
ಹೆಸರಾಂತ ವಿಜ್ಞಾನ ಬರಹಗಾರ ಹಾಗೂ ಸಂಗೀತ ವಿಮರ್ಶಕ ಪ್ರೊ.ಜಿ.ಟಿ.ನಾರಾಯಣ ರಾವ್ ಇನ್ನಿಲ್ಲ. 82 ರ ಹರಯದಲ್ಲಿ ಬ್ರೈನ್ ಹ್ಯಾಮರೇಜ್ ನಿಂದ ಸತ್ತ ಇವರು ಜಿ.ಟಿ.ಎನ್. ಎಂದೇ ಪರಿಚಿತರು. ಇದೇ ಜೂನ್ 27ರಂದು ಮರಣಿಸಿದ ಇವರ ಆಸೆಯಂತೆ ಮೃತದೇಹವನ್ನು ಅಧ್ಯಯನಕ್ಕಾಗಿ ಆಸ್ಪತ್ರೆಗೆ ದಾನ ಮಾಡಲಾಯಿತು. ತನ್ನ ಅಪರಕರ್ಮವನ್ನು ಮಾಡಬಾರದೆಂದು ಹೇಳುತ್ತಿದ್ದ ಇವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ.
ಬದುಕಿರುವಷ್ಟು ದಿನವೂ ವಿಜ್ಞಾನದ ಪ್ರಚಾರ ಬರಹವನ್ನು ಕೈಗೊಂಡಿದ್ದ ಇವರು ತಮ್ಮ ಸರಳ, ನೇರ ಬದುಕಿನಿಂದ ಆದರ್ಶನೀಯರು.
ಜಗತ್ತಿನ ಎಲ್ಲಾ ಜ್ಞಾನ ನಮಗೆ ಬರಬೇಕು. ಕನ್ನಡದವರಿಗೆ ಸಾದ್ಯವಾದಷ್ಟು ಎಲ್ಲಾ ಜ್ಞಾನವನ್ನು ನಾವು ಕೊಡಬೇಕು. ಅದಕ್ಕಾಗಿ ಕನ್ನಡ ಬೇಕು. ವಿಜ್ಞಾನ ಸೃಷ್ಟಿಯಾಗುವುದು ಕನ್ನಡದಲ್ಲಿಲ್ಲ. ಜ್ಞಾನವನ್ನು ಅರ್ಥಮಾಡಿಕೊಳ್ಳಲು ಇಂಗ್ಲೀಷ್ ಬೇಕು. ಅದನ್ನು ಸಂವಹನ ಮಾಡಲು ಕನ್ನಡ ಬೇಕು ಎನ್ನುವ ಜಿ.ಟಿ.ಎನ್. ಕನ್ನಡದಲ್ಲಿ ಸುಮಾರು 60 ವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಮಾರು 60 ಪುಸ್ತಕಗಳನ್ನು ಬರೆದಿದ್ದಾರೆ.
ಜಿ.ಟಿ.ಎನ್. ಅವರ ಕೆಲವು ಕೃತಿಗಳ ಪಟ್ಟಿ ಇದು.
ಆತ್ಮಕಥೆ – ಮುಗಿಯದ ಪಯಣ
ನೋಡೋಣ ಬಾರಾ ನಕ್ಷತ್ರ
ನಕ್ಷತ್ರ ವಿಕ್ಷಣೆಗೆ ಮಾರ್ಗದರ್ಶಿ
ಸುಬ್ರಹ್ಮಣ್ಯಂ ಚಂದ್ರಶೇಖರ್
ಕೃಷ್ಣ ವಿವರಗಳು
ಶ್ರುತಗಾನ
ಐನ್ಸ್ಟೈನ್ ಬಾಳಿದರಿಲ್ಲಿ (ವೈಜ್ಞಾನಿಕ ಜೀವನ ಚರಿತ್ರೆ)
ಕುವೆಂಪು ದರ್ಶನ ಸಂದರ್ಶನ
ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನೇತಿಹಾಸ)
ಜಾತಕ ಮತ್ತು ಭವಿಷ್ಯ (ನಾಳೆಯನ್ನು ಇಂದು ಅರಿಯಬಹುದೇ)
ಧೂಮಕೇತು (ಅದೃಶ್ಯ ಲೋಕದ ಅನಾದಿಕಾಲದ ಅಪೂರ್ವ ಅತಿಥಿ)
ನಕ್ಷತ್ರ ವೀಕ್ಷಣೆ (ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ)
ನವಕರ್ನಾಟಕ ಕನ್ನಡ ವಿಜ್ಞಾನ ಪದ ವಿವರಣ ಕೋಶ (ಪ್ರಧಾನ ಸಂಪಾದಕ)
ವೈಜ್ಞಾನಿಕ ಮನೋಧರ್ಮ
ಸಂಗೀತ ರಸನಿಮಿಷಗಳು(ಕಲಾವಿದರ ಜತೆಗಿನ ಒಡನಾಟದ ಅನುಭವ ಕಥನ)
ಸಪ್ತಸಾಗರದಾಚೆಯೆಲ್ಲೋ (ಚಂದ್ರಶೇಖರ ದರ್ಶನ ಸಂವಾದ)
ಸುಬ್ರಹ್ಮಣ್ಯ ಚಂದ್ರಶೇಖರ (ವೈಜ್ಞಾನಿಕ ಜೀವನ ಚರಿತ್ರೆ)
ಸೈನ್ಟಿಫಿಕ್ ಟೆಂಪರ್
ವಿದ್ ದಿ ಗ್ರೇಟ್ ಮೈಂಡ್ (ರಾಮಾನುಜನ್, ರಾಮನ್, ಚಂದ್ರಶೇಖರ್……)
ಮನರಂಜನೆ, ಸೃಜನಶೀಲತೆಗಾಗಿ ಸಾಹಿತ್ಯ ಕನ್ನಡ, ಜ್ಞಾನವಾಹಿನಿಯಾಗಿ ವಿಜ್ಞಾನ ಕನ್ನಡ, ವಾಸ್ತವ ವಹಿವಾಟುಗಳಿಗೆ (ವಾಣಿಜ್ಯಕ್ಕಾಗಿ) ಉಪಯುಕ್ತ ಕನ್ನಡ ಅನ್ನುವುದೊಂದು ಬೆಳವಣಿಗೆ ಆದರೆ ಅಲ್ಲಿಗೆ ಕನ್ನಡ ಭಾಷೆಯ ಸಂಪೂರ್ಣ ಸಾಧ್ಯತೆಯನ್ನು ಸ್ವೀಕಾರ ಮಾಡಬಹುದು ಎನ್ನುತ್ತಾರೆ ಜಿ.ಟಿ.ಎನ್. ಅವರ ಆಶಯವನ್ನು ಬೆನ್ನಿಗೇರಿಸಿ ಮುಂದುವರೆಯುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.
ಹೆಚ್ಚಿನ ವಿವರಕ್ಕೆ ಸಂಪದವನ್ನು ಸಂಪರ್ಕಿಸಿ http://sampada.net/podcasts/8/G-T-Narayana-Rao
Filed under: ಶ್ರದ್ದಾಂಜಲಿ | Tagged: ಪ್ರೊ.ಜಿ. ಟಿ. ಎನ್., ವಿಜ್ಞಾನ ಬರಹ | Leave a comment »