ನಾಚಿಕೆಯಿಂದ ತಲೆತಗ್ಗಿಸುವ ದಿನ


ಡಿಸೆಂಬರ‍್ 6, 1992.
ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ.

ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.

ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ.

-ಪುಸ್ತಕದ ಬೆನ್ನುಡಿಯಿಂದ

ಶೀರ್ಷಿಕೆ: ಅಯೊಧ್ಯಾ ಕಣೀರ ಕಾಂಡ ಕಲಾವಿದರು:ಪಿ. ಮಹಮ್ಮದ್ ಪ್ರಕಾಶಕರು:ಜನಸ್ನೇಹ ಪ್ರಕಾಶನ ಪುಟ:28 ಮೊದಲ ಮುದ್ರಣ:1993 ಬೆಲೆ:ರೂ.3/-

ರಾಮಬಾಣ

scan0007
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು
ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ:
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ ಹಾಡು ಅವರ ಅಣಕವಾಡುವಿನಲ್ಲಿ ‘ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೆ ಎಚ್ಚರಾ‘ ಎಂದಾಗುತ್ತದೆ. ಇದಕ್ಕೆ ಇನ್ನೆರಡು ಅಣಕವಾಡುಗಳನ್ನೂ ಅವರೇ ಕೊಟ್ಟಿದ್ದಾರೆ: ‘ಕದವು ತೆರೆಯಿತು ಇರುಳು ಸರಿಯಿತು ಏಳು ಕುಡುಕನೇ ಎಚ್ಚರ, ಮುಗಿಲು ಹರಿಯಿತು ಮಳೆಯು ಸುರಿಯಿತು ಸಾಗು ಪಯಣಿಗ ಎಚ್ಚರ‘.

ಶೀರ್ಷಿಕೆ: ಮಾಸದ ಅಣಕು ಗೀತೆಗಳು ಲೇಖಕರು:ಎನ್.ರಾಮನಾಥ್ ಪ್ರಕಾಶಕರು: ಪ್ರಶಾಂತ ಪ್ರಕಾಶನ ಪುಟ:118, ಬೆಲೆ:ರೂ.55/-

ಕೃಪೆ : ಕನ್ನಡ ಪ್ರಭ

ಈ 73 ಹಾಸ್ಯಲೇಖನಗಳು ಕನ್ನಡದಲ್ಲಿ ವಿಶಿಷ್ಟವಾದದ್ದು

scan0022

ಕಲಾಕ್ಷೇತ್ರದ ಮೆಟ್ಟಿಲಿನೊಂದಿಗೆ ಸೂತ್ರಧಾರ ನಡೆಸುವ ಸಂಭಾಷಣೆಯ ರೂಪದಲ್ಲಿರುವ ಇಲ್ಲಿನ 73 ಹಾಸ್ಯಬರಹಗಳು ಕಳೆದ ಒಂದು ದಶಕದ ರಂಗಚಟುವಟಿಕೆಯನ್ನು ಮೆಚ್ಚುಗೆ, ವ್ಯಂಗ್ಯೋಕ್ತಿ, ಟೀಕೆ-ಟಿಪ್ಪಣಿಗಳೊಂದಿಗೆ ದಾಖಲಿಸುತ್ತದೆ. ಮೆಟ್ಟಿಲನ್ನು ರಂಗ ವ್ಯವಸ್ಥೆಯ ಪ್ರತೀಕವಾಗಿಸಿಕೊಂಡು ಸೂತ್ರಧಾರ ಒಟ್ಟು ರಂಗ ಚಟುವಟಿಕೆಯ ಸಾಕ್ಷಿಪ್ರಜ್ಞೆಯಂತೆ `ಪನ್ಮಾಡುತ್ತ ಹೋಗುವ ಇಲ್ಲಿನ ಬರಹಗಳು ಕನ್ನಡದಲ್ಲಿ ವಿಶಿಷ್ಟವಾದವುಗಳು.

ಎರಡು ದಶಕಗಳ ಹಿಂದೆ ರಂಗಭೂಮಿಗೆ ಮೀಸಲಾದ `ಸೂತ್ರಧಾರ ವಾರ್ತಾಪತ್ರಕ್ಕೆ ಈ ತರಹದ ಬರಹವನ್ನು ಆರಂಭಿಸಿದ ರಾಮಯ್ಯ ಅದರಿಂದ ಎಷ್ಟು ಪ್ರಸಿದ್ಧರಾದರೆಂದರೆ ಅವರಿಗೆ ಸೂತ್ರಧಾರ ರಾಮಯ್ಯ ಎಂಬ ಹೆಸರೇ ಗಟ್ಟಿಯಾಯಿತು. ಮಧ್ಯೆ ನಿಂತಿದ್ದ ಬರಹಗಳನ್ನು ಪುನಃ ತಮ್ಮ `ಈ ಮಾಸ ನಾಟಕಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಎಲ್. ಕೃಷ್ಣಪ್ಪ ಇವಕ್ಕೆ ಮತ್ತೊಂದು ರೀತಿಯ ಸೂತ್ರಧಾರರಾದರು. ಗುಜ್ಜಾರಪ್ಪ ಅವರ ವ್ಯಂಗ್ಯ ಚಿತ್ರಗಳ ಮೂಲಕ ಪುಸ್ತಕ ಸುಂದರವಾಗಿ ಮೂಡಿ ಬಂದಿದೆ.

ಇಲ್ಲಿನ `ಪನ್ಬರಹಗಳನ್ನು ಸಂಪೂರ್ಣ ಶ್ಲೇಷಕೋಶ ಎಂದೂ ರಾಮಯ್ಯ ಕರೆದಿದ್ದಾರೆ. ಶ್ಲೇಷೆ ಎಲ್ಲ ಭಾಷೆಗಳಲ್ಲಿಯೂ ಬುದ್ಧಿ ಭಾವಗಳ ವಿಶಿಷ್ಟ ಆಟ. ಶ್ಲೇಷೆಗೆ ಲಘುಸ್ತರ ಇರುವಂತೆಯೇ ಗಂಭೀರ ನೆಲೆಯೂ ಇದೆ ಎಂದು ತಮ್ಮ ಮುನ್ನಡಿಯಲ್ಲಿ ಕಿ.ರಂ.ನಾಗರಾಜ್ ಅವರು ಶ್ಲೇಷೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಶೀರ್ಷಿಕೆ: ಕಲಾಕ್ಷೇತ್ರದ ಮೆಟ್ಟಲಿನ ಹಿರಿಮೆ ಲೇಖಕರು: ಸೂತ್ರಧಾರ ರಾಮಯ್ಯ ಪ್ರಕಾಶಕರು: ಮಂಗಳ ಪ್ರಕಾಶನ ಬೆಂಗಳೂರು ಪುಟಗಳು :234 ಬೆಲೆ:ರೂ.120/-

ಕೃಪೆ : ಸುಧಾ

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.

ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.

ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ ಲೇಖಕರು: ಎನ್ಕೆ ಸುಬ್ರಹ್ಮಣ್ಯ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು : 116 ಬೆಲೆ:ರೂ. 55/-

ಕೃಪೆ : ಪ್ರಜಾವಾಣಿ

ಮನುಷ್ಯ ಸ್ವಭಾವದ ವಕ್ರತೆಗೆ ಹಿಡಿದ ಕನ್ನಡಿ

ಹಿರಿಯ ವ್ಯಂಗ್ಯಚಿತ್ರಕಾರ ವಿ. ಗೋಪಾಲ್ ರ ಎರಡನೆಯ ವ್ಯಂಗ್ಯಚಿತ್ರಗಳ ಸಂಕಲನ ಇದು. `ಪಾಕೆಟ್ ಕಾರ್ಟೂನ್ಗಳೆಂದು ಕರೆಯಲ್ಪಡುವ ವ್ಯಂಗ್ಯಚಿತ್ರಗಳನ್ನು ಅವರು ಇಲ್ಲಿ ಪ್ರಕಟಿಸಿದ್ದಾರೆ.

ಹಾಗೆ ನೋಡಿದರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಇಂಥ ವ್ಯಂಗ್ಯ ಚಿತ್ರಗಳಿಗೆ ಆಯುಸ್ಸು ಕಡಿಮೆ. ಕಾಲದ ಪ್ರವಾಹದಲ್ಲಿ ಬದುಕಿ ಉಳಿಯುವುದು ಎಲ್ಲೋ ಕೆಲವಷ್ಟು ಮಾತ್ರ. ಹೀಗಿದ್ದಾಗಲೂ ಗೋಪಾಲ್ ದೈನಿಕದ ಬದುಕಿನಲ್ಲಿ ಹೊಮ್ಮುವ ಹಾಸ್ಯವನ್ನು ತಮ್ಮ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ.

ಕೇವಲ ನಗಿಸುವ ವ್ಯಂಗ್ಯಚಿತ್ರಗಳಾಗದೆ ಮನುಷ್ಯ ಸ್ವಭಾವದ ವಕ್ರತೆಗೆ ಹಿಡಿದ ಕನ್ನಡಿ ಈ ಚಿತ್ರಗಳು.

ಮುನ್ನುಡಿಯಲ್ಲಿ ಎಂ.ಎಸ್.ನರಸಿಂಹಮೂರ್ತಿಯವರು ಗುರುತಿಸಿರುವಂತೆ `ಗೋಪಾಲರ ವ್ಯಂಗ್ಯಚಿತ್ರಗಳಲ್ಲಿ ಜೀವವಿರುತ್ತದೆ. ಇವರು ವ್ಯಂಗ್ಯಚಿತ್ರಕ್ಕೆ ಆಯ್ಕೆ ಮಾಡುವ ವಸ್ತು ಕಚಗುಳಿ ಕೊಟ್ಟು ನಗಿಸುತ್ತದೆ. ಸಾಂಸಾರಿಕ ಜೀವನದ ಅಂಕುಡೊಂಕುಗಳ ಮೇಲೆ, ಸಾಮಾಜಿಕ ಜೀವನದಲ್ಲಿ ಕಾಣುವ ಡಂಬಾಚಾರ, ಆಷಾಢಭೂತಿತನಗಳ ಮೇಲೆ ನಗೆಯ ಚಾಟಿ ಬೀಸುವ ಇವರ ವ್ಯಂಗ್ಯಚಿತ್ರಗಳು ಸಾರ್ವಕಾಲಿಕ ಸತ್ಯಗಳಾಗಿವೆ.ಎಂದಿದ್ದಾರೆ.

ಕನ್ನಡದಲ್ಲಿ ವ್ಯಂಗ್ಯಚಿತ್ರಗಳ ಪುಸ್ತಕಗಳೇ ಅಪರೂಪ ಎನ್ನುವ ಸಂದರ್ಭದಲ್ಲಿ ಗೋಪಾಲ್ ತಮ್ಮ ವ್ಯಂಗ್ಯಚಿತ್ರಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ತಮ್ಮ ಗೆರೆಗಳ ಮೂಲಕ ಓದುಗರ ಮುಖದ ಮೇಲೆ ನಗುವಿನ ಒಂದು ಗೆರೆ ಅರಳಲು ಕಾರಣರಾಗಿದ್ದಾರೆ.

ಶೀರ್ಷಿಕೆ: ನಗೆ ರೇಖೆಗಳು ಲೇಖಕರು: ವಿ. ಗೋಪಾಲ್ ಪ್ರಕಾಶಕರು : ವಸಂತ ಪ್ರಕಾಶನ, ಪುಟಗಳು :112 ಬೆಲೆ:ರೂ.50/-

ಕೃಪೆ : ಪ್ರಜಾವಾಣಿ

A case for humour


Kefa, the pen name of A. V. Keshavamurthy, is a familiar name for those who have been reading humorous writings published in Kannada period­icals. He was popular in the 70s and 80s. For unknown reasons, he receded to oblivion without much recognition. This is a col­lection of his select writings re­spectfully edited by one of our thinking writers, S. Diwakar.

Kannada literature cannot boast of rich tradition of humo­rous writing. “Koravanji”, a pe­riodical’ meant to publish humorous writings did not last long. Humorous writers and their writings are not taken se­riously by critics either. Writers like T.Sunandamma, Dasha­rathi Dikshith, H.L. Keshava Murthy and others are not con­sidered important writers of the language. Kefa’s humour is tas­teful, subtle and sensitive. It is borne out of rich-old Mysore upper middle-class Brahmin culture. Of course, much of the humour in the book looks con­trived. There is a scheme with which the 25 episodes are nar­rated. Panduranga Rao, the nar­rator and endearingly addressed as ‘Pandu’ by his ac­quaintances, is a lazy and fun­-loving bachelor who is fond of nicer things in life. He is a proactive member of a club called “Mygallara Sangha”. He agets into some problem – do­mestic, social, political, and most importantly, they have no solutions. But, the intelligent and ubiquitous assistant, Shou­rie, who is sharp and hard­nosed, solves those problems and transfers all the credit to his master ungrudgingly.

Pandu’s community consists of Babu, Jagga, Raghanni, Kitti, Venku, Sheeni, Raja, Chandi, Peter, Bhansingh, Gulabi Mala and others. Though the locale of all their activities is the simple old Mysore of 50s and 60s, more particularly localities in Mysore like the Clock Tower, Shivaram­pet, Ittigegud, Chamundipura, Old Agrahara, etc., the charac­ters are drawn from different walks of life. They hail from dif­ferent religions, cultures, and linguistic backgrounds. The narration is studded with the Mysore delicacies like bisibele­bath, badanekayi vangibath, laadu, gasa-gase payasa, aam­bode, Mysore jasmine, Nanja­nagud Rasabale, ‘strong’ coffee, topping all this with the wine parties in the evenings at ‘My­gallara Sangha’. Besides, you have ‘Ghantaghosha’, the local newspaper whose prime con­cern seems to be publishing the activities of ‘Mygallara Sangha’ and nothing else.

During all the activities of the lazy Pandu and Shourie, there is rich humour rendered in Kan­nada which looks outlandish. Though the Kannada used here is not like that of Kailasam whose mix of Kannada with En­glish and Urdu was unique, one cannot not miss code mixing and code switching, the main purpose of which is to evoke laughter. Expressions like ‘see­tastha’ (taking his seat), ‘sippe­bitta’ (he sipped), ‘rich soillu’ (fertile soil), ‘thumba clanishu’ (too clannish) are linguistically interesting expressions. There are occasionally translations of English idioms which look com­ical in Kannada like ‘skeletons in the cupboard’ becomes ‘ya­ryara beerunalliro asthipanja­ra’. ‘Don’t ficker bus’ refers to private transport buses of those days which were largely driven by muslims. The typical expres­sions of the time like – ‘ardha cigaretu samaya’, ‘morning show shuruvago samaya: etc., makes for an interesting obser­vation of what constituted the time markers of the period of a particular class and lifestyle.

K. Sundara Raj (The Hindu)

Title : Best of Kefa Edited: S. Diwakar Publication: Ankita Pustaka Rate: Rs. 95/-