ನಾವೇಕೆ ದೇವರನ್ನು ನಂಬಲಿಲ್ಲ

pp blog

pp blog back

ಶೀರ್ಷಿಕೆ : ನಾವೇಕೆ ದೇವರನ್ನು ನಂಬಲಿಲ್ಲ   ಸಂಗ್ರಹ: ಕೆ. ವೀರಮಣಿ ಅನುವಾದ: ಕೆ. ಮಾಯಿಗೌಡ ಪ್ರಕಾಶಕರು : ಸಪ್ನ ಬುಕ್ ಹೌಸ್ ಪ್ರಕಟಣಾ ವರ್ಷ: ೨೦೦೯, ೨೦೧೦, ೨೦೧೪ ಪುಟ: ೧೨೦ ಬೆಲೆ: ರೂ.೭೦/-

ದೊರೆತಿರುವ ವಸ್ತು ಅವಶೇಷಗಳು ಏನು ತಿಳಿಸುತ್ತವೆ

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯ ಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಗಳೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ.

ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನಾ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬನೆ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದೆಉ.

ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯ ಮೂವರು ವಿದ್ವಾಂಸ-ಲೇಖಕರೂ, ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತೆ ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿಶದಗೊಳಿಸಿದ್ದಾರೆ.

– ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಕೋಮುವಾದ ಹಾಗೂ ಭಾರತೀಯ ಇತಿಹಾಸ ಲೇಖನ ಲೇಖಕರು:ರೋಮಿಲ ಥಾಪರ‍್, ಹರ್ಬನ್ಸ್ ಮುಖಿಯ ಮತ್ತು ಬಿಪನ್ ಚಂದ್ರ ಅನುವಾದ:ಕೆ. ಎಲ್. ಗೋಪಾಲಕೃಷ್ಣ ರಾವ್ ಪ್ರಕಾಶನ: ನವಕರ್ನಾಟಕ ಪ್ರಕಾಶನ ಪುಟ:88 ಬೆಲೆ:ರೂ.22/

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು


ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು. ವಿಶ್ವ ಭೂಮಿ ದಿನ ಅಂದರೆ ಭೂಮಿತಾಯಿಯ ಬಗ್ಗೆ ಪ್ರೀತಿ ವಿಶ್ವಾಸ ಗೌರವವನ್ನು ತೋರಿಸಿ ಆಕೆಯ ಆರೈಕೆ ಮಾಡುವ ಮತ್ತು ನಮ್ಮ ಮಕ್ಕಳು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವ ಕರ್ತವ್ಯವನ್ನು ನೆನಪಿಸುವ ದಿನ.  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. www.earthday.org/earthday2010 , http://www.earthday.org/earthday2010 , http://www.earthday.org/pledges/make-children-habituate-planting-trees-will-save-our-earth-educate-people-use-solar-power

ಇತ್ತೀಚೆಗೆ ಭೂಮಿ ತಾಯಿಗೆ ಜ್ವರ ಬರುತ್ತಿದೆ. ಯಾಕೆ ಬರುತ್ತಿರಬಹುದು. ಭೂಮಿ ತಾಯಿಯ ಜ್ವರವನ್ನು ಇಳಿಸಲು ನಾವು ಏನು ಮಾಡಬಹುದು. ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡದೆ ಭೂಮಿಯ ಆರೈಕೆ ಬಗ್ಗೆ ಅವರ ಮನವೊಲಿಸುವುದು ಅಸಾಧ್ಯ. ಅದಕ್ಕಾಗಿಯೇ ಈ ಪುಸ್ತಕ.

ಈ ಪುಸ್ತಕ ಮಕ್ಕಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಒಂದು ಹೆಜ್ಜೆ. ಭೂಮಿಯ ಬಗ್ಗೆ, ನಿಸರ್ಗದ ಬಗ್ಗೆ, ಸಮಾಜದ ಬಗ್ಗೆ, ವಿಜ್ಞಾನದ ಬಗ್ಗೆ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಹಿತಿ ಒದಗಿಸುತ್ತದೆ. ಈ ಪುಸ್ತಕ.

ಶೀರ್ಷಿಕೆ: ನಿಸರ್ಗ ಸಮಾಜ ವಿಜ್ಞಾನ ಲೇಖಕರು:ಕೆ. ಕೆ. ಕೃಷ್ಣಕುಮಾರ‍್ ಅನುವಾದ: ಎಚ್. ಎಸ್. ನಿರಂಜನಾರಾಧ್ಯ, ಸಿ. ಯತಿರಾಜು ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಪುಟ:104 ಬೆಲೆ. ರೂ.15/-

ಸ್ತ್ರೀಮತವನುತ್ತರಿಸಲಾಗದೇ ಧರ್ಮಶಾಸ್ತ್ರದೊಳ್

ನಾನು ಓದಿ ಮೆಚ್ಚಿದ ಕೃತಿಗಳನ್ನು, ಈ ದಿನಗಳಲ್ಲಿ, ಮತ್ತೆ ಓದುವಂತೆ ಮಾಡುತ್ತಿರುವ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಡಾ. ಆಶಾದೇವಿ ಒಬ್ಬರು. ಒಬ್ಬರು ಮಾತ್ರವಲ್ಲ ಅನನ್ಯರು. ಸಾಹಿತ್ಯದ ವಿಷಯದಲ್ಲಿ ಇವರದು ಸ್ತ್ರೀ ದೃಷ್ಟಿಕೋನ ಎಂದು ಮೆಚ್ಚಿ ಮರೆಯುವಂತಿಲ್ಲ. ಯಾಕೆಂದರೆ ನನ್ನದೂ ಆಗಬೇಕಿದ್ದ ಒಳನೋಟಗಳನ್ನು ಆಶಾದೇವಿ ನನಗೆ ಒದಗಿಸಿದ್ದಾರೆ. ವೈದೇಹಿ ಕೃತಿಗಳ ಬಗ್ಗೆ, ಕುಮಾರವ್ಯಾಸನ ಬಗ್ಗೆ,

ಬಸವಣ್ಣನ ಬಗ್ಗೆ ಹೀಗೇ ಹಲವು ಈಚಿನ-ಹಿಂದಿನ ಲೇಖಕರ ಬಗ್ಗೆ ನಮ್ಮನ್ನು ಕೆಣಕುವಂತೆ, ಒಪ್ಪುವಂತೆ, ಅನುಮಾನಿಸುವಂತೆ ವಿಮರ್ಶೆಯ ವಿನಯದಲ್ಲಿ ಆಶಾದೇವಿ ಬರೆಯುತ್ತಾರೆ.

ಎಲ್ಲಾ ಕೃತಿಗಳಲ್ಲೂ ಇರುವ ವಾಚ್ಯಾರ್ಥಗಳು ನಿವೃತ್ತವಾಗಿ ನಮಗವು ಧ್ವನಿಸುತ್ತವೆ ಎಂದು ಸುಲಭವಾಗಿ ನಾವು ತಿಳಿದಿರುತ್ತೇವೆ. ಆಶಾದೇವಿಯವರು ಕೃತಿಯ ಈ ವಾಚ್ಯದ ಮುಖವನ್ನು ನೋಡುತ್ತಾರೆ; ಆದರೆ ಈ ವಾಚ್ಯ ಮಾತ್ರ ಮುಖ್ಯವೆನ್ನುವಂತೆ ನೋಡುವುದಿಲ್ಲ. ಕೃತಿಯಿಂದ ಹುಟ್ಟಿದ ರಸಾನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತ – ಸಂಭ್ರಮಿಸದಂತೆ ಅನುಮಾನಿಸುತ್ತ ಪ್ರಶ್ನಿಸುತ್ತ – ನೋಡುತ್ತಾರೆ. ಇದು ಕಷ್ಟದ ಸಾಹಸದ ಓದು; ಕೃತಿ ಪೂರ್ಣವಾಗಿ ನಮಗೆ ಒದಗುವಂತೆ ಮಾಡುವ ಓದು ಇದು. ಪ್ರಾಮಾಣಿಕತೆ, ಧೀಮಂತಿಕೆಗಳ ಜೊತೆ ಕೃತಿಗೆ ಎದುರಾಗುವ ಧೈರ್ಯವೂ ಈ ಬಗೆಯ ವಿಮರ್ಶೆಗೆ ಅಗತ್ಯ.

ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಜೀವಂತವಾಗಿದೆ ಎನ್ನಿಸುವಂತೆ ಮಾಡಿರುವ ಆಶಾದೇವಿಗೆ ನಾವು ಕೃತಜ್ಞರು. ವಿಲಕ್ಷಣ ಪ್ರತಿಭೆಯ ನನ್ನ ಗೆಳೆಯ ಡಿ. ಆರ‍್. ನಾಗರಾಜ್ ರ ಹಾದಿಯಲ್ಲಿ ಕನ್ನಡ ಸಾಹಿತ್ಯದ ಅನುಭವವನ್ನು ಆಶಾದೇವಿ ವಿಸ್ತರಿಸುತ್ತಿದ್ದಾರೆ. ಆ ಕ್ರಮವನ್ನು ನಾವು ನಮ್ಮ ಆತ್ಮೀಯ ಓದಿನಲ್ಲಿ ಎದುರಾಗುವಂತೆ ಮಾಡುವ ಬರವಣಿಗೆ ಇಲ್ಲಿದೆ.

– ಯು. ಆರ‍್. ಅನಂತಮೂರ್ತಿ

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಸ್ತ್ರೀಮತವನುತ್ತರಿಸಲಾಗದೆ? ಲೇಖಕರು: ಎಂ.ಎಸ್. ಆಶಾದೇವಿ ಪ್ರಕಾಶಕರು: ಅಕ್ಷರ ಪ್ರಕಾಶನ ಪುಟ:144 ಬೆಲೆ: ರೂ.90/-

ಸುವರ್ಣ ಕರ್ನಾಟಕ ವಿಜ್ಞಾನ ಬಾಗಿನ

ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.

ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ? ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್ ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:108 ಬೆಲೆ:ರೂ.೪೦/-

ಪಕಟವಾಗಿ ೧೫೦ ವರ್ಷಗಳಾಗಿದ್ದರೂ ಇನ್ನೂ ವಾದ ವಿವಾದವನ್ನು ಸೃಷ್ಟಿಸುತ್ತಿರುವ ಪುಸ್ತಕದ ಕರ್ತೃ

ಜಗತ್ತಿನಾದ್ಯಂತ ಶ್ರೇಷ್ಟ ವಿಜ್ಞಾನಿ ಮತ್ತು ವಿಕಾಸವಾದದ ತಜ್ಞ ಚಾರ್ಲ್ಸ್ ಡಾರ್ವಿನ್ ನ ದ್ವಿ ಶತಮಾನೋತ್ಸವವನ್ನು 2009ರಲ್ಲಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಡಾರ್ವಿನ್ ನ ವಿಚಾರವಾಗಿ ವಿಜ್ಞಾನ ಲೇಖಕರುಗಳು ಬರೆದು ಈಗಾಗಲೇ ಪ್ರಕಟವಾಗಿರುವ ಲೇಖನಗಳನ್ನು ಆಯ್ದು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ `ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ಡಾರ್ವಿನ್ ನ ಕೃತಿ `ದಿ ಒರಿಜಿನ್ ಆಫ್ ಸ್ಪೀಸೀಸ್ ಪ್ರಕಟವಾಗಿ 150 ವರ್ಷಗಳಾಗಿದ್ದರೂ ಅದರ ಪರ ವಾದ ವಿವಾದಗಳು ನಡೆಯುತ್ತಿದ್ದು, ವಿಕಾಸವಾದಕ್ಕೆ ಗಟ್ಟಿ ಮೆರುಗನ್ನು ಆಧುನಿಕ ಜೀವರಾಸಾಯನಿಕ ವಿಜ್ಞಾನದಲ್ಲಿ ಕಾಣಲಾಗುತ್ತಿದೆ. ಡಾರ್ವಿನ್ ನ ಅನೇಕ ಸಂಶೋಧನೆಗಳು, ವಿಜ್ಞಾನದ ಬೆಳವಣಿಗೆಯಲ್ಲಿ ಅವಿಸ್ಮರಣೀಯವಾದವುಗಳು. ಡಾರ್ವಿನ್, ಜಗತ್ತು ಕಂಡ ಒಬ್ಬ ಅಪ್ರತಿಮ ಚಿಂತಕ ಮತ್ತು ಶ್ರೇಷ್ಠ ವಿಜ್ಞಾನಿ ಎಂಬುದರ ಬಗ್ಗೆ ಸಂಶಯವಿಲ್ಲ. ಈ ಮಹಾನ್ ವಿಜ್ಞಾನಿಯ ಬದುಕು, ಈ ಸ್ಪರ್ಧಾ ಶತಮಾನದ ಯುವಜನತೆಗೆ ಅನೇಕ ಆದರ್ಶಗಳ ಪಾಠಗಳಾಗುವುದರಲ್ಲಿ ಸಂದೇಹವಿಲ್ಲ ಹಾಗೇ ಈ ಪುಸ್ತಕವು ವಿಜ್ಞಾನಾಸಕ್ತ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಲಿ.

-ಸಂಪಾದಕರ ನುಡಿಯಿಂದ

ಶೀರ್ಷಿಕೆ: ಡಾರ್ವಿನ್ ಚದುರಿದ ಚಿತ್ರಗಳು ಸಂಪಾದಕರು: ಸಿ ಯತಿರಾಜು ಪ್ರಕಟಣೆ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟ:112 ಬೆಲೆ: ರೂ.50/-

ಸಣ್ಣ ಕತೆ; ಸ್ವರೂಪ-ಚಿಂತನೆ

kalpita vasthava1

ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ; ಪಶ್ಚಿಮದ ಆಧುನಿಕ ಸಣ್ಣ ಕತೆಯ ಸಂಪರ್ಕದಲ್ಲಿ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿ ತಮ್ಮ ಚಿಂತನೆಯ ದಿಕ್ಕನ್ನು ಖಚಿತಪಡಿಸಿದ್ದಾರೆ. ಇಲ್ಲಿನ ಎಲ್ಲ ೧೪ ಲೇಖನಗಳಲ್ಲಿಯೂ ಕನ್ನಡ ಸಣ್ಣಕತೆ ಬೆಳವಣಿಗೆ ಕುರಿತಾಗಿ ಅವರ ವಿವರ ವಿಶ್ಲೇಷಣೆ, ತೀರ್ಮಾನಗಳಿವೆ.

೪೫ ವರ್ಷಗಳ ಕಾಲಾವಧಿಯಲ್ಲಿ ಬರೆದಿರುವ ಇಲ್ಲಿನ ಲೇಖನಗಳಲ್ಲಿ ಕನ್ನಡ ಸಣ್ಣ ಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬ ವಿವರಣೆಯೂ ಇದೆ. ಲೇಖನಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಭೇದಗಳೂ, ಮೊದಲಿನ ನಿಲುವಿಗೆ ತಿದ್ದುಪಡಿಗಳೂ ಆಗಿರುವುದನ್ನು ದಾಖಲಿಸಲಾಗಿದೆ. ಮಾಸ್ತಿಯವರನ್ನು ಕನ್ನಡದ ಸಣ್ಣ ಕತೆಯ ಯುಗಪ್ರವರ್ತಕರೆಂದು ಗುರುತಿಸಿರುವ ಗಿರಡ್ಡಿಯವರು ತಮಗೆ ಮುಖ್ಯವೆನಿಸಿದೆ ಆನಂದ, ಬಾಗಲೋಡಿ ದೇವರಾಯ, ಶಾಂತಾದೇವಿ ಕಣವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಸುರೇಂದ್ರನಾಥ ಅವರ ಕತೆಗಳ ಕುರಿತಾಗಿ ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದಾರೆ. ವ್ಯಾಪಕ ಅಧ್ಯಯನದ ಹಿನ್ನೆಲೆ ಇರುವ ಗಿರಡ್ಡಿ ಕನ್ನಡ ಸಣ್ಣಕತೆ ಬೆಳೆದು ಬಂದ ಬಗೆಯನ್ನು ವಿವರವಾಗಿ ದಾಖಲಿಸಿದ್ದಾರೆ.

`ಮರೆಯಬಾರದ ಹಳೆಯ ಕತೆಗಳು’  ಮಾಲಿಕೆಯಲ್ಲಿ ಅವರು ಪಂಜೆ, ಕೇರೂರರು, ಎಮ್.ಎನ್. ಕಾಮತ್, ಎಸ್.ಜಿ.ಶಾಸ್ತ್ರಿ , ಕೊರಡ್ಕಲ್, ಎ.ಆರ‍್.ಕೃಷ್ಣಶಾಸ್ತ್ರಿ, ಕುಲಕರ್ಣಿ ಶ್ರೀನಿವಾಸ, ಕಡಂಗೋಡ್ಲು, ಕೃಷ್ಣಕುಮಾರ ಕಲ್ಲೂರ, ಪ.ರಮಾನಂದ, ವಿ.ಜಿ.ಶ್ಯಾನಬಾಗ, ಶ್ರೀಸ್ವಾಮಿ, ಹ.ಪಿ.ಜೋಷಿ, ಸೇಡಿಯಾಪು ಕೃಷ್ಣಭಟ್ಟ, ನವರತ್ನ ರಾಮರಾಯ, ಟೇಂಗ್ಸೆ ಗೋವಿಂದರಾಯ, ಕ್ಷೀರಸಾಗರ, ಬೇಂದ್ರೆ, ಹೊಯಿಸಳ, ಮೇವುಂಡಿ ಮಲ್ಲಾರಿ, ಟಿ.ಎಸ್.ಸಂಜೀವರಾಯ, ಭಾರತೀಪ್ರಿಯ ಮೊದಲಾಗಿ 28 ಕತೆಗಾರರ ವ್ಯಕ್ತಿತ್ವ-ಕೃತಿ ಪರಿಚಯಗಳನ್ನು ಮಾಡಿಕೊಟ್ಟಿದ್ದಾರೆ.

ಇಲ್ಲಿನ ಮೂರು ಲೇಖನಗಳು ಕನ್ನಡ ಸಣ್ಣಕತೆ ನಿರ್ದಿಷ್ಟ ಕಾಲಘಟ್ಟದಲ್ಲಿ ಸಾಗಿಬಂದ ಮಜಲುಗಳನ್ನು ಪರಿಚಯಿಸುತ್ತವೆ. ಇದು ಕಳೆದ ಶತಮಾನದ 90 ರ ದಶಕದವರೆಗಿನ ಕಾಲಘಟ್ಟಕ್ಕೆ ನಿಂತುಹೋಗಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ ಚರಿತ್ರಕಾರರು ನವೋದಯ, ನವ್ಯ ಎಂದು ಸ್ಥೂಲವಾಗಿ ಹೇಳುವ ಕಾಲಾವಧಿಯ ಲೇಖಕರು ಮಾತ್ರವೇ ಇಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಹೊಸ ಪೀಳಿಗೆಯ ನೂರಾರು ಬರಹಗಾರರು ಪ್ರವೇಶ ಪಡೆಯುತ್ತಿರುವ ನವ್ಯೋತ್ತರ ಕಾಲದ ಯಾವೊಬ್ಬ ಲೇಖಕರ ಕಥಾಸಾಹಿತ್ಯ ಕೃಷಿಯ ಬಗ್ಗೆಯೂ ಇಲ್ಲಿ ವಿಸ್ತ್ರತ ಚರ್ಚೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿ `ಇತ್ತೀಚೆಗೆ ಬರೆಯುತ್ತಿರುವ ಅನೇಕ ಮಹತ್ವದ ಕತೆಗಾರ್ತಿಯರ ಬಗ್ಗೆ, ಕಿರಿಯ ಕತೆಗಾರರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿಲ್ಲ.’ ಎಂಬ ಅರಿವು ತಮಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.

ತಮ್ಮ ಈ ಸಂಕಲನದಿಂದ ಹೊಸದಾಗಿ ಕತೆಗಳನ್ನು ಬರೆಯುವವರಿಗೆ ಒಂದಿಷ್ಟು ಮಾರ್ಗದರ್ಶನ ಸಿಗಬಹುದೆಂಬ ನಿರೀಕ್ಷೆಯನ್ನು ಗೋವಿಂದರಾಜರು ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿನ ಎಲ್ಲಾ ಲೇಖನಗಳೂ `ತಮ್ಮ ಸಮಗ್ರ ವಿಮರ್ಶೆ’ ಸಂಕಲನ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಹೊನ್ನಾರು ಮಾಲಿಕೆಯ `ಪ್ರಮಾಣು’ ಗ್ರಂಥದಲ್ಲಿ ಇರುವುದನ್ನು ತಿಳಿಸಿದ್ದಾರೆ.

ಶೀರ್ಷಿಕೆ: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಸಾಹಿತ್ಯ ಪ್ರಕಾಶನ ಪುಟ:352 ಬೆಲೆ:ರೂ.250/-(ಕ್ಯಾಲಿಕೋ) ರೂ.200/-(ಸಾದಾ ಪ್ರತಿ)

ಕೃಪೆ: ಪ್ರಜಾವಾಣಿ

ಸಾಗರ ಮತ್ತು ಸಾವು.

saagarakke-saavunte

`ಸಾಗರಕ್ಕೆ ಸಾವುಂಟೇ?’ ಎಂಬ ಪುಸ್ತಕದ ಶೀರ್ಷಿಕೆಯೇ ಮಹಾ `ಬೋರ್-ಗರೆತಎನ್ನಿಸುತ್ತದೆ. ಕರ್ನಾಟಕ ವಿಜ್ಞಾನ ಪರಿಷತ್ತು ಇಂಥ ಕಡಲತೀರಕ್ಕೆ ಕೈ ಹಾಕಲು ಡಾ. ವಿ.ಎನ್.ನಾಯಕ್ ರಿಗೆ ಅಪ್ಪಣೆ ಕೊಟ್ಟಿದೆ. ಸಮುದ್ರ ಮತ್ತು ತೀರಪ್ರದೇಶಗಳ ಪರಿಸರ ಸಂರಕ್ಷಣೆಯ ಕಾಳಜಿಯನ್ನು ನಾಯಕರ ಬರವಣಿಗೆಯಲ್ಲಿ ಕಾಣಬಹುದು.

ಕಡಲಜೀವಶಾಸ್ತ್ರದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾಗಿರುವ ಅವರ `ಸಾಗರಕ್ಕೆ ಸಾವುಂಟೇಯಾರಿಗಾಗಿ ಎಂಬ ವೈಜ್ಞಾನಿಕ ಪ್ರಶ್ನೆ ಏದ್ದೇಳುತ್ತದೆ. ಆದರೆ ಶಾಲಾಕಾಲೇಜಿನ ಮಕ್ಕಳನ್ನು ಈ ಪುಸ್ತಕಗಳು ತಲುಪಬೇಕೆಂಬುದು ವಿಜ್ಞಾನ ಪರಿಷತ್ತಿನ ಮಹದಾಸೆಯಾಗಿದೆ. ಆದ್ದರಿಂದ ಅದು ಈಡೇರಿದೆ ಎಂಬುದನ್ನು ಖಂಡಿತಾ ಒಪ್ಪಬಹುದು.

ಶೀರ್ಷಿಕೆ: ಸಾಗರಕ್ಕೆ ಸಾವುಂಟೇ? ಲೇಖಕರು: ಡಾ.ವಿ.ಎನ್.ನಾಯಕ್ ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಟಗಳು:70 ಬೆಲೆ: ರೂ.40/-

ಕೃಪೆ : ಕನ್ನಡ ಪ್ರಭ

ಬುದ್ಧ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮಹಾನ್ ಬಂಡಾಯಗಾರ

buddanedege-1

ವಡ್ಡಗೆರೆ ನಾಗರಾಜಯ್ಯ ಅವರ ವಿಮರ್ಶಾ ಬರಹಗಳ ಸಂಕಲನ `ಬುದ್ಧನೆಡೆಗೆ‘. ಕೋಟಿಗಾನಹಳ್ಳಿ ರಾಮಯ್ಯನವರ ಪ್ರಕಾರ ವಡ್ಡಗೆರೆ, ದಲಿತ ಚಳವಳಿಯ ಮೇಣಿಹಾಲು ಕುಡಿದು ಬೆಳೆದವರು. ದಲಿತ ಚಳವಳಿಗೆಯ ಅನುಭವ ಮತ್ತು ಕಾಣ್ಕೆಗಳೇ ಅವರ ಆಲೋಚನಾ ಕ್ರಮವನ್ನು ರೂಪಿಸಿ ಮುನ್ನಡೆಸುತ್ತಿರುವುದು ಇಲ್ಲಿನ ಎಲ್ಲಾ ಲೇಖನಗಳಲ್ಲೂ ಸ್ಪಷ್ಟ.

ತಂಗ್ನಿಟ್ಟಿನ್ ಈರನಾಗನ ಮೊಮ್ಮಗ ವಡ್ಡಗೆರೆ ನಾಗರಾಜಯ್ಯ ಮುನ್ನುಡಿಯಲ್ಲಿ ಅವರ ಪೂರ್ವೇತಿಹಾಸವನ್ನು ನೆನಪಿಸಿಕೊಂಡಿದ್ದಾರೆ. `ಅಸಾದಿಖಂಡಕಾವ್ಯದಿಂದ ಜನಪ್ರಿಯರಾದ ನಾಗರಾಜಯ್ಯ, ನಾಲ್ಕೈದು ವರುಷಗಳ ಅವಧಿಯಲ್ಲಿ ಬರೆದ ವಿಮರ್ಶಾ ಲೇಖನಗಳನ್ನೆಲ್ಲ ಸಂಗ್ರಹಿಸಿ ಈ ಕೃತಿ ಹೊರತಂದಿದ್ದಾರೆ. ಮೊನ್ನೆ ಮೊನ್ನೆ ಕಣ್ತೆರೆದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೊದಲ ಪ್ರಕಟಣೆ ಇದು. ಸಾಹಿತ್ಯ ಪರಿಷತ್ತಿಗೆ ಪ್ರಚಾರ ನೀಡುವ ದೃಷ್ಟಿಯಿಂದ ಆರಂಭದಲ್ಲೇ ಪದಾಧಿಕಾರಿಗಳ ಪಟ್ಟಿಯನ್ನೂ ನೀಡಲಾಗಿದೆ.

ಇಪ್ಪತ್ತು ಲೇಖನಗಳ ಪೈಕಿ ಸಂದರ್ಶನ, ಸಂವಾದ, ಪ್ರತಿಕ್ರಿಯೆ, ಅಭಿನಂದನಾ ಗ್ರಂಥಗಳಿಗೆ ಬರೆದ ಲೇಖನಗಳು ಇಲ್ಲಿವೆ.

`ಅಂಬೆಡ್ಕರ್ ಕಂಡ ಭಾರತಲೇಖನದಲ್ಲಿ ನಾಗರಾಜಯ್ಯ ಹೇಳುತ್ತಾರೆ : ರಾಮ ವರ್ಣಾಶ್ರಮ ವ್ಯವಸ್ಥೆಯ ಮಹಾನ್ ಪೋಷಕ. ಬುದ್ಧ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮಹಾನ್ ಬಂಡಾಯಗಾರ.

ಶೀರ್ಷಿಕೆ: ಬುದ್ಧನೆಡೆಗೆ ಲೇಖಕರು: ವಡ್ಡಗೆರೆ ನಾಗರಾಜಯ್ಯ ಪ್ರಕಾಶಕರು:ರ್ನಾಟಕ ಸಾಹಿತ್ಯ ಪರಿಷತ್ತು ಪುಟಗಳು:232 ಬೆಲೆ: ರೂ.110/-

ಕೃಪೆ : ಕನ್ನಡ ಪ್ರಭ

ವಿಜ್ಞಾನ ಮತ್ತು ವಿಜ್ಞಾನಿಗಳು – ದಂತಕತೆಗಳ ಸಂಕಲನ

ಈ ಪುಸ್ತಕದ ಮುಖಪುಟ ನೋಡಿ ಶೀರ್ಷಿಕೆ ಓದುತ್ತಿದ್ದಂತೆ ನನ್ನ ಮೊದಲ ಯೋಚನೆ ನನ್ನ 10 ವರ್ಷ ವಯಸ್ಸಿನ ಮಗನ ಈ ಹುಟ್ಟುಹಬ್ಬದ ಉಡುಗೊರೆಯ ಪಟ್ಟಿಯಲ್ಲಿ ಇದನ್ನು ಸೇರಿಸಬೇಕು ಎಂಬುದು.

ಇದು 1994ರಲ್ಲಿ ಮುದ್ರಣಗೊಂಡ ಎ ಎನ್ ಕೊಠಾರಿ ಮತ್ತಿತರರು ಬರೆದ Of Science and Scientists ದ ಕನ್ನಡ ರೂಪ.

ನ್ಯಾಷನಲ್ ಬುಕ್ ಟ್ರಸ್ಟನ ಸುಮಾರು 14 ಪುಸ್ತಕ ಮಾಲಿಕೆಗಳಲ್ಲೊಂದಾದ ಜನಪ್ರಿಯ ವಿಜ್ಞಾನ ಮಾಲೆ ಯ ಒಂದು ಬಿಡಿ ಜನಪ್ರಿಯ ವಿಜ್ಞಾನ ಹೊತ್ತಿಗೆ ಇದು.

ಪುಸ್ತಕದ ಮೊದಲ ಮಾತಿನಲ್ಲಿ ಸಿ. ಸುಬ್ರಹ್ಮಣ್ಯಂ ಹೇಳಿದಂತೆ, ವಯಸ್ಸಾದಂತೆ ನಾವು ನಮ್ಮ ಜೀವನದ ಘಟನೆಗಳನ್ನು ನೆನಪಿಗೆ ತಂದುಕೊಳ್ಳುವುದರ ಜತೆಯಲ್ಲೇ ಇತರರ ಜೀವನದ ಸುಖಮಯ ಘಟನೆಗಳನ್ನೂ ಜ್ಞಾಪಿಸಿಕೊಳ್ಳುತ್ತೇವೆ. ಈ ಪುಸ್ತಕದಲ್ಲಿನ ಪ್ರೋ. ಕೊಠಾರಿಯವ ರ `ದಂತಕಥೆಗಳುಶಿಕ್ಷಣ ಹಾಗೂ ನೀತಿಭೋದನೆಯ ಉದ್ದೇಶವನ್ನು ಹೊಂದಿದೆ. ಶಿಕ್ಷಣದಲ್ಲಿನ ನಿರೂಪಣೆ, ಪ್ರಯೋಗ ಮತ್ತು ಸಮಸ್ಯೆಗಳ ಬೇಸರವನ್ನು ಹೋಗಲಾಡಿಸಲು ವಿಜ್ಞಾನಿಗಳ ದಂತಕಥೆಗಳು ಬಹಳ ಉಪಯುಕ್ತವಾಗಿದೆ.

ವೈಜ್ಞಾನಿಕ ಶಿಕ್ಷಣ ಸಾಮಾನ್ಯ ಪ್ರಗತಿಗೆ ಅತ್ಯವಶ್ಯಕ ಮತ್ತು ಪ್ರಗತಿಯನ್ನು ಉಳಿಸಿಕೊಂಡು ಬರಲು ವೈಜ್ಞಾನಿಕ ಮನೋಧರ್ಮವೂ ಅತ್ಯಗತ್ಯ. ಆದರೆ ಅದೇ ವೇಳೆಯಲ್ಲಿ ಮನುಷ್ಯ ಸಂಘಜೀವಿಯಾಗಿ ವ್ಯಕ್ತಿಯಾಗಿ ಬೆಳೆಯಲು ಆಂತರಿಕ ಪ್ರಗತಿಯೂ ಅಷ್ಟೇ ಮುಖ್ಯ.

ಸ್ವಾಮಿ ವಿವೇಕಾನಂದರು ಬಾಹ್ಯ ಪ್ರಕೃತಿಯಲ್ಲಿ ಸತ್ಯವನ್ನು ಶೋಧಿಸುವವರನ್ನು ತಪ್ಪು ದಾರಿ ಹಿಡಿದಿದ್ದಾರೆಂದೂ ಅಥವಾ ಪ್ರಕೃತಿಯ ಆಂತರ್ಯವನ್ನು ಶೋಧಿಸಲು ಹೊರಟವರು ದೊಡ್ಡವರೆಂದೂ ನಾನು ಹೇಳುವುದಿಲ್ಲ. ಇವೆರಡೂ ಎರಡು ವಿಧದ ಕಾರ್ಯಕ್ರಮಗಳಷ್ಟೇ. ಎರಡೂ ಊಜರ್ಿತವಾಗಬೇಕು; ಎರಡು ಕ್ರಮಗಳಲ್ಲೂ ಅಧ್ಯಯನ ಮಾಡಬೇಕು. ಕೊನೆಯಲ್ಲಿ ಅವೆರಡೂ ಸಂಧಿಸುವುದನ್ನು ನಾವು ಕಾಣುತ್ತೇವೆ.ಎಂದಿದ್ದಾರೆ.

ನಾವು ವಿಜ್ಞಾನಿಗಳನ್ನು ವಿಜ್ಞಾನವನ್ನೇ ಲಗ್ನವಾದ ಏಕಪತ್ನೀ ವ್ರತಸ್ಥರೆಂದು ಭಾವಿಸುವುದು ಸಾಮಾನ್ಯವಾಗಿದೆ. ಆದರೆ, ಅವರೂ ನಮ್ಮಂತೆ ಮಾನವರು. ನಮಗೆಲ್ಲಾ ಸಾಮಾನ್ಯವಾಗಿರುವ ಶಕ್ತಿ, ದೌರ್ಬಲ್ಯ, ನ್ಯೂನ್ಯತೆ ಮತ್ತು ಕೊರತೆಗಳನ್ನು ಅವರಲ್ಲೂ ಕಾಣಬಹುದು. ವಿಚಿತ್ರ ಗುಣಗಳನ್ನೂ, ಉದಾತ್ತ ಗುಣಗಳಾದ ನಮ್ರತೆ ಕರುಣೆಗಳನ್ನೂ ನಾವು ಅವರಲ್ಲಿ ಕಾಣಬಹುದು.

ದಂತಕಥೆಗಳಲ್ಲದೆ, ಪ್ರೊ. ಕೊಠಾರಿಯವರು `ವಿಜ್ಞಾನ, ವಿಜ್ಞಾನಿ ಮತ್ತು ಸತ್ಯಮತ್ತು `ವಿನೋದ, ನಮ್ರತೆ ಮತ್ತು ಮಾನವೀಯತೆಎಂಬ ಪ್ರಬಂಧಗಳನ್ನೂ ಇತರ ವಿಷಯಗಳನ್ನೂ ಸೇರಿಸಿ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಪ್ರಬಂಧಗಳು ವಿಜ್ಞಾನದ ವಿವಿಧ ಮುಖಗಳನ್ನೂ ತೋರಿಸಿದರೆ ದಂತಕಥೆಗಳು ವಿಜ್ಞಾನಿಗಳ ವ್ಯಕ್ತಿ ಚಿತ್ರವನ್ನು ಬಿಡಿಸುತ್ತದೆ.

ಈ ಪುಸ್ತಕ ವಿದ್ಯಾರ್ಥಿ, ಅದ್ಯಾಪಕರಿಗೆ ಮಾತ್ರವಲ್ಲ ವಿಜ್ಞಾನ, ವಿಜ್ಞಾನಿಗಳು ಮತ್ತು ವಿಜ್ಞಾನದ ಪ್ರಗತಿಯ ಬಗ್ಗೆ ಆಸಕ್ತರಾಗಿರುವವರೆಲ್ಲಾ ಪ್ರತಿಯನ್ನು ಕಾದಿರಿಸಿಕೊಳ್ಳಬೇಕಾದ ಪುಸ್ತಕ.

237 ಪುಟಗಳ ಭಾರದೊಂದಿಗೆ ವಿಷಯದ ಭಾರವನ್ನೂ ಹೊತ್ತಿರುವ ಈ ಪುಸ್ತಕಕ್ಕೆ ಕೇವಲ ರೂ.70/- ಎಂಬುದೇ ನಾನು ಈ ಪುಸ್ತಕವನ್ನು ಆಯ್ದುಕೊಳ್ಳಲು ಕಾರಣ.

ವಿಶಾಲಮತಿ

ಶೀರ್ಷಿಕೆ : ವಿಜ್ಞಾನ ಮತ್ತು ವಿಜ್ಞಾನಿಗಳುದಂತಕತೆಗಳ ಸಂಕಲನ ಲೇಖಕರು : ಏ. ಎನ್. ಕೊಠಾರಿ, ಸುದಾಂಶು ಎಸ್. ಪಾಲ್ ಸುಲೆ, ಎಸ್. ಎಂ. ಪರೇಖ್, ಎಂ. ಪಿ. ನವಲ್ಕರ್ ಅನುವಾದ:ಎಂ. ಏ. ಸೇತುರಾವ್ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್ ಪುಟಗಳು :237 ಬೆಲೆ:ರೂ.70/-