ಸಂವಿಧಾನ ಸಭೆ(25-11-1949)ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾಷಣ

endinavarege samanateya nirakarane - Front

endinavarege samanateya nirakarane - Back

ಶೀರ್ಷಿಕೆ : ಎಂದಿನವರೆಗೆ ಸಮಾನತೆಯ ನಿರಾಕರಣೆ ಲೇಖಕರು: ಡಾ. ಬಿ.ಆರ್.ಅಂಬೇಡ್ಕರ್ ಅನುವಾದ: ಶಮೀಮಾ ಕೆ.ಪಿ. ಪ್ರಕಾಶಕರು:ಕ್ರಿಯಾ ಪುಸ್ತಕ ಪುಟ:40 ಬೆಲೆ:ರೂ.20/-

ಅಂಬೆಡ್ಕರ್ ಜಯಂತಿಯ ಶುಭಾಶಯಗಳು

ಈ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದ ತೇಲ್ ತುಂಬ್ಡೆ ಅವರ In and for the Post-Ambedkar Dalit Movement ನ ಅನುವಾದ ಮಾತ್ರವಲ್ಲ ಕನ್ನಡದ ಕವಿ ಸಿದ್ಧಲಿಂಗಯ್ಯ ಅವರ
ಮಹರಾಷ್ಟ್ರದ ಮಣ್ಣಿನಲ್ಲಿ
ಮೂಡಿ ಬಂದ ಗುಡುಗು ಸಿಡಿಲೆ
ಮಳೆಯನೇಕೆ ತಾರಲಿಲ್ಲ
ಮಿಂಚು ಮಾಯ ಅಷ್ಟೆಯೇ

ಎಂದು ಕೇಳುತ್ತಿರುವ ಕವನ `ಅಂಬೆಡ್ಕರ್’ ದ ಪೂರ್ಣ ಪಾಠ, ಪ್ರೊ.ಲಕ್ಷ್ಮಣ್ ತೆಲಗಾವಿ ಅವರ `ಕರ್ನಾಟಕದಲ್ಲಿ ದಲಿತ ಸಂಘರ್ಷ:ದಲಿತ ಚಳುವಳಿಯ ವಿಕಾಸ-ಸವಾಲುಗಳು-ಸಾಧ್ಯತೆಗಳು, ದಲಿತರ ಸಮಸ್ಯೆಗಳ ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅಖಿಲ ಭಾರತ ಸಮಾವೇಶದಲ್ಲಿ ಅಂಗೀಕರಿಸಿದ ನಿರ್ಣಯದ ಆಯ್ದ ಭಾಗ, ಡಾ.ಅಂಬೇಡ್ಕರ್ ಚಿಂತನೆಗಳ ಪುನರ್ವ್ಯಾಖ್ಯಾನ – ಪ್ರತಿಕ್ರಿಯೆಗಳು ಮುಂತಾದ ಹೆಚ್ಚಿನ ಮಾಹಿತಿಗಳೂ ಇವೆ.

ಶೀರ್ಷಿಕೆ : ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ-ದಿಕ್ಕು ಲೇಖಕರು:ಆನಂದ ತೇಲ್ತುಂಬ್ಡೆ ಅನುವಾದ:ರಾಹು ಪ್ರಕಾಶಕರು:ಚಿಂತನ ಪುಸ್ತಕ ಪುಟ:176 ಬೆಲೆ: ರೂ.100/-

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.

ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120/-

ಕೃಪೆ: ಸಂಯುಕ್ತ ಕರ್ನಾಟಕ

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್

scan0001

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್

`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.

ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.

ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತುಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ.

ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.

ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/-

ಕೃಪೆ : ಪ್ರಜಾವಾಣಿ

ಅಂಬೆಡ್ಕರ್

ಅಂಬೆಡ್ಕರ್ ಸಂವೇದನೆ

ಡಾ. ಅಂಬೇಡ್ಕರರ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ಡಾ. ಎಚ್. ಟಿ. ಪೋತೆ ಅವರು ಬರೆದ 11 ಲೇಖನಗಳ ಸಂಕಲನ ಇದು. `ಅಂಬೇಡ್ಕರ್ : ಸಾಮಾಜಿಕ ಚಳುವಳಿ‘, `ಅಂಬೆಡ್ಕರ್ ಮತ್ತು ಮಹಿಳೆ‘, `ಅಂಬೆಡ್ಕರ್-ಗಾಂಧಿ:ಮುಖಾಮುಖಿ‘ … ಹೀಗೆ, ಇಲ್ಲಿನ ವಿಷಯಗಳು ತೆರೆದುಕೊಳ್ಳುತ್ತದೆ. ಡಾ. ಪೋತೆ ಅವರು ಬಾಬಾ ಸಾಹೇಬರನ್ನು ಮೈ-ಮನ ತುಂಬಾ ತುಂಬಿಕೊಂಡವರಂತೆ ಮಾತನಾಡುವುದು ಈ ಬರಹಗಳಲ್ಲಿ ಸುಲಭವಾಗಿ ಗಮನಕ್ಕೆ ಬರುತ್ತದೆ. ಬಹಳ ವೇಳೆ ಸಂಗತಿಗಳನ್ನು ತೀರಾ ಸರಳೀಕರಿಸಿದ ನೆಲೆಗೆ ಕೊಂಡೊಯ್ಯುವುದೂ ಇದೆ. ಒಬ್ಬ ಬರಹಗಾರ ವರ್ಷದಲ್ಲಿ ಎಷ್ಟು ಪುಸ್ತಕ ಬರೆದ ಎನ್ನುವುದಕ್ಕಿಂತ ಬರೆದದ್ದು ಎಷ್ಟು ಮೌಲಿಕ ಎಂಬುದೂ ಮುಖ್ಯ ಎಂಬುದನ್ನು ಮನಸ್ಸಿಗೆ ತಂದು ಕೊಂಡರೆ ಯಾವುದೇ ಲೇಖಕನಿಗೆ ಒಳ್ಳೆಯದು.

ಅಂಬೆಡ್ಕರ್ :ಸಾಂಸ್ಕೃತಿಕ ಸಂಘರ್ಷ

ಇದು ಗಂಭೀರವಾದ ಬರಹಗಳನ್ನೊಳಗೊಂಡ ಕೃತಿ. ಇದರಲ್ಲಿ ಸ್ವತಃ ಅಂಬೆಡ್ಕರ್ ಬರಹವೊಂದರ ಅನುವಾದವೂ ಸೇರಿದಂತೆ ಇಂತಹ ಹಲವು ಲೇಖಕರು ಬರೆದ ಅಥವಾ ಮೂಲವನ್ನು ಅನುವಾದಿಸಿದ ಒಟ್ಟು 16 ಲೇಖನಗಳು ಪ್ರಕಟಗೊಂಡಿವೆ. `ಶಾಪವಾಗಿ ಕಾಡಿದ ಜಾತಿಯ ಭೂತ‘, `ಶೌರ್ಯ ಮೆರೆದು ಮಡಿದ ಮಹಾನ್ ಯೋಧರು‘, `ಅಂಬೆಡ್ಕರ್: ಸ್ಪೂರ್ತಿಯಿಂದ ಪೂಜೆಯ ಕಡೆಗೆ‘, `ಬಾಬಾ ಸಾಹೇಬರ ಪ್ರಖರ ಆದ್ಯಾತ್ಮಿಕತೆ‘, `ನೈಜ ಅಂಬೇಡ್ಕರರ ಅನ್ವೇಷಣೆಯಲ್ಲಿ…‘, `ದಲಿತ ಪ್ರಜ್ಞೆ ಮತ್ತು ಕುಲ ಮೀಮಾಂಸೆ..ಇವು ಇಲ್ಲಿನ ಕೆಲವು ಲೇಖನಗಳು. ಈ ಶೀರ್ಷಿಕೆಗಳನ್ನು ಗಮನಿಸಿದರೆ ಈ ಪುಸ್ತಕದ ವಿಷಯಗಳ ಹರವು, ಅವುಗಳ ತಾತ್ವಿ ನೆಲೆಗಳ ಸಾಮಾನ್ಯ ತಿಳುವಳಿಕೆ ಆದೀತು. ಒಟ್ಟಾರೆ, ಇವೆಲ್ಲಾ ಅಂಬೇಡ್ಕರ್ ಕೇಂದ್ರಿತ ಚಿಂತನೆಗಳೇ ಆಗಿವೆ.

……

ವಿಚಾರ ವಿಮರ್ಶೆಯ ಇಂಥಾ ಪುಸ್ತಕಗಳಲ್ಲಿ ಅಕ್ಷರ/ವಾಕ್ಯ ದೋಷಗಳು ಇರಲೇಬಾರದು. ಅವು ಅರ್ಥ ಸಂದಿಗ್ಧತೆ, ಗ್ರಹಿಕೆಯಲ್ಲಿ ತೊಡಕುಂಟು ಮಾಡುತ್ತವೆ. ಹಾಗೆಯೇ, ಉದ್ಧರಣೆ ಚಿಹ್ನೆಗಳನ್ನು ಸರಿಯಾಗಿ ಬಳಸದಿದ್ದರೆ ಲೇಖಕರ ಅಭಿಪ್ರಾಯ ಯಾವುದು, ಅಂಬೇಡ್ಕರರ ಅಭಿಪ್ರಾಯ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ಈ ಪುಸ್ತಕದಲ್ಲಿ ಇಂಥಾ ದೋಷಗಳು ಉದ್ದಕ್ಕೂ ಇವೆ. ಮುಖಪುಟವಷ್ಟೇ ಸುಂದರವಾಗಿದ್ದರೆ ಸಾಲದು; ಒಳಗೂ ಅಚ್ಚುಕಟ್ಟುತನ ಇರಬೇಕಾದುದು ಅತ್ಯಗತ್ಯ.

ಕೃಪೆ : ಕನ್ನಡ ಪ್ರಭಾ