ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು ಎಂದ ತತ್ವಜ್ಞಾನಿ ಕಾರ್ಲ್ಮಾರ್ಕ್ಸ್ ಅವರ ಜನ್ಮದಿನ ಮೇ ೫ ೧೮೧೮ ಆಗಿದ್ದು, ಈ ವರ್ಷ(೨೦೧೮) ಮಾರ್ಕ್ಸ್ಅವರ ದ್ವಿಶತಾಬ್ದಿ ವರ್ಷ.
ಸೆಪ್ಟೆಂಬರ್ ೧೪, ೧೮೬೭ ಮಾರ್ಕ್ಸ್ಅವರ ಮೇರುಗ್ರಂಥ ’ದಾಸ್ಕ್ಯಾಪಿಟಲ್’ ಮೊದಲ ಸಂಪುಟ ಪ್ರಕಟವಾದ ದಿನವಾಗಿದ್ದು ಈ ವರ್ಷ(೨೦೧೮) ಆ ಗಮನಾರ್ಹ ದಿನದ ೧೫೦ ತುಂಬಿದ ವರ್ಷ.
ಇವೆರಡೂ ದಿನಗಳನ್ನು ನೆನಪಿಸಿಕೊಂಡು ಈ ವರ್ಷವನ್ನು ಸೂಕ್ತವಾಗಿ ಆಚರಿಸಲು, ಪ್ರಗತಿಪರ ಪುಸ್ತಕಗಳ ಪ್ರಮುಖ ಪ್ರಕಾಶಕರಾದ ನವಕರ್ನಾಟಕ ಮತು ಕ್ರಿಯಾ ಮಾಧ್ಯಮ ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦ ಎಂಬ ಮಾಲಿಕೆಯಲ್ಲಿ ಕನ್ನಡದಲ್ಲಿ ಲಭ್ಯವಿಲ್ಲದ ಮಾರ್ಕ್ಸ್ವಾದದ ಸಾರ ಎನ್ನಬಹುದಾದ ಪ್ರಮುಖ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಿವೆ. ಮೇ ೨೦ರಂದು (ಈ ಕೆಳಗೆ ಕಾಣಿಸಿದ) ಪುಸ್ತಕ ೩ ಮತ್ತು ೭ ಬಿಡುಗಡೆಯಾಗಲಿವೆ. ಉಳಿದವು ಸೆಪ್ಟೆಂಬರ್ ೧೪, ೨೦೧೮ರೊಳಗೆ ಬಿಡುಗಡೆಯಾಗಲಿವೆ.
ಮಾರ್ಕ್ಸ್ ೨೦೦-ಕ್ಯಾಪಿಟಲ್ ೧೫೦
ಮಾಲಿಕೆಯಲ್ಲಿ ಪ್ರಕಟವಾಗಲಿರುವ ಏಳು ಕೃತಿಗಳು ಈ ಕೆಳಗಿಂತಿವೆ
೧. ಬಂಡವಾಳ ಸಂಪುಟ ೧ (ಹಲವು ಪರಿಣತ ಲೇಖಕರು/ಅನುವಾದಕರು * ಅನುವಾದಕರ ಪಟ್ಟಿ ಕೆಳಗಿದೆ)
೨. ಭಾರತದಕುರಿತು ಮಾರ್ಕ್ಸ್- ಅನು: ವಿಶ್ವಕುಂದಾಪುರ
೩. ಫ್ರಾನ್ಸಿನಅಂತರ್ಯುದ್ಧ (ಪ್ಯಾರಿಸ್ ಕಮ್ಯೂನ್-೧೮೭೧, ಮೊದಲ ಕಾರ್ಮಿಕಕ್ರಾಂತಿ)ಅನು: ವಿಶ್ವಕುಂದಾಪುರ
೪. ಆರ್ಥಿಕ ಮತ್ತು ತತ್ವಶಾಸ್ತ್ರೀಯ ಕೈಬರಹಗಳು-೧೮೪೪ – ಅನು: ನಾ.ದಿವಾಕರ್
೫. ರಾಜಕೀಯಅರ್ಥಶಾಸ್ತ್ರದ ವಿಮರ್ಶೆಗೆಒಂದುಕೊಡುಗೆ – ಅನು: ಸಿ.ಆರ್.ಶಾನಭಾಗ
೬. ಲೂಯಿ ಬೊನಪಾರ್ಟೆಯ ೧೮ನೇ ಬ್ರೂಮೈರ್ – ಅನು: ಫಣಿರಾಜ್ ಕೆ.
೭. ತತ್ವಶಾಸ್ತ್ರದದಾರಿದ್ರ್ಯ – ಅನು: ಕೆ.ಪಿ.ವಾಸುದೇವನ್
ಈ ಮಾಲಿಕೆಯಒಟ್ಟು ಬೆಲೆ ರೂ. ೨೧೦೦ ಆಗಿದ್ದು ಪ್ರಕಟಣಾ-ಪೂರ್ವ (ಅಂದರೆ ಸೆಪ್ಟೆಂಬರ್ ೧೪, ೨೦೧೮ರ ಮೊದಲು) ಬೆಲೆ ರೂ. ೧೪೦೦ ಆಗಿರುತ್ತದೆ.
ಈ ಮಾಲಿಕೆಯ ಪ್ರಕಟಣೆಯಲ್ಲಿ ಸುಮಾರು ಮೂವತ್ತು ಅತ್ಯಂತ ಪರಿಣತ ಕನ್ನಡ ಲೇಖಕರು, ಅನುವಾದಕರು ಈ ಕಾಯಕದಲ್ಲಿ ವಿವಿಧರೀತಿಯಲ್ಲಿ ಕೈಜೋಡಿಸಿದ್ದಾರೆ.
ಈ ಮಾಲಿಕೆಯಲ್ಲಿ ಬರುವ ಪುಸ್ತಕಗಳು ಬರಿಯ ಬಿಡಿ ಪುಸ್ತಕಗಳಾಗಿರದೆ, ಮುಂದಿನ ಪೀಳಿಗೆಗೆ ಮಾರ್ಕ್ಸ್ವಾದದ ಪ್ರಮುಖ ಸಾರಕೊಡುವ ಪುಸ್ತಕಗಳ ಸಮಗ್ರ ಸಂಪುಟವಾಗಿದೆ. ಮಾರ್ಕ್ಸ್ ಕೃತಿಗಳನ್ನು – ನೇರ ಅನುವಾದ, ಸಂಗ್ರಹಾನುವಾದ ಅಥವಾ ಸಾರ ಕೊಡುವ ಸ್ವತಂತ್ರ ಬರಹಗಳ ರೂಪಗಳು- ಇವುಗಳಲ್ಲಿ ಯಾವ ರೂಪದಲ್ಲಿ ತರಬೇಕು ಎಂಬ ಆಯ್ಕೆಯನ್ನು ಕೃತಿವಾರಾಗಿ ಮಾಡಲಾಗಿದೆ. ಈ ಮಾಲಿಕೆಯಲ್ಲಿ ಪ್ರಕಟವಾಗುವ ಪ್ರತಿ ಕೃತಿಗೂ ಕೃತಿಯನ್ನು ಅರ್ಥ ಮಾಡಿಕೊಳ್ಳಲು ಬೇಕಾಗುವ – ಹಿನ್ನೆಲೆ, ಕೃತಿಯ ಇಂದಿನ ಪ್ರಸ್ತುತತೆ, ಕೃತಿಯ ಸಾರಾಂಶ, ಕೃತಿಯ ಬಗ್ಗೆ ಆ ಮೇಲಿನ ಚರ್ಚೆ-ವಿವಾದಗಳು -ಇವನ್ನು ಒಳಗೊಂಡ ಒಂದು ಪ್ರವೇಶಿಕೆ ಇರುತ್ತದೆ.
* ಬಂಡವಾಳ ಸಂಪುಟ ೧ ಅನುವಾದ ಸಂಯೋಜನೆ : ಡಾ. ಜಿ.ರಾಮಕೃಷ್ಣ
ಅನುವಾದಕರ ಪಟ್ಟಿ : ಜಿ.ರಾಜಶೇಖರ, ಎಸ್.ಶಿವಾನಂದ, ನಗರಗೆರೆರಮೇಶ್, ಬಿ.ಆರ್. ಮಂಜುನಾಥ, ವಿ.ಎನ್.ಲಕ್ಷ್ಮಿನಾರಾಯಣ, ಟಿ. ವೆಂಕಟೇಶ ಮೂರ್ತಿ, ಟಿ.ಎಸ್.ವೇಣುಗೋಪಾಲ್, ಶೈಲಜಾ, ಬಿ.ಶ್ರೀಪಾದ ಭಟ್, ವೇದರಾಜಎನ್.ಕೆ., ವಸಂತರಾಜಎನ್.ಕೆ., ಎ.ಎಸ್. ಆಚಾರ್ಯ, ಯಡೂರ ಮಹಾಬಲ, ವಿ.ಎಸ್.ಶ್ರೀಧರ, ಎಚ್.ಜಿ.ಜಯಲಕ್ಷ್ಮಿ, ಎಚ್.ವಿ.ರಾವ್, ಎಂ.ಸಿ. ದೋಂಗ್ರೆ

ಕೂಪನ್ ಖರೀದಿಸಲು ಇಚ್ಛಿಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆ 9902249150 ಗೆ ಕರೆಮಾಡಿ.
Filed under: Uncategorized | 5 Comments »