲೈಂಗಿಕ ಶಿಲ್ಪಗಳ ಕುರಿತೂ ಅಪರೂಪದ ಮಾಹಿತಿ ಲಭ್ಯವಿದೆ!

ಶೀರ್ಷಿಕೆ: ಸೋಮನಾಥಪುರ ಲೇಖಕರು: ಷ. ಶೆಟ್ಟರ್ ಪ್ರಕಾಶಕರು: ಅಭಿನವ ಪುಟಗಳು: 198 ಬೆಲೆ: ರೂ.100/-

ಕೃಪೆ : ವಿಜಯ ಕರ್ನಾಟಕ

ಕಲೆ ಎಂದರೇನು?

`ಸಮಗ್ರವಾಗದಿದ್ದರೂ ಸಂಕ್ಷಿಪ್ತವಾಗಿಯಾದರೂ, ಪ್ರಪಂಚದ ದೃಶ್ಯಕಲೆಯ ಬಗ್ಗೆ ಪುಸ್ತಕ ಬರೆಯಬೇಕು ಎನ್ನುವುದು ನನ್ನ ಬಹುದಿನದ ಕನಸುಎಂದು ಮೊದಲ ಮಾತಿನಲ್ಲಿ ಹೇಳಿಕೊಂಡಿರುವ ಕಲಾವಿದ ಮರಿಶಾಮಾಚಾರ್ ಅವರ ಇಪ್ಪತ್ತನೆಯ ಪುಸ್ತಕ ಇದು. ಅವರದೇ ರಕ್ಷಪುಟ ಹಾಗೂ ಒಳಪುಟ ವಿನ್ಯಾಸದೊಂದಿಗೆ ಸುಂದರವಾಗಿ ಸಜ್ಜಾಗಿದೆ ಹಾಗೂ ಕಲಾವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಅಲಭ್ಯವಾಗಿರುವ ಪುಸ್ತಕಗಳ ಕೊರತೆಯನ್ನು ತುಂಬಿಕೊಡುವಂತಿದೆ.

`ಕಲೆ ಎಂದರೇನು? ಕಲೆಯ ಹುಟ್ಟಿಗೆ ಮುನ್ನ ಇದ್ದ ದೃಶ್ಯ ಸೃಷ್ಟಿಗಳಾವುವು? `ಕಲೆಯ ಸಾವಿನನಂತರ ದೃಶ್ಯಕಲೆ ಹಾಗೂ ಅದರ ವ್ಯಾಖ್ಯೆ-ವಾಚ್ಯಾರ್ಥಗಳು ಬೆರೆತ ತತ್ವಾಧಾರಿತ ಕಲೆಯ ವಿಶ್ವರೂಪವು ಹೇಗೆ ಮಾನವಶಾಸ್ತ್ರೀಯ ಗುಣ ಹೊಂದಿವೆ? ಮುಂತಾದ ವಿಷಯಗಳ ಕುರಿತು ಸಂಕ್ಷಿಪ್ತವಾಗಿ, ಸೂಕ್ತವಾಗಿ ಬರೆಯಲಾಗಿರುವ ಈ ಪುಸ್ತಕ, ಲೇಖಕರ ಅಷ್ಟೂ ಲೇಖನಗಳ ಶೈಲಿಗಳ, ಆಸಕ್ತಿ-ನಿಲುವು-ತತ್ವಾದರ್ಶಗಳ ಸಂಗ್ರಹ ರೂಪದಂತಿದೆಎಂದು ಬೆನ್ನುಡಿಕಾರ, ಮತ್ತೊಬ್ಬ ಕಲಾವಿದ ಎಚ್.ಎ.ಅನಿಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಶೀರ್ಷಿಕೆ: ದೃಶ್ಯ ಕಲಾಪ್ರಪಂಚ ಲೇಖಕರು: ಎನ್. ಮರಿಶಾಮಾಚಾರ್ ಪ್ರಕಾಶಕರು : ಸಿ. ಎಂ. ಎನ್. ಪ್ರಕಾಶನ ಪುಟಗಳು : ಬೆಲೆ:ರೂ.

ಕೃಪೆ : ವಿಜಯ ಕರ್ನಾಟಕ

ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ

ಹೆಸರಾಂತ ಕಲಾ ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ ಅವರ ಈ ಪುಸ್ತಕ ಹಲವು ಮೌಲಿಕ ಲೇಖನಗಳನ್ನು ಒಳಗೊಂಡಿದೆ. ಅವರ ಭಾಷೆ ಆಧುನಿಕವಾಗಿ ಅಚ್ಚುಕಟ್ಟಾಗಿದೆ. ಕಲಾ ವಿಮರ್ಶೆ ಕುರಿತು ಸಾಮಾನ್ಯ ಓದುಗರಿಗೆ ಇರುವ ಭಯ ಕಸಿವಿಸಿಗಳನ್ನೆಲ್ಲಾ ತೊಡೆದುಹಾಕುವಷ್ಟು ತಿಳಿಯಾಗಿ ಬರೆಯುತ್ತಾರೆ, ಸುಬ್ರಹ್ಮಣ್ಯಂ.

ಕಲೆ ಕುರಿತು ಕನ್ನಡ ಮೂಲ ಕೃತಿಗಳು ಹೊರಬರುವುದು ಅಪರೂಪ. ಈ ಪುಸ್ತಕ ಅದನ್ನು ತುಂಬಿಕೊಡಲೆತ್ನಿಸುವುದಷ್ಟೇ ಅಲ್ಲ, ಮಾಮೂಲಿಯಂತೆ ಶಿಲ್ಪಕಲೆಯ ಇತಿಹಾಸ ಇತ್ಯಾದಿ ಚರ್ವಿತ ಚರ್ವಣಗಳಲ್ಲಿ ಕಳೆದುಹೋಗದೆ ನೇರವಾಗಿ ಸಮಕಾಲೀನ ಪರಿಸರಕ್ಕೆ ಧಾವಿಸಿ ಓದುವಿಕೆಯನ್ನು ಚುರುಕುಗೊಳಿಸುತ್ತದೆ. ಉದಾಹರಣೆಗೆ ಇತ್ತೀಚೆಗೆ ಸಂಚಲನ ಸೃಷ್ಟಿಸಿರುವ ಇನ್ಸ್ಟಾಲೇಷನ್, ವಿಡಿಯೋ ಇನ್ಸ್ಟಾಲೆಷನ್ ಹಾಗೂ ಕಲಾವಿದರು ತಮ್ಮ ದೇಹವನ್ನೇ ದುಡಿಸಿಕೊಳ್ಳುವ ಪರ್ಫಾರ್ಮೆನ್ಸ್ ಕಲಾಪ್ರಕಾರಗಳ ಕುರಿತು ಇಲ್ಲಿ ಸಚಿತ್ರ ವಿವರಣೆಯಿದೆ.

ಕಲೆಯ ಪುಸ್ತಕಗಳಿಗೆ ಅತ್ಯಗತ್ಯವಾಗಿ ಬೇಕಾದ ಉತ್ಕೃಷ್ಟ ಮುದ್ರಣ ಪುಸ್ತಕವನ್ನು ಸಂಗ್ರಹಯೋಗ್ಯವನ್ನಾಗಿಸಿದೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕನ್ನಡ ನಾಡಿನ ಇಂದಿನ ಶಿಲ್ಪಿಗಳ ಕುರಿತು ಕೆ.ವಿ.ಎಸ್. ಮನೋಜ್ಞವಾಗಿ ಬರೆಯುತ್ತಾರೆ; ಪುಷ್ಪಮಾಲಾ ಕುರಿತ ಈ ಸ್ಕೆಚ್ ಅನ್ನೇ ನೋಡಿ: … ಹಳೆಯ ಕಥಾನಕದಂತಹ ರೂಪಕಗಳನ್ನು ತಮ್ಮದೇ ಆದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ತಣ್ಣಗಿನ ಪದರ ಹೊದೆಸಿದ, ಒಳಗೆ ಅಸಾಮಾನ್ಯ ಹೊಳಹುಗಳನ್ನು ಹುದುಗಿಸಿಕೊಂಡಿರುವ ಅಭಿವ್ಯಕ್ತಿ ಅವರದು. ವಿಡಂಬನೆಗೆ ಖ್ಯಾತರಾದ ಅವರು ಛಾಯಾಚಿತ್ರ ಮಾಧ್ಯಮವನ್ನೇ ನೆಪವಾಗಿ ಬಳಸಿಕೊಂಡು, ತಮ್ಮ ದೇಹ-ವ್ಯಕ್ತಿತ್ವ-ಸಂವೇದನೆಗಳಿಂದಲೇ ಹಲವು ಪಾತ್ರಗಳಲ್ಲಿ ತಾನೇ ತಾನಾಗಿ ವಿಜೃಂಭಿಸುತ್ತಾರೆ

ಶೀರ್ಷಿಕೆ : ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ ಲೇಖಕರು : ಕೆ. ವಿ. ಸುಬ್ರಹ್ಮಣ್ಯಂ ಪ್ರಕಾಶಕರು : ಕರ್ನಾಟಕ ಶಿಲ್ಪಕಲಾ ಅಕಾಡಮಿ ಪುಟಗಳು : 168 ಬೆಲೆ: ರೂ.100/-

ಕೃಪೆ : ವಿಜಯ ಕರ್ನಾಟಕ