ಜಾನಪದ ವಿದ್ವಾಂಸರಾದ ಶಿವಾನಂದ ಗುಬ್ಬಣ್ಣನವರು ಸಂಗ್ರಹಿಸಿದ ಡೊಳ್ಳಿನ ಪದಗಳ ಸಂಗ್ರಹವಿದು. ಉತ್ತರ ಕನರ್ಾಟಕದ ಜನಪದ ಪ್ರಕಾರಗಳಲ್ಲಿ ಡೊಳ್ಳಿನ ಹಾಡಿನ ಹಿನ್ನೆಲೆ, ಸಂದರ್ಭ ಇದೆಲ್ಲದರ ಸಹಿತ ಇಲ್ಲಿ ಕೊಡಲಾಗಿದೆ.
ಮೂಲತಃ ಡೊಳ್ಳಿನ ಹಾಡುಗಳು ಹಾಲುಮತ ಸಂಪ್ರದಾಯಕ್ಕೆ ಸೇರಿದವು. ಬಳಿಕ ಅವು ಶೈವ, ವೈದಿಕ ಸಂಪ್ರದಾಯಗಳನ್ನೂ ಹಾದು ಬಂದಿವೆ. ಇಲ್ಲಿ ಸಂಗ್ರಹಕಾರರು ಕುರುಬರ ಮೂಲ ಅವರ ಪೂರ್ತಿಯಾದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕೊಟ್ಟಿದ್ದಾರೆ. ಹೀಗಾಗಿ ಅವು ಹೆಚ್ಚು ಅರ್ಥಪೂರ್ಣ ಎನ್ನಿಸುತ್ತವೆ.
ಇಲ್ಲಿರುವ `ಜಾರತನ‘ ಎಂಬ ಡೊಳ್ಳಿನ ಪದವು ಒಂದು ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣ‘ನ ಹೆಂಡತಿಯ ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣ‘ನ ಹೆಂಡತಿಯ ಹಾದರದ ಕಥೆಯಿದು. ಗಂಡ ದಂಡಿಗೆ ಹೋದಾಗ ಊರ ಸಾಹುಕಾರನೊಂದಿಗಿನ ಸಲ್ಲಾಪವೇ ಹೆಂಡತಿಗೆ ಮುಳುವಾಗುತ್ತದೆ. ಹೆಂಡತಿಯ ನಡತೆಯ ಬಗ್ಗೆ ಗೊತ್ತಾಗಿ ಅವಳನ್ನು, ಸಾಹುಕಾರನನ್ನು ಕೊಲ್ಲುವುದನ್ನು ಈ ಡೊಳ್ಳಿನ ಪದ ನಿರೂಪಿಸುತ್ತದೆ. ತಪ್ಪು ಮಾಡಿದ ಹೆಂಡತಿಯನ್ನು ಕೊಲ್ಲುವ ಜಾನಪದ ಆಶಯ ಈ ಡೊಳ್ಳಿನ ಪದದಲ್ಲೂ ಇದೆ. ಇಂಥ ಕೆಲವು ಡೊಳ್ಳಿನ ಪದಗಳ ಸಂಗ್ರಹವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.
ಶೀರ್ಷಿಕೆ: ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ ಲೇಖಕರು: ಡಾ.ಶಿವಾನಂದ ಗುಬ್ಬಣ್ಣವರ ಪ್ರಕಾಶಕರು: ಶಿವಾನಂದ ಗುಬ್ಬಣವರ ಪುಟಗಳು:578 ಬೆಲೆ:ರೂ.300/-
ಕೃಪೆ : ಪ್ರಜಾವಾಣಿ
Filed under: ಜಾನಪದ ಸಾಹಿತ್ಯ | Tagged: ಡಾ.ಶಿವಾನಂದ, ಡಾ.ಶಿವಾನಂದ ಗುಬ್ಬಣ್ಣವರ, ಪ್ರಜಾವಾಣಿ, ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ | Leave a comment »